ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 18/10/2022 ರಂದು 5:00 ಪಿ.ಎಮ್ ಕ್ಕೆ  ಮಹಮ್ಮದ ಮುಸ್ತಾಕ ತಂದೆ ಬಾಬುಮಿಯಾ ಶೇಖ್ ವಯ: 34ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: ಶಹಾಜಿಲಾನಿ ದರ್ಗಾ ಹತ್ತೀರ ಮದೀನಾ ಕಾಲೋನಿ ಎಮ್.ಎಸ್.ಕೆ.ಮಿಲ್ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಹಾಜರುಪಡಿಸಿದ್ದು ಸಾರಂಶವೆನೆಂದರೆ,  ನಿನ್ನೆ ದಿನಾಂಕ 17/10/2022 ರಂದು ಬೆಳಗ್ಗೆ ನೋಮಾನ ಈತನು ಚಾಕ್ಲೇಟು ಬೇಕು ಅಪ್ಪಾ ಅಂತಾ ನನಗೆ ಹೇಳಿದಾಗ ನಾನು ಆತನಿಗೆ ಅಂಗಡಿಗೆ ಕರೆದುಕೊಂಡು ಹೋಗಿ ಚಾಕ್ಲೇಟು ಕೊಡಿಸಿಕೊಂಡು ಮರಳಿ ಮನೆಗೆ ಕರೆದುಕೊಂಡು ಹೋಗುವಾಗ ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಮದೀನಾ ಕಾಲೋನಿಯಲ್ಲಿರುವ ಬಾಬು ಕಿರಾಣಾ ಅಂಗಡಿ ಹತ್ತೀರ ರಸ್ತೇಯ ಮೇಲೆ ಒಬ್ಬ ನೀರಿನ ಟಂಟಂ ವಾಹನದ ಚಾಲಕನು ಈದ್ಗಾ ಲೇಔಟ್ ಕಡೆಯಿಂದ ಗ್ರೀನ್ ಸರ್ಕಲ್ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನಮ್ಮ ಎದುರಿನಿಂದ ಬಂದು ತನ್ನ ವಾಹನವನ್ನು ನಿಯಂತ್ರಿಸಲು ಆಗದೆ ನನ್ನ ಮಗನಾದ ನೋಮಾನ ಈತನಿಗೆ ಡಿಕಿಪಡಿಸಿದನು ಆಗ ನೋಮಾನ ಈತನು ಅಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ಹೋಗಿ ಟಚ್ಚಾಗಿ ಟಂಟಂ ಮತ್ತು ವಿದ್ಯುತ ಕಂಬದ ಮಧ್ಯದಲ್ಲಿ ಸಿಲುಕಿಕೊಂಡು ಕಿರುಚಾಡಿದನು. ಅದನ್ನು ನೋಡಿ ನಾನು ಮತ್ತು ಅಲ್ಲಿದ್ದ ರಹೀಮ್ ತಂದೆ ತಾಜೋದ್ದಿನ್ ಹಾಗೂ ಮುಜೀಬ ಅಲಿ ತಂದೆ ವಾಹೇದ ಅಲಿ ಮೂವರು ಸೇರಿ ನೋಮಾನ ಈತನಗೆ ಹೊರಗೆ ತೆಗೆದು ನೋಡಲು ಸದರ ಘಟನೆಯಿಂದ ಬಲಗಡೆ ಎದೆಗೆ ಹಾಗೂ ಪಕ್ಕೆಲುಬುಗಳಿಗೆ ಭಾರಿ ಒಳಪೆಟ್ಟು ಮತ್ತು ಬಲಗಡೆ ಕಿಡ್ನಿಗೆ ಭಾರಿ ಒಳಪೆಟ್ಟು ಮತ್ತು ಬಲಗಡೆ ಭುಜಕ್ಕೆ ಭಾರಿ ಒಳಪೆಟ್ಟು ಮತ್ತು ಅಲ್ಲಲ್ಲಿ ಗಾಯಗಳು ಆಗಿ ಆತನು ಮಾತನಾಡುತ್ತಿರಲಿಲ್ಲ ನೋಮಾನ ಈತನಿಗೆ ಡಿಕ್ಕಿಪಡಿಸಿದ ಟಂಟಂ ವಾಹನ ನಂ ನೋಡಲು ಕೆಎ-32 ಡಿ-7505 ನೇದ್ದು ಇದ್ದು ಅದರ ಚಾಲಕನಿಗೆ ನೋಡಲು ಆತನು ನಮ್ಮ ಕಡೆಗೆ ನೋಡುತ್ತಾ ತನ್ನ ಟಂಟಂ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೇನೆ. ಮುಂದೆ ನೋಡಿದ್ದಲ್ಲಿ ಗುರುತಿಸುತ್ತೇನೆ. ನಾನು ನನ್ನ ಮಗ ನೋಮಾನ ಈತನ ಚಿಕಿತ್ಸೆಯಲ್ಲಿದ್ದು ಇಂದು ಮನೆಯವರೊಂದಿಗೆ ವಿಚಾರಿಸಿ ಠಾಣೆಗೆ ಬಂದು ದೂರುನೀಡಲು ತಡವಾಗಿರುತ್ತದೆ.  ಕಾರಣ ನೀರಿನ ಟಂಟಂ ನಂ.ಕೆಎ-32 ಡಿ-7505 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 18-10-2022 ರಂದು ೧೧:೧೫ ಪಿ.ಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಪ್ರೀಯಾಂಕಾ ಗಂಡ ಕೃಷ್ಣದೇವ ಕಂದಗೋಳೆ ವಯ: ೩೦ ವರ್ಷ ಉ: ಲಕ್ಕಿಮೂನ ಫರ್ನಿಚರ್ ಅಂಗಡಿ ಮಾಲಿಕರು ಜಾ: ಗೊಂಡ ಸಾ: ಲಕ್ಕಿಮೂನ ಫರ್ನಿಚರ್ ಜಗತ್ ಪೋಸ್ಟ ಆಫೀಸ ಎದುರುಗಡೆ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಪಿರ್ಯಾದಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ, ಜಗತ್ ಪೋಸ್ಟ ಆಫೀಸ ಎದುರುಗಡೆ ಲಕ್ಕಿಮೂನ್ ಫರ್ನಿಚರ್ ಎಂಬ ಹೆಸರಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ನನ್ನ ಅಂಗಡಿಯಲ್ಲಿ ಸಚಿನ್ ಕುಟಮಲಗೆ ಮತ್ತು ಅಶೋಕ ಇವರು ಲೇಬರ ಕೆಲಸ ಮಾಡುತ್ತಾರೆ. ನನ್ನ ಅಂಗಡಿ ಎದುರುಗಡೆ ಟಾಪ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಫರ್ನಿಚರ್ ಅಂಗಡಿ ಇರುತ್ತದೆ. ನನ್ನ ಅಂಗಡಿಯಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದ ಸಂತೋಷ, ಮಲ್ಲಿಕಾರ್ಜುನ, ಮುಕ್ಕಿಂ ಇವರು ಸುಮಾರು ೨-೩ ವರ್ಷಗಳ ಹಿಂದೆ ನಮ್ಮ ಹತ್ತಿರ ಕೆಲಸ ಬಿಟ್ಟು ಎದುರುಗಡೆ ಇದ್ದ ಟಾಪ್ ಎಂಟರ್‌ಪ್ರೈಸಸ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ದಿನಾಲೂ ನನ್ನ ಅಂಗಡಿಗೆ ಬಂದ ವ್ಯಾಪಾರಸ್ಥರಿಗೆ ಕೈ ಮಾಡಿ ತಾವು ಕೆಲಸ ಮಾಡುತ್ತಿದ್ದ ಅಂಗಡಿಯ ಕಡೆಗೆ ಕರೆಯುವುದು, ನಮ್ಮ ಅಂಗಡಿಯ ಕಡೆಗೆ ತಿರುಗುತ್ತಾ ಬಂದು ನಮ್ಮ ಅಂಗಡಿಗೆ ಬಂದ ಕಸ್ಟಮರಗಳಿಗೆ ತಮ್ಮ ಅಂಗಡಿಗೆ ಕರೆದುಕೊಂಡು ಹೋಗುವುದು ಮಾಡುತ್ತಿದ್ದರು. ಆಗ ನಾನು ಅವರ ಅಂಗಡಿಯ ಮಾಲಿಕರ ಹತ್ತಿರ ಹೋಗಿ “ನಿಮ್ಮ ಅಂಗಡಿಯ ಕೆಲಸ ಮಾಡುವ ಸಂತೋಷ, ಮಲ್ಲಿಕಾರ್ಜುನ, ಮುಕ್ಕಿಂ ಇವರು ನಮ್ಮ ಅಂಗಡಿಗೆ ಬಂದ ಕಸ್ಟಮರಗಳಿಗೆ ಕೈ ಮಾಡಿ ಕರೆಯುವುದು, ಕರೆದುಕೊಂಡು ಹೋಗುವುದು ಮಾಡುತ್ತಿದ್ದಾರೆ ಈ ತರ ಮಾಡುವುದು ಸರಿಯಲ್ಲ” ಅಂತ ಅವರಿಗೆ ಹೇಳಿದಾಗ, ಅವರು ನನಗೆ “ಈ ತರ ಆಗದ ಹಾಗೇ ನೋಡಿಕೊಳ್ಳುತ್ತೇನೆ ಅವರಿಗೆ ಬುದ್ದಿವಾದ ಹೇಳುತ್ತೇನೆ” ಅಂತ ಹೇಳಿದ್ದರು. ಇಂದು ದಿನಾಂಕ: ೧೮/೧೦/೨೦೨೨ ರಂದು ರಾತ್ರಿ ೯:೦೫ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಸಚಿನ್ ಕುಟಮಲಗೆ ಮತ್ತು ಅಶೋಕ ಕೂಡಿಕೊಂಡು ನಮ್ಮ ಅಂಗಡಿಯಲ್ಲಿದ್ದಾಗ, ನಮ್ಮ ಅಂಗಡಿಗೆ ಬಂದ ಕಸ್ಟಮರಗಳಿಗೆ ಫೋಲ್ಡಿಂಗ್ ಕಾಟ್ ತೋರಿಸಿ ವ್ಯಾಪಾರ ಮಾಡುತ್ತಿದ್ದಾಗ, ಎದುರುಗಡೆ ಇದ್ದ ಟಾಪ್ ಎಂಟರ್‌ಪ್ರೈಸಸ್ ಅಂಗಡಿಯಲ್ಲಿ ಕೆಲಸ ಮಾಡುವ ಸಂತೋಷ ಮತ್ತು ಮಲ್ಲಿಕಾರ್ಜುನ ಇವರಿಬ್ಬರೂ ಕೂಡಿಕೊಂಡು ನಮ್ಮ ಅಂಗಡಿಗೆ ಬಂದು, ಅವರಲ್ಲಿ ಸಂತೋಷ ಇತನು ನನಗೆ “ನಮ್ಮ ಕಡೆ ನೋಡಿ ನೀನು ನಮಗೆ ಏನು ಮಾತಾನಾಡುತ್ತೀದ್ದಿ ನಿಂದು ಬಹಳ ಆಗಿದೆ” ಅಂತ ನನ್ನ ಸಂಗಡ ತಕರಾರು ಮಾಡುತ್ತಿದ್ದಾಗ, ಮಲ್ಲಿಕಾರ್ಜುನ ಇತನು ನನಗೆ “ರಂಡೀ ನಿಮ್ಮದು ಬಹಳ ಆಗಿದೆ ನಿಮಗೆ ಸಮಯ ಬಂದಾಗ ನೋಡಿಕೊಳ್ಳುತ್ತೇನೆ. ನಿಮ್ಮೌನ ತುಲ್ಲು” ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ನನಗೆ ಕೈಯಿಂದ ಕಪಾಳಕ್ಕೆ ಹೊಡೆದು, ಮಾನಭಂಗವನ್ನುಂಟು ಮಾಡುತ್ತಿದ್ದಾಗ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಅಶೋಕ ಮತ್ತು ಸಚಿನ್ ಇವರು ಜಗಳವನ್ನು ಬಿಡಿಸಿದರು. ಅವರಿಬ್ಬರೂ ಹೋಗುವಾಗ ಸಮಯ ಬಂದಾಗ ನಿಮಗೆ ಒಬ್ಬೊಬ್ಬರಿಗೆ ಖಲಾಸ ಮಾಡುತ್ತೇವೆ ಇಲ್ಲಿಂದ ಓಡಿಸಿ ಕಳುಹಿಸುತ್ತೇನೆ ಅಂತ ಚೀರಾಡುತ್ತಾ ಹೊರಟು ಹೋದರು. ನನಗೆ ಯಾವುದೇ ಗಾಯ ಆಗದೇ ಇದ್ದಿದ್ದರಿಂದ ನಾನು ಆಸ್ಪತ್ರೆಗೆ ಹೋಗುವುದಿಲ್ಲ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇತ್ಯಾದಿ ಪಿರ್ಯಾದಿ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 10-11-2022 11:35 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080