ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ:18/09/2022 ರಂದು ರಾತ್ರಿ 00:15 ಗಂಟೆಗೆ ಫಿರ್ಯಾದಿ ಶ್ರೀ ಬಾಬಾ ತಂದೆ ಫೈಗಂಬರ ನದಾಫ್ ವಃ 24 ವರ್ಷಗಳು ಉಃ ಆಟೋಚಾಲಕ ಜಾಃಮುಸ್ಲಿಂ ಸಾಃ ಕೆ.ಹೆಚ್.ಬಿ ಕಾಲೋನಿ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶವೇನಂದರೆ, ನಮ್ಮ ತಂದೆ ತಾಯಿಯವರಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇರುತ್ತೇವೆ. ಮೊದಲನೆಯವಳು ರೀಜವಾನ ನಾನು ಎರಡಯವನು, ಮೂನೆಯವನು ಜಮೀರ ಅಹ್ಮದ @ ಜಮ್ಮು ವಃ22 ವರ್ಷ ಉಃ ಆಟೋ ಚಾಲಕ ಹಾಗೂ ಕೊನೆಯವಳು ಶಮಿನಾಬೇಗಂ ವಃ 18 ವರ್ಷಗಳು ಹೀಗೆ ಮಕ್ಕಳಿರುತ್ತೇವೆ. ನಾನು ಮತ್ತು ಜಮೀರ ಅಹ್ಮದ @ ಜಮ್ಮು ಇಬ್ಬರು ಆಟೋ ನಡೆಯಿಸಿಕೊಂಡು ಇರುತ್ತೇವೆ. ನಾವಿಬ್ಬರು ಬೆಳಿಗ್ಗೆ 08.00 ಗಂಟೆಗೆ ಮನೆಯಿಂದ ಹೋಗಿ ರಾತ್ರಿ 7 ಗಂಟೆಯ ಸುಮಾರಿಗೆ ಮನೆಗೆ ಬರುತ್ತೇವೆ. ನನಗೆ ಮತ್ತು ನನ್ನ ತಂದಯವರಿಗೆ ನನ್ನ ತಮ್ಮನಾದ ಜಮೀರ ಅಹ್ಮದ ಇತನು ನಮ್ಮ ಮುಂದೆ ಸುಮಾರು 1 ವಾರಗಳ ಹಿಂದೆ ತಿಳಿಸಿದ್ದೆನಂದರೆ, ತನ್ನ ಗೆಳೆಯನಿಗೆ ಮತ್ತು ಜೇವರ್ಗಿ ಕಾಲೋನಿಯ ಸಮೀರ್ ಎನ್ನುವವನ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂದಿಸಿದಂತೆ ತಕರಾರು ನಡೆದಾಗ ನಾನು ನಡುವೆ ಹೋದಾಗ ಸಮೀರ ಇತನು ನನಗೆ ಶರ್ಟನ ಕಾಲರ ಹಿಡಿದಾಗ ನಾನು ಅವನಿಗೆ ಒಂದು ಏಟು ಹೊಡೆದಿರುತ್ತೆನೆ. ನಂತರ ನನ್ನ ಮತ್ತು ಸಮೀರ ಇಬ್ಬರ ನಡುವೆ ನಾವು ನಾವೆ ರಾಜಿ ಸಂದಾನ ಮಾಡಿಕೊಂಡಿದ್ದು ಇರುತ್ತದೆ. ಈಗ ಸದ್ಯ ನಾನು ಯಾವ ವಿಚಾರದಲ್ಲಿ ಹೋಗುವದಿಲ್ಲ ಆಟೋ ಚಲಾಯಿಸಿಕೊಂಡು ಇರುತ್ತೆನೆ ಅಂತ ತಿಳಿಸಿ ಈಗ ಆಟೋ ಚಾಲನೆ ಮಾಡಿಕೊಂಡು ವಾಸವಾಗಿರುತ್ತಾನೆ. ಸಮೀರ ಇತನು ನನ್ನ ತಮ್ಮನು ಹೊಡೆದಿದ್ದರಿಂದ ರಾಜಿ ಮಾಡಿಕೊಂಡಂತೆ ಮಾಡಿ ಅದರ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದು ಇರುತ್ತದೆ.   ಹೀಗಿದ್ದು ಇಂದು ದಿನಾಂಕ 17.09.2022 ರಂದು 06-45 ಪಿಎಮ್ ಸುಮಾರಿಗೆ ನಾನು ಶಹಬಾಜ ಕಾಲೋನಿಯಿಂದ ನನ್ನ ಆಟೋ ತೆಗೆದುಕೊಂಡು ಹೋಗುವಾಗ ತಮ್ಮನಾದ ಜಮೀರ ಅಹ್ಮೆದ ಇತನಿಗೆ ಸಮೀರ ಸಾ: ಜೇವರ್ಗಿ  ಕಾಲೋನಿ ಕಲಬುರಗಿ ಮತ್ತು ಇನ್ನು ಇಬ್ಬರು ಜನರು ಕೂಡಿಕೊಂಡು ಹರಿತವಾದ ತಲವಾರ ಮತ್ತು ಮಚ್ಚುಗಳಿಂದ ತಲೆಯ ಮೇಲೆ, ಕುತ್ತಿಗೆಯ ಮೇಲೆ, ಮುಖದ ಮೇಲೆ, ಬೆನ್ನಿನ ಮೇಲೆ, ಕೈಗಳಿಗೆ, ಭುಜಗಳಿಗೆ ಹೊಡೆಯುತ್ತಿದ್ದಾಗ ನಾನು ನೋಡಿ ಚೀರಾಡುತ್ತಾ ಹೋಗುತ್ತಿದ್ದಂತೆ ನನ್ನ ತಮ್ಮನಿಗೆ ಹೊಡೆಯುದನ್ನು ಬಿಟ್ಟು ಓಡಿ ಹೋಗಿರುತ್ತಾರೆ, ನಾನು ಹತ್ತಿರ ಹೋಗಿ ನೋಡಲು ನನ್ನ ತಮ್ಮನಿಗೆ ದೇಹದ ಭಾಗದ ಮೇಲೆ ಭಾರಿ ರಕ್ತಗಾಯಗಳಾಗಿ ನರಳಾಡುತ್ತಿದ್ದಾಗ ಅವನಿಗೆ ನನ್ನ ಆಟೋದಲ್ಲಿ ಹಾಕಿಕೊಂಡು ಯುನೇಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದ ವಿಷಯ ನಮ್ಮ ತಂದೆಯವರಿಗೆ ತಿಳಿಸಿ ನೀವು ಕೂಡಲೇ ಯುನೈಟೆಡ್ ಆಸ್ಪತ್ರೆಗೆ ಬಾ ಅಂತ ತಿಳಿಸಿ ನನ್ನ ತಮ್ಮ ಜಮೀರ ಅಹ್ಮದ ಇತನಿಗೆ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಅಲ್ಲಿಯ ವೈದ್ಯರು ಪರೀಕ್ಷೆ ಮಾಡಿ ನನ್ನ ತಮ್ಮ ಮೃತ ಪಟ್ಟರುತ್ತಾನೆ ಅಂತಾ ತಿಳಿಸಿರುತ್ತಾರೆ. ನಂತರ ನನ್ನ ತಂದೆಯವರು ಕೂಡಾ ಆಸ್ಪತ್ರೆಗೆ ಬಂದು ನನ್ನ ತಮ್ಮನಿಗೆ ನೋಡಿದ್ದು ಇರುತ್ತದೆ. ನನ್ನ ತಮನಿಗೆ ಸಮೀರ ಮತ್ತು ಇತರೆ ಜನರು ಕೂಡಿಕೊಂಡು ತಮ್ಮನ ದೇಹದ ಭಾಗದ ಮೇಲೆ ಹರಿತವಾದ ಆಯುದಗಳಿಂದ ಹೊಡೆದು ಭಾರಿ ರಕ್ತಗಾಯಗಳು ಆಗಿದ್ದು ಕಂಡು ಬಂದಿರುತ್ತವೆ. ನನ್ನ ತಮ್ಮನಿಗೆ ಈ ರೀತಿ ಹೊಡೆಯಲು ಕಾರಣವೇನೆಂದರೆ ನನ್ನ ತಮ್ಮ ಹಣಕಾಸಿನ ವ್ಯವಹಾರದಲ್ಲಿ ಮದ್ಯಸ್ಥಿಕೆ ವಹಿಸಿದ ದ್ವೇಷವನ್ನು ಇಟ್ಟುಕೊಂಡು ಸಮೀರ ಮತ್ತು ಇತರೆ ಇಬ್ಬರು ಜನರು ಕೂಡಿಕೊಂಡು ತಲವಾರ ಮತ್ತು ಮಚ್ಚುಗಳಿಂದ ತಲೆಗೆ, ಕುತ್ತಿಗೆ, ಬೆನ್ನು, ಮುಖ, ಕೈಗಳಿಗೆ ಮುಂತಾದ ಕಡೆಗಳಲ್ಲಿ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿ ಓಡಿ ಹೋಗಿರುತ್ತಾರೆ ಕಾರಣ ನನ್ನ ತಮ್ಮನಿಗೆ ತಲವಾರು ಮತ್ತು ಮಚ್ಚುಗಳಿಂದ ದೇಹದ ಭಾಗದ ಮೇಲೆ ಹೊಡೆದು ಕೊಲೆ ಮಾಡಿರುವರರ ಮೇಲೆ  ಕಾನೂನು ರೀತಿ ಕ್ರಮ ಕೈಕೊಳ್ಳಲು ಈ ಅರ್ಜಿಯ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2  :-  ದಿನಾಂಕ 18/09/2022 ರಂದು ಮದ್ಯಾಹ್ನ 02:30 ಗಂಟೆ ಸುಮಾರಿಗೆ ಶ್ರೀ. ಪ್ರಕಾಶ ತಂದೆ ಚಂದ್ರಶೇಖರ ಕೆರಳ್ಳಿ ವ; 40 ವರ್ಷ ಜಾ;ಪ.ಜಾತಿ [ಹೊಲೆಯ] ಉ; ಸೆಂಟ್ರಿಂಗ್ ಲೇಬರ ಸಾ; ಅರಣಕಲ್ ತಾ; ಕಾಳಗಿ ಹಾ;ವ; ಆಶ್ರಯ ಕಾಲೋನಿ ಲಾರಿ ತಂಗುದಾಣದ ಹಿಂದೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾಧಿ ಅರ್ಜಿ ನೀಡಿದ್ದು ಸಾರಂಶವೆನೆಂದರೆ,  ಇಂದು ದಿನಾಂಕ-18/09/2022 ರಂದು ಬೆಳಿಗ್ಗೆ ನಮ್ಮ ಸೆಂಟ್ರಿಂಗ್ ಗುತ್ತೆದಾರ ಶಿವಾಜಿ ತಂದೆ ಗೋಪು ರಾಠೋಡ ಈತನು ಟಂ ಟಂ ನಲ್ಲಿ ಬೆಲಗುಗಳು ತರಬೇಕಾಗಿದ್ದು ನೀವು ಸುಲ್ತಾನಪುರ ರಿಂಗ್ ರೋಡಿಗೆ ನಿಲ್ಲುವಂತೆ ಹೇಳಿದಕ್ಕೆ ನಾವು ಮೂವರು ಅಲ್ಲಿಯೇ ನಿಂತ್ತಾಗ ಬೆಲ್ಲೂರದ ಟಂ ಟಂ ವಾಹನ ನಂ ಕೆಎ-32 ಬಿ-5427 ಬಂದಿದ್ದು ಇದರೊಂದಿಗೆ ಶಿವಾಜಿ ರಾಠೋಡನು ಜೋತೆಯಲ್ಲಿದ್ದು ಎಲ್ಲರೂ ಕೂಡಿಕೊಂಡು ಬಂಬುಬಜಾರಗೆ ಹೋಗಿ 30 ಬೆಲಗುಗಳನ್ನು ತೆಗೆದುಕೊಂಡು ಮರಳಿ ಮುಸ್ಲಿಂ ಸಂಘ ಮುಖಾಂತರವಾಗಿ ಬರುವಾಗ ನಾನು ಹಾಗೂ ವಿಷ್ಣುವರ್ಧನ ಟಂ ಟಂ ಹಿಂದುಗಡೆ ಒಳಗೆ ಮತ್ತು ಟಂ ಟಂ ಚಾಲಕ ಹಾಗೂ ಪಾಂಡುರಂಗ ಸಿಂಗೆ ಇವರು ಮುಂದೆ ಇದ್ದು ಬೆಳಿಗ್ಗೆ 11:15 ಗಂಟೆ ಕಾಲಕ್ಕೆ ಮುಸ್ಲಿಂ ಸಂಘದ ಚೌಕದ ಮುಂದೆ ಬರುವಾಗ ಚಾಲಕನು ವೇಗವಾಗಿ ನಡೆಸಿ ಯಾಕೋ ಒಮ್ಮೆಲೆ ಜೋರಿನಿಂದ ಬ್ರೇಕ್ ಹಾಕಿದಕ್ಕೆ ಟಂ ಟಂ ಆಟೋ ಎಡಕ್ಕೆ ಪಲ್ಟಿ ಆಗುವಾಗ ವಿಷ್ಣುವರ್ಧನ ಮೈಮೇಲೆ ಟಂ ಟಂ ಆಟೋ ಬಿದಿದ್ದರಿಂದ ಆತನ ತೆಲೆಯ ಭಾಗಕ್ಕೆ ಗಾಯವಾಗಿ ಎರಡು ಕಿವಿಯಿಂದ ರಕ್ತ ಬರುತಿತ್ತು ನಾವು ಎಲ್ಲರೂ ಸೇರಿ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ಯುನೈಟೇಡ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಟಂ ಟಂ ಚಾಲಕನು ಓಡಿ ಹೋಗಿರುತ್ತಾನೆ ಯುನೈಟೇಡ್ ಆಸ್ಪತ್ರೆಯ ಹತ್ತಿರ ಹೋದಾಗ ಮದ್ಯಾಹ್ನ 12:10 ಗಂಟೆ ಸುಮಾರಿಗೆ ಗಾಯದಿಂದ ವಿಷ್ಣುವರ್ಧನ್ ಮೃತ ಪಟ್ಟಿರುತ್ತಾನೆ, ಚಾಲಕನ ಹೆಸರು ಈಶ್ವರ ತಂದೆ ದತ್ತು ಬಡಿಗೇರ ಮು: ಬೆಲೂರ [ಜೆ] ಅಂತಾ ಗೋತ್ತಾಗಿರುತ್ತದೆ, ಈಗ ಶವವು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಇರುತ್ತದೆ, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು  ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ : - ದಿನಾಂಕ 18-09-2022  ರಂದು ೧.೩೦ ಪಿ.ಎಮ್ ದಿಂದ ೨.೩೦ ಪಿ,ಎಮ್ ಅವಧಿ ಸಮಯದಲ್ಲಿ ಬಾತ್ಮಿ ಬಂದ ಮೇರೆಗೆ ಸಾಯಿ ಮಂದಿರ ಹತ್ತಿರ ಸದರಿ ಆರೋಪಿತರು ಅಕ್ರಮವಾಗಿ ಒಂದು ಪಿಕಪ್ ವಾಹನದಲ್ಲಿ ದನವನ್ನಯ ಸಾಗಾಣೆ ಮಾಡುತ್ತಿದ್ದು ಒಂದು ಬಿಳಿ ಎತ್ತು ಅ.ಕಿ ೮೦೦೦/- ರೂ ನೇದ್ದು ಸಾಗಟಣೆ ಮಾಡುತ್ತಿದ್ದ ಸಮಯದಲ್ಲಿ ದಸ್ತಗಿರಿ ಮಾಡಿ ದೂರು ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ: 18-09-2022  ರಂದು ೬:೧೫ ಪಿಎಮ್‌ಕ್ಕೆ ಶ್ರೀ ಗಡ್ಡೆಪ್ಪ ಸಿಹೆಚ್‌ಸಿ:೧೬೫ ಫರಹತಾಬಾದ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆ ಮಾಲು, ಜಪ್ತಿ ಪಂಚನಾಮೆ, ೮ ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:೧೮-೦೯-೨೦೨೨ ರಂದು ಸಾಯಂಕಾಲ ೪ ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಸರಡಗಿ (ಬಿ) ಸೀಮಾಂತರದ ಸರಡಗಿ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಮ್ಮ ಠಾಣಾ ಸಿಬ್ಬಂದಿ ಜನರಾದ ೧) ರೇವಣಸಿದ್ದ ಸಿಹೆಚ್‌ಸಿ:೧೫೭ ೨) ಮಹೇಬೂಬ ಸಿಪಿಸಿ:೨೭೧ ೩) ತೀರುಪತಿ ಸಿಪಿಸಿ:೨೮೫ ೪) ಸಿಪಿಸಿ:೨೬೯ ಇವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ಮಾನ್ಯ ಪಿ.ಐ ಸಾಹೇಬರು ಫರಹತಾಬಾದ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಠಾಣೆಯಿಂದ ೪.೩೦ ಗಂಟೆಗೆ ಸಿಬ್ಬಂದಿ ಜನರೊಂದಿಗೆ ಖಾಸಗಿ ವಾಹನದಲ್ಲಿ  ಕರೆದುಕದೊಂಡು ಹೊರಟಿರುತ್ತೇನೆ. ಭಾತ್ಮೀ ಸ್ಥಳಕ್ಕೆ ಹೋಗುವಾಗ ದಾರಿ ಹೊಕ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೂ ಕೂಡಾ ಮಾಹಿತಿ ತಿಳಿಸಿ ನಮ್ಮ ಜೀಪನಲ್ಲಿ ಕರೆದುಕೊಂಡು ಹೊರಟು ಭಾತ್ಮಿ ಸ್ಥಳದ ಹತ್ತಿರ ಸಾಯಂಕಾಲ ೪:೩೦ ಗಂಟೆಗೆ ಹೋಗಿ ಸರಡಗಿ ಬ್ರಿಡ್ಜ್ನ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು  ಸಾಯಂಕಾಲ ೪:೩೫ ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನೂ ಕೆಲವು ಜನರು ಸಿಕ್ಕಿದ್ದು ಸಿಕ್ಕ ಜನರಿಗೆ ಹಿಡಿದು ಅವರಿಗೆ ಅಂಗಶೋಧನೆ ಮಾಡಿ ಹೆಸರು ವಿಳಾಸ ಕೇಳಲು ೧) ಶಿವಶರಣಪ್ಪ ತಂದೆ ಬಸವರಾಜ ದೂತ್ತರಗಾಂವ ವಯ||೩೭ ವರ್ಷ ಜಾ||ಲಿಂಗಾಯತ ಉ||ಅಟೋಚಾಲಕ ಸಾ||ಅಶೋಕ ನಗರ ಕಲಬುರಗಿ ಅಂತಾ ತಿಳಿಸಿ ಈತನ ಹತ್ತಿರ ೧೦೮೦/- ರೂ ಸಿಕ್ಕಿದ್ದು ೨) ಯಶವಂತ ತಂದೆ ಧರ್ಮಣ್ಣ ಜಮಾದಾರ ವಯ||೪೦ ವರ್ಷ ಉ||ಅಟೋಚಾಲಕ ಜಾ||ಕಬ್ಬಲಿಗ ಸಾ||ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ ೧೧೦೦/- ರೂ ಸಿಕ್ಕಿದ್ದು ೩) ದೀಪಕರಾಜು ತಂದೆ ಅಂಬಾದಾಸ್ ತರಾಟೆ ವಯ||೩೫ ವರ್ಷ ಉ||ಅಟೋಚಾಲಕ ಜಾ||ಪೂಜಾರಿ ಸಾ||ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ ೧೪೦೦/- ರೂ ಸಿಕ್ಕಿದ್ದು ೪) ಮಾರೂತಿ ತಂದೆ ವಿಜಯಕುಮಾರ ಯಾದವ ವಯ||೩೯ ವರ್ಷ ಉ||ಅಟೋ ಚಾಲಕ ಜಾ||ಯಾದವ ಸಾ||ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿ ಈತನ ಹತ್ತಿರ ೯೫೦/- ರೂ ಸಿಕ್ಕಿದ್ದು ೫) ಸಂಜಯಕುಮಾರ ತಂದೆ ನಾಗಣ್ಣ ಜಮಾದಾರ ವಯ||೩೧ ವರ್ಷ ಉ||ಅಟೋಚಾಲಕ ಜಾ||ಕಬ್ಬಲಿಗ ಸಾ||ಚೌಡೇಶ್ವರಿ ಕಾಲೋನಿ ಕಲಬುರಗಿ ಅಂತಾ ತಿಳಿಸಿ ಈತನ ಹತ್ತಿರ ೯೮೦/- ರೂ ಸಿಕ್ಕಿದ್ದು ೬) ಈರಯ್ಯ ತಂದೆ ಕಲ್ಲಯ್ಯ ಸ್ವಾಮಿ ವಯ||೩೩ ವರ್ಷ ಜಾ||ಜಂಗಮ ಉ||ಅಟೋಚಾಲಕ ಸಾ||ಖಾದ್ರಿ ಚೌಕ ಹತ್ತಿರ ಜೆ.ಆರ್ ನಗರ ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ ೧೦೫೦/- ರೂ ಸಿಕ್ಕಿದ್ದು ೭) ಬಸವರಾಜ ತಂದೆ ಮಹಾದೇವಪ್ಪ ಹೊಗೌಡ್ರು ವಯ||೪೫ ವರ್ಷ ಉ||ಅಟೋಚಾಲಕ ಜಾ||ಲಿಂಗಾಯತ ಸಾ||ಖಾದ್ರಿಚೌಕ ಹತ್ತಿರ ಜೆ.ಆರ್. ನಗರ ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ ೧೪೫೦/- ರೂ ಸಿಕ್ಕಿದ್ದು ೮) ಸಂಗಮೇಶ ತಂದೆ ಚೆನ್ನಪ್ಪ ದಂಡೋತಿ ವಯ||೩೯ ವರ್ಷ ಉ||ಅಟೋಚಾಲಕ ಜಾ||ಲಿಂಗಾಯತ ಸಾ||ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ ೫೫೦/- ರೂ ಸಿಕ್ಕಿದ್ದು , ಸದರಿ ಸ್ಥಳದಲ್ಲಿ ೫೨ ಇಸ್ಪೇಟ್ ಎಲೆಗಳು ಹಾಗೂ ನಗದು ಹಣ ೧೮೦೦/- ರೂ ಸಿಕ್ಕಿದ್ದು, ಹೀಗೆ ಒಟ್ಟು ನಗದು ೧೦,೩೬೦/- ರೂ ಸಿಕ್ಕಿದ್ದು, ಇವುಗಳನ್ನು ಪಂಚರ ಸಮಕ್ಷಮದಲ್ಲಿ ೪:೪೦ ಪಿಎಮ್ ಗಂಟೆಯಿಂದ ೫:೪೦ ಪಿಎಮ್ ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಮುದ್ದೆಮಾಲು ಮತ್ತು ಆರೋಪಿತರೊಂದಿಗೆ ೬:೧೫ ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರೂಗಿಸಲು ಕೋರಲಾಗಿದೆ ಅಂತ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 06-10-2022 12:35 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080