ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ:19.01.2023 ರಂದು 11:30 ಪಿ.ಎಂ.ಕ್ಕೆ ಶ್ರೀ ಆನಂದ, ಡಿಟೆಕ್ಟಿವ್  ಸಬ್-ಇನ್ಸ್ಪೆಕ್ಟರ್ ಎಫ್.ಐ.ಯು, ಸಿ.ಐ.ಡಿ. ಬೆಂಗಳೂರು ರವರು ಠಾಣೆಗೆ ಬಂದು ಸಲ್ಲಿಸಿದ ವರದಿ ಸಾರಾಂಶವೆನೆಂದರೆ, ನಾನು ಆನಂದ, ಡಿಟೆಕ್ಟಿವ ಸಬ್-ಇನ್ಸ್ಪೆಕ್ಟರ್, ಎಫ್.ಐ.ಯು, ಸಿ.ಐ.ಡಿ ಬೆಂಗಳೂರು ಸದ್ಯಕಲಬುರಗಿಯಲ್ಲಿ ನಡೆದ 545 ಪಿ.ಎಸ್.ಐ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ನಡೆದ ಅಕ್ರಮ ಕುರಿತು ದಾಖಲಾದ ಪ್ರಕರಣಗಳಲ್ಲಿ ಸಹಾಯಕ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಕಲಬುರಗಿ ನಗರದ  545 ಪಿ.ಎಸ್.ಐ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ನಡೆದ ಅಕ್ರಮ ಕುರಿತು ದಾಖಲಾದ 08 ಪ್ರಕರಣಗಳಲ್ಲಿ ಪ್ರಮುಖ ಆರೋಪಿತನಾದ ರುದ್ರಗೌಡ ತಂದೆ ದೇವೆಂದ್ರಪ್ಪಾ ಪಾಟೀಲ್ @ ಆರ್.ಡಿ.ಪಾಟೀಲ್, ವಯ:38 ವರ್ಷ, ಜಾ: ಕಬ್ಬಲಿಗ, ಉ: ಸಿವಿಲ್ ಕಾಂಟ್ರ್ಯಾಕ್ಟರ್, ಸಾ: ಸೊನ್ನ, ತಾ: ಅಫಜಲಪುರ, ಸದ್ಯಕಲಬುರಗಿ ಹೈಕೋರ್ಟ್ ಎದುರುಗಡೆ ಇರುವ ಅಕ್ಕಮಹಾದೇವಿ ಕಾಲೋನಿ ನಿವಾಸ, ಈತನು ಸದರಿ 08 ಪ್ರಕರಣಗಳಲ್ಲದೇ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿಆರೋಪಿತನಾಗಿದ್ದು, ಅಲ್ಲದೇ ಉಲ್ಲೇಖದಲ್ಲಿ ನಮೂದಿಸಿದಂತೆ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಪೊಲೀಸ್ ಠಾಣೆ ಮೊ.ಸಂ.247/2022 ರಲ್ಲಿಯೂ ಕೂಡಾ ಆರೋಪಿತನಾಗಿದ್ದು, ಸದರಿ ಪ್ರಕರಣದಲ್ಲಿ ಆತನ ವಿರುದ್ದ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿದ್ದು ಇರುತ್ತದೆ. ದಿನಾಂಕ:19/01/2023 ರಂದು ಸಾಯಂಕಾಲ 05:30 ಗಂಟೆ ಸುಮಾರಿಗೆ ಆರೋಪಿ ಆರ್.ಡಿ.ಪಾಟೀಲ್ ಈತನು ವಾಸವಿರುವ ಕಲಬುರಗಿ ನಗರದ ಹೈಕೋರ್ಟ್ ಎದುರುಗಡೆ ಇರುವ ಅಕ್ಕಮಹಾದೇವಿ ಕಾಲೋನಿಯಲ್ಲಿನ ಮನೆಯಲ್ಲಿ ಇ.ಡಿ ಅಧಿಕಾರಿಗಳು (ಜಾರಿ ನಿರ್ದೇಶನಾಲಯ, ಬೆಂಗಳೂರು) ರವರು ವಿಚಾರಣೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ   ಬಂದ ಮೇರೆಗೆ ಉಲ್ಲೇಖಿತ ಪ್ರಕರಣದಲ್ಲಿ ದಸ್ತಗಿರಿ ವಾರೆಂಟ್ ಜಾರಿ ಮಾಡಲು ನಾನು ಮತ್ತು ಕಲಬುರಗಿ ಸಿ.ಐ.ಯು ಸಿಬ್ಬಂದಿಯವರಾದ ಶ್ರೀಭೀಮಾಶಂಕರ, ಸಿಹೆಚ್ಸಿ ಮತ್ತು  ಶ್ರೀ ಮಡೆಪ್ಪಾ.ಬಿ.ವಾಡಿ, ಸಿಪಿಸಿ ರವರೊಂದಿಗೆ ಇಲಾಖಾ ವಾಹನದಲ್ಲಿ  ಆರ್.ಡಿ.ಪಾಟೀಲ್  ರವರ ಮನೆಯ ಮುಂದೆ ಬಂದು ನೋಡಲಾಗಿ, ಸದರಿ ಮನೆಯಲ್ಲಿ ಇ.ಡಿ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಯವರೊಂದಿಗೆ ವಿಚಾರಣೆ ಮಾಡುತ್ತಿದ್ದು ಮತ್ತು ಆರ್.ಡಿ.ಪಾಟೀಲ್ ಈತನು ಮನೆಯಲ್ಲಿ ಇರುವುದು ಖಚಿತಪಡಿಸಿಕೊಂಡು ಇ.ಡಿ ಅಧಿಕಾರಿಗಳ ವಿಚಾರಣೆ ಪ್ರಕ್ರಿಯೆ ಮುಗಿದ ನಂತರ ದಸ್ತಗಿರಿ ವಾರೆಂಟ್ ಜಾರಿ ಮಾಡಬೇಕೆಂದು ಮನೆಮುಂದೆ ನಾನು ಮತ್ತು ನನ್ನ ಜೊತೆ ಇದ್ದ ಸಿಬ್ಬಂದಿಯವರೊಂದಿಗೆ ಕಾಯುತ್ತಿದ್ದೆವು. ಆಗ ಅಂದಾಜು ರಾತ್ರಿ 09:30 ಗಂಟೆ ಸುಮಾರಿಗೆ ಇ.ಡಿ. ಅಧಿಕಾರಿಗಳು ವಿಚಾರಣೆ ಮುಗಿದಿದೆ ಅಂತಾ ಹೇಳುತ್ತಾ ಮನೆಯೊಳಗಿನಿಂದ ಹೊರಗಡೆ ಬರುವಾಗ ಆಗ ನಾನು ಅಲ್ಲೇ ಇದ್ದ ಆರ್.ಡಿ.ಪಾಟೀಲ್ ಈತನಿಗೆ ನಿಮ್ಮ ವಿರುದ್ದ ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ನೀವು ಆರೋಪಿತರಾಗಿರುವುದರಿಂದ ಮಾನ್ಯ ನ್ಯಾಯಾಲಯವು ನಿಮ್ಮ ವಿರುದ್ದ ದಸ್ತಗಿರಿ ವಾರೆಂಟ್ ಹೊರಡಿಸಿದ್ದು ನಿಮ್ಮನ್ನು ದಸ್ತಗಿರಿ ಮಾಡುವುದಿದೆ ಅಂತಾ ಹೇಳಿದಾಗ, ಅದಕ್ಕೆ ಆರ್.ಡಿ.ಪಾಟೀಲನು ಯಾವ ತುಮಕೂರು ಕೇಸು, ನೀವು ಸಿ.ಐ.ಡಿಯವರು ನನ್ನ ಮೇಲೆ ವೈಯಕ್ತಿಕವಾಗಿ ದ್ವೇಷ ಸಾಧಿಸುತ್ತಿದ್ದಿರಿ ಅಂತಾ ಹೇಳುತ್ತಾ ನನ್ನನ್ನು ನೂಕಿ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಮನೆಯ ಒಳಗಡೆ ಹೋಗಿ ಎಡಗಡೆ ಇರುವ ಹಿಂದಿನ ಬಾಗಿಲಿನಿಂದ ಓಡಿ ಹೋಗಿರುತ್ತಾನೆ. ಕೂಡಲೇ ನಾನು ಮತ್ತು ಸಿಬ್ಬಂದಿಯವರು ಆರ್.ಡಿ.ಪಾಟೀಲ್ ಓಡಿ ಹೋಗಬೇಡ ನಿಲ್ಲು ಅಂತಾ ಹಿಡಿಯಲು ಆತನ ಹಿಂದೆ ಓಡಿದಾಗ ಮನೆಯ ಹಿಂದುಗಡೆ ಕತ್ತಲಿದ್ದು ಕತ್ತಲಲ್ಲಿ ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. ಆರ್.ಡಿ.ಪಾಟೀಲ್ ಈತನು ಓಡಿ ಹೋಗುವಾಗ ಕೆಂಪು ಬಣ್ಣದ ಅರ್ಧ ತೋಳಿನ ಅಂಗಿ, ಬೂದಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಆರೋಪಿ ಆರ್.ಡಿ.ಪಾಟೀಲ್ ಈತನ ವಿರುದ್ದ ತುಮಕೂರು ಜಿಲ್ಲೆ ಕ್ಯಾತಸಂದ್ರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿತನಿರುವ ಕಾರಣ ನಿಮ್ಮ ವಿರುದ್ದ ದಸ್ತಗಿರಿ ವಾರೆಂಟ್ ಜಾರಿಮಾಡುವುದಿದೆ ಅಂತಾ ಆತನನ್ನು ತಿಳಿಸಿ ಹೇಳಿದ್ದರೂ ಕೂಡಾ ನನ್ನನ್ನು ನೂಕಿಕೊಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿ ಓಡಿಹೋಗಿದ್ದು ಸದರಿ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿಕೆ ಅಂತ ಇತ್ಯಾದಿಯಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-1 :- ದಿನಾಂಕ 19-01-2023 ರಂದು ಬೆಳಿಗ್ಗೆ 5-30 ಗಂಟೆಗೆ ಖಾಸಗಿ ಮೋಹನರಾಜ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಶಿವಕುಮಾರ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶಿವಕುಮಾರ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 18-01-2023 ರಂದು ಬೆಳಿಗ್ಗೆ ನಾನು ಸುಪರ ಮಾರ್ಕೆಟನಲ್ಲಿರುವ ಆದಾರ ಹೌಸಿಂಗ ಫೈನಾನ್ಸಗೆ ಡ್ಯೂಟಿ ಕುರಿತು ಹೋಗಿ ಸಾಯಂಕಾಲದವರೆಗೆ ಡ್ಯೂಟಿ ಮಾಡಿ ಕೇಂದ್ರ ಬಸ್ಸ ನಿಲ್ದಾಣ ಹತ್ತೀರ ಕೆಲಸ ಇರುವದರಿಂದ ನಾನು ಮೋಟಾರ ಸೈಕಲ ನಂಬರ ಕೆಎ-32/ಯು-1321 ನೇದ್ದನ್ನು ಚಲಾಯಿಸಿಕೊಂಡು ಜಗತ ಸರ್ಕಲ, ಎಸ.ಬಿ ಪೆಟ್ರೊಲ ಪಂಪ ಮುಖಾಂತರವಾಗಿ ಕೋರ್ಟ ಕ್ರಾಸ ಕಡೆಗೆ ಹೋಗುತ್ತೀರುವಾಗ ಕೊರ್ಟ ಕ್ರಾಸ ಹತ್ತೀರ ರೋಡ ಮೇಲೆ ಸಾಯಂಕಾಲ ಅಂದಾಜು 7-30 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂಬರ ಕೆಎ-39/ಎಸ್-4132 ನೇದ್ದರ ಸವಾರನು ನೋಬೆಲ ಶಾಲೆಯ ಕ್ರಾಸ ಕಡೆಯಿಂದ ಎಸ.ಬಿ ಪೆಟ್ರೊಲ ಪಂಪ ಕಡೆಗೆ ಹೋಗುತ್ತೀರುವಾಗ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :- ದಿನಾಂಕ 19/01/2023 ರಂದು ಮಧ್ಯಾಹ್ನ 12-30 ಪಿ ಎಂ ಲೋಕೇಶ ತಂದೆ ಭೀಮರಾವ ಕೋಬಾಳಕರ ವ; 22 ವರ್ಷ ಜಾ; ಪ.ಜಾತಿ [ಮಾದಿಗಾ] ಉ; ಆಟೋ ಚಾಲಕ ಸಾ; ಮನೆ ನಂ 295 ಆಶ್ರಯ ಕಾಲೋನಿ ರಾಣೇಶಪೀರ ದಗರ್ಾ  ಇವರು ನೀಡಿರುತ್ತಾರೆ ಎಂಬುವ  ಈ ಫಿರ್ಯಾದಿ ಅರ್ಜಿಯನ್ನು ಸಿದ್ದಮ್ಮ ಗಂಡ ಭೀಮರಾಯ ಕೋಭಾಳಕರ ಎಂಬುವರು ಪೊಲೀಸ ಠಾಣೆಗೆ ತಂದು ಹಾಜರು ಪಡಿಸಿದ್ದು ಈ ಫಿರ್ಯಾದಿ ಸಾರಂಶವೇನೆಂದರೆ ದಿನಾಂಕ-18/01/2023 ರಂದು ನಾನು ಆಳಂದ ಚಕ್ ಪೋಸ್ಟ್ ದಿಂದ ಪ್ರಯಾಣಿಕರನ್ನು ಎಮ್.ಎಸ್.ಕೆ ಮಿಲ್ ರಿಂಗ್ ರೋಡ ಕಡೆಗೆ ಹೋಗುವಾಗ ಮದ್ಯಾಹ್ನ 12-00 ಗಂಟೆ ಆಗಿರಬಹುದು ಚೋರ ಗುಮ್ಮಜ ಫಿಲ್ಟರ್ ಬೇಡ ನೀರಿನ ಟಾಕಿ ಎದುರು ಹೋಗುವಾಗ ನಮ್ಮ ಹಿಂದುಗಡೆ ರೋಡಿನಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-32 ಎಫ್-2262 ನೇದ್ದರ ಚಾಲಕ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಾರ್ನ ಹಾಕದೆ ನಮ್ಮ ಆಟೋದ ಎಡಗಡೆ ಹಿಂದಿನ ಮೂಲಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಎರಡು ಪಲ್ಟಿ ಹೊಡೆದು ಬಿದಿರಿಂದ ನನ್ನ ಎಡಗಾಲಿನ ಹಿಂಬಡಿ ಹತ್ತಿರ ಭಾರಿಗಾಯವಾಗಿ ಕಾಲು ಮುರಿದಿದು ಮತ್ತು ಮೇಲಭಾಗಕ್ಕೆ ರಕ್ತಗಾಯ ಹಾಗೂ ಬಲಗಾಲಿಗೆ ಕೂಡಾ ರಕ್ತಗಾಯವಾಗಿದ್ದು ಅಲ್ಲದೆ ಎಡಸೈಡಿಗೆ ತರಚಿದ ಗಾಯವಾಗಿದ್ದು ಆಟೋದಲ್ಲಿದ್ದ ಪ್ರಯಾಣಿಕರು ಒಬ್ಬರಿದ್ದು ಅವರ ಹೆಸರು ಸಬಿಯಾಬೇಗಂ ಗಂಡ ಮಹೆಬೂಬಸಾಬ ಭೀಮಳ್ಳಿ ಅಂತಾ ಇದ್ದು ಉಳಿದ ಇಬ್ಬರು ಹೆಸರು ಗೋತ್ತಿಲ್ಲಾ ಘಟನೆಯನ್ನು ವಿಕ್ರಂ ತಂದೆ ಪ್ರಭು ಎಂಬುವರು ನೋಡಿದ್ದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ಹೆಸರು ಮಹಾಂತೇಶ ಘಟಕ ನಂ 03 ಕಲಬುರಗಿ ಅಂತಾ ತಿಳಿಸಿದ್ದು ಮುಂದೆ ನನಗೆ ವಿಕ್ರಂ ಈತನು ಕ್ಯೂ.ಪಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತಾನೆ, ನಂತರ ವಿಷಯ ನನ್ನ ತಾಯಿ ಸಿದ್ದಮ್ಮ ಹಾಗೂ ನನ್ನ ಅಕ್ಕ ಸವಿತಾ ಇವರಿಗೆ ತಿಳಿಸಿದಾಗ ಅವರು ಆಸ್ಪತ್ರೆಗೆ ಬಂದು ನಂತರ ಕೇಸು ಮಾಡುವ ಬಗ್ಗೆ ವಿಚಾರಿಸಿದ್ದು ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-32 ಎಫ್-2262 ನೇದ್ದರ ಚಾಲಕ ಮಹಾಂತೇಶ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಫೀರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 19-01-2023  ರಂದು ೫-೦೦ ಪಿ.ಎಮ್ ಕ್ಕೆ ಸರಕಾರಿ ತರ್ಫೆ ಫಿರ್ಯಾದಿದಾರರು ಏರಿಯ ಪೇಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಹುಮನಾಬಾದ ರಿಂಗರೋಡ ಹತ್ತಿರ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ವ್ಯಕ್ತಿ ತಿರುಗಾಡುತ್ತಿದ್ದು  ಆತನನ್ನು ಹಿಡಿದು ವಿಚಾರಿಸಲು ಆತನ ಹತ್ತಿರ ವಿವಿಧ ಕಂಪೆನಿಯ 8 ಮೊಬೈಲ್ ಗಳು ಮತ್ತು 13,300/- ರೂ ದೊರೆತಿದ್ದು , ಅವುಗಳ ಬಗ್ಗೆ ವಿಚಾರಿಸಲು ಹುಮನಾಬಾದ ರಿಂಗರೋಡ ಬಸ್ ನಿಲ್ದಾಣದ ಹತ್ತಿರ ಜನರು ಬಸ್ ಹತ್ತುವಾಗ ಜನರಿಗೆ ಗೊತ್ತಾಗದಂತೆ ಅವರ ಜೆಬಿನಿಂದ ಹಣ ಮತ್ತು ಮೊಬೈಲಗಳನ್ನು ಕಳ್ಳತನ ಮಾಡಿಕೊಂಡಿರುತ್ತಾನೆ ಅಂತಾ ಒಪ್ಪಿಕೊಂಡ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 20-01-2023 11:52 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080