ಅಭಿಪ್ರಾಯ / ಸಲಹೆಗಳು

      ಅಶೋಕ  ನಗರ ಪೊಲೀಸ್ ಠಾಣೆ:-  ಇಂದು ದಿನಾಂಕ:೧೮.೦೯.೨೦೨೧ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಫರ‍್ಯಾದಿ ಶ್ರೀ ಬೈಲಪ್ಪ ತಂದೆ ಸದಾನಂದ ಕೋಬಾಳಕರ್  ವಯ: ೪೧ ರ‍್ಷ  ಜ್ಯಾತಿ|| ಎಸ್.ಸಿ.(ಹೊಲೇಯ) ಉ|| ಖಾಸಗಿ ಶಾಲೆಯ ಶಿಕ್ಷಕ ಸಾ|| ವಾಡಿ (ಜಂಕ್ಷನ) ಹಾ|| ವ|| ಮೌನೇಶ್ವರ ಕಾಲೋನಿ ಉದನೂರ ರೋಡ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ  ಲಿಖಿತ ದೂರು ರ‍್ಜಿಯ ಸಾರಾಂಶವೆನೆಂದರೆ, ನಮ್ಮ ಸ್ವಂತ ಊರು ವಾಡಿ ಪಟ್ಟಣವಿದ್ದು, ಕಲಬುರಗಿ ನಗರದ ಉದನೂರ ರೋಡಿಗೆ ಇರುವ ಮೌನೇಶ್ವರ ಕಾಲನಿಯಲ್ಲಿ ನಮ್ಮ ಅತ್ತೆಯ ಮನೆಯಿದ್ದು ನಾನು ಖಾಸಗಿ ಶಾಲೆಯ ಶಿಕ್ಷಕ ಅಂತ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮ ಅತ್ತೆಯ ಮನೆಯಲ್ಲಿಯೆ ವಾಸವಾಗಿರುತ್ತೇನೆ. ನನ್ನ ಹೆಂಡತಿಯಾದ ಇಂದುಬಾಯಿ ಇವರು ಚಿಟಗುಪ್ಪಾ ಸರಕಾರಿ ಡಿಗ್ರಿ ಕಾಲೇಜದಲ್ಲಿ ಟೈಪಿಸ್ಟ ಅಂತಾ ಕೆಲಸ ಮಾಡಿಕೊಂಡಿದ್ದು  ಕಲಬುರಗಿ ನಗರದಿಂದ ದಿನಾಲು ಹೋಗಿ ಬಂದು ಮಾಡುತ್ತಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:೧೭.೦೯.೨೦೨೧ ರಂದು ಎಂದಿನಂತೆ ರಾತ್ರಿ ೧೦:೦೦ ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಇಂದುಬಾಯ ಮತ್ತು ನಮ್ಮ ಎರಡು ಜನ ಚಿಕ್ಕ ಮಕ್ಕಳೊಂದಿಗೆ ಊಟಮಾಡಿ ಒಂದು ಬೆಡರೂಮನಲ್ಲಿ ಮಲಗಿಕೊಂಡಿದ್ದು ಮತ್ತೊಂದು ಬೆಡರೂಮಿನಲ್ಲಿ ನಮ್ಮ ಅತ್ತೆಯಾದ ಗುಂಡಮ್ಮ ಇವರು ಮಲಗಿಕೊಂಡಿದ್ದು ಇರುತ್ತದೆ. ನಾನು ಬೆಳಗಿನ ಜಾವ ೦೨:೩೦ ಗಂಟೆ ಸುಮಾರಿಗೆ ನೈರ‍್ಗಿಕ ಕರೆಗೆ ಎದ್ದಾಗ ಬಾಗಿಲು ತೆರೆದಿದ್ದು, ಅಷ್ಟರಲ್ಲಿ ಒಬ್ಬ ವ್ಯಕ್ತಿ ಮನೆಯ ಒಳಗಿನಿಂದ ಓಡಿ ಹೋಗಿದ್ದು, ನಂತರ ನಾನು ಗಾಬರಿಯಾಗಿ ನನ್ನ ಹೆಂಡತಿ ಮತ್ತು ನಮ್ಮ ಅತ್ತೆಗೆ ಎಬ್ಬಿಸಿ ಬೆಡರೂಮಿನಲ್ಲಿದ್ದ ಆಲಮಾರಿಯ ಹತ್ತಿರ ಬಂದು ನೋಡಲಾಗಿ ಆಲಮಾರಿಯ ಬಾಗೀಲು ತೆರೆದಿದ್ದು ಅದರಲ್ಲಿಯ ಎಲ್ಲಾ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಒಳಗಿನ ಲಾಕರದಲ್ಲಿದ್ದ ಇಟ್ಟಿದ್ದ ನಗದು ಹಣ ೧೫,೦೦೦/-ರೂಪಾಯಿ ಮತ್ತು ಸುಮಾರು ರ‍್ಷಗಳ ಹಿಂದೆ ಖರೀದಿಸಿದ್ದ ಬಂಗಾರದ ವಸ್ತುಗಳಾದ ೧) ೨೦ ಗ್ರಾಂನ ಒಂದು ತಾಳಿ ಸರ ಆಗಿನ ಅ.ಕಿ.೫೦,೦೦೦/-ರೂ  ೨) ೧೦ ಗ್ರಾಂನ ಒಂದು ಸುತ್ತುಂಗುರ ಆಗಿನ ಅ.ಕಿ. ೨೫,೦೦೦/-ರೂ ೩) ೧೦ ಗ್ರಾಂನ ಒಂದು ನೆಕಲೆಸ್  ಆಗಿನ ಅ|| ಕಿ|| ೨೫,೦೦೦/-ರೂ. ೪) ೫ ಗ್ರಾಂನ ಒಂದು ಸುತ್ತುಂಗುರ ಆಗಿನ ಅ.ಕಿ. ೧೩,೦೦೦/-ರೂ ಹೀಗೆ ನಗದು ಹಣ ಮತ್ತು ಬಂಗಾರದ ಸಾಮಾನುಗಳು ಎಲ್ಲಾ ಸೇರಿ ಒಟ್ಟು ೧,೨೮,೦೦೦/- ರೂ ಕಿಮ್ಮತ್ತಿನ  ಸಾಮಾನುಗಳು ಯಾರೊಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ:೧೮.೦೯.೨೦೨೧ ರ ಬೆಳಗಿನ ಜಾವ ೦೨:೩೦ ಗಂಟೆ ಅವಧಿಯಲ್ಲಿ ನಮ್ಮ ಮನೆಯಲ್ಲಿಯ ಸಾಮಾನುಗಳು ಕಳ್ಳತನ  ಮಾಡಿದ ಕಳ್ಳರನ್ನು  ಪತ್ತೆ  ಮಾಡಿ  ಅವರ ವಿರುದ್ಧ  ಕಾನೂನು  ರೀತಿ  ಕ್ರಮ ಜರುಗಿಸಿ ನಮ್ಮ  ವಸ್ತುಗಳನ್ನು ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿದ್ದ ರ‍್ಜಿ ಸಾರಾಂಶದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಮಹಿಳಾ ಪೊಲೀಸ್ ಠಾಣೆ:-  ಇಂದು ದಿನಾಂಕ ೧೮.೦೯.೨೦೨೧ ರಂದು ರಾತ್ರಿ ೯ ಗಂಟೆಗೆ ಫರ‍್ಯಾದಿ ಶ್ರೀಮತಿ ದೀಪಿಕಾ ಗಂಡ ಧರ್ಮೇಂದ್ರ ಸೊಂತ ವಯಾ|| ೨೫ ವರ್ಷ ಜಾ|| ಸಮಗಾರ ಉ|| ಗೃಹಿಣಿ ಸಾ|| ಉಪ್ಪಾರಪಲ್ಲಿ ಹೈದ್ರಾಬಾದ್ ಹಾ.ವ. ಶಕ್ತಿನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ,  ಧರ್ಮೇಂದ್ರ ತಂದೆ ರಾಮಚಂದ್ರ ಸೊಂತ ಸಾ|| ಉಪ್ಪಾರಪಲ್ಲಿ ಹೈದ್ರಾಬಾದ್ ಇವರೊಂದಿಗೆ ದಿನಾಂಕ ೨೨.೦೫.೨೦೧೫ ರಂದು ನಮ್ಮ ಸಂಪ್ರದಾಯದAತೆ ನನ್ನ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ ನನ್ನ ಗಂಡ ಮತ್ತು ಅತ್ತೆ ಇವರ ಬೇಡಿಕೆಯಂತೆ ೬ ತೊಲೆ ಬಂಗಾರ ಮತ್ತು ೪ ಲಕ್ಷ ರೂಪಾಯಿ ನಗದು ಹಣ, ಹಾಗೂ ೨ ಲಕ್ಷ ರೂಪಾಯಿ ಮೊತ್ತದ ಗೃಹ ಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಗಿಂತ ಮುಂಚೆ ದಿನಾಂಕ ೧೭.೧೨.೨೦೧೪ ರಂದು ನಮ್ಮ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನನ್ನ ತಾಯಿಯವರು ೧.೫ ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ಮದುವೆಯಾದ ನಂತರ ನನಗೆ ಗಂಡನ ಮನೆಯಲ್ಲಿ ೨ ತಿಂಗಳವರೆಗೆ ಸರಿಯಾಗಿ ಇಟ್ಟುಕೊಂಡಿದ್ದರು. ನಂತರ ೨೪.೦೭.೨೦೧೫ ರಂದು ನನ್ನ ಗಂಡ ಧರ್ಮೇಂದ್ರ, ಅತ್ತೆ ಸುಮಿತ್ರಾದೇವಿ ಮತ್ತು ನಾದಿನಿ ಜಯಶ್ರೀ ಇವರು ಕೂಡಿಕೊಂಡು ಮದುವೆಯಲ್ಲಿ ನಿನ್ನ ತಾಯಿಯವರು ಕಡಿಮೆ ವರದಕ್ಷಿಣೆ ಕೊಟ್ಟಿರುತ್ತಾರೆ. ಇನ್ನು ಹೆಚ್ಚಿನ ವರದಕ್ಷಿಣೆ, ಅಂದರೆ ಇನ್ನು ೨೫ ಲಕ್ಷ ರೂಪಾಯಿ ಹಣ ತರಬೇಕು ಅಂತಾ ನನಗೆ ದಿನಾಲೂ ಕಿರುಕುಳ ನಿಡಿ ಹೊಡೆಬಡೆ ಮಾಡುತ್ತಾ ಬರುತ್ತಿದ್ದರಿಂದ  ಕೆಲವು ದಿವಸಗಳ ಅಂದರೆ ಮದುವೆಯಾದ ೨ ತಿಂಗಳ ನಂತರ ದಿನಾಂಕ ೨೪.೦೭.೨೦೧೫ ರಂದು ರಾತ್ರಿ ೯-೩೦ ನನ್ನ ಗಂಡ ನನಗೆ ಬಿ.ಎಡ್ ಪರೀಕ್ಷೆ ಸಲುವಾಗಿ ನನಗೆ ಕಲಬುರಗಿಗೆ ಕರೆದುಕೊಂಡು ಬಂದು ಬಿಟ್ಟು ಹೋಗಿರುತ್ತಾರೆ. ಆಗ ನಾನು ಅವರಿಗೆ ಮತ್ತೆ ಯಾವಾಗ ಕರೆದುಕೊಂಡು ಹೋಗುತ್ತೀರಿ ಅಂತಾ ಕೇಳಿದಾಗ ಅವರು ನೀನು ಹಣ ಬಂಗಾರ ಮತ್ತು ಪ್ಲಾಟ್ ಖರೀದಿಗೆ ಹಣ  ತಂದರೆ ಮಾತ್ರ ನಾನು ನಿನಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ. ದಿನಾಂಕ ೨೨.೦೩.೨೦೧೬ ರಂದು ನನ್ನ ಹೆರಿಗೆ ಯಾಗಿ, ಗಂಡು ಮಗು ಆಗಿರುತ್ತದೆ. ಈ ವಿಷಯ ನನ್ನ ಗಂಡನಿಗೆ ಫೋನ್ ಮಾಡಿ ತಿಳಿಸಿದಾಗ ನನ್ನ ಗಂಡ ನನಗೆ ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ನೀನು ನಮ್ಮ ಮನೆಗೆ ಬರಬೇಡ, ನಿನ್ನ ತವರು ಮನೆಯಲ್ಲಿಯೆ ಇರು, ನಮ್ಮ ಮನೆಗೆ ಬಂದರೆ ನಿನಗೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ ಅಂತಾ ಬೆದರಿಕೆ ಹಾಕಿರುತ್ತಾನೆ. ದಿನಾಂಕ ೧೭.೦೨.೨೦೨೧ ರಂದು ಮಧ್ಯಾಹ್ನ ೧ ನನ್ನ ಗಂಡ ಇಲ್ಲಿ ನನ್ನ ತವರು ಮನೆ ಕಲಬುರಗಿಗೆ ಬಂದು ನನ್ನ ಜೊತೆ ಜಗಳ ತೆಗೆದು ನಾವು ಹೇಳಿದ ಮಾತು ನೀನು ಕೇಳದೆ, ತವರು ಮನೆಯಿಂದ ಹಣ ತರದೇ ಇಲ್ಲಿಯೆ ಕುಳಿತಿದ್ದೀ, ಚಿನಾಲ್ ಅಂತಾ ಬೈದು ಕೈಯಿಂದ ಬೆನ್ನಿನ ಮೇಲೆ ಹೊಡೆಬಡೆ ಮಾಡುತ್ತಿರುವಾಗ ನನ್ನ ತಾಯಿ ಮತ್ತು ಅಣ್ಣ ಇವರು ಬಿಡಿಸಿದರು. ಕಾರಣ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಾ ಬಂದಿರುವ ನನ್ನ ಗಂಡ ಅತ್ತೆ ನಾದಿನಿ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

ಇತ್ತೀಚಿನ ನವೀಕರಣ​ : 22-09-2021 02:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080