ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :-  ದಿನಾಂಕ 18-05-2022  ರಂದು ರಾತ್ರಿ ೯:೦೦ ಗಂಟೆಗೆ ಶ್ರೀ. ನಾಗೇಶ ತಂದೆ ರೇವಣಸಿದ್ದಪ್ಪಾ ಪೊಲೀಸ್ ಪಾಟೀಲ ವಯಃ ೪೧ ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ವೆಂಕಟಬೆನೂರ ತಾ.ಜಿಃ  ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ದಿನಾಂಕ ೨೨/೦೪/೨೦೨೨ ರಂದು ನನ್ನ ತಾಯಿ ಶಂಕ್ರಾಬಾಯಿ ವಯಃ ೬೨ ವರ್ಷ ಇವರು ಅಟೋ ನಂ. ಕೆಎ ೩೨ ಬಿ ೪೭೬೦ ನೇದ್ದರಲ್ಲಿ ಖಾಜಾಕೊಟನೂರ ರೋಡಿನ ಶರಣು ಸರಡಗಿ ರವರ ಹೊಲದ ಹತ್ತೀರ ಅಪಘಾತಗೊಂಡು ಅದರಲ್ಲಿ ಭಾರಿಗಾಯಗೊಂಡು ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ವಿಷಯದಲ್ಲಿ ದಿನಾಂಕ ೨೩/೦೪/೨೦೨೨ ರಂದು ತಮ್ಮ ಪೊಲೀಸ್ ಠಾಣೆಯಲ್ಲಿ ಒಂದು ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಮೇಲಿಂದ ಪ್ರಕರಣ ನಂ. ೯೦/೨೦೨೨ ಕಲಂ ೨೭೯, ೩೩೮ ಐಪಿಸಿ ಸಂ. ೧೮೭ ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈಗ ಮುಂದುವರೆದು ತಮ್ಮಲ್ಲಿ ನಿಖರವಾದ ಹೇಳಿಕೆ ನೀಡುವುದೆನೆಂದರೆ, ದಿನಾಂಕ ೨೨/೦೪/೨೦೨೨ ರಂದು ನನ್ನ ತಾಯಿ ಶಂಕ್ರಾಬಾಯಿ ಇವಳು ನನ್ನ ತಂಗಿ ಶೀಲ್ಪಾ ಗಂಡ ಸಿದ್ದಪ್ಪಾ ಕಟ್ಟೊಳ್ಳಿ ಇವರ ಊರಾದ ಖಾಜಾಕೊಟನೂರಿಗೆ ಹೋಗುವುದಕ್ಕಾಗಿ ಕಲಬುರಗಿ ಹಾಗರಗಾ ರೋಡದ ಹತ್ತೀರ ಅಟೋ ನಂ. ಕೆಎ ೩೨ ಬಿ ೪೭೬೦ ನೇದ್ದರಲ್ಲಿ ಹೋಗುವಾಗ ಅದರ ಚಾಲಕನು ಅಟೋವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಾ ಖಾಜಾಕೊಟನೂರಿನ ಶರಣ ಸರಡಗಿ ಇವರ ಹೊಲದ ಹತ್ತೀರ ಹೋಗುತ್ತಿರುವಾಗ ಅಟೋದ ಚಾಲಕನು ಒಮ್ಮೇಲೆ ನಿರ್ಲಕ್ಷತನದಿಂದ ಅಟೋ ಕಟ್ ಹೊಡೆದಿದ್ದರಿಂದ ನಮ್ಮ ತಾಯಿ ಶಂಕ್ರಾಬಾಯಿ ಇವಳು ಅದರ ರಭಕ್ಕೆ ಅಟೋದಿಂದ ಕೆಳಗೆ ಹಾರಿ ರೋಡಿಗೆ ಬಿದ್ದಿದ್ದರಿಂದ ಅದರಿಂದ ಅವಳ ತಲೆಯ ಭಾಗಕ್ಕೆ ಭಾರಿಗುಪ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬಂದಿದ್ದು ಅಲ್ಲದೆ ಕೈ ಕಾಲುಗಳಿಗೆ ತರಚಿದಗಾಯವಾಗಿದ್ದು, ಘಟನೆಯನ್ನು ರೋಡಿನಿಂದ ಹೋಗುತ್ತಿರುವ ರಮೇಶ ತಂದೆ ಸಿದ್ದಪ್ಪಾ ತಳವಾರ ಹಾಗು ಜಮೀರ ತಂದೆ ರಜಾಕ ಶಹಾಬಾದಿ ಇವರು ನೋಡಿ ಸಹಾಯ ಮಾಡಿ ಮಾಹಿತಿಯನ್ನು ನೀಡಿದಾಗ ನಾನು ಕೂಡಲೆ ಸ್ಧಳಕ್ಕೆ ಬಂದು ನನ್ನ ತಾಯಿಯನ್ನು ಕಂಡು ಇದೆ ಅಟೋದಲ್ಲಿ ಹಾಕಿಕೊಂಡು ಅವಳಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ತಾಯಿ ಉಪಚಾರ ಪಡೆಯುವ ಕಾಲಕ್ಕೆ ಗಂಭೀರ ಪರಸ್ಧಿತಿಯಲ್ಲಿ ಇದ್ದು, ಮುಂದೆ ಈ ತಿಂಗಳು ದಿನಾಂಕ ೧೦/೦೫/೨೦೨೨ ರಂದು ವೈದ್ಯರು ತಾಯಿಯ ಪರಸ್ಧಿತಿ ಬಹಳಷ್ಟು ಗಂಭೀರವಾಗಿದ್ದು, ಮುಂದಿನ ವಿಚಾರ ಮಾಡುವಂತೆ ತಿಳಿಸಿದಾಗ ನಾನು ನನ್ನ ತಂದೆಯವರಿಗೆ ವಿಚಾರ ಮಾಡಿಕೊಂಡು ನಮ್ಮ ತಾಯಿಯನ್ನು ಮರಳಿ ನಮ್ಮೂರಿಗೆ ಕರೆದುಕೊಂಡು ಮನೆಯಲ್ಲಿ ಹಾಕಿ ಖಾಸಗಿ ಉಪಚಾರ ಮಾಡಿಕೊಂಡು ಬರುತ್ತಿದ್ದೆವು. ಇಂದು ದಿನಾಂಕ ೧೮/೦೫/೨೦೨೨ ರಂದು ಸಾಯಂಕಾಲ ೫:೪೫ ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ಆದ ಗಾಯದ ಬಾಧೆಯು ಗುಣಮುಖವಾಗದೆ ಮೃತ ಪಟ್ಟಿರುತ್ತಾಳೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-05-2022 04:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080