Feedback / Suggestions

 ಚೌಕ ಪೊಲೀಸ್‌ ಠಾಣೆ:-  ದಿನಾಂಕ 19-03-2022 ರಂದು ಬೆಳಿಗ್ಗೆ೧೦-೩೦ ಗಂಟೆಗೆ ಜಿ.ಜಿ.ಎಚ. ಕಲಬುರಗಿಯಲ್ಲಿ ಶಿವಾಜಿ ಉಳಾಬೆ ಇವರಿಂದ ಸ್ವೀಕೃತವಾಗಿದ್ದು, ನಾನು, ಶಿವಾಜಿ ತಂದೆ ರಾಮಚಂದ್ರರಾವ ಉಬಾಳೆ ವ:೪೪ ವರ್ಷ ಉ:ಕಾರಪೇಂಟರ ಕೆಲಸ ಜಾತಿ ಮರಾಠಾ ಸಾ; ಗೌತಮ ಓಣಿ ದೇವದುರ್ಗ ತಾ: ದೇವದುರ್ಗ ಜಿ: ರಾಯಚೂರು ಇದ್ದು, ಈ ಮೂಲಕ ತಮ್ಮಲ್ಲಿ ದೂರು ಕೊಡುದವೆನೆಂದೆರೆ, ನಮ್ಮ ತಂದೆ, ತಾಯಿಗೆ ನಾವು ೪ ಜನ ಗಂಡು ಮಕ್ಕಳು ೨ ಜನ ಹೆಣ್ಣು ಮಕ್ಕಳು ಹೀಗೆ ಒಟ್ಟು ೦೬ ಜನ ಮಕ್ಕಳಿರುತ್ತೇವೆ. ಆವರಲ್ಲಿ ಜ್ಯೋತಿ ಗಂಡ ರಾಜು ಪಿಂಪಳೆ  ವ:೩೬ ವರ್ಷ  ಉ: ಮನೆಗೆಲಸ  ಸಾ: ಶಹಾಬಜಾರ ಕಲಬುರಗಿ ಇವಳು ಖಾಸ ತಂಗಿ ಆಗುತ್ತಾಳೆ.  ಅವಳಿಗೆ  ನಮ್ಮ ಸೋದರ ಅತ್ತೆ ಮಗ ರಾಜು ತಂದೆ ಸುಭಾಷ ಪಿಂಪಳೆ  ಇವರೊಂದಿಗೆ ೨೫ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತೇವೆ. ಸಧ್ಯ ಅವರಿಗೆ ಮನೀಷ ವ: ೨೧ ವರ್ಷ , ಮಮತಾ ವ:೧೮ ವರ್ಷ ಎಂಬ ಇಬ್ಬರು ಮಕ್ಕಳಿರುತ್ತಾರೆ. ಮಮತಾ ಇವಳು ನಮ್ಮ ಮನೆಯಲ್ಲಿ ವಿದ್ಯಾಭ್ಯಾಸಗೋಸ್ಕರ ಇರುತ್ತಾಳೆ. ನನ್ನ ತಂಗಿ ಜ್ಯೋತಿ ಮತ್ತು ಅವಳ ಗಂಡ ರಾಜು ಇಬ್ಬರು ಅನ್ಯೋನ್ಯದಿಂದ ಸಂಸಾರ ಮಾಡಿಕೊಂಡು ಬಂದಿರುತ್ತಾರೆ. ನನ್ನ ತಂಗಿ ಜ್ಯೋತಿ ಇವಳಿಗೆ ಒಂದು ರ‍್ಷದ ಹಿಂದೆ ವಿಪರೀತ ಜ್ವರ ಬಂದು ತಲೆಗೆ  ಜ್ವರ  ಏರಿದ್ದು ಆರಾಮದ ನಂತರ ಅವಳಿಗೆ ಮತ್ತೆ ಎದೆ ಬೇನೆ ಮತ್ತು ಹೊಟ್ಟೆ ಬೇನೆ ಶುರುವಾಗಿದ್ದು,  ಅವಳಿಗೆ ಒಂದಲ್ಲಾ ಒಂದು ರೋಗದಿಂದ ಬಳಲುತ್ತಿದ್ದರಿಂದ, ಅವಳಿಗೆ ಆಸ್ಪತ್ರೆಗೆ ತೋರಿಸಿದರೂ ಕಡಿಮೆ ಆಗದ ಕಾರಣ ತಾನು ಬಹಳಷ್ಟು ದಿನ ಉಳಿಯವುದಿಲ್ಲಾ ಎಂದು  ಈ ವಿಷಯದ ಬಗ್ಗೆ ಮನಸ್ಸಿನ ಮೇಲೆ ಬಹಳಷ್ಟು  ಪರಿಣಾಮ ಮಾಡಿಕೊಂಡಿರುತ್ತಾಳೆ. ಇಂದು ದಿನಾಂಕ ೧೯/೦೩/೨೦೨೨ ರಂದು ಬೆಳಿಗ್ಗೆ ೬-೩೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಮ್ಮ ಲಕ್ಷ್ಮಣ ತಾಯಿ ಸರಸ್ವತಿ ಎಲ್ಲರೂ ಮನೆಯಲ್ಲಿ ಇದ್ದಾಗ ನನ್ನ ಸೋದರ ಅಳಿಯ ಮನೀಷ ಇತನು ನನ್ನ ತಮ್ಮ ಲಕ್ಷ್ಮಣ ಇವರ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ದಿನಾಂಕ ೧೯/೦೩/೨೦೨೨ ರಂದು ಮಧ್ಯರಾತ್ರಿ ೧೨-೦೦ ಗಂಟೆಯ ನಂತರ ನಾನು ಮತ್ತು ನಮ್ಮ ತಾಯಿ ಜ್ಯೋತಿ ತಂದೆ ರಾಜು ಜನರು ಒಂದು ಕೋಣೆಯಲ್ಲಿ ಮಲಗಿಕೊಂಡಿರುತ್ತೇವೆ. ಬೆಳಗಿನ ೦೫-೦೦ ಗಂಟೆ ಸುಮಾರಿಗೆ ನನಗೆ ಎಚ್ಚರವಾದ ಮಲಗಿದ ಸ್ಥಳದಲ್ಲಿ ನಮ್ಮ ತಾಯಿ ಜ್ಯೋತಿ ಕಾಣಲಿಲ್ಲಾ ನಮ್ಮ ತಂದೆ ರಾಜು ಇವರು ಮಲಗಿಕೊಂಡಿದ್ದರು. ಎದ್ದು ನಮ್ಮ ತಾಯಿ ಬಾತರೂಮಿಗೆ ಹೋಗಿಬಹುದೆಂದು ತಿಳಿದುಕೊಂಡು ಅವರಿಗೆ ಹುಡುಕಾಡಲೂ ಅವರು ಮನೆಯ ಹಾಲನಲ್ಲಿ ಇರುವ ಫ್ಯಾನಿಗೆ ಸೀರೆ ಸಹಾಯದಿಂದ ನೇಣು ಹಾಕಿಕೊಂಡು ನೇತಾಡುತ್ತಿದ್ದನ್ನು ನೋಡಿ ನಮ್ಮ ತಂದೆಗೆ ಎಬ್ಬಿಸಿ, ನಾನು ನಮ್ಮ ತಾಯಿ ದೇಹ ಮುಟ್ಟಿ ನೋಡಲಾಗಿ ಬಿಸಿ ಇರುವ ಮಾಹಿತಿ ನಮ್ಮ ತಂದೆಗೆ ತಿಳಿಸಿದಾಗ ಅವರು ತಮ್ಮ ತಾಯಿಗೆ ಎತ್ತಿ ಹಿಡಿದಾಗ  ನಾನು ಮೊದಲು ಸೀರೆಯ ಮಧ್ಯದಿಂದ ಕತ್ತರಿಯಿಂದ ಸಿರೆ  ಕತ್ತರಿಸಿ, ನಮ್ಮ ತಾಯಿಯನ್ನು  ನೆಲಕ್ಕೆ ಮಲಗಿಸಿದಾಗ  ಕುತ್ತಿಗೆ ಇದ್ದ ಗಂಟು ಕೂಡಾ ಕತ್ತರಿಯಿಂದ ಕತ್ತರಿಸಿ, ನಾನು ಓಡುತ್ತಾ ಆಟೋಸ್ಟ್ಯಾಂಡಿಗೆ ಹೋಗಿ ಆಟೋ ತೆಗೆದುಕೊಂಡು ಬರಲು ಆಟೋದಲ್ಲಿ ನಾನು ಮತ್ತು ತಂದೆ ರಾಜು ಇಬ್ಬರು ನಮ್ಮ ತಾಯಿ ಜ್ಯೋತಿ ಇವಳಿಗೆ ಹಾಕಿಕೊಂಡು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋದಾಗ ನಮ್ಮ ತಾಯಿಗೆ ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾಳೆ. ಅವಳ ಮೃತ ದೇಹ ಜಿಲ್ಲಾ ಸರಕಾರಿ ಅಸ್ಪತ್ರೆ ಮಾರ್ಚರಿ ಕೋಣೆಯಲ್ಲಿ ಇರುತ್ತದೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ತಾಯಿ ಸರಸ್ವತಿ ತಮ್ಮ  ಲಕ್ಷ್ಮಣ ಮತ್ತು ಇತರೇ ಸಂಬಂಧಿಕರು ಕಾರು ಕಟ್ಟಿಕೊಂಡು ಇಂದು ಬೆಳಿಗ್ಗೆ ೧೦-೦೦ ಗಂಟೆ ಸುಮಾರಿಗೆ ಕಲಬುರಗಿಗೆ ಬಂದು  ಜಿಲ್ಲಾ ಸರಕಾರಿ ಅಸ್ಪತ್ರೆ  ಮಾರ್ಚರಿ ಕೋಣೆಯಲ್ಲಿ ಇರುವ ನಮ್ಮ ತಂಗಿ ಜ್ಯೋತಿ ಇವಳ ಮೃತ ದೇಹ ನೋಡಿರುತ್ತೇನೆ. ನಮ್ಮ ತಾಯಿ ಜ್ಯೋತಿ ಇವಳು ದಿನಾಂಕ ೧೯/೦೩/೨೦೨೨ ರಂದು ಮಧ್ಯರಾತ್ರಿ ೨-೦೦ ಗಂಟೆಯಿಂದ ಬೆಳಗಿನ ಜಾವ ೫-೦೦ ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ.  ನಮ್ಮ ತಂಗಿ ಜ್ಯೋತಿ ಇವಳು ತನಗೆ ಇದ್ದ ಎದೆ ಬೇನೆ ಮತ್ತು ಹೊಟ್ಟೆ ಬೇನೆ ಮತ್ತು ಒಂದಲ್ಲಾ ಒಂದು ರೋಗದಿಂದ ಬಳಲುತ್ತಿದ್ದರಿಂದ, ಅವಳಿಗೆ ಆಸ್ಪತ್ರೆಗೆ ತೋರಿಸಿದರೂ ಕಡಿಮೆ ಆಗದ ಕಾರಣ ತಾನು ಬಹಳಷ್ಟು ದಿನ ಉಳಿಯವುದಿಲ್ಲಾ ಎಂದು  ಈ ವಿಷಯದ ಬಗ್ಗೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಮನೆಯ ಹಾಲನಲ್ಲಿ ಇರುವ ಫ್ಯಾನಿಗೆ ಸೀರೆ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅವಳ ಮರಣದ ಬಗ್ಗೆ ನನ್ನದು ಯಾರ ಮೇಲೆ ದೂರು ಮತ್ತು ಸಂಶಯ ಇರುವುದಿಲ್ಲಾ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತ್ಯಕ್ರಿಯೆ ಜರುಗಿಸಬೇಕೆಂದು ವಿನಂತಿ ಸಲ್ಲಿಸಿದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

  ಚೌಕ ಪೊಲೀಸ್ ಠಾಣೆ:-  ದಿನಾಂಕ 19-03-2022 ರಂದು  ರಾತ್ರಿ ೨೧.೦೦ ಗಂಟೆಗೆ ಫರ‍್ಯಾದಿದಾರನಾದ ಶ್ರೀ ಮಂಜುನಾಥ ತಂದೆ ಗೌರಿಶಂಕರ ಕುಕ್ಕಡಿ ವ:೩೪ವರ್ಷ ಉ: ಅಕ್ಕಸಾಲಿಗ ಕೆಲಸ ಜಾತಿ ಲಿಂಗಾಯತ ಸಾ: ಕೂಡ್ಲಿ ಗ್ರಾಮ ತಾ: ಚಿಂಚೋಳಿ ಹಾ:ವ: ಬಡೇಪೂರ ಕಾಲನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಮ್ಮ ತಂದೆ, ತಾಯಿಗೆ ಇಬ್ಬರು ಗಂಡು ಮಕ್ಕಳು ಇರುತ್ತೇವೆ. ನಮ್ಮಿಬ್ಬರ ಮದುವೆಯಾಗಿದ್ದು, ಸುಮಾರು ೮-೧೦ ವರ್ಷಗಳಿಂದ ನಾನು ಮತ್ತು ನನ್ನ ಅಣ್ಣ ವೈಜಿನಾಥ ಇಬ್ಬರು ಬೇರೆ ಬೇರೆಯಾಗಿ ನಮ್ಮ ಕುಟುಂಬದೊಂದಿಗೆ ವಾಸವಾಗಿರುತ್ತೇವೆ. ನನ್ನ ಹತ್ತಿರ ನಮ್ಮ ತಂದೆ ಇರುತ್ತಾರೆ.  ಹಿರಿಯವನು ಅಣ್ಣ ವೈಜಿನಾಥ ತಂದೆ ಗೌರಿಶಂಕರ ಕುಕ್ಕಡಿ ವ:೩೬ ವರ್ಷ ವಯಸ್ಸಿವನು ಇದ್ದು, ಅವನು ಹೈದ್ರಾಬಾದ ನಗರದಲ್ಲಿ ಡೆಕುರೇಷನ ಹೂವಿನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾನೆ. ಅವನು ಜಯನಗರ ಬಡಾವಣೆಯಲ್ಲಿ ಮನೆ ಕಿರಾಯಿ ರೂಪದಲ್ಲಿ ತನ್ನ ಹೆಂಡತಿ ಸುಧಾರಾಣಿ ಮತ್ತು ಮಕ್ಕಳಾದ ಗಗನ, ಧ್ರುವ, ಗೌರವ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಈಗ ೧೫ ದಿವಸಗಳಿಂದ ಹೈದ್ರಾಬಾದ ಕಲಬುರಗಿ ಬಂದು ತನ್ನ ಹೆಂಡತಿ ಮಕ್ಕಳೊಂದಿಗೆ ಜಯ ನಗರದಲ್ಲಿ ವಾಸವಾಗಿರುತ್ತಾನೆ. ನಾವು ಚಿಕ್ಕವರಿದ್ದಾಗ ಶಿವಾಜಿ ನಗರದಲ್ಲಿ ವಾಸವಿದ್ದು, ಆ ಸಮಯದಲ್ಲಿ ನಮ್ಮ ಪಕ್ಕದಲ್ಲಿ ದತ್ತಪ್ಪ ತೊಂಟೆಗೋಳ  ಅವರ ಹೆಂಡತಿ ಈರಮ್ಮಾ ಮಕ್ಕಳಾದ ಚಂದ್ರಕಾಂತ, ಲಕ್ಷ್ಮಿಪುತ್ರ, ಬಸವರಾಜ  ಇವರೆಲ್ಲರ ಪರಿಚಯ ನನಗೆ ಇರುತ್ತದೆ.  ಅವರ ಮಕ್ಕಳಾದ ಚಂದ್ರಕಾಂತ, ಲಕ್ಷ್ಮೀಪುತ್ರ, ಬಸವರಾಜ ಮೂವರು ಚಿಕ್ಕಂದಿನಿಂದಲೇ ನನ್ನ ಮತ್ತು ಅಣ್ಣ ವೈಜಿನಾಥನ ಗೆಳೆಯರು ಇರುತ್ತಾರೆ.ನಮ್ಮ ಅಣ್ಣ ವೈಜಿನಾಥ ಅವರುಗಳ ಮನೆಗೆ ಹೋಗಿ ಬರುವುದು ಮಾಡುತ್ತಾನೆ. ಈಗ ೪-೫ ತಿಂಗಳ ಹಿಂದೆ ಚಂದ್ರಕಾಂತ ತೊಂಟೆಗೋಳ ಇತನು  ತನ್ನ ತಾಯಿಯಾದ ಈರಮ್ಮಾ ದತ್ತಪ್ಪ ಇವಳೊಂದಿಗೆ ಮನೆ ಹಂಚಿಕೆ ವಿಷಯದಲ್ಲಿ ತಕರಾರು ಮಾಡಿದ ವೇಳೆಯಲ್ಲಿ, ಈರಮ್ಮಾ ಇವರು ನನ್ನ ಅಣ್ಣ ವೈಜಿನಾಥ ಇತನಿಗೆ ತಮ್ಮ ಮನೆಗೆ ಕರೆಯಿಸಿ ಚಂದ್ರಕಾಂತ ಇತನಿಗೆ ಬುದ್ಧಿವಾದ ಹೇಳಲು ಕರೆದಾಗ ವೇಳೆಯಲ್ಲಿ ನನ್ನ ಅಣ್ಣ  ವೈಜಿನಾಥ ಇತನು ಚಂದ್ರಕಾಂತ ಇತನಿಗೆ ತನ್ನ ತಾಯಿಯೊಂದಿಗೆ ಮನೆ ಹಂಚಿಕೆ ವಿಷಯದಲ್ಲಿ ತಕರಾರು ಮಾಡಬೇಡಾ ಅಂತಾ ಬುದ್ಧಿವಾದ ಹೇಳಿರುತ್ತಾನೆ.  ಹೀಗಿದ್ದು ನಿನ್ನೆ ದಿನಾಂಕ ೧೮/೦೩/೨೦೨೨ ರಂದು ಸಂಜೆ ೦೫-೧೫ ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ ಮನೆಯಲ್ಲಿದ್ದಾಗ  ಲಕ್ಷ್ಮೀಪುತ್ರ ತೊಂಟೆಗೋಳ ಇತನು ನನಗೆ ಪೋನ ಮಾಡಿ ನಮ್ಮ ಅಣ್ಣ  ಚಂದ್ರಕಾಂತ ತಂದೆ ದತ್ತಪ್ಪ ಇತನು ಮಧ್ಯಾಹ್ನ ೩-೩೦ ಗಂಟೆ ಸುಮಾರಿಗೆ ನಮ್ಮ ತಾಯಿಯೊಂದಿಗೆ ತಕರಾರು ಮಾಡುತ್ತಿರುವುದನ್ನು ಕಂಡು ನಾನು ನಿಮ್ಮ ಅಣ್ಣ ವೈಜಿನಾಥ ಇವರಿಗೆ ಪೋನ ಮಾಡಿ ಕರೆಯಿಸಿ ನನ್ನ ಅಣ್ಣ ಚಂದ್ರಕಾಂತನಿಗೆ ಬುದ್ಧಿ ಹೇಳಲು ತಿಳಿಸಿದ್ದರಿಂದ ನಿಮ್ಮ ಅಣ್ಣ ವೈಜಿನಾಥ ಅಂದಾಜ ಮಧ್ಯಾಹ್ನ ೦೪-೦೦ ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದಾಗ  ನನ್ನ ಅಣ್ಣ ಚಂದ್ರಕಾಂತ ಇತನು ನಮ್ಮ ತಾಯಿ ಈರಮ್ಮಾಳಿಗೆ ಚಾಕು ಹೊಡೆಯಲು ಬಂದಾಗ ಅದನ್ನು ಕಂಡು ಜಗಳಾ ಬಿಡಿಸಲು ಬಂದ ನಿಮ್ಮ ಅಣ್ಣ ವೈಜಿನಾಥನಿಗೆ ನಮ್ಮ ಅಣ್ಣ ಚಂದ್ರಕಾಂತ ಇತನು ಚಾಕುವಿನಿಂದ ಪಕ್ಕೆ, ಎದೆ, ಹೊಟ್ಟೆ, ಎಡಗೈ ಮೇಲೆ ೪-೫ ಕಡೆಗಳಲ್ಲಿ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಓಡಿ ಹೋಗಿರುತ್ತಾನೆ. ನಾವು ನಿಮ್ಮ ಅಣ್ಣ ವೈಜಿನಾಥ ಇತನಿಗೆ ಉಪಚಾರಕ್ಕಾಗಿ ನಾನು ಮತ್ತು ನಮ್ಮ ತಾಯಿ ಈರಮ್ಮಾ ಇಬ್ಬರು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಬೇಗನೆ ಆಸ್ಪತ್ರೆ ಬನ್ನಿರಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ತಂದೆ ಅತ್ತಿಗೆ ಸುಧಾರಾಣಿ ಮೂವರು ಆಸ್ಪತ್ರೆಗೆ ಬಂದು ನನ್ನ ಅಣ್ಣ ವೈಜಿನಾಥನಿಗೆ ನೋಡಲಾಗಿ ಅವನ ಬಲಪಕ್ಕೆ ಹತ್ತಿರ, ಎಡ ಎದೆಯ ಕೆಳೆಗೆ ಎರಡು ಕಡೆಗಳಲ್ಲಿ ಮತ್ತು ಎಡ ಭುಜದ ಮೇಲೆ, ಎಡಗೈ ಮುಂಗೈಯ ಮೇಲೆ ಎರಡು ಕಡೆಗಳಲ್ಲಿ ರಕ್ತಗಾಯವಾಗಿದ್ದನ್ನು ನೋಡಿದೆನು. ನಂತರ ನಮ್ಮ ಅಣ್ಣ ವೈಜಿನಾಥ ಇತನಿಗೆ ವಿಚಾರಿಸಿದಾಗ ಅವನು ಚಂದ್ರಕಾಂತ ತೊಂಟೆಗೋಳ ಇತನು ತನ್ನ ತಾಯಿ ಈರಮ್ಮಾ ಇವಳಿಗೆ ಬೈದು ಚಾಕುದಿಂದ ಹೊಡೆಯಲು ಹೋದಾಗ ಜಗಳಾ ಬಿಡಸಲು ಹೋದ ನನಗೆ ಚಂದ್ರಕಾಂತ ಇತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಹೊಡೆದಿರುತ್ತಾನೆ ಎಂದು ತಿಳಿಸಿದನು. ಸ್ವಲ್ಪ ಸಮಯದಲ್ಲಿ  ಚೌಕ ಪೊಲೀಸ ಠಾಣೆಯ ಪೊಲೀಸರು ಎಂ.ಎಲ್.ಸಿ. ವಿಚಾರಣೆಗೆ ಬಂದಾಗ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿ ನಾಳೆ ವಿಚಾರ ಮಾಡಿ ದೂರು ಕೊಡುವುದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟಿರುತ್ತೇವೆ. ನನ್ನ ಅಣ್ಣ ವೈಜಿನಾಥ ಇತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಅವನು ವೈದ್ಯರ ಉಪಚಾರದಲ್ಲಿ ಇರುವುದರಿಂದ ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ.  ಚಂದ್ರಕಾಂತ ತಂದೆ ದತ್ತಪ್ಪ ತೊಂಟೆಗೋಳ ಸಾ:ಶಿವಾಜಿ ನಗರ ಕಲಬುರಗಿ ಇತನು ನಮ್ಮ ಅಣ್ಣ ವೈಜಿನಾಥ ಇತನಿಗೆ ಚಾಕುವಿನಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ  ಪೊಲೀಸ್ ಠಾಣೆ :-  ದಿನಾಂಕ 19-03-2022 ರಂದು ರಾತ್ರಿ ೦೯-೦೦  ಗಂಟೆಗೆ ಶ್ರೀ ಮಂಜುನಾಥ ತಂದೆ ಗೌರಿಶಂಕರ ಕುಕ್ಕಡಿ ವ:೩೪ ವರ್ಷ ಉ:ಅಕ್ಕಸಾಲಿಗ ಕೆಲಸ ಜಾತಿ ಲಿಂಗಾಯತ ಸಾ: ಕೂಡ್ಲಿ ಗ್ರಾಮ ತಾ: ಚಿಂಚೋಳಿ   ಹಾ:ವ; ಬಡೇಪೂರ ಕಾಲನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಕೊಟ್ಟಿದ್ದರ ಸಾರಾಂಶವನೆಂದೆರೆ, ನಮ್ಮ ತಂದೆ, ತಾಯಿಗೆ ಇಬ್ಬರು ಗಂಡು ಮಕ್ಕಳು ಇರುತ್ತೇವೆ. ನಮ್ಮಿಬ್ಬರ ಮದುವೆಯಾಗಿದ್ದು, ಸುಮಾರು ೮-೧೦ ವರ್ಷಗಳಿಂದ ನಾನು ಮತ್ತು ನನ್ನ ಅಣ್ಣ ವೈಜಿನಾಥ ಇಬ್ಬರು ಬೇರೆ ಬೇರೆಯಾಗಿ ನಮ್ಮ ಕುಟುಂಬದೊಂದಿಗೆ ವಾಸವಾಗಿರುತ್ತೇವೆ. ನನ್ನ ಹತ್ತಿರ ನಮ್ಮ ತಂದೆ ಇರುತ್ತಾರೆ.  ಹಿರಿಯವನು ಅಣ್ಣ ವೈಜಿನಾಥ ತಂದೆ ಗೌರಿಶಂಕರ ಕುಕ್ಕಡಿ ವ:೩೬ ವರ್ಷ ವಯಸ್ಸಿವನು ಇದ್ದು, ಅವನು ಹೈದ್ರಾಬಾದ ನಗರದಲ್ಲಿ ಡೆಕುರೇಷನ ಹೂವಿನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾನೆ. ಅವನು ಜಯನಗರ ಬಡಾವಣೆಯಲ್ಲಿ ಮನೆ ಕಿರಾಯಿ ರೂಪದಲ್ಲಿ ತನ್ನ ಹೆಂಡತಿ ಸುಧಾರಾಣಿ ಮತ್ತು ಮಕ್ಕಳಾದ ಗಗನ, ಧ್ರುವ, ಗೌರವ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಈಗ ೧೫ ದಿವಸಗಳಿಂದ ಹೈದ್ರಾಬಾದ ಕಲಬುರಗಿ ಬಂದು ತನ್ನ ಹೆಂಡತಿ ಮಕ್ಕಳೊಂದಿಗೆ ಜಯ ನಗರದಲ್ಲಿ ವಾಸವಾಗಿರುತ್ತಾನೆ. ನಾವು ಚಿಕ್ಕವರಿದ್ದಾಗ ಶಿವಾಜಿ ನಗರದಲ್ಲಿ ವಾಸವಿದ್ದು, ಆ ಸಮಯದಲ್ಲಿ ನಮ್ಮ ಪಕ್ಕದಲ್ಲಿ ದತ್ತಪ್ಪ ತೊಂಟೆಗೋಳ  ಅವರ ಹೆಂಡತಿ ಈರಮ್ಮಾ ಮಕ್ಕಳಾದ ಚಂದ್ರಕಾಂತ, ಲಕ್ಷ್ಮಿಪುತ್ರ, ಬಸವರಾಜ  ಇವರೆಲ್ಲರ ಪರಿಚಯ ನನಗೆ ಇರುತ್ತದೆ.  ಅವರ ಮಕ್ಕಳಾದ ಚಂದ್ರಕಾಂತ, ಲಕ್ಷ್ಮಿಪುತ್ರ, ಬಸವರಾಜ ಮೂವರು ಚಿಕ್ಕಂದಿನಿಂದಲೇ ನನ್ನ ಮತ್ತು ಅಣ್ಣ ವೈಜಿನಾಥನ ಗೆಳೆಯರು ಇರುತ್ತಾರೆ.ನಮ್ಮ ಅಣ್ಣ ವೈಜಿನಾಥ ಅವರುಗಳ ಮನೆಗೆ ಹೋಗಿ ಬರುವುದು ಮಾಡುತ್ತಾನೆ.    ಈಗ ೪-೫ ತಿಂಗಳ ಹಿಂದೆ ಚಂದ್ರಕಾಂತ ತೊಂಟೆಗೋಳ ಇತನು  ತನ್ನ ತಾಯಿಯಾದ ಈರಮ್ಮಾ ದತ್ತಪ್ಪ ಇವಳೊಂದಿಗೆ ಮನೆ ಹಂಚಿಕೆ ವಿಷಯದಲ್ಲಿ ತಕರಾರು ಮಾಡಿದ ವೇಳೆಯಲ್ಲಿ, ಈರಮ್ಮಾ ಇವರು ನನ್ನ ಅಣ್ಣ ವೈಜಿನಾಥ ಇತನಿಗೆ ತಮ್ಮ ಮನೆಗೆ ಕರೆಯಿಸಿ ಚಂದ್ರಕಾಂತ ಇತನಿಗೆ ಬುದ್ಧಿವಾದ ಹೇಳಲು ಕರೆದಾಗ ವೇಳೆಯಲ್ಲಿ ನನ್ನ ಅಣ್ಣ  ವೈಜಿನಾಥ ಇತನು ಚಂದ್ರಕಾಂತ ಇತನಿಗೆ ತನ್ನ ತಾಯಿಯೊಂದಿಗೆ ಮನೆ ಹಂಚಿಕೆ ವಿಷಯದಲ್ಲಿ ತಕರಾರು ಮಾಡಬೇಡಾ ಅಂತಾ ಬುದ್ಧಿವಾದ ಹೇಳಿರುತ್ತಾನೆ.    ಹೀಗಿದ್ದು ನಿನ್ನೆ ದಿನಾಂಕ ೧೮/೦೩/೨೦೨೨ ರಂದು ಸಂಜೆ ೦೫-೧೫ ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ ಮನೆಯಲ್ಲಿದ್ದಾಗ  ಲಕ್ಷ್ಮಿಪುತ್ರ ತೊಂಟೆಗೋಳ ಇತನು ನನಗೆ ಪೋನ ಮಾಡಿ ನಮ್ಮ ಅಣ್ಣ  ಚಂದ್ರಕಾಂತ ತಂದೆ ದತ್ತಪ್ಪ ಇತನು ಮಧ್ಯಾಹ್ನ ೩-೩೦ ಗಂಟೆ ಸುಮಾರಿಗೆ ನಮ್ಮ ತಾಯಿಯೊಂದಿಗೆ ತಕರಾರು ಮಾಡುತ್ತಿರುವುದನ್ನು ಕಂಡು ನಾನು ನಿಮ್ಮ ಅಣ್ಣ ವೈಜಿನಾಥ ಇವರಿಗೆ ಪೋನ ಮಾಡಿ ಕರೆಯಿಸಿ ನನ್ನ ಅಣ್ಣ ಚಂದ್ರಕಾಂತನಿಗೆ ಬುದ್ಧಿ ಹೇಳಲು ತಿಳಿಸಿದ್ದರಿಂದ ನಿಮ್ಮ ಅಣ್ಣ ವೈಜಿನಾಥ ಅಂದಾಜ ಮಧ್ಯಾಹ್ನ ೦೪-೦೦ ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದಾಗ  ನನ್ನ ಅಣ್ಣ ಚಂದ್ರಕಾಂತ ಇತನು ನಮ್ಮ ತಾಯಿ ಈರಮ್ಮಾಳಿಗೆ ಚಾಕು ಹೊಡೆಯಲು ಬಂದಾಗ ಅದನ್ನು ಕಂಡು ಜಗಳಾ ಬಿಡಿಸಲು ಬಂದ ನಿಮ್ಮ ಅಣ್ಣ ವೈಜಿನಾಥನಿಗೆ ನಮ್ಮ ಅಣ್ಣ ಚಂದ್ರಕಾಂತ ಇತನು ಚಾಕುವಿನಿಂದ ಪಕ್ಕೆ, ಎದೆ, ಹೊಟ್ಟೆ, ಎಡಗೈ ಮೇಲೆ ೪-೫ ಕಡೆಗಳಲ್ಲಿ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಓಡಿ ಹೋಗಿರುತ್ತಾನೆ. ನಾವು ನಿಮ್ಮ ಅಣ್ಣ ವೈಜಿನಾಥ ಇತನಿಗೆ ಉಪಚಾರಕ್ಕಾಗಿ ನಾನು ಮತ್ತು ನಮ್ಮ ತಾಯಿ ಈರಮ್ಮಾ ಇಬ್ಬರು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಬೇಗನೆ ಆಸ್ಪತ್ರೆ ಬನ್ನಿರಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ತಂದೆ ಅತ್ತಿಗೆ ಸುಧಾರಾಣಿ ಮೂವರು ಆಸ್ಪತ್ರೆಗೆ ಬಂದು ನನ್ನ ಅಣ್ಣ ವೈಜಿನಾಥನಿಗೆ ನೋಡಲಾಗಿ ಅವನ ಬಲಪಕ್ಕೆ ಹತ್ತಿರ, ಎಡ ಎದೆಯ ಕೆಳೆಗೆ ಎರಡು ಕಡೆಗಳಲ್ಲಿ ಮತ್ತು ಎಡ ಭುಜದ ಮೇಲೆ, ಎಡಗೈ ಮುಂಗೈಯ ಮೇಲೆ ಎರಡು ಕಡೆಗಳಲ್ಲಿ ರಕ್ತಗಾಯವಾಗಿದ್ದನ್ನು ನೋಡಿದೆನು. ನಂತರ ನಮ್ಮ ಅಣ್ಣ ವೈಜಿನಾಥ ಇತನಿಗೆ ವಿಚಾರಿಸಿದಾಗ ಅವನು ಚಂದ್ರಕಾಂತ ತೊಂಟೆಗೋಳ ಇತನು ತನ್ನ ತಾಯಿ ಈರಮ್ಮಾ ಇವಳಿಗೆ ಬೈದು ಚಾಕುದಿಂದ ಹೊಡೆಯಲು ಹೋದಾಗ ಜಗಳಾ ಬಿಡಸಲು ಹೋದ ನನಗೆ ಚಂದ್ರಕಾಂತ ಇತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಹೊಡೆದಿರುತ್ತಾನೆ ಎಂದು ತಿಳಿಸಿದನು. ಸ್ವಲ್ಪ ಸಮಯದಲ್ಲಿ  ಚೌಕ ಪೊಲೀಸ ಠಾಣೆಯ ಪೊಲೀಸರು ಎಂ.ಎಲ್.ಸಿ. ವಿಚಾರಣೆಗೆ ಬಂದಾಗ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿ ನಾಳೆ ವಿಚಾರ ಮಾಡಿ ದೂರು ಕೊಡುವುದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟಿರುತ್ತೇವೆ. ನನ್ನ ಅಣ್ಣ ವೈಜಿನಾಥ ಇತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಅವನು ವೈದ್ಯರ ಉಪಚಾರದಲ್ಲಿ ಇರುವುದರಿಂದ ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಚಂದ್ರಕಾಂತ ತಂದೆ ದತ್ತಪ್ಪ ತೊಂಟೆಗೋಳ ಸಾ:ಶಿವಾಜಿ ನಗರ ಕಲಬುರಗಿ ಇತನು ನಮ್ಮ ಅಣ್ಣ ವೈಜಿನಾಥ ಇತನಿಗೆ ಚಾಕುವಿನಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ಕೊಟ್ಟ ದೂರಿನ ಅಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

Last Updated: 06-04-2022 06:40 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080