ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ಠಾಣೆ -2 :- ದಿನಾಂಕ 16/08/2022 ರಂದು ನಮ್ಮೂರಿನ ಲಕ್ಷ್ಮಣ ಪರಸ್ತಿ @ ಇಟಗಿ ಇವರು ಮೃತರಾಗಿರುವುದರಿಂದ ಇವರ ಅಂತ್ಯ ಸಂಸ್ಕಾರಕ್ಕಾಗಿ ಪಟ್ಟಣ ಟೋಲನಾಕಾದ ಹತ್ತೀರ ಇರುವ ಇವರ ಹೊಲಕ್ಕೆ ಹೋಗಿ ಅಂತ್ಯ ಸಂಸ್ಕಾರ ಮಾಡಿ ಊರಿಗೆ ಬರುವಾಗ ನಮ್ಮೂರಿನ ರವಿ ತಂದೆ ಈರಣ್ಣ ಕಂಟಿಕರ ಇವರು ತಮ್ಮ ಮೋಟರ ಸೈಕಲ ನಂ. ಕೆಎ 32 .ಟಿ 4487 ಇದರ ಮೇಲೆ ಬಂದಿದ್ದು, ಊರಿಗೆ ನಡೆದಿರುವುದರಿಂದ ಮೋಟರ ಸೈಕಲ ಮೇಲೆ ಕುಳಿತುಕೊಂಡು ಹೋಗುವಾಗ ಮಧ್ಯಾಹ್ನ 2:30 ಗಂಟೆ ಆಗಿರಬಹುದು ಪಟ್ಟಣ ಕ್ರಾಸದಿಂದ ಪಟ್ಟಣ ರೋಡಿನ ಬ್ರಿಡ್ಜಿನ ಮುಂದೆ ಧುಳಗೊಂಡ ರವರ ಹೊಲದ ಹತ್ತೀರ ಹೋಗುವಾಗ ಪಟ್ಟಣ ಗ್ರಾಮದ ಕಡೆಯಿಂದ ಟಂಟಂ ವಾಹನ ನಂ. ಕೆಎ 29 7309 ಇದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ನಮ್ಮ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಇದರಿಂದ ನಾವು ಮೋಟರ ಸೈಕಲ ಸಮೇತವಾಗಿ ಹಾರಿ ಬಿದ್ದಾಗ ಇದರಿಂದ ನನ್ನ ಬಲಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ & ಗುಪ್ತಗಾಯ, ಬಲಗಾಲಿನ ಮೊಳಕಾಲಿಗೆ ತರಚಿದಗಾಯ ಆಗಿದ್ದು, ರವಿ ಈತನಿಗೆ ತಲೆಗೆ ರಕ್ತಗಾಯ, ಬಲಭುಜಕ್ಕೆ ಭಾರಿ ಗುಪ್ತಗಾಯ ಹಾಗು ಬಲಗಾಲಿನ ಮೊಳಕಿಗೆ ಮತ್ತು ಅಲ್ಲಲ್ಲಿ ತರಚಿದಗಾಯವಾಗಿದ್ದು, ಟಂಟಂ ವಾಹನದ ಚಾಲಕನು ಅಪಘಾತದ ನಂತರ ಟಂಟಂ ವಾಹನ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ನಾನು ಡಾ|| ಆರ್.ಆರ್ ಶಹಾ ಆಸ್ಪತ್ರೆಯಲ್ಲಿ ಮತ್ತು ರವಿ ಈತನು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿರುತ್ತೆವೆ. ಈಗ ನಾವು ವಿಚಾರಣೆ ಮಾಡಿಕೊಂಡಿದ್ದು, ಟಂಟಂ ವಾಹನದ ಚಾಲಕನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ  ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್ಠಾಣೆ -2 :-  ದಿನಾಂಕ 18/08/2022 ರಂದು 10:15 .ಎಮ್ ಕ್ಕೆ ಶ್ರೀ.ಸುಭಾಷ .ಎಸ್. ಸಂಚಾರಿ ಪೊಲೀಸ್ ಠಾಣೆ-2 ಕಲಬುರಗಿ    ಇವರು ಠಾಣೆಗೆ ಹಾಜರಾಗಿ ಒಂದು ವರದಿ ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 17/08/2022 ರಂದು ಮದ್ಯಾಹ್ನ 2:00 ಗಂಟೆಯಿಂದ ರಾತ್ರಿ 8:00 ಗಂಟೆ ವರೆಗೆ ಹೈವೆ-2 ವಾಹನ ನಂ.ಕೆಎ 32 ಜಿ 715 ನೇದ್ದರ ಮೇಲೆ ಹೈವೆ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ ವಾಹನವನ್ನು ಅರುಣಕುಮಾರ .ಹೆಚ್.ಸಿ-59 ಇವರು ಡ್ರೈವರ ಇದ್ದು & ಪುಂಡಲೀಕ ಸಿಪಿಸಿ 22 ಇವರೊಂದಿಗೆ ಕರ್ತವ್ಯದ ಮೇಲೆ ಇದ್ದು, ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಏರಪೊರ್ಟ ಸಮೀಪ ಹೋಗುತ್ತಿರುವಾಗ ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಸೇಡಂ ರೋಡಿನ ದಾರು ನಾಯಕ ತಾಂಡಾ ಕ್ರಾಸಿನ ಸಮೀಪ ಸಣ್ಣ ಬ್ರಿಡ್ಜಿನ ಹತ್ತೀರ ಒಂದು ಕಾರು ರೊಡಿನ ಎಡಬದಿಯ ತಗ್ಗಿನಲ್ಲಿ ಹೋಗಿ ಗೀಡಕ್ಕೆ ಅಪ್ಪಳಿಸಿಕೊಂಡು ಬಿದ್ದಿರುವ ಬಗ್ಗೆ ಮಾಹಿತಿ ಗೊತ್ತಾಗಿ ಕೂಡಲೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಕಾರಿನಲ್ಲಿ ಮೂರು ಜನರು ಸಿಕ್ಕಿಕೊಂಡು ಬಂದಿದ್ದಿದ್ದು, ನಾವು ಮತ್ತು ಯಾವುದೊ ಖಾಸಗಿ ಅಂಬುಲೇನ್ಸದ ಸಿಬ್ಬಂದಿ ಜನರು ಇವರನ್ನು ಕಾರಿನಿಂದ ಹೊರತೆಗೆದು ವಿಚಾರಿಸಲು ಇವರಲ್ಲಿ ಅಬುಬಕರ ತಂದೆ ಸೈಯದ ಫಾರುಕ ಈತನು ಹಿಂದಿನಲ್ಲಿರುವ ಬಗ್ಗೆ ತಿಳಿಸಿ ಕಾರನ್ನು ಮಹಮ್ಮದ ಫಾಹದ ತಂದೆ ಮಹಮ್ಮದ ಯಾಸೀನ ಈತನು ನಡೆಸುತ್ತಿದ್ದು, ಆತನ ಪಕ್ಕಕ್ಕೆ ತಂಜೀಲ ತಂದೆ ಶಕೀಲ ಅಹ್ಮದ ಈತನು ಕುಳತಿದ್ದು, ಕಲಬುರಗಿಯಿಂದ ಮೂವರು ಕೂಡಿಕೊಂಡು ಸೇಡಂ ರೋಡಿನ ಏರಪೋರ್ಟ ರೋಡಿನ ಕಡೆಗೆ ಸುಮ್ಮನೆ ಕಾರ ನಂ. ಎಮ್.ಹೆಚ್ 01 ಪಿ. 9003 ನೇದ್ದನ್ನು ಮಹಮ್ಮದ ಫಾಹದ ಈತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬರುವಾಗ ಈಗ ಮಧ್ಯಾಹ್ನ 2:25 ಗಂಟೆ ಸುಮಾರಿಗೆ ಅತಿವೇಗದಲ್ಲಿರುವ ಕಾರಿನ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಎಡಭಾಗದ ತಗ್ಗಿನಿಂದ ಬಂದು ಬಬಲಿ ಗಿಡಕ್ಕೆ ಡಿಕ್ಕಿ ಹೊಡೆದಿದ್ದು, ಕಾರ ನಡೆಸುವನಿಗೆ ತಲೆಗೆ ಭಾರಿಗಾಯ ಮತ್ತು ಗುಪ್ತಗಾಯವಾಗಿದ್ದು, ಸೈಡಿಗೆ ಕುಳಿತ ತಂಜೀಲ ಈತನಿಗೆ ಎಡ ಕಾಲಿಗೆ ಭಾರಿಗಾಯ & ಟೊಂಕಕ್ಕೆ ಗುಪ್ತಗಾಯವಾಗಿದ್ದು, ಅಬುಬಕರನಿಗೆ ತಲೆಯ ಭಾಗಕ್ಕೆ ಮತ್ತು ಮುಖಕ್ಕೆ ತರಚಿದಗಾಯವಾಗಿದ್ದು, ಅಂಬುಲೇನ್ಸದಲ್ಲಿ ಉಪಚಾರ ಕುರಿತು ಕಲಬುರಗಿ ಕಡೆಗೆ ಬಂದಿದ್ದು, ವಿಚಾರಣೆಯಲ್ಲಿ ಕಾರ ಚಾಲಕ ಮಹಮ್ಮದ ಫಾದ ಈತನು ಯುನೈಟೆಡ ಆಸ್ಪತ್ರೆ, ತಂಜೀಲ ಈತನಿಗೆ ಕಾಮರೆಡ್ಡಿ ಆಸ್ಪತ್ರೆ & ಅಬುಬಕರ ಈತನು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿರುವುದಾಗಿ ಗೊತ್ತಾಗಿರುತ್ತದೆ. ವಿಷಯದಲ್ಲಿ ಯಾರು ಫಿರ್ಯಾದಿ ನೀಡಿರುವುದಿಲ್ಲಾವೆಂದು ಮಾಹಿತಿ ಗೊತ್ತಾಗಿ ನಾನೆ ಸರಕಾರಿ ತರ್ಪೆಯಾಗಿ ಫಿರ್ಯಾದಿಯನ್ನು ಸಲ್ಲಿಸುತ್ತಿದ್ದು, ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ವರದಿ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್ಠಾಣೆ :- ಫಿರ್ಯಾದಿ ತನ್ನ ಮೋಟರ್ ಸೈಕಲ್ ನಂ ಕೆಎ ೩೨ ಇಕೆ ೯೬೫೬ .ಕಿ ೩೦೦೦೦/- ನೇದ್ದು ದಿನಾಂಕ: ೦೫/೦೮/೨೦೨೨ ರಂದು ಸಾಯಂಕಾಲ -೦೦ ಗಂಟೆ ಸುಮಾರಿಗೆ ನಿಲ್ಲಿಸಿದ್ದು ಮರುದಿವಸ ಬೆಳಿಗ್ಗೆ ನೋಡಲಾಗಿ ಸದರಿ ಮೋಟರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್ಠಾಣೆ :- ದಿನಾಂಕ 17-08-2022  ರಂದು ರಾತ್ರಿ ೧೧.೩೦ ಗಂಟೆಗೆಯಿA ದಿನಾಂಕ ೧೮-೦೮-೨೦೨೨ ರಂದು .೩೦ ಗಂಟೆಯ ಮಧ್ಯದ ಅವಧಿಯಲ್ಲಿ ಪರ್ಯದಿಯ ಮನೆಯಲ್ಲಿಟ್ಟಿದ್ದ ಬೆಳ್ಳಿ ಸಾಮಾನುಗಳಾದ ಮೂರು ಬೆಳ್ಳಿ ತೆಂಬಗಿ, ಆರು ಬೆಳ್ಳಿ ವಟಗಾ, ನಾಲ್ಕು  ಬೆಳ್ಳಿ ಬಟಲ್, ಮೂರು ಕುಂಕಮ ಡೆಬಿ, ಒಂದು ಪನ್ನಿರದಾನಿಒಂದು ಅತ್ತರ 

  ದಾನಿ ಇತರೆ ಬೆಳ್ಳಿ ಸಾಮನುಗಳು ಅಂದಾಜು ಕೆಜಿ .ಕಿ ,೨೦,೦೦೦/-ರೂ

) ಬಂಗಾರದ ಎರಡು ಎಳೆ ಚೈನ್ ೨೦ ಗ್ರಾಂ .ಕಿ ೯೫,೦೦೦/-

) ಬಂಗಾರ ಉಂಗುರ ತಲಾ ಗ್ರಾಂ ಒಟ್ಟು ೧೫ ಗ್ರಾಂ ೭೦,೦೦೦/-ರೂ,

) ಬಂಗಾರದ ನಾನ ಚೈನ್ ೧೫ ಗ್ರಾಂ .ಕಿ ೭೦,೦೦೦/-ರೂ,

) ಬಂಗಾರದ ಬಿಲವಾರ ಒಟ್ಟು ೩೦ ಗ್ರಾಂ ,೪೦,೦೦/-ರೂ ಹೀಗೆ ಒಟ್ಟು

   ತೋಲಿ ಬಂಗಾರದ ಆಭರಣಗಳು ಮತ್ತು

) ನಗದು ಹಣ ೨೦೦೦/-ರೂ,

) ಲಾವಾ ಕಂಪನಿ ತಲಾ ೫೦೦/-ರೂ ಒಟ್ಟು ಒಂದು ೧೦೦೦/-ರೂ,

) ಒಂದು ಓಪೋ ಕಂಪನಿ ಮೊಬೈಲ .ಕಿ ೧೦,೦೦೦/-ರೂ  ನೆದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 02-09-2022 04:25 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080