ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 19.07.2022 ರಂದು ಮದ್ಯಾಹ್ನ 2-15 ಗಂಟೆಗೆ ಖಾಸಗಿ ಕಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಭೀಮಶಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಬೀಮಶಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 18-07-2022 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಕಲಬುರಗಿ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಡ್ಯೂಟಿ ಮುಗಸಿಕೊಂಡು ಸುಪರ ಮಾರ್ಕೆಟಕ್ಕೆ ಹೋಗಿ ಮನೆಯ ಸಾಮಾನಗಳನ್ನು ತಗೆದುಕೊಂಡು ಸುಪರ ಮಾರ್ಕೆಟನಿಂದ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ವಾಯ-5394 ನೇದ್ದನ್ನು ಚಲಾಯಿಸಿಕೊಂಡು ಜಗತ ಸರ್ಕಲ ಎಸವಿಪಿ ಸರ್ಕಲ ಸಂತೋಷ ಕಾಲೋನಿ ಮುಖಾಂತರವಾಗಿ ಹೋಗುವಾಗ ದಾರಿ ಮದ್ಯ ಬೇಂದ್ರ ನಗರದ ರೋಡ ಮೇಲೆ ಹಿಂದಿನಿಂದ ಆಟೋರಿಕ್ಷಾ ನಂಬರ ಕೆಎ-32/ಸಿ-8453 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ:-  ದಿನಾಂಕ; 19/07/2022 ರಂದು ಬೇಳಿಗ್ಗೆ 6.45 ಎ.ಎಮ್ ಕ್ಕೆ ಶ್ರೀ ಮಲ್ಲಿಕಾರ್ಜುನ ಜಾನೆ. ಎ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿ ರವರು 4 ಜನ ಆರೋಪಿತರು, ಜಪ್ತಿಪಂಚನಾಮೆ, ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೇನೆಂದರೆ ದಿನಾಂಕ:19.07.2022 ರಂದು 4;00 ಎಎಮ್ ದಿಂದ ನಾನು ಮತ್ತು ನಮ್ಮ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ ಸೀಕ್ರೇಶ್ವರ ಹೆಚ್.ಸಿ-134, ಶ್ರೀ ರಮೇಶ ಸಿಪಿಸಿ-447. ಶ್ರೀ ಬಸವರಾಜ ಸಿಪಿಸಿ-255 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ  ಸ್ವತ್ತಿನ ಗುನ್ನೆಗಳನ್ನು ತಡೆಗಟ್ಟುವ ಸಂಬಂದ ವಿಶೇಷ ರಾತ್ರಿ ಗಸ್ತು ಹಾಗೂ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಠಾಣಾ ವ್ಯಾಪ್ತಿಯ ಈದ್ಗಾ ಮೈದಾನದ ಹತ್ತಿರ ಇರುವ ಪೀರ ಜಂಜಾನಿ ದರ್ಗಾದ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಕೇಳಿಕೊಂಡಿದ್ದು. ಅದಕ್ಕೆ ಅವರು ಒಪ್ಪಿಕೊಂಡಿದ್ದು ನಂತರ ನಾನು, ಪಂಚರು ಮತ್ತು ಸಿಬ್ಬಂದಿಯವರನ್ನು ಠಾಣೆಗೆ ಒದಗಿಸಿದ ಸರಕಾರಿ ಜೀಪನಲ್ಲಿ ಕರೆದುಕೊಂಡು ಈದ್ಗಾ ಮೈದಾನದ ಕಂಪೌಂಡ ಪಕ್ಕದ ರಸ್ತೆಯ ಮೇಲೆ 4;30 ಎ.ಎಮ ಕ್ಕೆ ನಮ್ಮ ಜೀಪನ್ನು ನಿಲ್ಲಿಸಿ ನಾವೆಲ್ಲರೂ ಕೆಳಗೆ ಇಳಿದು ನಿಧಾನವಾಗಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸ್ವಲ್ಪ ದೂರದಲ್ಲಿ ರಸ್ತೆಯ ಪಕ್ಕದಲ್ಲಿ ಕೆಲವು ಜನರು ಗುಸು ಗುಸು ಮಾತನಾಡುವ ಶಬ್ದ ಕೇಳಿ ಬರುತ್ತಿತ್ತು ಅವರಿಗೆ ಗೊತ್ತಾಗದ ಹಾಗೆ ನಾವು ಅವರ ಹತ್ತಿರ ಹೋಗಿ ನೋಡಲು ನಾಲ್ಕು-ಐದು ಜನರು ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿದಾಗ ಸದರಿಯವರು ನಮ್ಮನ್ನು ನೋಡಿ ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ನಾಲ್ಕು ಜನರಿಗೆ ಹಿಡಿದಿದ್ದು ಒಬ್ಬನು ಓಡಿ ಹೋಗಿದ್ದು ನಾಲ್ಕು ಜನರು ಸಿಕ್ಕಿದ್ದು ಅವರಿಗೆ ವಿಚಾರಣೆಗೆ ಒಳಪಡಿಸಲಾಗಿ ಅವರು ತಮ್ಮ ತಮ್ಮ ಹೆಸರು ವಿಳಾಸ ವಿಚಾರಿಸಲು ಮೊದಲನೆಯವನು ತನ್ನ ಹೆಸರು 1) ಆಕಾಶ ತಂದೆ ಹಣಮಂತ ದೊಡ್ಡಮನಿ ವಯ-19 ವರ್ಷ ಜಾ||ಮಾದಿಗ ಉ||ಮೈಕಾನ ಬಾರದಲ್ಲಿ ವೇಟರ್ ಕೆಲಸ ಸಾ||ಬೋರಾಬಾಯಿ ನಗರ ಕಲಬುರಗಿ  ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ಒಂದು ಚಾಕು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೊರೆತಿದ್ದು 2) ಪರಶುರಾಮ ತಂದೆ ಸುಧಾಕರ ಮೂಲಿಮನಿ ವಯ-20 ವರ್ಷ ಜಾ||ಮಾದಿಗ ಉ||ಗೌಂಡಿ ಕೆಲಸ ಸಾ||ಬೋರಾಬಾಯಿ ನಗರ ಕಲಬುರಗಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಬಡಿಗೆ ದೊರೆತಿದ್ದು 3) ಯಲ್ಲಪ್ಪಾ@ಯಲ್ಲಾಲಿಂಗ ತಂದೆ ತಿಪ್ಪಣ್ಣಾ ಹರಗೆನವರ್ ವಯ-19 ವರ್ಷ ಜಾ||ಮಾದಿಗ ಉ||ಮೈಕಾನ ಬಾರದಲ್ಲಿ ವೇಟರ್ ಕೆಲಸ ಸಾ||ಬೋರಾಬಾಯಿ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲು ಇವನ ಹತ್ತಿರ  ಖಾರದ ಪುಡಿ ಒಂದು ಮುಖಕ್ಕೆ ಕಟ್ಟಿಕೊಳ್ಳುವ ಕಪ್ಪು ಬಟ್ಟಿ ದೊರೆತಿದ್ದು ಇರುತ್ತದೆ. 4) ಪವನ ತಂದೆ ಪೀರಪ್ಪಾ ಹರಗೆನವರ ವಯ-20 ವರ್ಷ ಜಾ||ಮಾದಿಗ ಉ||ಗೌಂಡಿ ಕೆಲಸ ಸಾ||ಬೋರಾಬಾಯಿ ನಗರ ಕಲಬುರಗಿ ಇವನ ಹತ್ತಿರ ಒಂದು ಹಗ್ಗ ಮತ್ತು ಒಂದು ಕಪ್ಪು ಬಟ್ಟಿ ದೋರೆತ್ತಿದ್ದು ನಂತರ ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತಿಳಿಸಿದ್ದೆನೆಂದರೆ, ಒಂಟಿಯಾಗಿ ಬರುವ ಜನರ ಮೇಲೆ ದಾಳಿ ಮಾಡಿ ಅವರಿಗೆ ಹೆದರಿಸಿ ಬೆದರಿಸಿ ಅವರಲ್ಲಿದ್ದ ನಗದು ಹಣ, ಬಂಗಾರ ಮತ್ತು ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಂಡು ದರೋಡೆ ಅಥವಾ ಸುಲಿಗೆ ಮಾಡುವ ಉದ್ದೇಶದಿಂದ ಹೊಂಚುಹಾಕಿ ಕುಳಿತಿರುತ್ತೆವೆ ಅಂತ ತಿಳಿಸಿದ್ದು. ಓಡಿ ಹೋದವನ ಬಗ್ಗೆ ಪವನ ಎಂಬುವನಿಗೆ ವಿಚಾರಿಸಲು ಓಡಿ ಹೋದವನ ಹೆಸರು ಶೇಖ ಜಿಲಾನ ಪಾಶಾ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿಯವರ ಹತ್ತಿರ ದರೋಡೆ ಮಾಡಲು ಇಟ್ಟುಕೊಂಡಿದ್ದ ವಸ್ತುಗಳನ್ನು ಪಂಚರ ಸಮಕ್ಷಮ 5-00 ಎ.ಎಮ ದಿಂದ 6.30 ಎಎಮ ದವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಗುನ್ನೆಯ ಮುಂದಿನ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡು. ಸದರಿ ಸಿಕ್ಕಿಬಿದ್ದ 4 ಜನ ಆರೋಪಿತರೊಂದಿಗೆ 6.45 ಎಎಮ ಕ್ಕೆ ಠಾಣೆಗೆ ತಂದು ಸದರಿ ಆರೋಪಿತರ ವಿರುದ್ದ ಕಲಂ: 399, 402 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಅಂತ ಇತ್ಯಾದಿಯಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ರಾಘವೇಂದ್ರ ನಗರ ಪೊಲೀಸ ಠಾಣೆ  :- ದಿನಾಂಕ:19-07-2022 ರಂದು ಮದ್ಯಾಹ್ನ ೩.೦೦ ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಸೀಕ್ರೇಶ್ವರ ಹೆಚ್,ಸಿ-೧೩೪, ಶ್ರೀ ರಮೇಶ ಪಿಸಿ-೪೪೫, ಶ್ರೀ ಕಿಶೋರ ಪಿಸಿ-೧೫೦, ಮುಜಾಹಿದ ಪಿಸಿ-೧೫೮ ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಎಂ.ಎಸ್.ಕೆ.ಮಿಲ್ ಫಾಟಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಇದು ಬಾಂಬೆ ಮಟಕಾ ಇದೆ ೧ ರೂಪಾಯಿಗೆ ೮೦ ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿರುತ್ತದೆ ಅಂತಾ ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಬಾತ್ಮಿಯಂತೆ ಸದರಿಯವನ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಪಿಸಿ-೪೪೫ ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿ ಹೇಳಿ ನಂತರ ಪಂಚರು ಮತ್ತು ನಮ್ಮ ನಮ್ಮ ಮೋಟಾರ ಸೈಕಲ್ ಮೇಲೆ ಸಿಬ್ಬಂದಿಯರವರನ್ನು ಕರೆದುಕೊಂಡು ೪-೧೫ ಗಂಟೆಗೆ ಹೊರಟು ೪-೩೦ ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ  ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ ೧ ರೂಪಾಯಿಗೆ ೮೦ ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರುಕ್ಮೋದ್ದೀನ ಬಾಬಾ ತಂದೆ ಸೈಯ್ಯದ ಅಹ್ಮದ ತಂಬೋಲಿ ವಯ-೪೨ ವರ್ಷ ಜಾ||ಮುಸ್ಲಿಂ ಉ||ಆಟೋ ಚಾಲಕ ಸಾ|| ಎಂ.ಎಸ್.ಕೆ.ಮಿಲ್ ದೇವಲಗಲ್ಲಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ  ಅಂಗ ಶೋದನೆ ಮಾಡಲು ಅವನ ಹತ್ತಿರ ೨೨೭೦/-ರೂ ಸಿಕ್ಕಿದ್ದು ಮತ್ತು ಒಂದು ಬಾಲ ಪೆನ ಅಃಕಿB ೦೦ , ಒಂದು ಮಟಕಾ ಚೀಟಿ ದೊರೆತಿದ್ದು,  ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ೨೨೭೦- ರೂ ಬೆಲೆ ಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು ಸಾಯಾಂಕಾಲ ೪.೪೫ ಗಂಟೆಯಿಂದ ೫.೪೫ ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿದ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಮರಳಿ ೬-೦೦ ಪಿ.ಎಂ ಗಂಟೆಗೆ ಠಾಣೆಗೆ ಬಂದು ಸದರಿಯವನ ವಿರುಧ್ದ ಕಲಂ:೭೮(೩) ಕೆ.ಪಿ.ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ್‌ ಠಾಣೆ :- ನಾನು ಶ್ರೀಮತಿ ಕಲಾವತಿ ಗಂಡ ಹಣಮಂತ್ರಾಯ ಪತ್ತೆಗೋಳ ಜಾ:ಲಿಂಗಾಯತ ಉ:ಮನೆಕೆಲಸ ಸಾ:ಶಿವಾಜಿ ನಗರ ಕಲಬುರಗಿ ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ,. ನಾನು ನನ್ನ ಗಂಡನ್ನೊಂದಿಗೆ ಕುಟುಂಬದಲ್ಲಿ ವಾಸವಾಗಿರುತ್ತೆನೆ.  ಹಿಗಿದ್ದು ಇಂದು ದಿನಾಂಕ:19.07.2022 ರಂದು ನನ್ನ ತಂಗಿಯ ಗಂಡ ರಾಜು ಎಂಬುವರು ನನಗೆ ನನಗೆ ಪೋನ ಮಾಡಿ ತಿಳಿಸಿದ್ದು ಎನಂದರೆ ನಿನ್ನ ತಮ್ಮನಾದ ಶರಣಬಸಪ್ಪ ತಂದೆ ವಿಠ್ಠಲರಾವ ವಯ: 30ವರ್ಷ : ಕೂಲಿ ಕೆಲಸ ಸಾ: ಜಿಡಿಎ ಕಾಲೊನಿ ಶಹಾಬಜಾರ ಕಲಬುರಗಿ ನಗರ ಇತನು ದಿನಾಂಕ: 17.07.2022 ರಂದು ರಾತ್ರಿ 01.00 ಗಂಟೆಯಿಂದ ಬೆಳಿಗ್ಗೆ 08.00 ಗಂಟೆಯ ಮದ್ಯದ ಅವಧಿಯಲ್ಲಿ  ಚೈನಾ ಕಾಂಪ್ಲೆಕ್ಸ ಒಳಗಡೆ ಮೆಟ್ಟಿಲು ಹತ್ತಿರ ಬಿದ್ದು ಮೃತಪಟ್ಟಿರುತ್ತಾನೆ. ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆಗೆಯ ಶವಗಾರ ಕೋಣೆಯಲ್ಲಿ ಇಟ್ಟಿರುತ್ತದೆ ಅಂತಾ ಪೋನ ಮಾಡಿ ತಿಳಿಸಿರುತ್ತಾನೆ, ವಿಷಯ ತಿಳಿದ ನಂತರ ನಾನು ಮತ್ತು ನನ್ನ ಸಹೋದರಿಯರಾದ ನೀಲಮ್ಮ ಹಾಗೂ ರಾಜೇಶ್ವರಿ ಮೂವರು ಸೆರಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆಯ ಶವಗಾರ ಕೋಣೆಯಲ್ಲಿರುವ ಮೃತಪಟ್ಟ ನನ್ನ ತಮ್ಮನ ಶವವನ್ನು ನೋಡಿ ಗುರುತಿಸಿರುತ್ತೆವೆ, ಅವನ ಮೂಗಿನ ಬಿದ್ದಗಾಯ  ಮೇಲೆ ಬಿಟ್ಟರೆ ಮತ್ತೆ ಬೆರೆ ಮೈಮೇಲೆ ಯಾವುದೆ ಗಾಯಗಳು ಕಂಡು ಬಂದಿರುವುದಿಲ್ಲಾ, ನಮ್ಮ ತಂದೆ ತಾಯಿ ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿದ್ದು,  ಸದರಿ ಇತನು ನಮ್ಮ ಯಾರ ಮನೆಗೆ ಬಾರದೆ ಹೊರಗಡೆ ಮಲಗುವುದು ಮಾಡುತ್ತಿದ್ದನು.   ನನ್ನ ತಮ್ಮ ಶರಣಬಸಪ್ಪ ಇತನು ದಿನಾಂಕ: 17.07.2022 ರಂದು ರಾತ್ರಿ 01.00 ಗಂಟೆಯಿಂದ ಬೆಳಿಗ್ಗೆ 08.00 ಗಂಟೆಯ ಮದ್ಯದ ಅವಧಿಯಲ್ಲಿ ಸರಿಯಾಗಿ ಊಟ ಮಾಡದೆ ಅಶಕ್ತನಾಗಿ ಚೈನಾ ಕಾಂಪ್ಲೆಕ್ಸ ಒಳಗಡೆ ಮೆಟ್ಟಿಲು ಹತ್ತಿರ ಬಿದ್ದು ಮೃತಪಟ್ಟಿರುತ್ತಾನೆ, ಆದರೆ ನನಗೆ ವಿಷಯ ತಡವಾಗಿ ತಿಳಿದಿರುವುದರಿಂದ ಇಂದು ದಿನಾಂಕ:19.07.2022 ರಂದು 03.00ಪಿಎಮ್ಕ್ಕೆ ಠಾಣಗೆ ಬಂದು ದೂರು ನೀಡಿದ್ದು ಇರುತ್ತದೆ, ನನ್ನ ತಮ್ಮನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ಸಂಶಯ ಫಿರ್ಯಾದಿ ದೂರು ಇರುವುದಿಲ್ಲಾ. ಕಾರಣ ನನ್ನ ತಮ್ಮನ ಶವದ ಬಗ್ಗೆ  ಮುಂದಿನ ಕಾನೂನು ಕ್ರಮ ಜರೂಗಿಸಿ ಶವ ಸಂಸ್ಕಾರ ಕುರಿತು ನನ್ನ ತಮ್ಮನ ಶವ ನನಗೆ ಕೊಡಲು ವಿನಂತಿ. ಅಂತಾ ಕೊಟ್ಟ ದೂರು ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ ೧೭-೦೭-೨೦೨೨ ರಂದು ಫರ‍್ಯಾದುದಾರು ತಾಜಸುಲ್ತಾನಪುರ ಎಪಿಎಂಸಿ ಯಾರ್ಡಬಳಿಯಲ್ಲಿ ಕೆಜಿಎನ್ ಪ್ರೂಟ್ ಅಂಡ್ ವೆಜಿಟೇಬಲ್ ಅಂಗಡಿಯಲ್ಲಿ  ರಾತ್ರಿ ೨ ಗಂಟೆ ಸುಮಾರಿಗೆ ಕುಳಿತಿದ್ದಾಗ ಅವರ ಒಂದು ಮೊಬೈಲ್‌ನ್ನು ಯಾರೋ ಕಳ್ಳರು ಕದ್ದಿರುವುದಾಗಿ ದೂರು ನೀಡಿದ್ದು ಅದರ ಅಂ.ಕಿ. ೨೯,೪೪೯ ರೂ ಇದ್ದು ಇದರ ಬಗ್ಗೆ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 28-07-2022 12:59 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080