ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 18-02-2023 ರಂದು  10:30 ಪಿ.ಎಂ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ, ಕಲಬುರಗಿಯಿಂದ ಲಖನ್ ತಂದೆ ನಾಗಪ್ಪ ಕರಿಕಲ್ ಇವರ ಬ್ರಾಟ್ ಡೆಡ್ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆತ್ ಎಂ.ಎಲ್.ಸಿ ಪತ್ರ ವಸೂಲು ಮಾಡಿಕೊಂಡು ಮೃತ ಲಖನ್ ಇವರ ಮೃತದೇಹ ನೋಡಿ ಅಲ್ಲಿಯೇ ಇದ್ದ ಅವರ ಅಕ್ಕನ ಗಂಡನಾದ ಅರುಣ್ ತಂದೆ ಪಾಂಡುರಂಗ ತಾಂದಳೆ ಇವರಿಗೆ ನೋಡಿ ವಿಚಾರಿಸಲು ಅವರ ಫಿರ್ಯಾದಿ ದೂರು ಹೇಳಿಕೆ ಸಾರಾಂಶವೇನೆಂದರೆ ಫಿರ್ಯಾದಿಯ ಹೆಂಡತಿಯ ತಂದೆಯ ಪುಣ್ಯತಿಥಿ ಇದ್ದ ಕಾರಣ ದಿನಾಂಕ: 17-03-2023 ರಂದು ಪಿರ್ಯಾದಿ ಹಾಗೂ ಅವರ ಹೆಂಡತಿ ಬೆಂಗಳೂರಿನಿಂದ ಹಡಗಿಲ್ ಹಾರುತಿಗೆ ಬಂದು ಪುಣ್ಯತಿಥಿ ಮುಗಿಸಿ ಮನೆಯಲ್ಲಿ ಇರುವಾಗ ಫಿರ್ಯಾದಿಯ ಅಳಿಯನಾದ ಲಖನ್ ಇತನು ರಿಲಾಯನ್ಸ್ ಡಿಜಿಟಲ್, ಕಲಬುರಗಿ ನಲ್ಲಿ  ಕೆಲಸದ ಕುರಿತು ಮೋಟಾರ್ ಸೈಕಲ್ ನಂಬರ ಕೆ.ಎ-36, ಇಕ್ಯೂ-0012 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿಗೆ ಹೋದನು. ಫಿರ್ಯಾದಿ ಹಾಗೂ ಲಖನ್ ಇವರ ಮನೆಯವರು ರಾತ್ರಿ ಸಮಯದಲ್ಲಿ ಅವನ ದಾರಿ ಕಾಯುತ್ತಿರುವಾಗ ಹಡಗಿಲ್ ಹಾರುತಿ ಊರಿನ ಬಸವರಾಜ್ ತಂದೆ ಶಿವಶಂಕರ ಇವರು ಲಖನ್ ಇವರ ತಾಯಿಯ ಫೋನ್ ಗೆ ಕರೆಮಾಡಿ ನಾನು ಮತ್ತು ವಿವೇಕ ತಂದೆ ವಿಜಯಕುಮಾರ ಹರನಾಳ ಇಬ್ಬರು ಹಡಗಿಲ್ ಹಾರುತಿ ಕ್ರಾಸ್ ಹತ್ತಿರದ ರಾಜ್ ಧಾಬಾ ಹತ್ತಿರ ನಿಂತಿರುವಾಗ ಟ್ರಾಕ್ಟರ್ ಟ್ರ್ಯಾಲಿ ನಂಬರ ಕೆ.ಎ-32 ಇಂಜಿನ್ ನಂಬರ-ಕೆ.ಎ-32/ಟಿ.ಸಿ-0717 ನೇದ್ದರ ಚಾಲಕನು ಯಾವುದೇ ಮುಂಜಾಗ್ರತ ಕ್ರಮ ವಹಿಸದೆ ರೆಡಿಯಂ ಹಚ್ಚದೆ ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ತನ್ನ ಟ್ರ್ಯಾಕ್ಟರನ್ನು ನಿಲ್ಲಿಸಿದ್ದು ಮತ್ತು ಫಿರ್ಯಾದಿ ಅಳಿಯ ಲಖನ್ ಇತನು ಕಲಬುರಗಿ ಕಡೆಯಿಂದ ಹಡಗಿಲ್ ಹಾರುತಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ್ ಸೈಕಲ್ ನಂಬರ ಕೆ.ಎ-36/ಇ.ಕ್ಯೂ-0012 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಸದರಿ ರಸ್ತೆಯ ಮೇಲೆ ಮುಂಜಾಗೃತ ಕ್ರಮವಹಿಸದೆ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿ ಹಿಂಭಾಗಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಹೊಂದಿ ಉಪಚಾರ ಕುರಿತು ಅಂಬ್ಯೂಲನ್ಸ್ ವಾಹನದಲ್ಲಿ ಹಾಕಿಕೊಂಡು ಹೋಗುವಾಗ ಮಾರ್ಗಮದ್ಯೆದಲ್ಲಿಯೇ 8:45 ಪಿ.ಎಂ ಕ್ಕೆ ಅಂಬ್ಯೂಲನ್ಸ್ ವಾಹನದಲ್ಲಿ ಮೃತಪಟ್ಟಿದ್ದು ಕಾರಣ ಸದರಿ ಯಾವುದೇ ಮುಂಜಾಗ್ರತ ಕ್ರಮ ವಹಿಸದೆ ರೆಡಿಯಂ ಹಚ್ಚದೆ ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ರಸ್ತೆಯ ಮೇಲೆ ಟ್ರ್ಯಾಕ್ಟರ್ ನಿಲ್ಲಿಸಿ ಅಪಘಾತವಾದ ನಂತರ ಓಡಿಹೋದ ಟ್ರ್ಯಾಕ್ಟರ್ ಚಾಲಕನ ಮೇಲೆ ಹಾಗೂ ಅತಿವೇಗ ಮತ್ತು ಅಲಕ್ಷತನದಿಂದ ಮೋಟಾರ್ ಸೈಕಲ್ ಚಲಾಯಿಸಿ ಸದರಿ ರಸ್ತೆಯ ಮೇಲೆ ನಿಂತಿದ್ದ ಟ್ರ್ಯಾಕ್ಟರ್ ಹಿಂಭಾಗಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಹೊಂದಿ ಮೃತಪಟ್ಟ ಸದರಿ ಮೋಟಾರ್ ಸೈಕಲ್ ಸವಾರ ಲಖನ್ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 18-02-2023 ರಂದು 06:00 ಪಿಎಮ್ ಸುಮಾರಿಗೆ  ಫಿರ್ಯಾದಿ ಮತ್ತು ಆರೋಪಿತರ ಮದ್ಯೆ ವಾದವಿವಾದ ಆಗಿದ್ದಕ್ಕೆ ಫಿರ್ಯಾದಿಗೆ ಸದರಿ ಆರೊಪಿತರು ಮನೆಗೆ ಹೋಗಿ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ  ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಆದ್ದರಿಂದ ಸದರಿ ಆರೊಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 19-02-2023 ರಂದು 02:00 ಪಿಎಮ್ ಸುಮಾರಿಗೆ  ಫಿರ್ಯಾದಿಯು ಹುಮನಾಬಾದ ರಿಂಗ್ ರೋಡ ಕಡೆಗೆ ಪೆಟ್ರೊಲಿಂಗ್ ಕರ್ತವ್ಯ ಕುರಿತು ಹೋದಾಗ ಆರ್ ಎಸ್ ಕಾಲೋನಿ ಕಡೆಯಿಂದ ಅತಿ ಹೆಚ್ಚು ಶಬ್ಧ ಮಾಡಿ ಸಾರ್ವಜನಿಕರಿಗೆ ಉಪದ್ರವವಾಗುವ ಹಾಗೆ ಡಿಜೆ ಸೌಂಡ್ ಸಿಸ್ಟಮ್ ಹಚ್ಚಿದ್ದು ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿಯಲು ಹೋದಾಗ ಓಡಿ ಹೋಗಿರುತ್ತಾರೆ. ನಂತರ ಸ್ಥಳದಲ್ಲಿ ಬಿಟ್ಟ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಠಾಣೆಗೆ ತಂದು ಸರಕಾರಿ ತರ್ಫೆಯಾಗಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 20-02-2023 11:32 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080