ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 19/10/2022 ರಂದು ರಾತ್ರಿ 7:00 ಗಂಟೆಗೆ ಶ್ರೀ. ರಾಮಚಂದ್ರ ತಂದೆ ಮಲ್ಲೇಶಪ್ಪಾ ಕಂಬಾರ ಸಾಃ ಸಾವಳಗಿ(ಬಿ) ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದಿರುವ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ,  ಇಂದು ದಿನಾಂಕ 19/10/2022 ರಂದು ತನ್ನ ಮಗ ಮಲ್ಲಿಕಾರ್ಜುನ ವಯಃ 22 ವರ್ಷ ಈತನು ಪಟ್ಟಣ ಮತ್ತು ಕಲಬುರಗಿಗೆ ಟಿ.ವಿ.ಎಸ್ ಎಸ್.ಎಲ್ ಮೋಟರ ಸೈಕಲ ನಂ. ಕೆಎ 01 ಡಬ್ಲೂ 7726 ಇದರ ಮೇಲೆ ಬಂದು ಕಲಬುರಗಿಯಿಂದ ಮರಳಿ ಊರಿಗೆ ಬರುವಾಗ ಸಾಯಂಕಾಲ 4:30 ಗಂಟೆ ಸುಮಾರಿಗೆ ಆಳಂದ ರೋಡಿನ ಬಿಸ್ಕಿಟ ಗೋದಾಮದ (ಎ.ಬಿ.ಜಿ ಧಾಬಾದ) ಹತ್ತೀರ ಹೋಗುತ್ತಿರುವಾಗ ಆಳಂದ ರೋಡಿನ ಕಡೆಯಿಂದ ಲಾರಿ ನಂ. ಎಮ್.ಪಿ 06 ಹೆಚ್.ಸಿ 0796 ಇದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟರ ಸೈಕಲ ಮತ್ತು ಮೋಟರ ಸೈಕಲ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಮಲ್ಲಿಕಾರ್ಜುನನು ಹಾರಿ ಬಿದ್ದಿದ್ದರಿಂದ ಆತನ ಮುಖದ ಮತ್ತು ತಲೆಯ ಮೇಲಿಂದ ಲಾರಿಯ ಟೈರ ಹೋಗಿ ಮೌಂಸಖಂಡ ಹೊರಬಂದು ಭಾರಿ ರಕ್ತಸ್ರಾವ ಆಗಿ ಸ್ಧಳದಲ್ಲಿ ಮೃತ ಪಟ್ಟಿರುತ್ತಾನೆ. ಹಾಗೆ ಲಾರಿ ಚಾಲಕನು ಓಡಿ ಹೋಗಿರುತ್ತಾನೆ. ಈ ಘಟನೆಯನ್ನು ದಿನೇಶ ರೆಡ್ಡಿ ಈತನು ನೋಡಿ ಮಾಹಿತಿ ತಿಳಿಸಿದಕ್ಕೆ ಊರಿನಿಂದ ಫಿರ್ಯಾದಿ ಮತ್ತು ಸಂತೋಷ ಕಂಬಾರ ಸ್ಧಳಕ್ಕೆ ಬಂದು ಶವವನ್ನು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದಿರುತ್ತೆವೆ ಈ ವಿಷಯದಲ್ಲಿ ಲಾರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:19.10.2022 ರಂದು ಬೆಳಿಗ್ಗೆ 11:00 ಎ.ಎಂಕ್ಕೆ ಪಿರ್ಯಾದಿ ಶ್ರೀ ಹುಸೇನ ಸಾಬ ತಂದೆ ಮೈದಿನ ಸಾಬ ಮುಲ್ಲಾ ವಯ: 53 ವರ್ಷ ಜಾ: ಮುಸ್ಲಿಂ ಉ: ಗೌಂಡಿಕೆಲಸ ಸಾ|| ಹೊಂದಗನೂರು ತಾ||ಸುರುಪುರ ಜಿ|| ಯಾದಗಿರಿ ಹಾ||ವ|| ಸಂಪಿಗೆ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆಂದರೆ, ನನ್ನ ಹೆಂಡತಿ ಮಾಶಾ ಬೀ ಅಂತ ಇದ್ದು ಅವಳು ಮನೆಗೆಲಸ ಮಾಡಿಕೊಂಡು ಇರುತ್ತಾಳೆ. ನಮಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು ಎರಡು ಜನ ಹೆಣ್ಣು ಮಕ್ಕಳು ಹಾಗೂ ಎರಡು ಜನ ಗಂಡು ಮಕ್ಕಳಿರುತ್ತಾರೆ. ನಾನು ಕಳೆದ ಐದು ತಿಂಗಳುಗಳಿಂದ ಕಲಬುರಗಿ ನಗರದ ಹೈಕೋರ್ಟ್ ಹತ್ತಿರ ಇರುವ ಅಕ್ಕಮಹಾದೇವಿ ಕಾಲೋನಿ ಬಡಾವಣೆಯಲ್ಲಿ ನಾಗರಾಜ ಕಲಶೆಟ್ಟಿ ಎಂಬುವವರು ಹೊಸದಾಗಿ ಕಟ್ಟಿಸುತ್ತಿರುವ ಮನೆಯಲ್ಲಿ ಗೌಂಡಿ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನಂತೆ ಸದರಿ ಕಟ್ಟಡದಲ್ಲಿ ಸುರೇಶ್ ಶಹಾಬಾದ, ಅಶೋಕ ಬಾಸಗಿ, ಕಾಶಿಬಾಯಿ, ಲಕ್ಷ್ಮೀ ಎಂಬುವವರು ಕೂಡ ನನ್ನೊಂದಿಗೆ ಗೌಂಡಿ ಕೆಲಸ ಮಾಡಿಕೊಂಡು ಇರುತ್ತಾರೆ. ಕಲ್ಯಾಣಿ ಬಿದನೂರ ಇವರು ಬಿಲ್ಡಿಂಗ್ ಕಟ್ಟಡದ ಗುತ್ತೇದಾರ ಆಗಿರುತ್ತಾರೆ. ಸದರಿ ಕಟ್ಟಡದಲ್ಲಿ ನಾವುಗಳು ಕೆಲಸ ಮಾಡುವ ಕಾಲಕ್ಕೆ ವಹಿಸಬೇಕಾದ ಮುಂಜಾಗ್ರತ ಕ್ರಮಗಳಾದ ಫರಂಚಾ ಕಟ್ಟುವುದು, ಸೆಫ್ಟಿ ಕ್ಯಾಪ್, ಸೆಫ್ಟಿ ಶ್ಯೂ, ಹ್ಯಾಂಡ್ ಗ್ಲೋಸ್ ಹಾಗೂ ಇತರೆ ಮುಂಜಾಗ್ರತೆ ಕ್ರಮಗಳನ್ನು ಒದಗಿಸಿಸುವಂತೆ ಹಲವಾರು ಬಾರಿ ನಾವುಗಳು ಕೆಳಿಕೊಂಡಿದ್ದರು ಕೂಡ ಬಿಲ್ಡಿಂಗ್ ಮಾಲಿಕರಾದ ನಾಗರಾಜ ಕಲಶೆಟ್ಟಿ ಮತ್ತು ಬಿಲ್ಡಿಂಗ್ ಗುತ್ತಿಗೆದಾರರಾದ ಕಲ್ಯಾಣಿ ಬಿದನೂರು ಇವರುಗಳು ಯಾವುದೇ ಮುಂಜಾಗ್ರತ ಕ್ರಮ ವಹಿಸಿರುವುದಿಲ್ಲ. ಹೀಗಿದ್ದು ದಿನಾಂಕ: 17.10.2022 ರಂದು ಮಧ್ಯಾನ್ಹ 02:30 ಗಂಟೆ ಸುಮಾರಿಗೆ ನಾನು ಮತ್ತು ಸುರೇಶ್ ಶಹಾಬಾದ, ಅಶೋಕ ಬಾಸಗಿ, ಕಾಶಿಬಾಯಿ, ಲಕ್ಷ್ಮೀ ಎಲ್ಲರೂ ನಾಗರಾಜ ಕಲಶೆಟ್ಟಿ ಇವರ ಮನೆಯ ಕಟ್ಟಡದ ಒಂದನೇ ಮಹಡಿಯ ಮೇಲೆ ಕೆಲಸ ಮಾಡುತ್ತಿರುವಾಗ ಸುರೇಶ್ ಶಹಾಬಾದ ಇತನು ಕೆಳಗಡೆಯಿಂದ ಕಬ್ಬಿಣದ ಫತ್ರ ತೆಗೆದುಕೊಂಡು ಮೇಲೆ ಬರುತ್ತಿರುವಾಗ ಮನೆಯ ಹತ್ತಿರದಿಂದ ಹಾದು ಹೋಗಿರುವ ಕರೆಂಟ್ ವೈಯರಕ್ಕೆ ಕಬ್ಬಣಿದ ಫತ್ರ ತಗುಲಿದ್ದರಿಂದ ಕರೆಂಟ್ ಶಾಕ್ ಹೊಡೆದು ಆಯಾ ತಪ್ಪಿ ಅಲ್ಲೇ ಕೆಳಗೆ ಬಿದ್ದಿದ್ದು ಇರುತ್ತದೆ. ನಂತರ ನಾವು ಎಲ್ಲರೂ ಕೂಡಿ ಸುರೇಶ್ ಶಹಾಬಾದ ಇತನಿಗೆ ಉಪಚಾರ ಕುರಿತು ಮೇಲಿಂದ ಕೆಳಗೆ ಕರೆದುಕೊಂಡು ಬರುತ್ತಿದ್ದಾಗ ಅಷ್ಟರಲ್ಲಿ ಸಿದ್ದಪ್ಪ ನಡಗೇರಿ ಎಂಬುವವರು ಬಂದಿದ್ದು ನಂತರ ಎಲ್ಲರೂ ಕೂಡಿ ಸುರೇಶ್ ಇತನಿಗೆ ಕಾರಿನಲ್ಲಿ ಕೂಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಸುರೇಶ್ ಇತನಿಗೆ ಪರೀಕ್ಷಿಸಿ ಇವರು ಈಗಾಗಲೇ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು ಇರುತ್ತದೆ. ಕಟ್ಟಡ ಕಾರ್ಮಿಕನಾದ ಸುರೇಶ್ ಶಹಾಬಾದ ಇತನ ಮರಣಕ್ಕೆ ಸದರಿ ಬಿಲ್ಡಿಂಗನ ಮಾಲಿಕರಾದ ನಾಗರಾಜ ಕಲಶೆಟ್ಟಿ ಮತ್ತು ಬಿಲ್ಡಿಂಗ್ ಗುತ್ತೀಗೆದಾರನಾದ ಕಲ್ಯಾಣಿ ಬಿದನೂರು ಇವರು ಕಟ್ಟಡ ಕಟ್ಟುವ ಕಾಲಕ್ಕೆ ಮುಂಜಾಗ್ರತ ಕ್ರಮ ವಹಿಸದೇ ಇರುವುದರಿಂದ ಸುರೇಶ್ ಶಹಾಬಾದ ಇತನು ಮೃತಪಟ್ಟಿರುತ್ತಾನೆ. ಸುರೇಶ್ ಶಹಾಬಾದ ಇತನು ಕೂಡ ಕಳೆದ 05 ತಿಂಗಳುಗಳಿಂದ ಗೌಂಡಿ ಕೆಲಸ ಮಾಡುತ್ತಿದ್ದು ಇತನ ವಾರಸುದಾರರ ಬಗ್ಗೆ ನನಗೆ ಗೊತ್ತಿಲ್ಲ. ಇತನು ಹಗಲು ಹೊತ್ತಿನಲ್ಲಿ ಗೌಂಡಿ ಕೆಲಸ ಮಾಡಿ ರಾತ್ರಿ ವೇಳೆಯಲ್ಲಿ ಅದೇ ಬಿಲ್ಡಿಂಗನಲ್ಲಿ ಮಲಗುತ್ತಿದ್ದನು. ಇಲ್ಲಿಯವರೆಗೆ ಮೃತನಾದ ಸುರೇಶ್ ಇತನ ವಾರಸುದಾರರು ಯಾರು ಬರದೇ ಇರುವುದರಿಂದ ಇಂದು ಠಾಣೆಗೆ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ.  ಕಾರಣ ಸುರೇಶ್ ಶಹಾಬಾದ ಇತನ ಮರಣಕ್ಕೆ ಬಿಲ್ಡಿಂಗ್ ಮಾಲಿಕನಾದ ನಾಗರಾಜ ಕಲಶೆಟ್ಟಿ ಮತ್ತು ಬಿಲ್ಡಿಂಗ್ ಗುತ್ತಿಗೆದಾರನಾದ ಕಲ್ಯಾಣಿ ಬಿದನುರು ಇವರುಗಳು ಮುಂಜಾಗ್ರತ ಕ್ರಮ ವಹಿಸದೇ ಇರುವುದರಿಂದ ಸುರೇಶ್ ಇತನು ಮೃತ ಪಟ್ಟಿರುತ್ತಾನೆ. ಆದ್ದರಿಂದ ನಾಗರಾಜ ಕಲಶೆಟ್ಟಿ ಮತ್ತು ಕಲ್ಯಾಣಿ ಬಿದನೂರು ಇವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ವಗೈರೆಯಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 10-11-2022 12:12 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080