ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-2 :-  ದಿನಾಂಕ 19/11/2022 ರಂದು 11:00 AM ಕ್ಕೆ ಶ್ರೀಮತಿ ನೌಲಾಬಾಯಿ ಗಂಡ ರಾಮಣ್ಣ ಕುದಮೂಡ ವಯಃ 31 ವರ್ಷ ಜಾತಿಃ ಕಬ್ಬಲಿಗೇರ ಉಃ ಕೂಲಿ ಕೆಲಸ ಸಾಃ ಜವಳಗಾ(ಬಿ) ತಾಃ ಕಮಲಾಪೂರ ಜಿಲ್ಲಾಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ,  ನಾನು ಮೇಲಿನ ವಿಳಾಸದವಳಿದ್ದು, ಕೂಲಿ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನ್ನ ಗಂಡ ರಾಮಣ್ಣ ಇವರು 36 ವರ್ಷದವರಿದ್ದು, ಇವರು ಲಾರಿ ಡ್ರೈವರ ಕೆಲಸ ಮಾಡಿಕೊಂಡಿದ್ದರು. ನಮಗೆ ಕಿಶೋರ 11 ವರ್ಷ, ಕಾರ್ತಿಕ 9 ವರ್ಷದ ಎರಡು ಜನ ಮಕ್ಕಳಿರುತ್ತಾರೆ. ನನ್ನ ಗಂಡನವರ ಹೆಸರಿನಿಂದ ಹಿರೊ ಸ್ಪ್ಲೆಂಡರ ಮೋಟರ ಸೈಕಲ ನಂ. ಕೆಎ 32 ಹೆಚ್.ಬಿ 0517 ನೇದ್ದು ಇರುತ್ತದೆ.  ನನ್ನ ಗಂಡ ರಾಮಣ್ಣ ಇವರು ಈ ಮೋಟರ ಸೈಕಲನ್ನು ತೆಗೆದುಕೊಂಡು ಇಂದು ದಿನಾಂಕ 19/11/2022 ರಂದು ಬೆಳಿಗ್ಗೆ ತಮ್ಮ ಕೆಲಸಕ್ಕೆ ಹೋಗುತ್ತೆನೆಂದು ಹೋದರು. ಮುಂದೆ ಬೆಳಿಗ್ಗೆ 8:45 ಗಂಟೆ ಸುಮಾರಿಗೆ ನಮ್ಮೂರಿನ ಪ್ರಕಾಶ ತಂದೆ ಶಾಂತಪ್ಪಾ ಜಂಗೆ ಹಾಗು ಅಂಬಾರಾಯ ತಂದೆ ಗುಂಡಪ್ಪಾ ನಾಟಿಕಾರ ಇವರು ಪೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ಬೆಳಿಗ್ಗೆ 8:22 ಗಂಟೆ ಸುಮಾರಿಗೆ ರಾಮಣ್ಣ ಇವರು ಮೋಟರ ಸೈಕಲ ನಂ. ಕೆಎ 32 ಹೆಚ್.ಬಿ 0517 ಇದರ ಮೇಲಿಂದ ಹುಮ್ನಾಬಾದ ರಿಂಗರೋಡ ಕಡೆಯಿಂದ ದಾನಮ್ಮ ಪೆಟ್ರೋಲ ಪಂಪಿನ ಎದುರಿನ ರೋಡಿನ ಕಡೆಯಿಂದ ಸುಲ್ತಾನಪೂರ ರಿಂಗರೋಡ ಕಡೆಗೆ ಬರುತ್ತಿರುವಾಗ ಅದೆ ವೇಳೆಗೆ ಒಂದು ಟಿಪ್ಪರ ವಾಹನ ನಂ. ಕೆಎ 32 ಡಿ 9322 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಈ ವಾಹನವನ್ನು ಪೆಟ್ರೋಲ ಪಂಪಿನ ಎಡಗಡೆಯ ರೋಡಿನಿಂದ ಈ ಟಿಪ್ಪರ ಚಾಲಕನು ಬರುವಾಗ ದಾನಮ್ಮ ಪೆಟ್ರೋಲ ಪಂಪದ ಎಡರೋಡಿನ ಮುಖ್ಯ ರಸ್ತೆಯ ಬದಿಯಲ್ಲಿ ರಾಮಣ್ಣ ನಡೆಸುವ ಮೋಟರ ಸೈಕಲಗೆ ಡಿಕ್ಕಿಯಾಗಿದ್ದರಿಂದ ಅವರ ತಲೆಯ ಭಾಗಕ್ಕೆ, ಹಣೆಯ ಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿ ಮುಖ ಚಪ್ಪಟೆಯಾಗಿ ಭಾರಿ ರಕ್ತಸ್ರಾವದಿಂದ ಸ್ಧಳದಲ್ಲಿಯೇ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿದಕ್ಕೆ, ಕೂಡಲೆ ನಾನು ಗಾಬರಿಗೊಂಡು ನನ್ನ ಮೈದುನ ಮಲ್ಲಿಕಾರ್ಜುನ ತಂದೆ ಕಾಶಣ್ಣ ಕುದಮೂಡ ಇವರೊಂದಿಗೆ ಸುಲ್ತಾಪೂರ ರಿಂಗರೋಡಿನ ಪೆಟ್ರೋಲ ಪಂಪಿನ ಹತ್ತೀರ ಬಂದು ನೋಡಲಾಗಿ ಬಹಳಷ್ಟು ರಕ್ತ ಬಿದ್ದಿದ್ದು, ಪ್ರಕಾಶ ಮತ್ತು ಅಂಬಾರಾಯ ಇವರು ಶವವನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುವ ಬಗ್ಗೆ ಗೊತ್ತಾಗಿ, ಅಲ್ಲಿಗೆ ಹೋಗಿ ಗಂಡನ ದೇಹವನ್ನು ನೋಡಿದ್ದು, ಮೇಲಿನಂತೆ ಗಾಯವಾಗಿ ಮೃತ ಪಟ್ಟಿದರು. ಪ್ರಕಾಶ ಮತ್ತು ಅಂಬಾರಯ ಇವರಿಗೆ ವಿಚಾರಿಸಲು ಇದೆ ಘಟನೆಯನ್ನು ಮತ್ತು ಟಿಪ್ಪರ ಚಾಲಕನು ಅಪಘಾತದ ನಂತರ ಟಿಪ್ಪರದೊಂದಿಗೆ ಓಡಿ ಹೋಗಿದ್ದು, ಟಿಪ್ಪರ ಮೇಲೆ ಖ.ಗಿ.ಆ ಅಂತಾ ಬರೆದಿದ್ದು, ಚಾಲಕನಿಗೆ ನೋಡಿದಲ್ಲಿ ಗುರ್ತಿಸುವುದಾಗಿ ಹಾಗು ಘಟನೆಯನ್ನು ಪೆಟ್ರೋಲ ಪಂಪಿನಲ್ಲಿ ಕೆಲಸ ಮಾಡುವ ಜಗನ್ನಾಥ ಮಂಗಲಗಿ, ವಿರಯ್ಯ ಹರಸೂರ, ದಿಲೀಪ ಜಾಧವ ಇವರು ಕೂಡಾ ನೋಡಿರುತ್ತಾರೆ ಅಂತಾ ತಿಳಿಸಿರುತ್ತಾರೆ. ಕಾರಣ ಟಿಪ್ಪರ ನಂ. ಕೆಎ 32 ಡಿ 9322 ಇದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು  ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.     

  

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:19-11-2022  ರಂದು ರಾತ್ರಿ ೦೮:೧೫ ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಪದ್ಮಿನಿ ಗಂಡ ರವಿಶಂಕರ ರುಕ್ಮಾಪೂರ ವಯ:೪೦ವರ್ಷ ಜಾ:ಲಿಂಗಾಯತ ಉ:ಶೆಟ್ಟಿ ಸಂಗಪ್ಪ ಶಾಲೆಯಲ್ಲಿ ಸಹಶಿಕ್ಷಕಿ ಸಾ//ಕೆಹೆಚ್‌ಬಿ ಗ್ರೀನ್ ಪಾರ್ಕ ಡಬರಾಬಾದ ಕ್ರಾಸ್ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಎನೆಂದರೆ, ನಮ್ಮ ಮನೆಯಲ್ಲಿ ನಮ್ಮ ತಮ್ಮನ ಮದುವೆ ಇರುತ್ತದೆ. ಆದ್ದರಿಂದ ಮನೆಯಲ್ಲಿದ್ದ ಹಳೆ ಬಂಗಾರವನ್ನು ರಿಪೇರಿ ಮಾಡಿಕೊಂಡು ಬರಬೇಕೆಂದು ಬಂಗಾರದ ಆಭರಣಗಳನ್ನು ಒಂದು ಹ್ಯಾಂಡ್ ಪರ್ಸನಲ್ಲಿ ಹಾಕಿ ಅದನ್ನು ವೆನಿಟಿಬ್ಯಾಗ್‌ನಲ್ಲಿ ಇಟ್ಟುಕೊಂಡು ಅದಕ್ಕೆ ಚೈನ್ ಹಾಕಿ ಇಂದು ದಿನಾಂಕ ೧೯/೧೧/೨೦೨೨ ರಂದು ಮದ್ಯಾಹ್ನ ೦೧:೦೦ ಗಂಟೆ ಸುಮಾರಿಗೆ ಮನೆಯಿಂದ ನಾನು ನನ್ನ ತಂಗಿಯಾದ ಪೂಜಾ, ಮಗಳಾದ ಸೌಮ್ಯಾ, ಲಕ್ಷ್ಮೀ ಇವರೊಂದಿಗೆ ಹೊರಟು ಮದ್ಯಾಹ್ನ ೦೧:೩೦ ಗಂಟೆಗೆ ಸುಮಾರಿಗೆ ಅಟೋದಲ್ಲಿ ಬಂದು ಸರಫ ಬಜಾರದ ಮಹಾ ಲಕ್ಷ್ಮೀ ಕಾಂಪ್ಲೇಕ್ಸ್ ಮುಂದೆ ಬಂದು ಇಳಿದಿರುತ್ತೇನೆ. ನಂತರ ಕಮರಡಗಿ ಇವರ ಬಂಗಾರದ ಅಂಗಡಿಗೆ ಹೊಗಬೇಕೆಂದು ರೋಡದಾಟಿ ಕಾಂಪ್ಲೇಕ್ಸ್ದ ಮುಂದೆ ಹೋಗಿ ನನ್ನ ವೆನಿಟಿಬ್ಯಾಗ್‌ನ್ನು ನೋಡಲಾಗಿ ಅದರ ಚೈನ್ ತೆರದಿದ್ದು ಗಾಬರಿಯಾಗಿ ವೆನಿಟಿಬ್ಯಾಗ್ ಬಂಗಾರದ ಆಭರಣಗಳಿದ್ದ ನೋಡಲಾಗಿ ಹ್ಯಾಂಡ್‌ಪರ್ಸ ಇರಲಿಲ್ಲಾ ಮತ್ತು ಬಂಗಾರ ಕಳ್ಳತನವಾಗಿದ್ದು ಅದರ ವಿವರ ಈ ಕೆಳಗಿನಂತೆ ಇರುತ್ತದೆ.

೧)ಒಂದು ೨೦ ಗ್ರಾಂನ ಬಂಗಾರದ ಗುಂಡಿನ ಸರ ಅದಕ್ಕೆ ಪದಕ ಇರುತ್ತದೆ. ಅ.ಕಿ ೧,೦೦,೦೦೦/-ರೂ

೨)ಒಂದು ೩೦ ಗ್ರಾಂನ ಬಂಗಾರದ ಸಿಂಗಾರ ಸರ ಅ.ಕಿ ೧,೫೦,೦೦೦/- ರೂ

ಹೀಗೆ ಒಟ್ಟು ೨,೫೦,೦೦೦/-ರೂಪಾಯಿ ಕಿಮ್ಮತ್ತಿನ ಬೆಲೆ ಬಾಳುವ ೫೦ ಗ್ರಾಂ ಬಂಗಾರದ ಆಭರಣಗಳನ್ನು  ನಾನು ಆಟೋ ಇಳಿದು ರೋಡದಾಟಿ ಮಹಾ ಲಕ್ಷ್ಮೀ ಕಾಂಪ್ಲೇಕ್ಸ್ ಕಡೆಗೆ ಹೋಗುವಾಗ ವೆನಿಟಿಬ್ಯಾಗ್‌ನ ಚೈನ್ ತೆಗೆದು ಬಂಗಾರದ ಆಭರಣವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಘಟನೆಯು ಇಂದು ದಿನಾಂಕ ೧೯/೧೧/೨೦೨೨ ರಂದು ಮದ್ಯಾಹ್ನ ೦೧:೩೦ ಗಂಟೆಯಿಂದ ಮದ್ಯಾಹ್ನ ೦೨:೦೦ ಗಂಟೆ ಮದ್ಯದ ಅವದಿಯಲ್ಲಿ ಜರುಗಿರುತ್ತದೆ. ಕಳುವಾದ ಬಂಗಾರದ ಆಭರಣವನ್ನು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಕಳುವಾದ ಬಂಗಾರದ ಆಭರಣ ಮತ್ತು ಆರೋಪಿತರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಬೇಕು ಅಂತಾ ವಿನಂತಿ ಅರ್ಜಿಯ ಸಾರಾಂಶದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.   

    

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 18-11-2022 ರಂದು ರಾತ್ರಿ ೯:೦೦ ಗಂಟೆ ಸುಮಾರಿಗೆ  ಸದರಿ ಆರೋಪಿತರು ಫಿರ್ಯಾದಿಗೆ ತಮ್ಮ ಮೊಟಾರ ಸೈಕಲ ಸರ್ವಿಸಿಂಗ ವಿಷಯವಾಗಿ ಜಗಳ ತೆಗೆದು ಕೈಯಲ್ಲಿದ್ದ ರಾಡನಿಂದ ಬಲ ತಲೆಗೆ ಹೊಡೆದು ಭಾರಿ ಗಾಯಪಡಿಸಿ ಅವಾಚ್ಯವಾಗಿ ಬೈದು ಕೊಲೆ ಪ್ರಯತ್ನ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-19-11-2022  ರಂದು ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನಂದರೆ ಫಿರ್ಯಾದಿಯು ದಿನಾಂಕಃ-೧೮/೧೧/೨೦೨೨ ರಂದು ರಾತ್ರಿ ಊಟ ಮಾಡಿ ಹೆಂಡತಿ ಮಕ್ಕಳೊಂದಿಗೆ ರಾತ್ರಿ ೧೧.೦೦ ಗಂಟೆಗೆ ಮಲಗಿದ್ದು ಬೆಳಗ್ಗೆ ಮೂತ್ರ ವಿಸರ್ಜನೆಗಾಗಿ ಎದ್ದು ಹೊರಗೆ ಬಂದಾಗ ನಮ್ಮ ಮನೆಯ ಹಿಂದನ ನಮ್ಮ ದೇ ಮನೆಯ ಮುಖ್ಯ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಲು ಯಾರೋ ಅಲ್ಮರಿ ಮುರಿದು  ೫೦ ಗ್ರಾಮ ಬೆಳ್ಳಿಯ ಮೂರ್ತಿ ಅ.ಕಿ.೨೫೦೦ ಮತ್ತು ನಗದು ಹಣ ೫೦೦೦ ರೂ ಗಳನ್ಮ್ನ ಒಟ್ಟು ೭೫೦೦ ರೂಗಳನ್ನು  ಕಳ್ಳರು ಬಂದು ಕಳುವು ಮಡಿದ್ದು ಪತ್ತೆ ಹಚ್ಚಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ  ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.       

 

   

ಇತ್ತೀಚಿನ ನವೀಕರಣ​ : 23-11-2022 05:35 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080