ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್ ಠಾಣೆ :- ದಿನಾಂಕ:18-03-2022 ರಂದು ೦೮:೩೦ ಎ.ಎಂಕ್ಕೆ ಫರ‍್ಯಾದಿ ಶ್ರೀಮತಿ ವಿಜಯಲಕ್ಷ್ಮಿ ಗಂಡ ಶಂಕರಯ್ಯಾ ಗುತ್ತೆದಾರ ಸಾ|| ಅಕ್ಕಮಹಾದೇವಿ ಕಾಲೊನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ರ‍್ಜಿಯ ಸಾರಾಂಶವೆನೆಂದರೆ, ನಾನು ನನ್ನ ಗಂಡ ಅಕ್ಕಮಹಾದೇವಿ ಕಾಲೊನಿಯಲ್ಲಿ ವಾಸವಿದ್ದು ದಿನಾಂಕ:೦೯.೦೩.೨೦೨೨ ರಂದು ನನ್ನ ಗಂಡ ಹಾಗೂ ನನ್ನ ಅಳಿಯನಾದ ಆಕಾಶ @ ವಿಕ್ಕಿ ತಂದೆ ದತ್ತಾತ್ರೆಯ ಗುತ್ತೆದ್ದಾರ ಇವರ ನಡುವೆ ಜಗಳವಾಗಿದ್ದು, ರಾತ್ರಿ ೦೮:೩೦ ಗಂಟೆಗೆ ನಮ್ಮ ಅಳಿಯ ನನ್ನ ಗಂಡನಿಗೆ ಕರೆದ ಮೇರೆಗೆ ನನ್ನ ಗಂಡ ಅಕ್ಕಮಹಾದೇವಿ ನಗರದ ಕೀರಾಣಿ ಅಂಗಡಿ ಹತ್ತಿರ, ನನ್ನ ಗಂಡ ಹಾಗು ನನ್ನ ಅಳಿಯನಾದ ಆಕಾಶ ಇವರು ಜಗಳವಾಡುತ್ತಿರುವುದನ್ನು ಹಾಗೂ ನನ್ನ ಗಂಡನಿಗೆ ಆಕಾಶ ಇವನು ಬೀಯರ್ ಬಾಟಲಿಯಿಂದ ಹೊಡೆದ್ದಿರುವುದಕ್ಕೆ, ಬೆಹುಸ್ ಆಗಿ ಬಿದ್ದಿರುವುದನ್ನು ನೋಡಿರುವ ಚಂದಯ್ಯಾ ಹಾಗೂ ಬೀಮು ಇವರು ನನಗೆ ತಿಳಿಸಿದ್ದು, ನಾನು ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಗಂಡ ಕೆಳಗೆ ಬಿದ್ದಿರುವುದನ್ನು ಕಂಡು ನಾವು ಎಲ್ಲರೂ ನನ್ನ ಗಂಡನಿಗೆ ಮನೆಗೆ ಕರೆದುಕೊಂಡು ತದನಂತರ ಧನವಂತ್ರಿ ಆಸ್ಪತ್ರೆಗೆ ಹಾಗೂ ಜೀಮ್ಸ್ ಕಲಬುರಗಿಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ:೧೭.೦೩.೨೦೨೨ ರಂದು ೦೭:೦೦ ಪಿ.ಎಂಕ್ಕೆ ಮರಣ ಹೊಂದಿರುತ್ತಾರೆ. ಈ ನನ್ನ ಗಂಡನ ಸಾವಿನ ಘಟನೆಗೆ, ನನ್ನ ಮಗಳಾದ ಪೂಜಾ ಇವಳಿಗೆ ಆಕಾಶ ಕಳೆದ ಸಾಲಿನಲ್ಲಿ ಮದುವೆಯಾಗಿದ್ದು ಹೇರಿಗೆಗಾಗಿ ನಮ್ಮ ಮನೆಗೆ ಬಂದಿದ್ದು, ಹೇರಿಗೆಯಾದ ಕೇವಲ ೧೫ ದಿವಸಗಳಲ್ಲೆ ಮಗಳಿಗೆ ಕರೆದುಕೊಂಡು ಹೋಗುವುದಕ್ಕಾಗಿ ಆಗಿರುತ್ತದೆ. ಪ್ರಯುಕ್ತ ನನ್ನ ಅಳಿಯನಾದ ಆಕಾಶ @ ವಿಕ್ಕಿ ತಂದೆ ದತ್ತಾತ್ರೆಯ ಇಳಿಗೆರ ಸಾ|| ಮೊರಟಗಿ ತಾ|| ಸಿಂದಗಿ ಜಿ|| ಬಿಜಾಪೂರ, ಇವರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳಲು ವಿನಂತಿಸಿಲಾಗಿದೆ. ಹೇರಿಗೆಯಾದ ಕೇವಲ ೧೫ ದಿವಸಗಳಲ್ಲಿಯೆ, ನಮ್ಮ ಅಳಿಯ ಮಗಳಿಗೆ ಕರೆದುಕೊಂಡು ಹೋಗುತ್ತೇನೆ ಎಂದಾಗ ನನ್ನ ಗಂಡ ಸದ್ಯ ಬೇಡ ಒಂದು ತಿಂಗಳ ನಂತರ ಕರದುಕೊಂಡು ಹೋಗು ಎಂದು ಹೇಳಿದ್ದಕ್ಕಾಗಿ, ಜಗಳ ಮಾಡಿ ಬೀಯರ್ ಬಾಟಲಿಯಿಂದ, ತಲೆಗೆ ಜೋರಾಗಿ ಹೊಡಿದ್ದಿರುವುದ್ದರಿಂದ ಭಾರಿ ಗುಪ್ತ ಗಾಯವಾಗಿ ಚಿಕಿತ್ಸೆ ಫಲಿಸದೆ, ಮರಣ ಹೊಂದಿರುತ್ತಾರೆ. ಅಂತ ಇತ್ಯಾದಿ ಇದ್ದ ಫರ‍್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಚೌಕ  ಪೊಲೀಸ್ ಠಾಣೆ :-  ದಿನಾಂಕ ೧೭/೦೩/೨೦೨೨ ರಂದು ರಾತ್ರಿ -೦೦  ಗಂಟೆ ಸುಮಾರಿಗೆ ಮನೆಯ ಎದುರುಗಡೆ ಇದ್ದಾಗ ನನಗೆ ಪರಿಚಯದ ಮಿಲನ ಇತನು ನನ್ನ ಹತ್ತಿರ ಬಂದು ಕಾಮಣ್ಣಾ ಸುಡುವುದು ನೋಡಲಿಕ್ಕೆ ಹೋಗೋಣಾ ನಡಿ ಅಂತಾ ಹೇಳಿದಾಗ ಮನೆಯಿಂದ ನಾನು ಮತ್ತು ಮಿಲನ ಇಬ್ಬರು ನಮ್ಮ ಮನೆ ಹಿಂದುಗಡೆ ಇರುವ ಕಾಮ ದಹನ ಮಾಡುವ ಸ್ಥಳಕ್ಕೆ ಹೋಗಿ ತಿವಾರಿ ಮನೆಗೆ ಹತ್ತಿ ಇರುವ ಶೆಟರ ಅಂಗಡಿ ಕಟ್ಟೆಯ ಮೇಲೆ ಕುಳಿತುಕೊಂಡು ಕಾಮ ದಹನ ಸುಡುವ ಕಾರ್ಯಕ್ರಮ ನೋಡುತ್ತಾ ಇದ್ದಾಗ ರಾತ್ರಿ ೧೦-೦೦ ಗಂಟೆ ಸುಮಾರಿಗೆ ನನಗೆ ಪರಿಚಯದ ನಮ್ಮ ಮನೆ ಹಿಂದುಗಡೆ ವಾಸವಾಗಿರುವ ಮಲ್ಲಿಕಾರ್ಜುನ @ ಚಿಂಟು ರಾಕ್ಸ್  ತಂದೆ ಚಂದ್ರಕಾತ ಜಮಾದಾರ ಮತ್ತು ಅವನ ಗೆಳೆಯರಾದ ಅವಿನಾಶ ತಂದೆ ಬಾಳೇಷ ಮುದ್ರೇಕರ, ಆಕಾಶ ತಂದೆ ಪ್ರಕಾಶ ನಾಟೀಕರಆನಂದ ತಂದೆ ಶಾಮರಾವ ಬಳಿಚಕ್ರ ಇವರೆಲ್ಲರೂ ಕೂಡಿಕೊಂಡು ಬರುತ್ತಿದ್ದು, ಅವರಲ್ಲಿ ಚಿಂಟು ರಾಕ್ಸ, ಅವಿನಾಶ, ಆನಂದ ಮೂವರು ತಮ್ಮ ತಮ್ಮ ಕೈಯಲ್ಲಿ ಬಡಿಗೆಗಳು ಹಿಡಿದುಕೊಂಡು ನನ್ನ ಹತ್ತಿರ ಬಂದವರೇ ಆಕಾಶ ಇತನು ನನಗೆ ಒತ್ತಿಯಾಗಿ ಹಿಡಿದಾಗ ಮಲ್ಲಿಕಾರ್ಜುನ ಚಿಂಟು @ ರಾಕ್ಸ ಇತನು ನನಗೆ ಹೊಲೆ ಸೂಳೇ ಮಗನೇ ನಿನ್ನ ಏರಿಯಾದಲ್ಲಿ ಬೊಕ್ಕಳ ಅಗವಾ ಮಾಡುತ್ತೀ ರಂಡಿ ಮಗನೇ ಅಂತಾ ಹೊಲಸು ಬೈಯ್ಯುತ್ತಾ ಮಲ್ಲಿಕಾರ್ಜುನ @ ಚಿಂಟು ರಾಕ್ಸ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆ ಮುಂಭಾಗದ ಮೇಲೆ ಅವಿನಾಶ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆ ಹಿಂಭಾಗದಲ್ಲಿ ಹೊಡೆದನು. ಆನಂದ ಇತನು ಕೂಡಾ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡ ತಲೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿದರು.ಮತ್ತು ಮಲ್ಲಿಕಾರ್ಜುನ @ ಚಿಂಟು ರಾಕ್ಸ್, ಅವಿನಾಶ, ಆನಂದ ಮೂವರು ತಮ್ಮ ತಮ್ಮ ಕೈಯಲ್ಲಿದ್ದ ಬಡಿಗೆಗಳಿಂದ ನನ್ನ ಬೆನ್ನ ಮೇಲೆ ಸಿಕ್ಕಾಪಟ್ಟೆ ಹೊಡೆ ಬಡೆ ಮಾಡಿದರು. ಜಗಳಾ ಕಾಮಣ್ಣಾ ನೋಡಲು ಬಂದ ನಮ್ಮ ತಾಯಿ ಚಂದಮ್ಮಾ ಅತ್ತೆ ಅಂಬವ್ವಾ ಇವರುಗಳು ಜಗಳಾ ನೋಡಿ ಬಿಡಿಸಿಕೊಂಡರು. ಮತ್ತು ಘಟನೆ ಕಾಮಣ್ಣಾ ಹತ್ತಿರವಿದ್ದ  ಅವಿನಾಶ ತಂದೆ ಆಲದಿ ಬಸ್ಸು, ರಾಜು ತಿವಾರಿ, ಸುಲೋಚನಾ ಅಂಟಿ ಇವರುಗಳು ನೋಡಿರುತ್ತಾರೆ ಅವರುಗಳು ಜಗಳಾ ಬಿಡಿಸಿರುವುದಿಲ್ಲಾ. ನಂತರ ಮಲ್ಲಿಕಾರ್ಜುನ ಇತನು ನನಗೆ ಇನ್ನೊಮ್ಮೆ ಏರಿಯಾದಲ್ಲಿ ಅಗವಾ ಮಾಡಿದರೇ ಜೀವ ತೆಗೆಯುತ್ತೇನೆ ಅಂತಾ ಬೆದರಿಕೆ ಹಾಕಿ ಅಲ್ಲಿಂದ ಹೋದರು. ಘಟನೆ ಲೈಟಿನ ಬೆಳಕಿನಲ್ಲಿ ನಡೆದಿರುತ್ತದೆ. ನಾನು ಅಲ್ಲಿಂದ ಮನೆಗೆ ಹೋದಾಗ ನಾನು ಮತ್ತು ನಮ್ಮ ತಾಯಿ ಚಂದಮ್ಮಾ ತಮ್ಮ ಪ್ರಶಾಂತ ಮೂವರು  ನಮ್ಮ ಮನೆಯಿಂದ ನಡೆದುಕೊಂಡು ಮರಗಮ್ಮಾ ಗುಡಿ ಮೇನ ರೋಡಿನ ವರೆಗೆ ಬಂದು ದಾರಿಗೆ ಹೊರಟ ಯಾವುದೋ ಆಟೋದಲ್ಲಿ ಮೂವರು ಕುಳಿತುಕೊಂಡು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಕರೆದುಕೊಂಡು ಬಂದರು. ವೈದ್ಯರು ನನಗೆ ಉಪಚಾರ ಮಾಡಿ ಮನೆಗೆ ಹೋಗುವಂತೆ ತಿಳಿಸಿದ್ದರಿಂದ ಮನೆಗೆ ಬಂದು ವಿಶಾಂತ್ರಿ ಪಡೆದುಕೊಂಡು ಇಂದು ಠಾಣೆಗೆ ಬಂದಿರುತ್ತೇನೆ. ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ.ನನಗೆ ಹೊಡೆಯಲು ಕಾರಣವೆನೆಂದೆರೆ ನಿನ್ನೆ ಮಧ್ಯಾಹ್ನ -೦೦ ಗಂಟೆ ಸುಮಾರಿಗೆ ನನಗೆ ಹೊಡೆದ ಸ್ಥಳದಲ್ಲಿ ಚಿಂಟು ರಾಕ್ಸ ಸಿಕ್ಕಾಗ ಅವನಿಗೆ ಹೆಣ್ಣುಮಕ್ಕಳಿಗೆ ಚುಡಾಯಿಸಬೇಡಾ ಅಂತಾ ಹೇಳಿದ್ದಕ್ಕೆ ಅದೇ ದ್ವೇಷದಿಂದ ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ)ಮಲ್ಲಿಕಾರ್ಜುನ @ ಚಿಂಟು ರಾಕ್ಸ್  ತಂದೆ ಚಂದ್ರಕಾತ ಜಮಾದಾರ ಸಾ:ತಾಲೀಮಖಾನಿ ನೇತಾಜಿ ಚೌಕ ಕಲಬುರಗಿ )ಅವಿನಾಶ ತಂದೆ ಬಾಳೇಷ ಮುದ್ರೇಕರ ಸಾ: ಗಾಜಿಪೂರ ಕಲಬುರಗಿ )ಆಕಾಶ ತಂದೆ ಪ್ರಕಾಶ ನಾಟೀಕರ ಸಾ: ನಾಟೀಕರ ಗಲ್ಲಿ ಗಾಜಿಪೂರ ಕಲಬುರಗಿ )ಆನಂದ ತಂದೆ ಶಾಮರಾವ ಬಳಿಚಕ್ರ ಸಾ: ಜಾಂಬವೀರ ನಗರ ಗಾಜಿಪೂರ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಆಧಾರದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 06-04-2022 06:17 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080