ಅಭಿಪ್ರಾಯ / ಸಲಹೆಗಳು

        ಅಶೋಕ  ನಗರ ಪೊಲೀಸ್ ಠಾಣೆ :-ಇಂದು ದಿನಾಂಕ:೧೯.೧೦.೨೦೨೧ ರಂದು ೦೪:೦೦ ಪಿ.ಎಂ.ಕ್ಕೆ ಫರ‍್ಯಾದಿ ಶ್ರೀ ರಾಜಕುಮಾರ ತಂದೆ ಹೊನ್ನಪ್ಪ ದೊಡ್ಡಮನಿ ವಯ: ೩೮ ರ‍್ಷ ಜಾ: ಉಪ್ಪಾರ ಉ: ಹಾಸ್ಟೇಲ್ ವರ‍್ಡನ್ (ಸಮಾಜ ಕಲ್ಯಾಣ ಇಲಾಖೆ) ಸಾ|| ಕಾಚಾಪೂರ ಹಾ|| ವ|| ಆನಂದೇಶ್ವರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫರ‍್ಯಾದಿ ರ‍್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಕಳೆದ ೧೦ ರ‍್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತೇನೆ. ಹೀಗಿದ್ದು ದಿನಾಂಕ:೧೭.೧೦.೨೦೨೧ ರಂದು ನಾನು ಕೆಲಸ ನಿಮಿತ್ಯ ಬೆಳಗಾವಿ ನಗಕ್ಕೆ ಹೋಗಿರುತ್ತೇನೆ. ಕೆಲಸ ಮುಗಿಸಿಕೊಂಡು ದಿನಾಂಕ:೧೮.೧೦.೨೦೨೧ ರಂದು ೦೩:೦೦ ಪಿ.ಎಂ.ಕ್ಕೆ ಬೆಳಗಾವಿಯಿಂದ ಕಲಬುರಗಿಗೆ ಬರುವುದಕ್ಕಾಗಿ ಬಸ್ ಹತ್ತಿಕೊಂಡು ದಿನಾಂಕ:೧೯.೧೦.೨೦೨೧ ರಂದು ೦೨:೦೦ ಎ.ಎಂ. ಸುಮಾರಿಗೆ ಕಲಬುರಗಿ ನಗರದ ಕರುಣೇಶ್ವರ ಬಡಾವಣೆಯ ರಾಮ ಮಂದಿರ ಹತ್ತಿರ ಇರುವ ಬಸ್ ನಿಲ್ದಾಣದ ಹತ್ತಿರ ಬಸ್ ಇಳಿದು ಮನೆಗೆ ಹೋಗುವ ಕಾಲಕ್ಕೆ ೩ ಜನ ಅಪರಿಚಿತ ಜನರು ಒಂದು ಮೋಟರ ಸೈಕಲ್ ಮೇಲೆ ಕುಳಿತುಕೊಂಡು ನನ್ನ ಹತ್ತಿರ ಬಂದು ಎಲ್ಲಿಗೆ ಹೋಗಬೇಕು ಅಂತ ಕೇಳಿದಾಗ ನಾನು ಇಲ್ಲಿಯೇ ಹತ್ತಿರದಲ್ಲಿ ನಮ್ಮ ಮನೆ ಇರುತ್ತದೆ ಮನೆಗೆ ಹೋಗಬೇಕು ಅಂತ ಹೇಳಿದೆ. ನಂತರ ನಾನು ರಾಮ ಮಂದಿರ ಬಸ್ ಸ್ಟಾಫ್ ಮುಖಾಂತರ ನಮ್ಮ ಮನೆಗೆ ಹೋಗುತ್ತಿರುವಾಗ ಸದರಿ ೩ ಜನರು ತಮ್ಮ ಮೋಟರ ಸೈಕಲ್ ಮೇಲೆ ಕುಳಿತು ಪುನಃ ನನ್ನ ಮುಂದೆ ಬಂದು ನಿಂತು ನಿನ್ನ ಹತ್ತಿರ ಎಷ್ಟು ಹಣ ಇದೆ ತೆಗೆ ಅಂತ ಅಂದಾಗ ನಾನು ಓಡಿ ಹೋಗಿ ರಾಮ ಮಂದಿರ ಹತ್ತಿರ ಬರುತ್ತಿದ್ದಾಗ ಸದರಿಯವರು ತಮ್ಮ ಮೋಟರ ಸೈಕಲ್ ಮೇಲೆ ಬಂದು ನನಗೆ ಹೆದರಿಸಿ ಮೋಟರ ಸೈಕಲ್ ಮೇಲೆ ಹಿಂದೆ ಕುಳಿತಿದ್ದ ವ್ಯಕ್ತಿ ತನ್ನ ಹತ್ತಿರ ಇದ್ದ ರಾಡಿನಿಂದ ನನ್ನ ತಲೆಗೆ ಮತ್ತು ನನ್ನ ಎಡಗಾಲಿನ ಮೊಣಕಾಲು ಹತ್ತಿರ ಜೋರಾಗಿ ಹೊಡೆದಿದ್ದರಿಂದ ನನ್ನ ತಲೆಯಿಂದ ರಕ್ತ ಸುರಿಯಲು ಪ್ರಾರಂಭಿಸಿದ್ದು ಅಷ್ಟರಲ್ಲಿ ದ್ವಿ-ಚಕ್ರ ವಾಹನದ ಮದ್ಯದಲ್ಲಿ ಕುಳಿತಿದ್ದ ವ್ಯಕ್ತಿ ನನ್ನ ಹತ್ತಿರ ಇದ್ದ ಸ್ಯಾಮಸಂಗ ಕಂಪನಿಯ ಮೊಬೈಲ್ ಫೋನ್ ಅ.ಕಿ. ೫೦೦/- ನನ್ನ ಕೊರಳಲ್ಲಿದ್ದ ೧೦ ಗ್ರಾಂ ಬಂಗಾರದ ಚೈನ್ ಅ.ಕಿ. ೩೦,೦೦೦/- ಮತ್ತು ನನ್ನ ಬಲಗೈ ಉಂಗುರ ಬೆರಳಿಗೆ ಹಾಕಿದ್ದ ತಲಾ ೪ ಗ್ರಾಂನ ಎರಡು ಬಂಗಾರದ ಉಂಗುರಗಳು ಅ.ಕಿ. ೨೦,೦೦೦/- ಮತ್ತು ನನ್ನ ಹಣವಿದ್ದ ರ‍್ಸ ಕಿತ್ತುಕೊಂಡಿದ್ದು ಅದರಲ್ಲಿ ನಗದು ಹಣ ೫,೦೦೦/- ಮತ್ತು ಆಧಾರ ಕರ‍್ಡ, ಪಾನ ಕರ‍್ಡ ಹಾಗೂ ಇತರೆ ದಾಖಲಾತಿಗಳು ಇದ್ದದ್ದನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಆಗ ಸಮಯ ಅಂದಾಜ ೦೨:೧೫ ಎ.ಎಂ. ಆಗಿರಬಹುದು. ಅವರು ಹೋದ ನಂತರ ನಾನು ಮನೆಗೆ ಹೋಗಿ ಈ ವಿಷಯವನ್ನು ನನ್ನ ಹೆಂಡತಿಗೆ ತಿಳಿಸಿ ನಂತರ ನಾನು ಉಪಚಾರ ಕುರಿತು ರಾಮ ಮಂದಿರ ಹತ್ತಿರ ಇರುವ ಧನ್ವಂತರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡಿಸಿಕೊಂಡು ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನನಗೆ ಹೊಡೆಬಡೆಮಾಡಿ ನನ್ನ ಹತ್ತಿರ ಇದ್ದ ನಗದು ಹಣ, ಬಂಗಾರ ಮತ್ತು ಮೊಬೈಲ್ ಫೋನ್ ನಂ. ೯೬೮೬೨೪೫೧೫೦ ನೇದ್ದನ್ನು ಕಿತ್ತುಕೊಂಡು ಹೋದ ಅಪರಿಚಿತ ೩ ಜನ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ವಸ್ತುಗಳನ್ನು ನನಗೆ ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ರ‍್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-10-2021 01:58 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080