ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ 18/12/2022 ರಂದು 02:45 PM ಕ್ಕೆ ಶ್ರೀ ಸುಭಾಷ ತಂದೆ ನರಸಿಂಗ್ ರಾಠೋಡ ವ; 55 ವರ್ಷ ಜಾ; ಲಂಬಾಣಿ ಉ: ಒಕ್ಕಲತನ ಸಾ; ಕಡಗಂಚಿ ತಾಂಡಾ ತಾ; ಆಳಂದ ಜಿ; ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ-18/12/2022 ರಂದು ನಮ್ಮ ಟ್ರ್ಯಾಕ್ಟರದ ಪಾಟಾ ಹೋಗಿರುವುದರಿಂದ, ಈ ಪಾಟಾವನ್ನು ತರುವ ಕುರಿತು ನಾನು ಮತ್ತು ನನ್ನ ಮಮ್ಮಗ ಆಕಾಶ ತಂದೆ ನೀಲೇಶ ಚವ್ಹಾಣ ವ; 12 ವರ್ಷ ಇಬ್ಬರೂ ಕೂಡಿ ನನ್ನ ಹೊಂಡಾ ಶೈನ್ ಮೋಟಾರ ಸೈಕಲ ನಂ ಕೆಎ-32 ಇ.ಜೆ-8612 ಇದರ ಮೇಲೆ ಊರಿನಿಂದ ಕಲಬುರಗಿಗೆ ಬರ ಬೇಕೆಂದು ಬರುತ್ತಿರುವಾಗ ಮದ್ಯಾಹ್ನ 12-15 ನಿಮಿಷ ವಾಗಿರಬಹುದು ಕಲಬುರಗಿಯ ರಾಮ ನಗರ ಕ್ರಾಸ ರಿಂಗ್ ರೋಡದಿಂದ ಹುಮನಾಬಾದ ರಿಂಗ್ ರೋಡ ಕಡೆಯ ಮದ್ಯದಲ್ಲಿ ಕಸ್ತೂರಿ ಹೋಟಲ ಹತ್ತಿರ ಬರುತ್ತಿರುವಾಗ ಅದೆ ವೇಳೆಗೆ ನನ್ನ ಹಿಂದಿನ ರಿಂಗ್ ರೋಡ ಕಡೆಯಿಂದ ಒಂದು ಲಾರಿ ನಂ ಕೆಎ-32 ಬಿ-7571 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲ ಹಿಂಭಾಗಕ್ಕೆ ಗುದಿದ್ದರಿಂದ ನಾವು ಹಾರಿ ಮೋಟಾರ ಸೈಕಲ ಸಮೇತ ರಿಂಗ್ ರೋಡಿನ ಮೇಲೆ ಬಿದ್ದಾಗ ನನಗೆ ಎಡಗೈ ಹೆಬ್ಬರಳಿಗೆ ರಕ್ತಗಾಯ, ಬಲಗೈಗೆ ಮತ್ತು ಅಲಲ್ಲಿ ತರಚಿದ ಗಾಯಗಳಾಗಿದ್ದು ಮಮ್ಮಗ ಆಕಾಶನಿಗೆ ನೋಡಲಾಗಿ ಆತನ ತೆಲೆಯ ಹಿಂಭಾಗಕ್ಕೆ ಭಾರಿ ಪ್ರಮಾಣದ ರಕ್ತಗಾಯವಾಗಿದ್ದು ಮತ್ತು ಮುಖಕ್ಕೆ. ಮೈಕೈಗೆ ಹಾಗೂ ಕಾಲಿಗೆ ತರಚಿದ ಗಾಯಗಳಾಗಿದ್ದು ತೆಲೆಯ ಗಾಯದಿಂದ ಭಾರಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಘಟನೆಯನ್ನು ರಿಂಗ್ ರೋಡಿನಿಂದ ಹೋಗುತ್ತಿರುವ ಈರಣ್ಣ ತಂದೆ ರೇವಣಸಿದ್ದಪ್ಪ ಮಗಿ ಮತ್ತು ಈಶ್ವರ ತಂದೆ ನಾಗಣ್ಣಾ ಸಂಟನೂರ ಇವರು ನೋಡಿ ನಮಗೆ ಸಹಾಯ ಮಾಡಿದ್ದು ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಆತನನ್ನು ನಾವು ನೋಡಿದ್ದು ಮತ್ತೆ ನೋಡಿದಲ್ಲಿ ಗುರ್ತಿಸುತ್ತೇವೆ, ನಂತರ ಯಾವುದೋ ಅಂಬುಲೈನ್ಸ್ ಬಂದಿದ್ದು ಅದರಲ್ಲಿ ಮಮ್ಮಗನನ್ನು ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಾನು ಕೂಡಾ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬಂದಿರುತ್ತೇನೆ, ಕಾರಣ ಈ ವಿಷಯಕ್ಕೆ ಸಂಭಂದಪಟ್ಟಂತೆ ಲಾರಿ ನಂ ಕೆಎ-32 ಬಿ-7571 ನೇದ್ದರ ಚಾಲಕ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಕೊಟ್ಟ ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :-  ದಿನಾಂಕ:18.12.2022 ರಂದು 11.30 ಎ.ಎಂಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೇನೆಂದರೆ, ನಾನು ಮಹ್ಮದ ಇಸ್ಮಾಯಿಲ್ ತಂದೆ ಮಹ್ಮದ ಯುಸೂಫ ವ:46 ಉ:ವ್ಯಾಪಾರ ಜ್ಯಾ:ಮುಸ್ಲಿಂ ಸಾ:ಮನೆ.ನಂ.4-721-271/15 ಬಹುಮನಿ ಚೌಕ ಹತ್ತಿರ ದರ್ಗಾ ರೋಡ ಮಕ್ತಂಪೂರ ಕಲಬುರಗಿ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನನ್ನ ಸ್ವಂತ ಕೆಲಸಕ್ಕಾಗಿ ನನ್ನ  ಹೆಸರಿನಲ್ಲಿ ಟಿ.ವಿ.ಎಸ್ ಜುಪೀಟರ  ನಂ.KA 32 HA6352 ನೇದ್ದನ್ನು ಖರೀದಿಸಿದನ್ನು ನಾನೇ ಉಪಯೋಗಿಸಿಕೊಂಡು ಬಂದಿದ್ದು ಇರುತ್ತದೆ. ಹೀಗಿದ್ದು,ದಿನಾಂಕ:05/12/2022 ರಂದು ರಾತ್ರಿ 10.00 ಗಂಟೆಗೆ ನನ್ನ ವ್ಯವಹಾರ ಮುಗಿಸಿಕೊಂಡು ಮನೆಗೆ ಬಂದು ನನ್ನ ಮೋಟಾರ ಸೈಕಲ್  ಟಿ.ವಿ.ಎಸ್ ಜುಪೀಟರ ನಂ.KA 32 HA6352 ನೇದ್ದನ್ನು ನನ್ನಮನೆಯ ಮುಂದೆ ನಿಲ್ಲಿಸಿ ಹ್ಯಾಂಡಲಾಕ್  ಮಾಡಿ ಮನೆಯಲ್ಲಿ ಮಲಗಿಕೊಂಡಿರುತ್ತೇನೆ. ದಿನಾಂಕ:06/12/2022 ರಂದು ಬೆಳಿಗ್ಗೆ 06.30 ಗಂಟೆಗೆ ಎದ್ದು ಮನೆಯ ಹೊರಗಡೆ ಬಂದು ನೋಡಿದಾಗ ನಾನು ನನ್ನ ಮನೆಯ ಮುಂದೆ ನಿಲ್ಲಿಸಿದ  ನನ್ನ  ಜುಪೀಟರ ವಾಹನ  ಕಾಣಿಸದೆ ಇರುವುದರಿಂದ ನಾನು ಗಾಬರಿಗೊಂಡು ನನ್ನ ಹತ್ತಿರ  ಕೆಲಸ ಮಾಡುವವರಾದ ಶ್ರೀ ಜಾಕೀರ ಇತನನ್ನು ಕರೆಯಿಸಿ ನಾವಿಬ್ಬರೂ ಮನೆಯ ಸುತ್ತಾ ಮುತ್ತಾ, ಬಹುಮನಿ ವೃತ್ತ, ಸಾತಗುಂಬಜ, ಸೂಪರ ಮಾರ್ಕೇಟ ಮತ್ತು ಎಲ್ಲಾ ಕಡೆ ತಿರುಗಾಡಿ ನನ್ನ ಜುಪೀಟರ ವಾಹನ ನೋಡಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಮೋಟಾರ ಸೈಕಲ್ ಕಳ್ಳತನವಾದ ದಿವಸದಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೂ ಹುಡುಕಿ ಎಲ್ಲಿಯಾದರೂ ನನ್ನ ಕಳುವಾದ ಮೋಟಾರ  ಸೈಕಲ್  ಸಿಗಬಹುದು ಅಂತ ಪೊಲೀಸ ಠಾಣೆಗೆ ಬಂದು  ದೂರು  ಕೊಟ್ಟಿರುವುದಿಲ್ಲ. ಇಂದು ಪೊಲೀಸ ಠಾಣೆಗೆ  ಬಂದು ತಡವಾಗಿ ದೂರು ಕೊಟ್ಟಿದ್ದು ಇರುತ್ತದೆ. ಸದರಿ ನನ್ನ ಕಳುವಾದ ಮೋಟಾರ ಸೈಕಲ್ನ ವಿವರಈ ಕೆಳಗಿನಂತಿರುತ್ತದೆ.ಮೋಟಾರ ಸೈಕಲ್ ವಿವರ  : TVS JUPITER 125ಮೋಟಾರ ಸೈಕಲ್ ನಂ  : KA 32 HA6352ಮೋಟಾರ ಸೈಕಲ್ ಚೆಸ್ಸಿ ನಂ: MD626AK49M1L06166ಮೋಟಾರ ಸೈಕಲ್ ಇಂಜೀನ ನಂ :  BK4LM1X05522ಮೋಟಾರ ಸೈಕಲ್ ಮಾದರಿ  : 2021ಮೋಟಾರ ಸೈಕಲ್ ಬಣ್ಣ :  PEARL BLUE ಮೋಟಾರ ಸೈಕಲ್ ಅ.ಕಿ : 63,840/- ರೂ ಇರುತ್ತದೆ.  ಈ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ ನನ್ನ ಮೋಟಾರ ಸೈಕಲ್ ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅದೆ ಅಂತ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-1 :-ದಿನಾಂಕ 18-12-2022 ರಂದು ಬೆಳಿಗ್ಗೆ 10-15 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಓಪಿ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಹರಿರಾಮ, ಸನ್ನಿ, ಹಾಗೂ ಸಂತೋಷ ರವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಹರಿರಾಮ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 18-12-2022 ರಂದು ಮುಂಬೈಯಿಂದ ಕಲಬುರಗಿಗೆ ಮುಂಬೈ ಹೈದ್ರಾಬಾದ ಎಕ್ಸಪ್ರೇಸ್ ರೈಲು ಮುಖಾಂತರ ಕಲಬುರಗಿಗೆ ನಾನು ಮತ್ತು ನನ್ನ 11 ವರ್ಷದ ಮಗ ಸನ್ನಿ ಹಾಗೂ 8 ವರ್ಷದ ಸಂತೋಷ ಮೂರು ಜನರು ಬಂದು ಬಾಪೂ ನಗರದಲ್ಲಿ ಬರುವ ನಮ್ಮ ಮನೆಗೆ ಹೋಗುವ ಕುರಿತು ಕಲಬುರಗಿ ರೈಲ್ವೆ ಸ್ಟೆಷನ ಹತ್ತೀರ ನಾವು ಮೂರು ಜನರು ಆಟೋರಿಕ್ಷಾ ನಂಬರ ಕೆಎ-32/ಎ-7528 ನೇದ್ದರಲ್ಲಿ ಕುಳಿತು ಹೋಗುವಾಗ ಆಟೋರಿಕ್ಷಾ ಚಾಲಕನು ಎಸವಿಪಿ ಸರ್ಕಲ ಮುಖಾಂತರ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಮದ್ಯ ರಾತ್ರಿ 1-00 ಎ.ಎಮ್ ಗಂಟೆ ಸುಮಾರಿಗೆ ದಾರಿ ಮದ್ಯ ಜಗತ ಸರ್ಕಲ ಹತ್ತೀರ ಒಮ್ಮಲೇ ಬ್ರೇಕ ಹಾಕಿ ಆಟೋರಿಕ್ಷಾ ವಾಹನ ಪಲ್ಟಿ ಮಾಡಿ ಅಪಘಾತ ಮಾಡಿ ನನಗೆ ಮತ್ತು ನನ್ನ ಮಗ ಸನ್ನಿ ಇತನಿಗೆ ಭಾರಿಗಾಯ ಹಾಗೂ ಸಂತೋಷ ಇತನಿಗೆ ಸಾಧಾಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 14-07-2022  ರಂದು ರಾತ್ರಿ ೭.೩೦ ಪಿ.ಎಮ್ ದಿಂದ ದಿನಾಂಕ 17-12-2022 ರಂದು ೭.೦೦ ಎ.ಎಮ್ ದ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯಾದ ಲಕ್ಷ್ಮೀ ನಗರ ಕಾಲೋನಿಯದ ಪ್ಲಾಟ ನಂ.೧೩/೧ ನೇದ್ದರ ಮನೆಯ ಕೀಲಿ ಮುರಿದ್ದ ಬೆಡ್ ರೂಮನ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳಿ ಹಾಗೂ ನಗದು ಹಣ ಸೇರಿ ಒಟ್ಟ ೧೪೬೦೦೦/- ಬೆಲೆಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-12-2022 01:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080