ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ  :- ಇಂದು ದಿನಾಂಕ:೧೯.೧೧.೨೦೨೧ ರಂದು ೩.೪೦ ಪಿಎಮ್ ಗಂಟೆಗೆ ಸ:ತ: ರೇಣುಕಾದೇವಿ ಪಿಎಸ್ ಐ ಫರಹತಾಬಾದ ಪೊಲೀಸ ಠಾಣೆ  ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತನೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:೧೯.೧೧.೨೦೨೧ ರಂದು ಮದ್ಯಾಹ್ನ ೧ ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆ ಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಬಸನಾಳ ಗ್ರಾಮದ ಹನುಮಾನ ಗುಡಿ ಮುಂದೆ ಸರ‍್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸರ‍್ವಜನಿಕರಿಂದ ೧ ರೂಪಾಯಿಗೆ ೮೦ ರೂಪಾಯಿ ಗೆಲ್ಲಿರಿ ಅಂತಾ ಸರ‍್ವಜನಿಕರಿಂದ ಹಣ ಪಡೆದು ದೈವ ಲೀಲೆಯ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಠಾಣೆಗೆ ಇಬ್ಬರೂ ಪಂಚರಾದ ೧) ಗುರುಲಿಂಗಪ್ಪ ತಂದೆ ಶಂಕ್ರೇಪ್ಪ ಠಕ್ಕಾ ವಯ: ೩೬ ರ‍್ಷ ಜಾ:ಲಿಂಗಾಯತ ಉ:ಸವರ್ಿಸಿಂಗ ಕೆಲಸ ೨) ರಾಜಕುಮಾರ ತಂದೆ ಸುಭಾಶ್ಚಂದ್ರ ವಾರದ ವಯ: ೪೧ ರ‍್ಷ ಉ: ಜೀಪ ಚಾಲಕ ಸಾ:ಇಬ್ಬರೂ ಫರಹತಾಬಾದ ತಾ:ಜಿ:ಕಲಬುರಗಿ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿಯಾದ ರಾಜಕುಮಾರ ಸಿಪಿಸಿ ೧೪೦ ಮತ್ತು ಪಂಚರಿಗೆ ಮಟಕಾ ಜೂಜಾಟದ ಮಾಹಿತಿ ತಿಳಿಸಿ, ನಮ್ಮ ಪಿಐ ಸಾಹೇಬರಿಗೆ ಹಾಗೂ ಮಾನ್ಯ ಎಸಿಪಿ ಸಾಹೇಬರು ಸಿ ಉಪವಿಭಾಗ ಕಲಬುರಗಿರವರಿಗೆ ಮಾಹಿತಿ ತಿಳಿಸಿ ಅವರ ಮರ‍್ಗರ‍್ಶನದಲ್ಲಿ ನಾನು ಪಂಚರಿಗೆ ಮತ್ತು ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಮದ್ಯಾಹ್ನ ೧.೩೦ ಗಂಟೆಗೆ ಹೊರಟ್ಟು , ಭಾತ್ಮೀ ಸ್ಥಳದ ಹತ್ತಿರ ಮದ್ಯಾಹ್ನ ೧.೪೫ ಗಂಟೆಗೆ ಹೋಗಿ ಗಿಡಗಂಟೆಗಳ ಮರೆಯಾಗಿ ನಿಂತು ನೋಡಲು ಹನುಮಾನ ಗುಡಿ ಮುಂದೆ ಸರ‍್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸರ‍್ವಜನಿಕರನ್ನು ಕೂಗಿ ಕರೆದು ೧ ರೂಪಾಯಿಗೆ ೮೦ ರೂಪಾಯಿ ಗೆಲ್ಲಿರಿ ಅಂತಾ ಮಟಕಾ ದೈವಲೀಲೆಯ ನಂಬರ ಬರೆದುಕೊಳ್ಳುತ್ತಿದ್ದು ಅವನ ಜೊತೆಗೆ ಇತರರು ಇರುವುದನ್ನು ಖಚಿತ ಪಟ್ಟಾಗ ೧.೫೦ ಪಿಎಮ್ ಕ್ಕೆ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ಬರೆಯಿಸುತ್ತಿದ್ದ ಜನರು ನಮ್ಮನ್ನು ನೋಡಿ ಓಡಿ ಹೋದರು. ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕು ಬಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ಮಾರುತಿ ತಂದೆ ಚಂದ್ರಶ್ಯಾ ಅವಂಟಗಿ ವಯ:೬೮ ರ‍್ಷ ಉ: ಕೂಲಿಕೆಲಸ ಜಾತಿ: ಕಬ್ಬಲಿಗಾ ಸಾ: ಬಸನಾಳ ಅಂತಾ ತಿಳಿಸಿದ್ದು, ಇವರಿಗೆ ಅಂಗಜಡ್ತಿ ಮಾಡಲಾಗಿ ೧) ಒಂದು ಮಟಕಾ ನಂಬರ ಬರೆದ ಚೀಟಿ ಅ:ಕಿ:೦೦=೦೦ ೨) ಒಂದು ಬಾಲ ಪೆನ್ನ ಅ:ಕಿ:೦೦=೦೦ ಹಾಗೂ ೩) ನಗದು ಹಣ ೨೩೫೦/- ರೂ ಸಿಕ್ಕಿದ್ದು , ಹೀಗೆ ಒಟ್ಟು ನಗದು ಹಣ ೨೩೫೦/- ರೂ ಸಿಕ್ಕಿರುತ್ತವೆ. ಸದರಿಯವರ ಹತ್ತಿರ ಸಿಕ್ಕಿದ್ದ ಮುದ್ದೇಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ ೨ ಪಿಎಮ್ದಿಂದ ೩ ಪಿಎಮ್ ದವರೆಗೆ ಕೈಕೊಂಡಿರುತ್ತೆನೆ. ನಂತರ ಜಪ್ತಿಪಂಚನಾಮೆ, ಮುದ್ದೇಮಾಲು ಮತ್ತು ಒಬ್ಬ ಆರೋಪಿತನೊಂದಿಗೆ ೩.೪೦ ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.    

ಫರಹತಾಬಾದ ಪೊಲೀಸ ಠಾಣೆ  :- ದಿನಾಂಕ: ೧೯.೧೧.೨೦೨೧ ರಂದು ೮.೦೫ ಪಿಎಮ್ ಗಂಟೆಗೆ ಫಿರ್ಯಾದಿ ಶ್ರೀ ನಾಗಪ್ಪಾ ತಂದೆ ಬೆಳ್ಳೇಪ್ಪಾ ಪೂಜಾರಿ ವಯ:೪೦ ವರ್ಷ ಉ:ಒಕ್ಕಲುತನ ಜಾತಿ:ಕುರುಬ ಸಾ: ತಾಡತೆಗನೂರ ತಾ:ಜಿ:ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ದೂರು ಸಲ್ಲಿಸಿದ್ದರ ಸಾರಾಂಶವೇನೆAದರೆ , ನನ್ನ ಹತ್ತಿರ ಸುಮಾರು ೧೮ ಆಡುಗಳು ಹಾಗೂ ೬ ಆಡಿನ ಮರಿಗಳು ಇರುತ್ತವೆ. ನಾನು ಅವುಗಳನ್ನು ದಿನಾಲು ಕಾಯುತ್ತಾ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಮುಂದೆ ಹಾಕಿದ ಬೇಲಿಯಲ್ಲಿ ಅವುಗಳನ್ನು ಹಾಕಿ ಮನೆಯಲ್ಲಿ ಮಲಗುತ್ತೆನೆ. ಎಂದಿನAತೆ ನಾನು ದಿನಾಂಕ:೧೫.೧೧.೨೦೨೧ ರಂದು ಸಾಯಂಕಾಲ ೭ ಗಂಟೆಯ ಸುಮಾರಿಗೆ ನಾನು ನನ್ನ ಆಡು ಮತ್ತು ಆಡಿನ ಮರಿಗಳನ್ನು ನಮ್ಮ ಮನೆಯ ಮುಂದಿನ ಬೇಲಿಯಲ್ಲಿ ಹಾಕಿ ಮಲಗಿರುತ್ತೆನೆ. ನಂತರ ನಾನು ದಿನಾಂಕ:೧೬.೧೧.೨೦೨೧ ರಂದು ರಾತ್ರಿ ೧೨ ಗಂಟೆಯ ಸುಮಾರಿಗೆ ಮೂತ್ರವಿರ್ಸಜನೆಗಾಗಿ ಎದ್ದು ಬೇಲಿಯಲ್ಲಿದ್ದ ಆಡು ಮತ್ತು ಆಡಿನ ಮರಿಗಳನ್ನು ನೋಡಲಾಗಿ ಅವುಗಳು ಬೇಲಿಯಲ್ಲಿಯೇ ಇದ್ದಿದ್ದವು.ದಿನಾಂಕ:೧೬.೧೧.೨೦೨೧ ರಂದು ಬೆಳಗ್ಗೆ ೪.೩೦ ಗಂಟೆಯ ಸುಮಾರಿಗೆ ನಾನು ಎದ್ದು ನಮ್ಮ ಮನೆಯ ಮುಂದಿನ ಬೇಲಿಯಲ್ಲಿ ಹಾಕಿದ ಆಡು ಮತ್ತು ಆಡಿನ ಮರಿಗಳನ್ನು ನೋಡಲಾಗಿ ಅಲ್ಲಿ ಎಲ್ಲಾ ಆಡು ಮತ್ತು ಆಡಿನ ಮರಿಗಳನ್ನು ಕಾಣಲಿಲ್ಲಾ. ಆಗ ನಾನು ಗಾಬರಿಗೊಂಡು ನನ್ನ ಅಳಿಯನಾದ ಶರಣು ಪೂಜಾರಿ ಹಾಗೂ ಮಾಳಿಂಗರಾಯ ಪೂಜಾರಿ ಇವರಿಗೆ ಎಬ್ಬಿಸಿ ಆಡು ಮತ್ತು ಆಡಿನ ಮರಿಗಳನ್ನು ಹುಡುಕಾಡುತ್ತಾ ನಮ್ಮ ಊರಿನಲ್ಲಿ ಹಾಗೂ ಫರಹತಾಬಾದ ರೋಡಿಗೆ, ಮಿಣಜಗಿ ಕಡೆಗೆ ಹಾಗೂ ಕಡಣಿ ಕಡೆಗೆ ಹೋಗಿ ಹುಡುಕಾಡಿದೇವು. ಆದರೂ ಸಹ ನನ್ನ ಆಡುಗಳು ಹಾಗೂ ಆಡಿನ ಮರಿಗಳು ಸಿಗ್ಗಲಿಲ್ಲಾ. ನಂತರ ನಾವುಗಳು ಅತನೂರ ಸಂತೆಗೆ ಹೋಗಿ ನೋಡಲಾಗಿ ಅಲ್ಲಿಯೂ ಸಹ ಸಿಕ್ಕಿರುವುದಿಲ್ಲಾ. ದಿನಾಂಕ:೧೬.೧೧.೨೦೨೧ ರಂದು ೧೨೩೦ ಎಎಮ್ ಗಂಟೆಯಿAದ ಬೆಳಗ್ಗೆ ೪ ಗಂಟೆಯ ಮಧ್ಯೆದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಮುಂದಿನ ಬೇಲಿಯಲ್ಲಿದ್ದ ನನ್ನ ೧೮ ಆಡುಗಳು ಹಾಗೂ ೬ ಆಡಿನ ಮರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವುಗಳ ಅಂದಾಜು ಕಿಮ್ಮತ್ತು ೯೦,೦೦೦/- ರೂ ಆಗಬಹುದು. ಸದರಿ ಆಡುಗಳು ಹಾಗೂ ಆಡಿನ ಮರಿಗಳನ್ನು ನಾನು ನೋಡಿದಲ್ಲಿ ಗುರುತಿಸುತ್ತೆನೆ. ನಾವುಗಳು ಎಲ್ಲಾ ಕಡೆ ಹುಡುಕಾಡಿ ತಡವಾಗಿ ಬಂದು ದೂರು ಸಲ್ಲಿಸುತ್ತಿದೆನೆ. ದಿನಾಂಕ:೧೬.೧೧.೨೦೨೧ ರಂದು ೧೨೩೦ ಎಎಮ್ ಗಂಟೆಯಿAದ ಬೆಳಗ್ಗೆ ೪ ಗಂಟೆಯ ಮಧ್ಯೆದ ಅವಧಿಯಲ್ಲಿ ನನ್ನ ಮನೆಯ ಮುಂದಿನ ಬೇಲಿಯಲ್ಲಿದ್ದ ನನ್ನ ೧೮ ಆಡುಗಳು ಹಾಗೂ ೬ ಆಡಿನ ಮರಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರ ಮೇಲೆ ಮಾನ್ಯರು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಳ್ಳುತ್ತೆನೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.    

ಇತ್ತೀಚಿನ ನವೀಕರಣ​ : 26-11-2021 12:39 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080