ಅಭಿಪ್ರಾಯ / ಸಲಹೆಗಳು

        ಅಶೋಕ  ನಗರ ಪೊಲೀಸ್ ಠಾಣೆ :- ಇಂದು ದಿನಾಂಕ:18.10.2021 ರಂದು 03:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಶಿವರಾಜ ತಂದೆ ಶಂಕ್ರೇಪ್ಪ ಬಿರಾದಾರ ವಯ: 41 ವರ್ಷ ಜಾ: ಲಿಂಗಾಯತ ಉ: ಸೆಕ್ಯೂರಿಟಿ ಗಾರ್ಡ ಕೆಲಸ ಸಾ|| ಕಣಮುಸ ತಾ|| ಆಳಂದ ಹಾ|| ವ|| ಬಾರೆ ಹಿಲ್ಸ ಗಣೇಶ ನಗರ ಕಲಬುರಗಿ ಈ ಅರ್ಜಿ ಮೂಲಕ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ನನ್ನ ಸ್ವಂತ ಊರು ಆಳಂದ ತಾಲೂಕಿನ ಕಣಮುಸ ಗ್ರಾಮವಿರುತ್ತದೆ. ನಾನು ಕಳೆದ 15 ವರ್ಷಗಳ ಹಿಂದೆ ಆಯುಧ ಲೈಸನ್ಸ ಪರವಾನಿಗೆ ಪಡೆದುಕೊಂಡಿರುತ್ತೇನೆ. ನನ್ನ ಲೈಸನ್ಸ ಆಧಾರದ ಮೇಲಿಂದ ಬಳ್ಳಾರಿಯಲ್ಲಿರುವ ಶ್ರೀನಿವಾಸ ಆರ್ಮಸ್ ಅಂಗಡಿಯಿಂದ ಒಂದು 12 ಬೋರ ಎಸ್.ಬಿ. ಬಿ.ಎಲ್ ಬಂದೂಕನ್ನು ರೂ, 18,000/- ಕೊಟ್ಟು ಖರೀದಿಸಿದ್ದು ಇರುತ್ತದೆ. ನಾನು ಪರವಾನಿಗೆ ಹೊಂದಿದ ಆಯುಧ ಹೊಂದಿದ್ದರಿಂದ ಕಳೆದ ಒಂದು ತಿಂಗಳುಗಳಿಂದ ಕಲಬುರಗಿ ನಗರದ ಮೇ. ರೈಟರ ಸೇಫಗಾರ್ಡ ಪ್ರೈ. ಲಿ. ಎಂಬ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ ಅಂತ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾನು ಪ್ರತಿ ದಿನ ಬೆಳಿಗ್ಗೆ 08:00 ಗಂಟೆಯಿಂದ ರಾತ್ರಿ 08:00 ಗಂಟೆ ವರೆಗೆ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಹೀಗಿದ್ದು ದಿನಾಂಕ:12.10.2021 ರಂದು ರಾತ್ರಿ 08:00 ಗಂಟೆಗೆ ನನ್ನ ಕರ್ತವ್ಯ ಮುಗಿದ ನಂತರ ನಾನು ನನ್ನ ಹತ್ತಿರ ಇದ್ದ 12 ಬೋರ ಎಸ್.ಬಿ.ಬಿ.ಎಲ್ ಬಂದೂಕನ್ನು ಮತ್ತು ಸೇಕ್ಯೂರಿಟಿ ಗಾರ್ಡ ಡ್ರೇಸ್, ನನ್ನ ಮತ್ತು ನನ್ನ ತಾಯಿಯ ಆಧಾರ ಕಾರ್ಡ ಮತ್ತು ಪಾಸ್ ಬುಕಗಳನ್ನು ಬ್ಯಾಗಿನಲ್ಲಿ ಇಟ್ಟಿರುತ್ತೇನೆ. ಅಷ್ಟರಲ್ಲಿ ನನ್ನ ಸ್ನೇಹಿತನಾದ  ಮಂಜುನಾಥ ಪದ್ಮಾಜಿ ಮತ್ತು ಅವನ ಗೆಳೆಯ ಅಶೋಕ ಪದ್ಮಾಜಿ ಇಬ್ಬರೂ ಕೂಡಿಕೊಂಡು ನನ್ನ ಆಫೀಸ್ ಹತ್ತಿರ ಬಂದಿರುತ್ತಾರೆ. ನಂತರ ನಾವು 3 ಜನರು ಕೂಡಿಕೊಂಡು ರಾತ್ರಿ 09:00 ಗಂಟೆ ಸುಮಾರಿಗೆ ರಾಮ ಮಂದಿರ ಹತ್ತಿರ ಇರುವ ಸುಹಾನಾ ಬಾರ್ & ರೆಸ್ಟೊರಂಟಗೆ ಊಟಮಾಡುವ ಕುರಿತು ಹೋಗಿರುತ್ತೇವೆ. ನಂತರ ಮಂಜುನಾಥ ಇತನ ಸ್ನೇಹಿತರಾದ ಸಂತೋಷಕುಮಾರ ಚಿಂಚೋಳಿ ಮತ್ತು ಶಾಂತಪ್ಪ ಮಾಲಿಪಾಟೀಲ್ ಇವರು ಸಹ ಬಂದು ನಮ್ಮೊಂದಿಗೆ ಊಟ ಮಾಡಿರುತ್ತಾರೆ. ಎಲ್ಲರ ಊಟ ಮುಗಿದ ನಂತರ ರಾತ್ರಿ 11:15 ಗಂಟೆ ಸುಮಾರಿಗೆ ಮಂಜುನಾಥ ಇತನು ನನಗೆ ತನ್ನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ರಾಮ ಮಂದಿರ ಸರ್ಕಲ್ ಹತ್ತಿರ ಬಿಟ್ಟು ಹೋಗಿರುತ್ತಾನೆ. ನಾನು ಆಟೋ ರಿಕ್ಷಾ ಸಲುವಾಗಿ ಕಾಯುತ್ತಾ ನಿಂತಾಗ ಇಬ್ಬರು ಅಪರಿಚಿತ ಜನರು ಒಂದು ಬಿಳಿ ಬಣ್ಣದ ಆ್ಯಕ್ಟಿವ ತರಹದ ಮೋಟರ ಸೈಕಲ್ ಮೇಲೆ ಬಂದು ನನಗೆ ಚಾಕು ತೋರಿಸಿ ಹೆದರಿಸಿ ನನಗೆ ತಮ್ಮ ಮೋಟರ ಸೈಕಲ್ ಮೇಲೆ ಮದ್ಯದಲ್ಲಿ ಕೂಡಿಸಿಕೊಂಡು ರಾಮ ಮಂದಿರ ಹಿಂದುಗಡೆ ಇರುವ ಗಾರ್ಡನ್ ಹತ್ತಿರ ಕರೆದುಕೊಂಡು ಹೋಗಿ ಅವರಲ್ಲಿದ್ದ ಒಬ್ಬನು ಕೈಯಿಂದ ನನ್ನ ಮುಖಕ್ಕೆ ಹೊಡೆದು ಹೆದರಿಸಿ ನನ್ನ ಹತ್ತಿರ ಇದ್ದ ಮೊಬೈಲ್ ಮತ್ತು ಬಂದೂಕನ್ನು ಇಟ್ಟಿದ್ದ ಬ್ಯಾಗನ್ನು ಜಬರದಸ್ತಿಯಿಂದ ಕಸಿದುಕೊಂಡು ತಮ್ಮ ಮೋಟರ ಸೈಕಲ್ ಮೇಲೆ ಕುಳಿತುಕೊಂಡು ಹೋಗಿರುತ್ತಾರೆ. ನನಗೆ ಹೊಡೆಬಡೆಮಾಡಿದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ ಅವರನ್ನು ನೋಡಿದರೆ ಗುರ್ತಿಸುತ್ತೇನೆ. ಘಟನೆ ನಡೆದಾಗ ಸಮಯ ಅಂದಾಜು ರಾತ್ರಿ 11:30 ಗಂಟೆ ಆಗಿತ್ತು. ಸದರಿಯವನು ನನಗೆ ಕೈಯಿಂದ ಹೊಡೆದಿದ್ದರಿಂದ ನನಗೆ ನೋವು ಆಗದ ಕಾರಣ ನಾನು ಆಸ್ಪತ್ರೆಗೆ ಹೋಗಿರುವುದಿಲ್ಲ. ನಂತರ ಈ ವಿಷಯದ ಬಗ್ಗೆ ನಾನು ನನ್ನ ಮೇಲ್ಕಾಣಿಸಿದ ಗೆಳೆಯರೊಂದಿಗೆ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನನಗೆ ಹೊಡೆ ಬಡೆ ಮಾಡಿ ನನ್ನ ಸಾಮಸಂಗ್ ಕಂಪನಿ ಮೊಬೈಲ್ ಅ.ಕಿ. 1,000/-ಮತ್ತು ಎಸ್.ಬಿ.ಬಿ.ಎಲ್ 12 ಬೋರ ಬಂದೂಕ ಅ.ಕಿ. 18,000/- ಮತ್ತು 6 ಜೀವಂತ ಗುಂಡುಗಳು ಅ.ಕಿ. 600/- ನೇದ್ದವುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋದವರನ್ನು ಪತ್ತೆಮಾಡಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಸ್ತುಗಳನ್ನು ನನಗೆ ದೊರಕಿಸಿ ಕೊಡಬೇಕು ಅಂತ ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-10-2021 01:53 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080