Feedback / Suggestions

ಸಂಚಾರಿ ಪೊಲೀಸ್ ಠಾಣೆ-೨ :-  ದಿನಾಂಕ 18-05-2022  ರಂದು ರಾತ್ರಿ ೯:೦೦ ಗಂಟೆಗೆ ಶ್ರೀ. ನಾಗೇಶ ತಂದೆ ರೇವಣಸಿದ್ದಪ್ಪಾ ಪೊಲೀಸ್ ಪಾಟೀಲ ವಯಃ ೪೧ ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ವೆಂಕಟಬೆನೂರ ತಾ.ಜಿಃ  ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ದಿನಾಂಕ ೨೨/೦೪/೨೦೨೨ ರಂದು ನನ್ನ ತಾಯಿ ಶಂಕ್ರಾಬಾಯಿ ವಯಃ ೬೨ ವರ್ಷ ಇವರು ಅಟೋ ನಂ. ಕೆಎ ೩೨ ಬಿ ೪೭೬೦ ನೇದ್ದರಲ್ಲಿ ಖಾಜಾಕೊಟನೂರ ರೋಡಿನ ಶರಣು ಸರಡಗಿ ರವರ ಹೊಲದ ಹತ್ತೀರ ಅಪಘಾತಗೊಂಡು ಅದರಲ್ಲಿ ಭಾರಿಗಾಯಗೊಂಡು ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ವಿಷಯದಲ್ಲಿ ದಿನಾಂಕ ೨೩/೦೪/೨೦೨೨ ರಂದು ತಮ್ಮ ಪೊಲೀಸ್ ಠಾಣೆಯಲ್ಲಿ ಒಂದು ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಮೇಲಿಂದ ಪ್ರಕರಣ ನಂ. ೯೦/೨೦೨೨ ಕಲಂ ೨೭೯, ೩೩೮ ಐಪಿಸಿ ಸಂ. ೧೮೭ ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈಗ ಮುಂದುವರೆದು ತಮ್ಮಲ್ಲಿ ನಿಖರವಾದ ಹೇಳಿಕೆ ನೀಡುವುದೆನೆಂದರೆ, ದಿನಾಂಕ ೨೨/೦೪/೨೦೨೨ ರಂದು ನನ್ನ ತಾಯಿ ಶಂಕ್ರಾಬಾಯಿ ಇವಳು ನನ್ನ ತಂಗಿ ಶೀಲ್ಪಾ ಗಂಡ ಸಿದ್ದಪ್ಪಾ ಕಟ್ಟೊಳ್ಳಿ ಇವರ ಊರಾದ ಖಾಜಾಕೊಟನೂರಿಗೆ ಹೋಗುವುದಕ್ಕಾಗಿ ಕಲಬುರಗಿ ಹಾಗರಗಾ ರೋಡದ ಹತ್ತೀರ ಅಟೋ ನಂ. ಕೆಎ ೩೨ ಬಿ ೪೭೬೦ ನೇದ್ದರಲ್ಲಿ ಹೋಗುವಾಗ ಅದರ ಚಾಲಕನು ಅಟೋವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಾ ಖಾಜಾಕೊಟನೂರಿನ ಶರಣ ಸರಡಗಿ ಇವರ ಹೊಲದ ಹತ್ತೀರ ಹೋಗುತ್ತಿರುವಾಗ ಅಟೋದ ಚಾಲಕನು ಒಮ್ಮೇಲೆ ನಿರ್ಲಕ್ಷತನದಿಂದ ಅಟೋ ಕಟ್ ಹೊಡೆದಿದ್ದರಿಂದ ನಮ್ಮ ತಾಯಿ ಶಂಕ್ರಾಬಾಯಿ ಇವಳು ಅದರ ರಭಕ್ಕೆ ಅಟೋದಿಂದ ಕೆಳಗೆ ಹಾರಿ ರೋಡಿಗೆ ಬಿದ್ದಿದ್ದರಿಂದ ಅದರಿಂದ ಅವಳ ತಲೆಯ ಭಾಗಕ್ಕೆ ಭಾರಿಗುಪ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬಂದಿದ್ದು ಅಲ್ಲದೆ ಕೈ ಕಾಲುಗಳಿಗೆ ತರಚಿದಗಾಯವಾಗಿದ್ದು, ಘಟನೆಯನ್ನು ರೋಡಿನಿಂದ ಹೋಗುತ್ತಿರುವ ರಮೇಶ ತಂದೆ ಸಿದ್ದಪ್ಪಾ ತಳವಾರ ಹಾಗು ಜಮೀರ ತಂದೆ ರಜಾಕ ಶಹಾಬಾದಿ ಇವರು ನೋಡಿ ಸಹಾಯ ಮಾಡಿ ಮಾಹಿತಿಯನ್ನು ನೀಡಿದಾಗ ನಾನು ಕೂಡಲೆ ಸ್ಧಳಕ್ಕೆ ಬಂದು ನನ್ನ ತಾಯಿಯನ್ನು ಕಂಡು ಇದೆ ಅಟೋದಲ್ಲಿ ಹಾಕಿಕೊಂಡು ಅವಳಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ತಾಯಿ ಉಪಚಾರ ಪಡೆಯುವ ಕಾಲಕ್ಕೆ ಗಂಭೀರ ಪರಸ್ಧಿತಿಯಲ್ಲಿ ಇದ್ದು, ಮುಂದೆ ಈ ತಿಂಗಳು ದಿನಾಂಕ ೧೦/೦೫/೨೦೨೨ ರಂದು ವೈದ್ಯರು ತಾಯಿಯ ಪರಸ್ಧಿತಿ ಬಹಳಷ್ಟು ಗಂಭೀರವಾಗಿದ್ದು, ಮುಂದಿನ ವಿಚಾರ ಮಾಡುವಂತೆ ತಿಳಿಸಿದಾಗ ನಾನು ನನ್ನ ತಂದೆಯವರಿಗೆ ವಿಚಾರ ಮಾಡಿಕೊಂಡು ನಮ್ಮ ತಾಯಿಯನ್ನು ಮರಳಿ ನಮ್ಮೂರಿಗೆ ಕರೆದುಕೊಂಡು ಮನೆಯಲ್ಲಿ ಹಾಕಿ ಖಾಸಗಿ ಉಪಚಾರ ಮಾಡಿಕೊಂಡು ಬರುತ್ತಿದ್ದೆವು. ಇಂದು ದಿನಾಂಕ ೧೮/೦೫/೨೦೨೨ ರಂದು ಸಾಯಂಕಾಲ ೫:೪೫ ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ಆದ ಗಾಯದ ಬಾಧೆಯು ಗುಣಮುಖವಾಗದೆ ಮೃತ ಪಟ್ಟಿರುತ್ತಾಳೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 24-05-2022 04:03 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080