ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :-  ದಿನಾಂಕ:19/09/2022 ರಂದು ಮಧ್ಯರಾತ್ರಿ 01-00 ಗಂಟೆಯಿಂದ ಬೆಳಗಿನ 06-00 ಗಂಟೆಯವರೆಗೆ  ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯ  ಕುರಿತು ನಾನು ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ ಶ್ರೀ ಹುಸೇನಬಾಷಾ ಎ.ಎಸ್.ಐ., ಶ್ರೀ ಸಿದ್ರಾಮಯ್ಯ ಸಿಹೆಚಸಿ 226, ಶ್ರೀ ನಾಗೇಂದ್ರ ಸಿಪಿಸಿ 79,  ಶ್ರೀಸುರೇಶ ಸಿಪಿಸಿ 136,  ಶ್ರೀ ಅಶೋಕ ಸಿಪಿಸಿ 08 , ಶ್ರೀ ಸೈಯ್ಯದ ತೌಸೀಫ್ ಹುಸೇನ ಸಿಪಿಸಿ 196 ಇವರೊಂದಿಗೆ ಠಾಣೆಗೆ ಒದಗಿಸಿದ ಜೀಪ್ ನಂ.ಕೆಎ 32 ಜಿ 874 ರಲ್ಲಿ ಕುಳಿತುಕೊಂಡು ವಿಶೇಷ ರಾತ್ರಿಗಸ್ತು ಕರ್ತವ್ಯ ನಿರ್ವಹಿಸುತ್ತಾ ಬೆಳಗಿನ ಜಾವ 04-30 ಗಂಟೆಗೆ ಚೌಕ ಸರ್ಕಲದಲ್ಲಿ ಬಂದಾಗ ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಜಿ.ಡಿ.ಎ. ಅಂಬೇಡ್ಕರ ಆಶ್ರಯ ಕಾಲೋನಿಯಲ್ಲಿ ಇರುವ ಲಾರಿ ತಂಗುದಾಣದಿಂದ ದುಬೈ ಕಾಲೋನಿಗೆ ಹೋಗಿ-ಬರುವ ರಸ್ತೆಯ ಜಿಡಿಎ ಕಾಲೋನಿಯ ಖುಲ್ಲಾ ಪ್ಲಾಟುಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡ ಗಂಟಿಗಳ ಮರೆಯಲ್ಲಿ ಕೆಲವು ಜನರು  ತಮ್ಮ ಮುಖಕ್ಕೆ  ದಸ್ತಿ  ಕಟ್ಟಿಕೊಂಡು ನಿಂತುಕೊಂಡು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಈ ವಿಷಯವನ್ನು ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ ನಮ್ಮ ಸಿಬ್ಬಂದಿಯಾದ ಶ್ರೀ ಸಿದ್ರಾಮಯ್ಯ ಸಿಹೆಚಸಿ 226 ರವರ ಸಹಾಯದಿಂದ  ಇಬ್ಬರು ಪಂಚರಾದ  1] ಶ್ರೀ ಅಬ್ದುಲ ಗಫಾರ ತಂದೆ ಅಬ್ದುಲ ರಹೇಮಾನ ವ:40 ವರ್ಷ ಉ:ಚಾಲಕ ಜಾತಿ:ಮುಸ್ಲಿಂ ಸಾ:ರಂಗೀನ ಮಜೀದ ಹತ್ತಿರ ಮೋಮಿನಪೂರ ಕಲಬುರಗಿ 2) ಶ್ರೀ ಸೈಯ್ಯದ ಖಾಲೀದ@ಸದ್ದಾಂ ತಂದೆ ಸೈಯ್ಯದ ಖಲೀಲ ವ:24 ವರ್ಷ ಉ:ವ್ಯಾಪಾರ ಜಾತಿ:ಮುಸ್ಲಿಂ ಸಾ:ಸದರ ಮೊಹಲ್ಲಾ ಮೋಮಿನಪೂರ ಕಲಬುರಗಿ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ಮತ್ತು ಈ ಮೇಲಿನ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಲ್ಲರಿಗೂ ಈ ಮೇಲಿನ ಬಾತ್ಮಿ ವಿಷಯ ಅವರಿಗೆ ತಿಳಿಸಿ ಪಂಚರಿಗೆ ನಾವು ಮಾಡುವ ದಾಳಿಯನ್ನು ನೋಡಿ ಪರಿಶೀಲಿಸಿ ಅದರ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿ ಕೊಡಲು ಕೇಳಿಕೊಂಡಾಗ ಅದಕ್ಕೆ ಪಂಚರು ಒಪ್ಪಿಕೊಂಡರು. ಮತ್ತು ನಮ್ಮ ಠಾಣೆಯ ಈ ಮೇಲಿನ ಅಧಿಕಾರಿ ಮತ್ತು ಸಿಬ್ಬಂದ್ದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರುವಂತೆ ಸೂಚಿಸಿದ ಪ್ರಕಾರ ಅವರು ಕೂಡಾ ಒಪ್ಪಿಕೊಂಡರು. ನಂತರ ದಾಳಿ ಕುರಿತು ಇಂದು ದಿನಾಂಕ:19/09/2022 ರಂದು ಬೆಳಗಿನ ಜಾವ 05-00 ಗಂಟೆಗೆ ಚೌಕ ಸರ್ಕಲದಿಂದ ನಮ್ಮ ಠಾಣೆಗೆ ಒದಗಿಸಿದ ಜೀಪ ನಂ. ಕೆಎ 32 ಜಿ 874  ನೇದ್ದರಲ್ಲಿ ನಾನು ಮತ್ತು ಪಂಚರು ಸಿಹೆಚಸಿ 226, ಸಿಪಿಸಿ 136, 08 ರವರು ಕುಳಿತು ಕೊಂಡೇವು. ಜೀಪು ಸಿಹೆಚಸಿ 08 ಅಶೋಕ ರವರು ಚಾಲನೆ ಮಾಡುತ್ತಿದ್ದು ಶ್ರೀ ಹುಸೇನಬಾಷಾ ಎ.ಎಸ್.ಐ ಮತ್ತು ಸಿಪಿಸಿ 196, ಸಿಪಿಸಿ 79 ರವರು ತಮ್ಮ ತಮ್ಮ ಖಾಸಗಿ ಮೋಟಾರ ಸೈಕಲ ಮೇಲೆ ಕುಳಿತುಕೊಂಡರು. ನಮ್ಮ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಚೌಕ ಸರ್ಕಲ್ ಮುಖಾಂತರವಾಗಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ  ಜೀಪು ಮತ್ತು  ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರ ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಕಲಬುರಗಿ ನಗರದ ಜಿ.ಡಿ.ಎ. ಅಂಬೇಡ್ಕರ ಆಶ್ರಯ ಕಾಲೋನಿಯಲ್ಲಿ ಇರುವ ಲಾರಿ ತಂಗುದಾಣದಿಂದ ದುಬೈ ಕಾಲೋನಿಗೆ ಹೋಗಿ-ಬರುವ ರಸ್ತೆಯ ಜಿಡಿಎ ಕಾಲೋನಿಯ ಖುಲ್ಲಾ ಪ್ಲಾಟುಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡ ಗಂಟಿಗಳ ಮರೆಯಲ್ಲಿ ನಿಂತು ನೋಡಲಾಗಿ 07 ಜನರು ತಮ್ಮ ತಮ್ಮ ಮುಖಕ್ಕೆ ದಸ್ತಿಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಮಾರಕ ಅಸ್ತ್ರಗಳಾದ ಚಾಕು,ಬಡಿಗೆ,ಹಗ್ಗ,ರಾಡು,ಪ್ಲಾಸ್ಟಿಕ ಪೈಪು,ರಾಡು,ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 07 ಜನರನ್ನು ನನ್ನ ನಿರ್ದೇಶನದಂತೆ ಬೆಳಗಿನ ಜಾವ 05-15 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ನಾನು ಮತ್ತು ಸಿಬ್ಬಂದಿಯವರು ಹಿಡಿಯಲು 05 ಜನರು ಸಿಕ್ಕಿ ಬಿದಿದ್ದು, ಅವರಲ್ಲಿ ಇಬ್ಬರು ಓಡಿಹೋದರು. ಅವರಿಬ್ಬರು ಓಡಿ ಹೋಗುವಾಗ ತಮ್ಮ ತಮ್ಮ ಕೈಯಲ್ಲಿದ್ದ ಪ್ಲಾಸ್ಟಿಕ ಪೈಪು ಮತ್ತು ರಾಡು ಹಾಗೂ ಮುಖಕ್ಕೆ ಕಟ್ಟಿಕೊಂಡ ಎರಡು ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿಬಿದ್ದ 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಮಹ್ಮದ ರಫೀಕ ತಂದೆ ಮಕಬೂಲ ಶಹಾ ವ:32 ವರ್ಷ ಉ:ಆಟೋ ಚಾಲಕ ಜಾತಿ ಮುಸ್ಲಿಂ ಸಾ:ಡೆಕ್ಕನ ಕಾಲೋನಿ ಖಾದ್ರಿ ಚೌಕ ಕಲಬುರಗಿ ಅಂತಾ ತಿಳಿಸಿದನು.ಇತನಿಗೆ ನಾನು ಮತ್ತು ಶ್ರೀ ಹುಸೇನಬಾಷಾ ಎ.ಎಸ್.ಐ. ಇಬ್ಬರು ಹಿಡಿದಿದ್ದು ಇತನ ಹತ್ತಿರ ಮುಖಕ್ಕೆ ಕಟ್ಟಿಕೊಂಡ ದಸ್ತಿ ಅ:ಕಿ:00 ರೂ ಮತ್ತು ಅವನ ಕೈಯಲ್ಲಿದ್ದ ಒಂದು ಹರಿತವಾದ ಚಾಕು ಅ:ಕಿ:00 ರೂ. ದೊರೆಯಿತು 2) ಆಸೀಫ ಪಟೇಲ್ ತಂದೆ ಶುಕುರ ಪಟೇಲ್ ವ:23 ವರ್ಷ ಉ:ಸ್ಕ್ರಾಪ ಸಾಮಾನು ಖರೀದಿ  ಕೆಲಸ ಜಾತಿ ಮುಸ್ಲಿಂ ಸಾ: ಸಾತ ಗುಮ್ಮಜ ಕಲಬುರಗಿ ಅಂತಾ ತಿಳಿಸಿದನು. ಇತನಿಗೆ ಸಿಹೆಚಸಿ 226 ಸಿದ್ರಾಮಯ್ಯ ಇವರು ಹಿಡಿದಿದ್ದು ಅವನ ಹತ್ತಿರ ಮುಖಕ್ಕೆ ಕಟ್ಟಿಕೊಂಡ ದಸ್ತಿ ಅ:ಕಿ:00 ರೂ ಮತ್ತು ಒಂದು 15 ಫೀಟ ಹಗ್ಗ ಅ:ಕಿ:00 ದೊರೆಯಿತು. 3) ಶಹಬಾಜ ಪಟೇಲ್ ತಂದೆ ಅಬ್ದುಲ ರೌಫ್ ಪಟೇಲ್ ವ:31 ವರ್ಷ ಉ:ಖಾಸಗಿ ಕೆಲಸ ಜಾತಿ ಮುಸ್ಲಿಂ ಸಾ:ಹಾಗರಗಾ ಕ್ರಾಸ ಕಲಬುರಗಿ ಅಂತಾ ತಿಳಿಸಿದನು. ಇತನಿಗೆ ಸಿಪಿಸಿ 79 ನಾಗೇಂದ್ರ ಇವರು ಹಿಡಿದಿದ್ದು ಅವನ ಹತ್ತಿರ ಮುಖಕ್ಕೆ ಕಟ್ಟಿಕೊಂಡ ದಸ್ತಿ ಅ:ಕಿ:00 ರೂ ಮತ್ತು ಒಂದು ರಾಡು ಅ:ಕಿ:00 ರೂ ದೊರೆಯಿತು. 4) ಮಹ್ಮದ ಸದ್ದಾಂ ತಂದೆ ಮಹ್ಮದ ಗೌಸ ವ:31 ವರ್ಷ ಉ:ಆಟೋ ಚಾಲಕ ಜಾತಿ ಮುಸ್ಲಿಂ ಸಾ;ನಯಾ ಮೊಹಲ್ಲಾ ಹಜ್ಜ ಕಮೀಟಿ ಕಲಬುರಗಿ ಅಂತಾ ತಿಳಿಸಿದನು. ಇತನಿಗೆ ಸಿಪಿಸಿ136 ಸುರೇಶ ಇವರು ಹಿಡಿದಿದ್ದು ಅವನ ಹತ್ತಿರ ಮುಖಕ್ಕೆ ಕಟ್ಟಿಕೊಂಡ ದಸ್ತಿ ಅ:ಕಿ:00 ರೂ ಮತ್ತು ಒಂದು ಖಾರದ ಪುಡಿ ಪಾಕೇಟ್ ಅ:ಕಿ:00 ರೂ ದೊರೆಯಿತು. 5) ಮಹ್ಮದ ಆತೀಫ ತಂದೆ ಮಹ್ಮದ ಆಸೀಫ ವ:29 ವರ್ಷ ಉ: ಲ್ಯಾಬ ಟೆಕ್ನಿಷಿಯನ ಕೆಲಸ ಜಾತಿ:ಮುಸ್ಲಿಂ ಸಾ:ಮಿಲನ ಚೌಕ ಗಾಜಿಪೂರ ಕಲಬುರಗಿ ಅಂತಾ ತಿಳಿಸಿದನು. ಇತನಿಗೆ ಸಿಪಿಸಿ 196 ಸೈಯ್ಯದ ತೌಸೀಫ ಹುಸೇನ ಮತ್ತು ಸಿಪಿಸಿ 08 ಅಶೋಕ ಇವರು ಹಿಡಿದಿದ್ದು ಅವನ ಹತ್ತಿರ ಮುಖಕ್ಕೆ ಕಟ್ಟಿಕೊಂಡ ದಸ್ತಿ ಅ:ಕಿ:00 ರೂ ಮತ್ತು ಒಂದು ಬಡಿಗೆ ಅ:ಕಿ:00 ರೂ. ದೊರೆಯಿತು. ಮತ್ತು ಅವರ ನಿಂತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೃತ್ಯಕ್ಕೆ ಉಪಯೋಗಿಸಲು ತಂದು ನಿಲ್ಲಿಸಿದ 1) ಒಂದು ಹಿರೋ ಫ್ಯಾಶನ ಪ್ರೋ ಮೋಟರ ಸೈಕಲ ನಂ.ಕೆಎ 32 ಎಸ್ 7717  ಅ;ಕಿ: 25,000/-ರೂ. 2) ಒಂದು ಬಜಾಜ ಸಿಟಿ 100 ಮೋಟರ ಸೈಕಲ ನಂ.ಕೆಎ 39 ಎಸ್ 1516 ಅ:ಕಿ: 25,000/- ರೂ. ನೇದ್ದು ನಿಂತಿದ್ದವುಗಳನ್ನು ನೋಡಿ ಯಾರದು ಈ ಮೋಟರ ಸೈಕಲಗಳು ಅಂತಾ ವಿಚಾರಿಸಲೂ ಮಹ್ಮದ ಆತೀಫ್ ಇತನು ತಾನು ಹಿರೋ ಫ್ಯಾಶನ ಪ್ರೋ ಮೋಟರ ಸೈಕಲ ನಂ.ಕೆಎ 32 ಎಸ್ 7717 ತಂದಿರುವುದಾಗಿ ಮತ್ತು ಶಹಬಾಜ ಪಟೇಲ್ ಇತನು ಬಜಾಜ ಸಿಟಿ 100 ಮೋಟರ ಸೈಕಲ ಕೆಎ 39 ಎಸ್ 1516 ತಂದಿರುವುದಾಗಿ ತಿಳಿಸಿದರು. ನಂತರ ಈ ಮೇಲಿನ ಎಲ್ಲಾ ಜನರಿಗೆ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲೂ ಅವರೆಲ್ಲರೂ 6) ಲವಕುಮಾರ ತಂದೆ ರೂಪಲು ರಾಠೋಡ ಸಾ:ಶಹಾಬಜಾರ ತಾಂಡಾ ಕಲಬುರಗಿ ಇನ್ನೊಬ್ಬನ ಹೆಸರು 7)ನಾರಾಯಣ@ಅರುಣ ತಂದೆ ಮೋಹನ ಆಡೆ ಸಾ:ಚನ್ನವೀರ ನಗರ ಕಲಬುರಗಿ ಅಂತಾ ತಿಳಿಸಿದರು. ನಂತರ ನಾನು 07 ಜನರಿಗೆ ಇಲ್ಲಿ ಯಾಕೇ ನಿಂತಿದ್ದಿರೀ ಅಂತಾ ವಿಚಾರಿಸಲೂ 07 ಜನರು ಕಲಬುರಗಿ ನಗರದ ಜಿ.ಡಿ.ಎ. ಅಂಬೇಡ್ಕರ ಆಶ್ರಯ ಕಾಲೋನಿಯಲ್ಲಿಇರುವ ಲಾರಿ ತಂಗು ದಾಣದಿಂದ ದುಬೈ ಕಾಲೋನಿಗೆ ಹೋಗಿ-ಬರುವ ರಸ್ತೆಯ ಜಿಡಿಎ ಕಾಲನಿ ಖುಲ್ಲಾ ಪ್ಲಾಟುಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಂಟಿಗಳ ಮರೆಯಲ್ಲಿ  ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ತಮ್ಮ ಹತ್ತಿರ ಇರುವ ಹಗ್ಗದ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಅವರಿಗೆ ಚಾಕು,ಬಡಿಗೆ, ರಾಡು ತೋರಿಸಿ ಅವರ ಕಣ್ಣಲ್ಲಿ ಖಾರದ ಪುಡಿ ಎರಚಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಲ್ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ಹಿಡಿದುಕೊಂಡಿರುವಿರಿ ಅಂತಾ ತಿಳಿಸಿದರು. ಆಗ ನಾನು ಪಂಚರ ಸಮಕ್ಷಮದಲ್ಲಿ ಕೇಸಿನ ಪುರಾವೆಗೋಸ್ಕರ 07 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು, ಒಂದು ಚಾಕು, ಒಂದು ರಾಡು, ಒಂದು ಬಡಿಗೆ, ಒಂದು ರಾಡು, ಒಂದು ಪ್ಲಾಸ್ಟಿಕ ಪೈಪು ಮತ್ತು ಒಂದು ಅಂದಾಜ 15 ಫೀಟ ಹಗ್ಗ, ಒಂದು ಖಾರದ ಪಾಕೇಟ ಹಾಗೂ ಈ ಮೇಲಿನ ಎರಡು ದ್ವಿಚಕ್ರ ವಾಹನ ನೇದ್ದವುಗಳಿಗೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡೇನು. ಸದರಿ ಈ ಮೇಲ್ಕಂಡ 07 ಜನರು ದರೋಡೆ ಮಾಡಲು ಪ್ರಯತ್ನದಲ್ಲಿ ನಿರತರಾಗಿದ್ದು ಖಚಿತ ಪಟ್ಟಿದ್ದರಿಂದ್ದ ಸಿಕ್ಕಿ ಬಿದ್ದ 05 ಜನರನ್ನು ಸ್ಥಳದಲ್ಲಿ ವಶಕ್ಕೆ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ತೆಗೆದುಕೊಂಡೇವು. ಸದರಿ ಜಪ್ತಿ ಪಂಚನಾಮೆಯನ್ನು ಬೆಳಿಗ್ಗೆ 05-15 ಗಂಟೆಯಿಂದ ಬೆಳಿಗ್ಗೆ 06-30 ಗಂಟೆಯವರೆಗೆ ಸದರಿ ಸ್ಧಳದಲ್ಲಿ ಕುಳಿತು, ಪಂಚರ ಸಮಕ್ಷಮದಲ್ಲಿ ಲ್ಯಾಪ ಟ್ಯಾಪನಲ್ಲಿ ಸಿಪಿಸಿ 08 ಅಶೋಕ ರವರ ಕಡೆಯಿಂದ ಬೆರಳಚ್ಚು ಮಾಡಿ ಮುಗಿಸಲಾಯಿತು. ಸದರಿ ಜಪ್ತಿ ಪಡಿಸಿಕೊಂಡ ಮುದ್ದೆಮಾಲು ಹಾಗೂ 05 ಜನ ಆರೋಪಿತರನ್ನು ಠಾಣೆಗೆ ಕರೆ ತಂದು ಎಸ್.ಎಚ.ಓ.ರವರಿಗೆ ಒಪ್ಪಿಸಿದ್ದು ಸದರಿ ಈ ಮೇಲಿನ 07 ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸರಕಾರದ ಪರವಾಗಿ ಫಿರ್ಯಾದಿ ನೀಡಿರುತ್ತೇನೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-19-09-2022  ರಂದು ಫರ‍್ಯಾದಿದಾರರು ನೀಡಿದ ಫರ‍್ಯಾದಿಯೇನೆಂದರೆ ಸದರಿಯವರು ತಮ್ಮ ಮನೆಯಲ್ಲಿ ದಿನಾಂಕ ೧೮-೦೯-೨೦೨೨, ೧೦-೩೦ ಪಿ. ಎಮ್ ಕ್ಕೆ ಮನೆಯಲ್ಲಿ ಮಲಗಿದ್ದಾಗ ಯಾರೋ ಮೂರು ಜನ ಕಳ್ಳರು ನಮ್ಮ ತಂದೆ ಹತ್ತಿರ ಇದ್ದ ಸುಮಾರು ೧೦ ಬಂಗಾರದ ಚೈನ್ ಅನ್ನು ಕಳ್ಳತನ ಮಾಡುತ್ತಿರುವಾಗ ಅವರು ಜೋರಾಗಿ ಚೀರಿಇದ್ದು ನಾವು ಎದ್ದು ನೋಡಲು ಅವರು ನಮ್ಮ ತಂದೆಗೆ ಪಾನದಿಂದ ಹೊಡೆದು ರಕ್ತಗಾಯ ಮಾಡಿ ಅವರ ಬಳಿಯಲ್ಲಿದ್ದ ೬೦೦ ರೂ ಮೊತ್ತವನ್ನು ಕಸಿದುಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ  ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ:-  ೧೮-೦೯-೨೦೨೨, ೧೧-೦೦ ಪಿ. ಎಮ್ ದಿಂದ ದಿನಾಂಕ ೧೫-೦೯-೨೦೨೨ ರ ೦೨-೩೦ ಎ.ಎಮ್ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಕುಟುಂಬ ಸಮೇತ ಮನೆಯಲ್ಲಿ ಮಲಗಿದಾಗ ಯಾರೋ ಕಳ್ಳರು ಮನೆ ಬಾಗಿಲು ಮುರಿದು ಮನೆಯೊಳಗೆ ಬಂದು ಅಲಮಾರಿ ಮುರಿದು ೮೧೦೦೦/-ರೂ  ಕಿಮತ್ತಿನ ಬಂಗಾರ ಮತ್ತು ಬೆಳಿ ಹಾಗೂ ನಗದು ಹಣ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ  ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 06-10-2022 02:25 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080