ಅಭಿಪ್ರಾಯ / ಸಲಹೆಗಳು

ಅಶೋಕ  ನಗರ ಪೊಲೀಸ್ ಠಾಣೆ :- ಇಂದು ದಿನಾಂಕ:೧೮.೦೮.೨೦೨೧ ರಂದು ೦೪:೩೦ ಪಿ.ಎಂ.ಕ್ಕೆ ಶ್ರೀ ಪಂಡೀತ ಸಗರ ಪಿ.ಐ. ಅಶೋಕ ನಗರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಒಂದು ವರದಿಯನ್ನು ಹಾಜರ ಪಡಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ:೧೮.೦೮.೨೦೨೧ ರಂದು ೦೨:೦೦ ಪಿ.ಎಂ.ಕ್ಕೆ  ಠಾಣೆಯಲ್ಲಿದ್ದಾಗ ಖಚಿತವಾದ  ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಕಣ್ಣಿ ಮರ‍್ಕೆಟ್ ಹತ್ತಿರ ಒಬ್ಬ ವ್ಯಕ್ತಿಯು ಸರ‍್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾನೆ ಅಂತ ಮಾಹಿತಿ ಬಂದ ಮೆರೆಗೆ ಅಪರಾಧ ವಿಭಾಗದ ಸಿಬ್ಬಂದಿ ಜನರಾದ  ೧) ಗುರುಮರ‍್ತಿ ಹೆಚ್.ಸಿ-೭೨ ಮತ್ತು ೨) ಸಂಜುಕುಮಾರ ಹೆಚ್.ಸಿ-೧೪೨ ಇವರುಗಳನ್ನು ಇಬ್ಬರು ಪಂಚ ಜನರಾದ ೧) ಶ್ರೀ ಮಂಜುನಾಥ ತಂದೆ ಹುಸನಪ್ಪ ಮಾಲಗತ್ತಿ ವಯ: ೨೯ ರ‍್ಷ ಜಾ: ಹೊಲೆಯ ಉ: ಕೂಲಿ ಕೆಲಸ ಸಾ|| ಮ.ನಂ. ೧೦ ಕಾಂತಾ ಕಾಲೋನಿ ಕಲಬುರಗಿ ಮತ್ತು ೨) ಶ್ರೀ ರವಿ ತಂದೆ ಹಣಮಂತ ರಾಂಪೂರೆ ವಯ: ೨೯ ರ‍್ಷ ಜಾ: ಮಾದಿಗ ಉ: ಖಾಸಗಿ ಕೆಲಸ ಸಾ|| ಪ್ಲಾಟ ನಂ. ೨೩೧/ಎ ಕಾಂತಾ ಕಾಲೋನಿ ಕಲಬುರಗಿ ರವರನ್ನು  ಬರಮಾಡಿಕೊಂಡು ಅವರಿಗೆ ಸದರಿ ವಿಷಯ ತಿಳಿಸಿ ಅವರು ಮತ್ತು ಸಿಬ್ಬಂದಿಯೊಂದಿಗೆ  ಕೂಡಿಕೊಂಡು  ೦೨:೪೫ ಪಿಎಂ.ಕ್ಕೆ ಠಾಣೆಯಿಂದ ಹೊರಟು ಕಣ್ಣಿ ಮರ‍್ಕೆಟ್ ಹತ್ತಿರ  ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ೧/- ರೂಪಾಯಿಗೆ ೮೦/-  ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನುಹಿಡಿದು ಕೊಂಡಿದ್ದು ಆಗ ಸಮಯ ೦೩:೦೦ ಪಿ.ಎಂ. ಆಗಿತ್ತು.  ನಂತರ ಆತನ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವನು ತನ್ನ ಹೆಸರು ೧) ಕಾಶಿನಾಥ ತಂದೆ ವೆಂಕಟರಾವ ರೋಡೆ ವಯ: ೩೨ ರ‍್ಷ ಜಾ: ಮರಾಠಾ ಉ: ಹೊಟೆಲ್ ವ್ಯಾಪಾರ ಸಾ|| ಬಾಬುರಾವ ಚಿಂಚೋಳಿ ಇವರ ಮನೆಯಲ್ಲಿ ಬಾಡಿಗೆ ಜಗದಂಬಾ ಗುಡಿ ಹತ್ತಿರ ಚನ್ನವೀರ ನಗರ ಕಲಬುರಗಿ, ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ೧) ನಗದು ಹಣ ರೂ.  ೬೮೦/-  ೨) ಒಂದು ಬಾಲ ಪೆನ್ ಅ.ಕಿ. ೦೦ ಮತ್ತು ೩) ಎರಡು ಮಟಕಾ ಚೀಟಿಗಳು ಅ.ಕಿ. ೦೦ ಸಿಕ್ಕಿರುತ್ತವೆ. ನಂತರ ಸದರಿಯವನ ಹತ್ತಿರ ಸಿಕ್ಕ ಹಣ ಮತ್ತು ಮಟಕಾ ಚೀಟಿ ಮತ್ತು ಬಾಲ್ ಪೆನಗಳ  ಬಗ್ಗೆ  ೦೩:೦೦ ಪಿ.ಎಂ. ದಿಂದ ೦೪:೦೦ ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಕೇಸಿನ ಪುರಾವೆ ಕುರಿತು ಮುದ್ದೆಮಾಲು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ೦೪:೩೦ ಪಿ.ಎಂ.ಕ್ಕೆ ಬಂದು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಪಿತನನ್ನು ಹಾಜರುಪಡಿಸಿ ಸರಕಾರದ ಪರವಾಗಿ ಜಪ್ತಿ ಪಂಚನಾಮೆಯೊಂದಿಗೆ ಈ ಫರ‍್ಯಾದಿ ನೀಡಿದ್ದು ಸದರಿ ಫರ‍್ಯಾದಿ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲೆ ಠಾಣೆ ಗುನ್ನೆ ನಂ. ೯೫/೨೦೨೧  ಕಲಂ ೭೮(೩) ಕೆ.ಪಿ. ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-08-2021 12:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080