ಅಭಿಪ್ರಾಯ / ಸಲಹೆಗಳು

  ಚೌಕ ಪೊಲೀಸ್ ಠಾಣೆ :-  ನಾನು ಶ್ರೀಮತಿ ಗುಂಡಮ್ಮ ಗಂಡ ಬಸವರಾಜ ಚಿಕ್ಕಗೌಡರ ವ:೫೯ ವರ್ಷ ಜಾ:ಲಿಂಗಾಯತ ಉ:ಮನೆಕೆಲಸ  ಸಾ:ಗುಡೂರ ತಾ: ಜೇವರಗಿ ಜಿ:ಕಲಬುರಗಿ ಹಾ,ವಾ, ಪ್ಲಾಟ್ ನಂ-೪೩ ಭವಾನಿ ನಗರ ಕಮಾನ ಕಲಬುರಗಿ ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಮನೆಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಬಸವರಾಜ ತಂದೆ ರಾಮನಗೌಡ ಚಿಕ್ಕಗೌಡರ ವ:೬೩ ವರ್ಷ ಉ:ವಚಮೆನ್ ಕೆಲಸ ಜಾ:ಲಿಂಗಾಯತ ಸಾ:ಗುಡೂರ ತಾ: ಜೇವರಗಿ ಹಾ,ವಾ, ಪ್ಲಾಟ್ ನಂ ೮-೧೩೦೭/೬೮ ಸಂಜೀವ ನಗರ ರೋಡಿಗೆ ಇರುವ ಚಿತಂಬರಾವ ತಂದೆ ಶಾಂತಪ್ಪ ಮಾಲಿಪಾಟೀಲ ಮರಗುತ್ತಿ ಇವರ ಗೋಡಾನದಲ್ಲಿ ಒಂದು ರೂಮ್ ನಲ್ಲಿ ವಾಸ ಕಲಬುರಗಿ ಇದ್ದು ಇವರು ಸುಮಾರು ೩-೪ ವರ್ಷದಿಂದ ಸದರಿ ಗೋದಾಮಿನಲ್ಲಿ ವಾಚಮೇನ್ ಕೆಲಸ ಮಾಡಿಕೋಂಡು ಅಲ್ಲೆ ಇರುತ್ತಿದ್ದರು, ನಾನು ನನ್ನ ಮಕ್ಕಳೋಂದಿಗೆ ಬೆಂಗಳೂರಿನಲ್ಲಿ ಇರುತ್ತೆನೆ ಕಲಬುರಗಿ ನಗರದ ಭವಾನಿ ನಗರದಲ್ಲಿ ಜಗದೇವಿ ಗಂಡ ಚಂದ್ರಕಾಂತ ಹಸರಗುಂಡಗಿ ಅಂತಾ ಇದ್ದು ನನ್ನ ನನ್ನ ಗಂಡ ಬಸವರಾಜ ಇವರು ನನ್ನ ಮಗಳ ಮನೆಗೆ ಬಂದು ಊಟ ತೆಗೆದುಕೋಂಡು ಹೋಗುತ್ತಿದ್ದರು, ನಾನು ಬೆಂಗಳೂರನಿಂದ ನನ್ನ ಮೋಮ್ಮಕ್ಕಳ ಜವಳ ಕರ‍್ಯಕ್ರಮಕ್ಕಾಗಿ ಇಗ ೩-೪ ದಿವಸಗಳಿಂದ  ಕಲಬುರಗಿ ನಗರದ ಭವಾನಿ ನಗರದ ನನ್ನ ಮಗಳ ಮನೆಗೆ ಬಂದಿರುತ್ತೆನೆ, ಹೀಗಿದ್ದು ನಿನ್ನೆ ದಿನಾಂಕ:೧೮.೦೫.೨೦೨೨ ರಂದು ಬೆಳಿಗ್ಗೆ ೦೭.೩೦ ಗಂಟೆಗೆ ನನ್ನ ಗಂಡ ಬಸವರಾಜ ಇವರು ನನ್ನ ಮಗಳ ಮನೆ ಭವಾನಿ ನಗರದ ಮನೆಗೆ ಬಂದು ನಮ್ಮೋಂದಿಗೆ ಮಾತನಾಡಿ ಊಟ ಕಟ್ಟಿಕೋಂಡು ನಾನು ವಾಚಮೇನ್ ಕೆಲಸಕ್ಕಾಗಿ ಚಿತಂಬರಾವ ಮರಗುತ್ತಿ ಇವರ ಗೋದಾಮಿಗೆ ಹೋಗುತ್ತೆನೆಂದು ಹೇಳಿ ಕೆಲಸಕ್ಕೆ ಹೋಗಿತ್ತಾರೆ, ಹೀಗಿದ್ದು ಇಂದು ದೀನಾಂಕ:೧೯.೦೫.೨೦೨೨ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಾನು ನನ್ನ ಮಗಳು ಜಗದೇವಿ ಇವರು ವಾಸವಾಗಿರುವ ಭವಾನಿ ನಗರದ ಮನೆಯಲ್ಲಿದ್ದಾಗ ಕೆಲಸಕ್ಕೆ ಹೋದ ನನ್ನ ಗಂಡ ಬಸವರಾಜ ಇವರು ಮರಳಿ ಮನೆಗೆ ಊಟಕ್ಕೆ ಬರದೆ ಇರುವದರಿಂದ ನಾನು ನನ್ನ ಮೋಮ್ಮಗ ಸಿದ್ದು ತಂದೆ ಚಂದರಕಾಂತ ಹಸರಗುಂಡಗಿ ವಯ:೧೭ ರ‍್ಷ ಇವನಿಗೆ ನಿಮ್ಮ ತಾತ ಇನ್ನು ಮನೆಗೆ ಊಟಕ್ಕೆ ಬಂದಿಲ್ಲಾ ಅವರಿಗೆ ಊಟಕ್ಕೆ ಕರೆದುಕೋಂಡು ಬರಲು ಮೊಮ್ಮಗನಿಗೆ ಅವರು ಕೆಲಸ ಮಾಡುವ ಗೋದಾಮಿನ ಹತ್ತಿರ ಕಳುಹಿಸಿದ್ದು ನನ್ನ ಮೊಮ್ಮಗ ಗೋದಾಮಿನ ಹತ್ದತಿರ ಹೋಗುವಷ್ಟರಲ್ಲಿ ಗೋದಾಮಿನ ಮಾಲೀಕರಾದ ಚಿದಂಬರಾವ ಮರಗುತ್ತಿ ಇವರ ಮಗನಾಗಿರುವ ಶಿವರಾಜ ಪಾಟೀಲ ಇವರು ಗೋದಾಮ ಹತ್ತಿರ ನಿಂತಿದ್ದನ್ನು ನೋಡಿ ಮೊಮ್ಮಗ ಅವರಿಗೆ ನಮ್ಮ ತಾತ ಎಲ್ಲಿದ್ದಾರೆ ಅಂತಾ ಕೆಳಿದಾಗ, ಅವರು ನನ್ನ ಮೊಮ್ಮನಿಗೆ ನಿಮ್ಮ ತಾತ ತೀರಿಕೋಂಡಿರುತ್ತಾರೆ ನಿಮ್ಮ ಅಜ್ಜಿ ತಂದೆ ತಾಯಿಗೆ ಕರೆದುಕೋಂಡು ಬಾ ಅಂತಾ ಹೇಳ ಕಳಿಸಿದ್ದರಿಂದ ನನ್ನ ಮೊಮ್ಮಗ ಬೆಳಿಗ್ಗೆ ೧೦.೩೦ ಗಂಟೆಗೆ ಭವಾನಿ ನಗರಕ್ಕೆ ಬಂದು ನನ್ನ ಗಂಡ ತೀರಿಕೋಂಡಿರುವ ವಿಷಯ ತಿಳಿಸಿದಾಗ ನಾನು ಗಾಬರಿಯಾಗಿ ಭವಾನಿನಗರದಿಂದ ನಾನು ನನ್ನ ಮಗಳು ಜಗದೇವಿ ಅಳಿಯ ಚಂದ್ರಕಾಂತ ಮತ್ತು ನಮ್ಮ ಓಣಿಯ ಕೆಲವು ಜನರು ಕೂಡಿಕೋಂಡು ನನ್ನ ಬಸವರಾಜ ಇವರು ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಚಿದಂಬರಾವ ಮರಗುತ್ತಿ ಇವರ ಗೋದಾಮಿಗೆ ಬೆಳಿಗ್ಗೆ ೧೦.೪೫ ಗಂಟೆಗೆ ಬಂದು ನಾನು ನನ್ನ ಗಂಡ ಬಸವರಾಜ ಇತನ ಶವವನ್ನು ನೋಡಿದ್ದು ನನ್ನ ಗಂಡ  ಮೃತಪಟ್ಟಿದ್ದು ಇರುತ್ತದೆ, ಅವನ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಸ್ರಾವ ವಾಗಿದ್ದು ಅಲ್ಲದೆ ಕುತ್ತಿಗೆಗೆ ಬಾವು ಬಂದಿರುತ್ತದೆ, ಸದರಿ ನನ್ನ ಗಂಡನ ಸಾವು ಹೃದಯಾಘಾತವಾಗಿ ಸಾವಾಗಿದಿಯೋ ಅಥವಾ ಇನ್ನಾವುದೆ ರೀತಿಯಿಂದ ಸಾವಾಗಿರುತ್ತದೆ ಅನ್ನುವುದು ಸರಿಯಾಗಿ ಗೊತ್ತಾಗುತ್ತಿಲ್ಲ ಸದರಿ ನನ್ನ ಗಂಡನ ಸಾವಿನಲ್ಲಿ ಸಂಶಯ ಇರುತ್ತದೆ. ನನ್ನ ಗಂಡನ ಸಾವು ದಿನಾಂಕ:೧೮.೦೫.೨೦೨೨ ರಂದು ಬೆಳಿಗ್ಗೆ ೦೭.೩೦ ಗಂಟೆಯಿಂದ ದಿನಾಂಕ:೧೯.೦೫.೨೦೨೨ ರಂದು ಬೆಳಿಗ್ಗೆ ೦೯.೦೦ ಗಂಟೆಯ ಮದ್ಯದ ಅವದಿಯಲ್ಲಿ ಸಾವು ಸಂಭವಿಸಿರಬಹುದು. ಸದರ ಫಿರ್ಯಾದಿ  ದೂರು ಅರ್ಜಿಯು ಇಂದು ದಿನಾಂಕ  ೧೯/೦೫/೨೦೨೨ ರಂದು ೧೨-೩೦ ಪಿಎಂಕ್ಕೆ ಠಾಣೆಯಲ್ಲಿ ಸ್ವೀಕೃತವಾಗಿದ್ದು, ಸದರ ಫರ‍್ಯಾದಿ ದೂರು ಅರ್ಜಿ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

ಇತ್ತೀಚಿನ ನವೀಕರಣ​ : 24-05-2022 04:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080