ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :- ನಾನು ಹೋಮಗಾರ್ಡ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿ ಸುನೀತಾ ಅಂತ ಇದ್ದು ಅವಳು ಆಳಂದ ತಾಲೂಕಿನ ಹೆಬಳಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಅಂತ ಕೆಲಸ ಮಾಡಿಕೊಂಡು ಇರುತ್ತಾಳೆ. ನಮಗೆ ಅಂಜನಾ ಅಂತ ಒಬ್ಬ ಹೆಣ್ಣು ಮಗಳಿದ್ದು ಅವಳು ತನ್ನ ಗಂಡನೊಂದಿಗೆ ಗುರಮಿಟಕಲನಲ್ಲಿ ವಾಸವಾಗಿರುತ್ತಾಳೆ. ಮತ್ತು ಆಕಾಶ ಅಂತ ಒಬ್ಬ ಗಂಡು ಮಗನಿದ್ದು ಅವನು ಖಾಸಗಿ ಕೆಲಸ ಮಾಡಿಕೊಂಡು ಚಿತಾಪೂರ ಪಟ್ಟಣದಲ್ಲಿ ಇರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:17.11.2022 ರಂದು ಬೆಳಿಗ್ಗೆ 09:00 ಗಂಟೆಗೆ  ನನ್ನ ಹೆಂಡತಿ ಸುನೀತಾ ಇವಳು ತನ್ನ ಕೆಲಸದ ನಿಮಿತ್ಯ ಹೆಬಳಿ ಗ್ರಾಮಕ್ಕೆ ಹೋಗಿರುತ್ತಾಳೆ ಅವಳು ಹೋದ ನಂತರ ಮದ್ಯಾನ್ಹ 01:00 ಗಂಟೆಗೆ ಮನೆಗೆ ಬೀಗಹಾಕಿ ನಾನು ಸಹ ನನ್ನ ಕೆಲಸಕ್ಕೆ ಹೋಗಿರುತ್ತೇನೆ. ನಂತರ ಸಾಯಂಕಾಲ 06:00 ಗಂಟೆಗೆ ನನ್ನ ಹೆಂಡತಿ ತನ್ನ ಕೆಲಸದಿಂದ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಬಿಗ ಮುರಿದಿದ್ದು, ಅವಳು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನೋಡಿ ನನಗೆ ಫೋನಮಾಡಿ ತಿಳಿಸಿದಾಗ, ನಾನು ತಕ್ಷಣ ಮನೆಗೆ ಬಂದು ನೋಡಲಾಗಿ. ಸಾಮಾನುಗಳು ಎಲ್ಲಾ ಚಿಲ್ಲಾಪಿಲ್ಲಿಯಾಗಿ ಬಿದಿದ್ದು, ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿಕೊಂಡು ಬೆಡರೂಮಿನ ಅಲ್ಮಾರಿಯಲ್ಲಿ ಇಟ್ಟಿದ್ದ 1) 12 ಗ್ರಾಂ. ಒಂದು ಲಾಕೇಟ್ ಅ.ಕಿ. 30,000/- 2) 20 ಗ್ರಾಂನ ಒಂದು ನೆಕಲೇಸ್ ಅ.ಕಿ. 45,000/- 3) ಒಂದು ಜೊತೆ ಝೂಮಕಿ 9 ಗ್ರಾಂ ಅ.ಕಿ. 15,000/- 4) ಕಿವಿ ಓಲೆಗಳು 3 ಜೊತೆ 12 ಗ್ರಾಂ  ಅ.ಕಿ. 20,000/- 5) ಬೆಳ್ಳಿ ಸಾಮಾನುಗಳಾದ ಆರತಿ ತಟ್ಟೆ, ಬಟ್ಟಲು, ಸಮಯ, ಮಕ್ಕಳ ಖಡೆ ಒಟ್ಟು 100 ಗ್ರಾಂ ಅ.ಕಿ. 20,000/-  6) ನಗದು ಹಣ ರೂ, 15,000/-  ಹೀಗೆ ಎಲ್ಲಾ ಸೇರಿ ಒಟ್ಟು ರೂ, 1,45,000/-  ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಆಗಿದ್ದು  ಇರುತ್ತದೆ. ಸದರಿ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ನಾವು ಸುಮಾರು 20 ವರ್ಷಗಳ ಹಿಂದೆ ಖರೀದಿ ಮಾಡಿರುತ್ತೇವೆ. ಕಾರಣ ನಿನ್ನೆ ದಿನಾಂಕ:17.11.2022 ರ ಮದ್ಯಾನ್ಹ 01 ಯಿಂದ ಸಾಯಂಕಾಲ 06:00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ  ಬೀಗ  ಮುರಿದು  ಬಾಗಿಲು ತೆಗೆದು ಒಳಗೆ ಪ್ರವೇಶಮಾಡಿ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣವನ್ನು  ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು  ನಮಗೆ  ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿಯಾದಿ ಇದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 ಸಂಚಾರಿ ಪೊಲೀಸ್‌ ಠಾಣೆ -1 :-  ದಿನಾಂಕ 15-11-2022 ರಂದು ಕಲಬುರಗಿ ಮಿನಿ ಸೌಧದಲ್ಲಿ ನನ್ನ ಕೆಲಸ ಇರುವದರಿಂದ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ವಿಶ್ವನಾಥ ತಂದೆ ನಾಗಣ್ಣಾ ಯಾದಗೀರ ಹಾಗೂ ರಮೇಶ ತಂದೆ ಮಲ್ಲಿಕಾರ್ಜುನ ಕದ್ದರಗಿ ಮೂರು ಜನರು ಬಸ್ಸ ಮೂಲಕ ಕಲಬುರಗಿಗೆ ಬಂದು ಮಿನಿ ವಿಧಾನ ಸೌದದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸ ನಮ್ಮೂರಿಗೆ ಹೋಗುವ ಕುರಿತು ಮದ್ಯಾಹ್ನ ಮಿನಿ ವಿಧಾನ ಸೌದದ ಎದುರಿನ ರೋಡ ಪಕ್ಕದಲ್ಲಿ ನಾವು ಮೂರು ಜನರು ಆಟೋರಿಕ್ಷಾ ಸಲುವಾಗಿ ನಿಂತಿರುವಾಗ ಒಬ್ಬ ಆಟೋರಿಕ್ಷಾ ಚಾಲಕನು ಜಗತ ಸರ್ಕಲ ಕಡೆಯಿಂದ ಎಸವಿಪಿ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ಪುಟಿದು ಕೆಳಗದೆ ಬಿದ್ದಾಗ ನನ್ನ ಜೊತೆಯಲ್ಲಿದ್ದ ವಿಶ್ವನಾಥ ಹಾಗೂ ರಮೇಶ ಇಬ್ಬರೂ ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದರು. ನಾನು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಆಟೋರಿಕ್ಷಾ ನಂಬರ ನೊಡಲು ಕೆಎ-32/ಸಿ-8811 ಇದ್ದಿತ್ತು. ಸದರ ಘಟನೆ ಜರುಗಿದಾಗ ಮದ್ಯಾಹ್ನ ಅಂದಾಜು 1-45 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡ ತಲೆಗೆ ರಕ್ತಗಾಯ ಮತ್ತು ಮೈಯಲ್ಲಾ ಒಳಪೆಟ್ಟು ಬಿದ್ದು ನನಗೆ ತ್ರಾಸ ಆಗುತ್ತಿದ್ದರಿಂದ ವಿಶ್ವನಾಥ ಹಾಗೂ ರಮೇಶ ಇಬ್ಬರೂ ಸೇರಿಕೊಂಡು ನನ್ನ ಉಪಚಾರ ಕುರಿತು ಅಪಘಾತ ಪಡಿಸಿದ ಆಟೋರಿಕ್ಷಾ ವಾಹನದಲ್ಲಿ ಕೂಡಿಸಿಕೊಂಡು ಖಾಸಗಿ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ವಿಶ್ವನಾಥ ಮತ್ತು ರಮೇಶ ಇಬ್ಬರೂ ನಮ್ಮೂರಿಗೆ ಹೋಗಿರುತ್ತಾರೆ. ಪೊಲೀಸನವರು ಆಸ್ಪತ್ರೆಗೆ ಬಂದು ಅಪಘಾತದ ಬಗ್ಗೆ ವಿಚಾರಿಸಲು ಅಂದು ಸದ್ಯ ನಾನು ಒಬ್ಬನೆ ಇದ್ದು ನಮ್ಮ ಮನೆಯವರಿಗೆ ವಿಚಾರಿಸಿ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಆಟೋರಿಕ್ಷಾ ಚಾಲಕನ ಮೇಲೆ ದೂರು ಸಲ್ಲಿಸುತ್ತೆನೆ ಅಂತಾ  ತಿಳಿಸಿದ್ದು ಇಂದು ಆಸ್ಪತ್ರೆಗೆ ನಮ್ಮ ಮನೆಯವರು ಬಂದಿದ್ದು ಅವರನ್ನು ವಿಚಾರಿಸಲು ಅಪಘಾತ ಪಡಿಸಿದ ಆಟೋರಿಕ್ಷಾ ಚಾಲಕನ ಮೇಲೆ ದೂರು ಸಲ್ಲಿಸಲು ತಿಳಿಸಿದ್ದರಿಂದ ನಾನು ಆಟೋರಿಕ್ಷಾ ಚಾಲಕನ ಮೇಲೆ ದೂರು ಬರೆಯಿಸಿ ನಮ್ಮ ಅಣ್ಣತಮ್ಮಕಿಯ ವಿಶ್ವನಾಥ ಇತನೊಂದಿಗೆ ಪೊಲೀಸ ಠಾಣೆಗೆ ಕಳುಹಿಸಿರುತ್ತೆನೆ. ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಆಟೋರಿಕ್ಷಾ ನಂಬರ ಕೆಎ-32/ಸಿ-8811 ನೇದ್ದರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ನಮ್ಮ ಮನೆಯವರಿಗೆ ವಿಚಾರಿಸಿ ದೂರು ನೀಡಲು ತಡವಾಗಿದ್ದು ಇರುತ್ತದೆ. ಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :- ನನಗೆ ಸಂಜುಕುಮಾರ ಅಂತ ಒಬ್ಬನೆ ಮಗನಿರುತ್ತಾನೆ. ಆತನು ಪ್ರತಿ ದಿವಸ ಗ್ಯಾರೇಜ ಕೆಲಸಕ್ಕೆ ಕಲಬುರಗಿಗೆ ಹೋಗುತ್ತಾನೆ. ನನ್ನ ಸೊಸೆ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ಹೀಗಿದ್ದು ದಿನಾಂಕ:13-11-2022 ರಂದು ಬೆಳೆಗ್ಗೆ 8:00 ಗಂಟೆಗೆ  ನನ್ನ ಮಗ ಸಂಜುಕುಮಾರ ಈತನು ಗ್ಯಾರೇಜ ಕೆಲಸಕ್ಕೆ ಕಲಬುರಗಿಗೆ ಹೋಗಿರುತ್ತಾನೆ. ಸೊಸೆಯಾದ ಶಿಲ್ಪಾ ಇವಳು ಕೂಲಿ ಕೆಲಸಕ್ಕೆ ಹೋಗಿರುತ್ತಾಳೆ. ಎಂದಿನಂತೆ ನಾನು ಬೆಳೆಗ್ಗೆ 10:30 ಗಂಟೆಗೆ ನನ್ನ ಮನೆಯಿಂದ ಕೂಲಿ ಕೆಲಸಕ್ಕೆ ಮನೆಯ ಮುಂದೆ ಹೋಗುವಾಗ ನನ್ನ ಕುರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದು,  ಆ ಕುರಿಗಳು ನಮ್ಮ ಹತ್ತಿ ಚೀಲದ ಮೇಲೆ ಹತ್ತಿದ್ದರಿಂದ ಕುರಿಗಳಿಗೆ ನಾನು  ಬೈಯುತ್ತಾ ಹೋಗುತ್ತಿರುವಾಗ ಅದನ್ನು ಕೇಳಿದ ನಮ್ಮ ಮನೆಯ ಪಕ್ಕದಲ್ಲಿರುವ ಭಾರತಿಬಾಯಿ ಗಂಡ ರಾಜು ಪವಾರ ನಮ್ಮ ಮನೆಯ ಮುಂದೆ ಬಂದವಳೆ ನನಗೆ ತಡೆದು ನಿಲ್ಲಿಸಿ, ಏ ರಂಡಿ, ನೀನು ನನಗೆ ಏಕೆ ಬೈಯುತ್ತಿರುವಿ, ನಿನ್ನನ್ನು ಇಲ್ಲೆ ಖಲ್ಲಾಸ ಮಾಡುತ್ತೇನೆ ಅಂತ ನನ್ನ ಮುಖದ ಮೇಲೆ ಕೈಯಿಂದ ಹೊಡೆದು ನನ್ನ ಕೂದಲಿನ ಗೊಂಡೆ ಹಿಡಿದು ಎಳೆದಾಡಿರುತ್ತಾಳೆ. ಅಲ್ಲಿಯೇ ಇದ್ದ ಆಕೆಯ ಗಂಡ ರಾಜು ತಂದೆ ಕಾನು ಪವಾರ ಈತನು ತಮ್ಮ ಮನೆಯಲ್ಲಿದ್ದ ಒಂದು ಕಟ್ಟಿಗೆಯನ್ನು ತಂದು ನನ್ನ ಮೈಮೇಲೆ ಇದ್ದ ಕಾಚಳಿ (ಲಂಬಾಣಿ ಉಡುಗೆ) ಸೆರಗನ್ನು ಹಿಡಿದು  ಎಳೆದು ನನ್ನ ತಲೆಯ ಮೇಲೆ, ತೊಡೆಯ ಮೇಲೆ ಮತ್ತು ಕೈಗಳ ಮೇಲೆ ಹೊಡೆದಿದ್ದರಿಂದ ರಕ್ತ ಮತ್ತು ಗುಪ್ತ ಗಾಯಗಳು ಆಗಿರುತ್ತವೆ. ಜಗಳ ನಡೆದಾಗ  ಭಾರತಿಯಬಾಯಿ ಇವಳ ಮಗಳಾದ ಪ್ರೀತಿ ಇವಳು ಈ ರಂಡಿದು ಬಹಳ ಆಗಿದೆ ಅಂತ  ತನ್ನ ಕಾಲಲ್ಲಿದ್ದ ಚಪ್ಪಲಿ ತೆಗೆದು ನನ್ನ ಮುಖದ ಮೇಲೆ ಹೊಡೆದು ಅವಮಾನಗೊಳಿಸಿರುತ್ತಾಳೆ. ಮನೆಯಲ್ಲಿದ್ದ ಭಾರತಿಬಾಯಿ ಮಗನಾದ ಚೇತನ ಈತನು ಹೊರಗೆ ಬಂದವನೇ ಈ ಸೂಳೆ ಮಗಳನ್ನು ಜೀವ ಸಹಿತ ಬಿಡುವುದು ಬೇಡ ಖಲ್ಲಾಸ ಮಾಡಿರಿ ಅಂತ  ಅಲ್ಲಿಯೆ ಬಿದಿದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ಬೆನ್ನಿನ ಮೇಲೆ, ಭುಜದ ಮೇಲೆ ಹೋಡೆದಿರುತ್ತಾನೆ. ಭಾರತಿಬಾಯಿ, ರಾಜು, ಪ್ರೀತಿ ಮತ್ತು ಚೇತನ ಎಲ್ಲರು  ಸೇರೆ ನನಗೆ ಹೊಡೆ ಬಡೆ ಮಾಡುತ್ತಿರುವ  ಸಮಯದಲ್ಲಿ ಅಲ್ಲಿಯೇ ಇದ್ದ ನಮ್ಮ ತಾಂಡಾದ ಹೀರು ತಂ/ಅಂಬು ಪವಾರ, ರಾಮು ತಂ/ಲಕ್ಕು ಪವಾರ  ಜಗಳ ಬಿಡಿಸಿರುತ್ತಾರೆ. ಆದರೂ ಸಹಿತ ಅವರು ಈ ರಂಡಿ ಈ ಸಾರಿ ಉಳಿದುಕೊಂಡಿದ್ದಾಳೆ ಇನ್ನೊಂದು ಸಾರಿ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಭಯ ಹಾಕಿರುತ್ತಾರೆ. ನನಗೆ ರಕ್ತ ಗಾಯ ಮತ್ತು ಗುಪ್ತ ಗಾಯಗಳು ಆಗಿದ್ದರಿಂದ ನನ್ನ ಸಹೋದರ ಸಂಬಂಧಿಯಾದ ನರೇಶ ತಂದೆ ಚಂದು ಪವಾರ ಈತನು ನನಗೆ ಉಪಚಾರ ಕುರಿತು 11:30 ಗಂಟೆಗೆ ಜಿಲ್ಲಾಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ಆಸ್ಪತ್ರೆಯ ವೈದ್ಯಾಧಿಕಾರು ಉಪಚರಿಸಿದ್ದು ಸಧ್ಯ ನಾನು ಗುಣಮುಖಳಾಗಿರುತ್ತೇನೆ.ಕಾರಣ ದಿನಾಂಕ:13-11-2022 ರಂದು ಬೆಳೆಗ್ಗೆ 10:30 ಗಂಟೆಗೆ ನನ್ನ ಮನೆಯ ಮುಂದೆ ನನಗೆ ತಡೆದು ನಿಲ್ಲಿಸಿ, ನನಗೆ ಅವಾಚ್ಯಶಬ್ದಗಳಿಂದ ಬೈಯಿದು, ಕೂದಲು ಹಿಡಿದು ಎಳೆದಾಡಿ, ಸೀರೆ ಸರಗು ಜಗ್ಗಿ ಅವಮಾನಿಸಿ, ಚಪ್ಪಲಿಯಿಂದ, ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತ ಗಾಯ ಗುಪ್ತ ಗಾಯಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕಳ್ಳಬೇಕೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಠಾಣೆಗೆ ವಿಳಂಭವಾಗಿ ಬಂದು ದೂರು ಸಲ್ಲಿಸುತ್ತಿದ್ದೆನೆ ಅಂತ ಇತ್ಯಾದಿ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 23-11-2022 05:22 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080