ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- 18-02-23 ರಂದು 11:15 ಎ.ಎಮ. ಕ್ಕೆ ಢಾ: ವಿರೇಶ ತಂದೆ ಬಸವರಾಜ ಸಲಗರವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ತಂದು ಹಾಜರು ಮಾಡಿದ್ದು ಸದರಿ ಫಿರ್ಯಾದಿ ಅರ್ಜಿ ಸಾರಂಶವೇನೆಂದರೆ ನಿನ್ನೆ ದಿನಾಂಕ: 17-02-2023 ರಂದು ರಾತ್ರಿ ನಮ್ಮ ಸ್ನೇಹಿತರ ಒಂದು ಮನೆ ಕಾರ್ಯಕ್ರಮದ ಕುರಿತು  ಖೂಬಾ ಪ್ಲಾಟ ನಲ್ಲಿ ಇರುವ ನಮ್ಮ ಸ್ನೇಹಿತನ ಮನೆಗೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ನಾನು ನಮ್ಮ ಮನೆಗೆ ಹೋಗುವ ಕುರಿತು ನನ್ನ ಕಾರ ನಂ.ಕೆಎ-32 ಝಡ್-2607 ನೇದ್ದನ್ನು ಚಲಾಯಿಸಿಕೊಂಡು ಟೌನ ಹಾಲ್ ಕ್ರಾಸ ಹತ್ತೀರ ನಿಧಾನವಾಗಿ ರಸ್ತೇಯ ಬದಿಯಿಂದ ಚಲಾಯಿಸಿಕೊಂಡು ಬಲಗಡೆ ಇಂಡಿಕೇಟರ ಹಾಕಿ ಜಿಜಿಹೆಚ್ ಸರ್ಕಲ್ ಕಡೆಗೆ ಟರ್ನ ಮಾಡಿಕೊಂಡು ಹೋಗುವಾಗ ಇಂದು ದಿನಾಂಕ: 18-02-2023 ರಂದು 00:30 ಗಂಟೆಗೆ ಒಬ್ಬ ಮೋಟರ ಸೈಕಲ ಸವಾರನು ತನ್ನ ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಜಗತ ಸರ್ಕಲ್ ಕಡೆಯಿಂದ ಎಸ್.ವಿ.ಪಿ. ಸರ್ಕಲ್ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿನ ಎಡಗಡೆಯ ಹಿಂದಿನ ಡೋರಗೆ ಜೋರಾಗಿ ಡಿಕ್ಕಿಪಡಿಸಿ ಮೋಟರ ಸೈಕಲಸಮೇತ ಇಬ್ಬರು ಸವಾರರು ರಸ್ತೇಯ ಮೇಲೆ ಬಿದ್ದರು. ನಾನು ಒಮ್ಮೆಲೆ ಗಾಬರಿಗೊಂಡು ಕಾರಿನಿಂದ ಕೆಳಗೆ ಇಳಿದುನೋಡಲು ಮತ್ತು ನನ್ನ ಹಿಂದೆ ಬರುತಿದ್ದ ನನ್ನ ಸ್ನೇಹಿತರಾದ ಡಾ. ಶಿವರಾಜ ತಂದೆ ಬಸವರಾಜ ಪಾಟೀಲ ಇವರು ಸಹ ಬಂದು ನೋಡಲು ನನ್ನ ಕಾರಿನ ಹಿಂದಿನ ಡೋರ ಪೂರ್ತಿಯಾಗಿ ಡ್ಯಾಮೇಜ್ ಆಗಿದ್ದು. ನಮ್ಮ ಕಾರಿಗೆ ಡಿಕ್ಕಿಪಡಿಸಿದ ಮೋಟರ ಸೈಕಲ್ ನಂ. ಕೆಎ-32 ಇಡಬ್ಲು-7684 ಇದ್ದು ಅದರ ಚಾಲಕನಿಗೆ ಹಾಗೂ ಆತನ ಹಿಂದೆ ಕುಳಿತ ವ್ಯಕ್ತಿಗೆ ನೋಡಲು ಅವರು ಅಲ್ಲಿ ನಿಲ್ಲುವ ಹಾಗೆ ಮಾಡಿ ಅಂಬುಲೆನ್ಸ್ ವಾಹನ ಬಂದ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು ಸದರಿ ಮೋಟರ ಸೈಕಲ್ ಸವಾರನಿಗೆ ನೋಡಿದ್ದು ಆತನಿಗೆ ಮುಂದೆ ನೋಡಿದಲ್ಲಿ ಗುರುತಿಸುತ್ತೇನೆ. ಸದರಿ ಮೇಲಿನ ಮೋಟರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 18-02-2023 ರಂದು 2:10 ಪಿ.ಎಮ. ಕ್ಕೆ ಜಿ.ಜಿ.ಹೆಚ ಆಸ್ಪತ್ರೆ ಕಲಬುರಗಿಯಿಂದ ಶ್ರೀ ರೇವಣಸಿರಟಿದ್ದಪ್ಪ ತಂದೆ ಮಲ್ಲಶೇಟ್ಟಿ ಚಿನ್ಮಳ್ಳಿ, ವಯ-42 ವರ್ಷ, ಉದ್ಯೋಗ-ಪೊಲೀಸ್ ಹೆಡ್ ಕಾನ್ಸ್ ಟೇಬಲ್, ಸಾ: ಬ್ರಹ್ಮಪೂರ ಕಲಬುರಗಿ ನಗರ ರವರು ಇವರ ಅರ.ಟಿ.ಎ. ಎಮ.ಎಲ.ಸಿ. ಮಾಹಿತಿ ಬಂದ ಮೇರೆಗೆ ನಾನು ಜಿಜಿಹೆಚ ಆಸ್ಪತ್ರೆಗೆ ಬೇಟಿ ನೀಡಿ ಎಮ.ಎಲ.ಸಿ. ಪತ್ರ ವಸೂಲ ಮಾಡಿಕೊಂಡು ಗಾಯಾಳು ರೇವಣಸಿದ್ದಪ್ಪ ಇವರಿಗೆ ನೋಡಿ ವಿಚಾರಿಸಲು ಅವರು ಫರತಾಬಾದ ಪೊಲೀಸ್ ಠಾಣೆಯಲ್ಲಿ ಹೇಡ ಕಾನ್ಸಟೇಬಲ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು ಫಿರ್ಯಾದಿಯು ಫರತಾಬಾದ ಠಾಣೆಯ ಯುಡಿಅರ ನಂ 5/23 ರಲ್ಲಿ ಇನಕ್ವೇಸ್ಟಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ನಂ ಕೆಎ32/ಅರ-4081 ನೇದ್ದನ್ನು  ಜಿಜಿಹೆಚ ಸರ್ಕಲ್ ಮುಖಾಂತರ ನಿದಾನವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾ ಮರ್ಚೂರಿ ಮುಖ್ಯ ದ್ವಾರದ ಹತ್ತಿರ ಇಂದು ಬೆಳಿಗ್ಗೆ 9:45 ಗಂಟೆ ಸುಮಾರಿಗೆ ಕೆಂಪು ಬಣ್ಣದ ಕೆ.ಎ-32 ಪಾಸಿಂಗ ಉಳ್ಳ ಸುಪರ ಸ್ಪ್ಲೇಂಡರ್ ನೇದ್ದರ ಸವಾರನನ್ನು ಎಮ.ಆರ.ಎಮ.ಸಿ. ಮೇಡಿಕಲ ಕಾಲೇಜ  ಕಡೆಯಿಂದ ಜಿಜಿಹೆಚ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಎಡಗಡೆ ಭಾಗಕ್ಕೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋದ ಕೆಎ-32 ನಂಬರ  ಉಳ್ಳ ಕೆಂಪು ಬಣ್ಣದ ಸುಪರ ಸ್ಪ್ಲೇಂಡರ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 18-02-2023 ರಂದು  ಬೆಳಿಗ್ಗೆ 10:30 ಗಂಟೆಗೆ ಫಿರ್ಯಾದಿದಾರನಾದ ಶ್ರೀ ಪ್ರೇಮಕುಮಾರ ಇವರ ಖಾಸಾ ತಮ್ಮನಾಗಿರುವ ಶ್ರೀ ಶರಣಕುಮಾರ ತಂದೆ ಬಸವರಾಜ ಹಿರಣ್ಯ ರವರ ಮುಖಾಂತರ ಫಿರ್ಯಾದಿ ಅರ್ಜಿಗೆ ಸಹಿ ಮಾಡಿ ಕೊಟ್ಟು ಕಳುಹಿಸಿದ ಫಿರ್ಯಾದಿ ದೂರು ಅರ್ಜಿಯನ್ನು ಸ್ವೀಕೃತ ಮಾಡಿಕೊಂಡಿದ್ದು ಸದರಿ ಫಿರ್ಯಾದಿ ದೂರು ಅರ್ಜಿಯ ಸಾರಾಂಶ  ಈ ಕೆಳಗಿನಂತಿರುತ್ತದೆ. ನಾನು ಪ್ರೇಮಕುಮಾರ ತಂದೆ ಬಸವರಾಜ ಹಿರಣ್ಯ ವ:32 ವರ್ಷ ಉ: ಎಪಿಎಂಸಿ ನೆಹರುಗಂಜದಲ್ಲಿಯ ರತ್ನಾ ಟ್ರೇಡರ್ಸ ಅಂಗಡಿಯಲ್ಲಿ ಕಂಪ್ಯೂಟರ ಕೆಲಸ ಜಾತಿ: ಲಿಂಗಾಯತ ಸಾ: ಪ್ಲಾಟ ನಂ.40 ಸ್ವಸ್ತಿಕ ನಗರ ಸೇಡಂ ರೋಡ ಕಲಬುರಗಿ ಹಾ:ವಾ:ಎಸಎಸ ಪಾಟೀಲ ಇವರ ಮನೆಯಲ್ಲಿ ಬಾಡಿಗೆ ವಿದ್ಯಾಚೇತನ ಸ್ಕೂಲ ಹತ್ತಿರ ವಿಜಯನಗರ ಕಾಲೋನಿ ಕಲಬುರಗಿ ಮೊಬೈಲ ನಂ. 8147108853 ಇದ್ದು ಈ ಮೂಲಕ ತಮಗೆ ದೂರು ಕೊಡುವುದೆನೆಂದೆರೆ ನಾನು ರತ್ನಾ ಟ್ರೇಡರ್ಸ ಅಂಗಡಿಯಲ್ಲಿ ಕಂಪ್ಯೂಟರ ಕೆಲಸ ಮಾಡಿಕೊಂಡು ತಾಯಿ ತಮ್ಮ ಮತ್ತು ಹೆಂಡತಿಯೊಂದಿಗೆ ವಾಸವಾಗಿರುತ್ತೇನೆ. ನಾನು ದಿನಾಂಕ: 28-12-2020ನೇ ಸಾಲಿನಲ್ಲಿ ಮಹರ್ಷಿ ಸ್ಕೂಲ ಹತ್ತಿರ ವಿಶಾಲನಗರ ಕುಸನೂರ ರೋಡದ ನಿವಾಸಿಯಾಗಿರುವ ಶ್ರೀ ರಾಜಕುಮಾರ ಇವರ ಮಗಳಾದ ಸಾಧನಾ ಇವಳೊಂದಿಗೆ ಸಂಪ್ರದಾಯದಂತೆ ಗುರು ಹಿರಿಯರ ಸಮಕ್ಷಮದಲ್ಲಿ ಶಿವಮಂದಿರ ಬಸವೇಶ್ವರ ಕಾಲೋನಿಯಲ್ಲಿ ಮದುವೆ ಮಾಡಿಕೊಂಡಿರುತ್ತೇನೆ.   ನನ್ನ ಹೆಂಡತಿ ಸಾಧನಾ ಇವಳು ಮದುವೆಯಾದ ನಂತರ ನನ್ನೊಂದಿಗೆ ಸುಮಾರು 3-4 ತಿಂಗಳ ಕಾಲ ಅನುನ್ಯತೆಯಿಂದ ಇದ್ದು ನಂತರ ದಿನಗಳಲ್ಲಿ ನನ್ನ ಹೆಂಡತಿ ಸಾಧನಾ ಇವಳು ನನ್ನೊಂದಿಗೆ ತಕರಾರು ಮಾಡುವುದು, ಮತ್ತು ನನ್ನ ಹೆಸರಿಗೆ ಮನೆ ಆಸ್ತಿ ಮಾಡುವಂತೆ ತಕರಾರು ಮಾಡ ಹತ್ತಿದಳು. ನನ್ನ ಹೆಂಡತಿ ಸಣ್ಣ ಪುಟ್ಟ ವಿಷಯದಲ್ಲಿ ನನ್ನೊಂದಿಗೆ ತಕರಾರು ಮಾಡಿಕೊಂಡು ತನ್ನ ತವರು ಮನೆಗೆ ಹೋಗಿ ಬಿಡುತ್ತಿದ್ದಳು. ಆದರೂ ಸಹ ನಾನು ಇಲ್ಲಿಯವರೆಗೆ ಸಹಿಸಿಕೊಂಡು ಬಂದಿರುತ್ತೇನೆ. ನಮ್ಮ ತಂದೆಯವರು ಮೇ ತಿಂಗಳು 2021ನೇ ಸಾಲಿನಲ್ಲಿ ತೀರಿಕೊಂಡಿದ್ದು ನಂತರ ನನ್ನ ಹೆಂಡತಿ ನನ್ನೊಂದಿಗೆ ತಕರಾರು ಮಾಡಿ ತನ್ನ ತವರು ಮನೆಗೆ ಹೋಗಿದ್ದು ನಮ್ಮ ತಂದೆಯವರ ಪೂಜೆ ಕಾರ್ಯಕ್ರಮಕ್ಕೆ ಅವಳಿಗೆ ಕರೆಯಿಸಿಕೊಂಡಿದ್ದು ಆ ವೇಳೆಯಲ್ಲಿ ನನ್ನ ಹೆಂಡತಿ ಗರ್ಭವತಿಯಾಗಿದ್ದು ಅಕ್ಟೋಬರ 2021ನೇ ಸಾಲಿನಲ್ಲಿ ನನ್ನ ಹೆಂಡತಿ ಸಾಧನಾ ಇವಳು ಮತ್ತೆ ನನ್ನೊಂದಿಗೆ ಜಗಳಾ ಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದು ತನ್ನ ತವರು ಮನೆಯಲ್ಲಿಯೇ ಇದ್ದಾಗ ನಮ್ಮ ಸಂಬಂಧಿಕರ ಮುಂದೆ ನನ್ನ ಹೆಂಡತಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಾ ನಾನು ಅವಳಿಗೆ ಅಬಾಶನ್ ಮಾಡಿಸಿಕೊಳ್ಳು ಅಂತಾ ಅವಳಿಗೆ ಹೇಳುತ್ತಿದ್ದೇನೆ ಅಂತಾ ಸುಮ್ಮನೆ ನನ್ನ ಮೇಲೆ ಆಪಾದನೆ ಮಾಡುತ್ತಾ ತನ್ನ ತವರು ಮನೆಯಲ್ಲಿಯೇ ಇರುತ್ತಾಳೆ. ತನ್ನ ತವರು ಮನೆಯಲ್ಲಿ ಇದ್ದಾಗಲೇ ಮಾರ್ಚ 2022ನೇ ಸಾಲಿನಲ್ಲಿ ನನ್ನ ಹೆಂಡತಿ ಸಾಧನಾ ಇವಳು ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ. ಈ ವಿಷಯ ಸಹ ನಮಗೆ ಹೇಳಿರುವುದಿಲ್ಲಾ. ಇದರಿಂದ ಬೇಸತ್ತು ನಾನು ನನ್ನ ಹೆಂಡತಿಯ ತವರು ಮನೆಗೆ ಹೋಗದೆ ನಾನು ನನ್ನ ತಾಯಿ, ತಮ್ಮನೊಂದಿಗೆ ನಮ್ಮ ಮನೆಯಲ್ಲಿಯೇ ಇದ್ದೇನು.   ಕಳೆದ 01 ತಿಂಗಳ ಹಿಂದೆ ನಮ್ಮ ಓಣಿಯ ಹಿರಿಯರಾದ ಗೌಡಪ್ಪಗೌಡಾ ಪಾಟೀಲ ಮತ್ತು ವಿಶ್ವನಾಥ ಪಾಟೀಲ ತಡಕಲ್ ಇವರ ಸಮಕ್ಷಮದಲ್ಲಿ ನಮ್ಮ ತಾಯಿ, ತಮ್ಮ ಮತ್ತು ನನ್ನ ಹೆಂಡತಿ ಸಾಧನಾ, ಅವಳ ತಾಯಿ, ಅಣ್ಣತಮ್ಮಂದಿರು ಮತ್ತು ಅವರ ಸಂಬಂಧಿಕರು ಕೂಡಿಕೊಂಡು ಪಂಚಾಯಿತಿ ಮಾಡಿ ಪಂಚಾಯತಿಯಲ್ಲಿ ನನ್ನ ಹೆಂಡತಿ ಸಾಧನಾ ಇವಳಿಗೆ ನೀನು ಬೇರೆ ಮನೆ ಮಾಡಿ ಇಡಬೇಕು ಅಂತಾ ತಿರ್ಮಾನಿಸಿದ್ದರಿಂದ ನಾನು ಅವರ ಮಾತಿಗೆ ಒಪ್ಪಿಕೊಂಡು ನನ್ನ ಹೆಂಡತಿಗೆ ಬೇರೆ ಮನೆ ಮಾಡಬೇಕೆಂದು ನಿರ್ಧರಿಸಿ ಕಳೆದ 2-3 ದಿವಸಗಳ ಹಿಂದೆ ಕಲಬುರಗಿ ನಗರದ ವಿಜಯನಗರ ಕಾಲೋನಿಯಲ್ಲಿಯ ವಿದ್ಯಾ ಚೇತನ ಶಾಲೆ ಹತ್ತಿರ ಇರುವ ಎಸಎಸ ಪಾಟೀಲ ಮನೆಯಲ್ಲಿ ಮೊದಲನೇ ಮಹಡಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ಮನೆಯಲ್ಲಿ ನನ್ನ ಹೆಂಡತಿಗೆ ಶೀಫ್ಟ ಮಾಡಬೇಕಾಗಿದ್ದು ಇರುತ್ತದೆ. ದಿನಾಂಕ: 17-02-2023 ರಂದು ಬೆಳಿಗ್ಗೆ 10:30 ಎಎಂ ದಿಂದ 4:00 ಗಂಟೆವರೆಗೆ ಗಣೇಶ ನಗರದ ಹತ್ತಿರ ಇರುವ ಶಹಾ ಬೃದಾಂವನ ಹೊಟೇಲನಲ್ಲಿ ನನ್ನ ಮಗುವಿನ ತೊಟೀಲು ಕಾರ್ಯಕ್ರಮ ಮಾಡಿಕೊಂಡು ನಾನು ಬಾಡಿಗೆ ಪಡೆದಿರುವ ವಿಜಯನಗರ ಕಾಲೋನಿಯ ಮನೆಗೆ 4:30 ಪಿಎಂಕ್ಕೆ ಬಂದೇನು. ಅಂದಾಜು 5:00 ಪಿ.ಎಂಕ್ಕೆ ನಾನು ನಮಗೆ ರಾಜಿ ಪಂಚಾಯತಿ ಮಾಡಿದ ಹಿರಿಯರಾದ ವಿಶ್ವನಾಥ ಪಾಟೀಲ ತಡಕಲ್ ಮತ್ತು ಬಸವರಾಜ ಶಿವಗೋಳ ಇವರೊಂದಿಗೆ ಕುಳಿತುಕೊಂಡಾಗ ನನ್ನ ಹೆಂಡತಿ ಸಾಧನಾ ಇವಳಿಗೆ ಈ ಮನೆಗೆ ಬಿಡುವ ಕುರಿತು ನನ್ನ ಹೆಂಡತಿ ಸಾಧನಾ ಇವಳೊಂದಿಗೆ ಅವಳ ಸಂಬಂಧಿಕರಾದ ನನ್ನ ಹೆಂಡತಿಯ ತಾಯಿ ರಾಚಮ್ಮಾ ಗಂಡ ರಾಜಕುಮಾರ, ರಾಚಮ್ಮಾ ಇವರ ತಂಗಿಯಾಗಿರುವ ಶ್ರೀದೇವಿ ಗಂಡ ರಾಜಕುಮಾರ ಮತ್ತು ಶ್ರೀದೇವಿಯವರ ಸೊಸೆ ಪ್ರೀತಿ, ಮತ್ತು ಶ್ರೀದೇವಿಯ ಮಗಳು ಅಂಬಿಕಾ, ನನ್ನ ಹೆಂಡತಿಯ ತಮ್ಮಂದಿರರಾದ ಸಂಗಮೇಶ, ಉದಯಕುಮಾರ, ಪ್ರೇಮಸಾಗರ ಇವರೆಲ್ಲರೂ ಕೂಡಿಕೊಂಡು ನಾನು ಬಾಡಿಗೆಯಿಂದ ಪಡೆದುಕೊಂಡ ಮನೆಯಲ್ಲಿ ಬಂದವನೇ ನನ್ನ ಹೆಂಡತಿಯ ಮೌಸೀಯಾದ ಶ್ರೀದೇವಿ ಗಂಡ ರಾಜಕುಮಾರ ಇವರು ಬಂದವರೇ ಸುಮ್ಮ ಸುಮ್ಮನೇ ನನ್ನ ಅತ್ತೆ ರಾಚಮ್ಮಾ ಇಬ್ಬರೂ ಕೂಡಿಕೊಂಡು ಜೋರು ಜೋರಾಗಿ ಚಿರಾಡಲು ಪ್ರಾರಂಭಿಸಿದರು. ಆಗ ನಾನು ನನ್ನ ಅತ್ತೆ ರಾಚಮ್ಮಾ ಇವರಿಗೆ ನೀವು ಈ ರೀತಿ ಜೋರು ಜೋರು ಮಾತಾಡಿ ಚೀರಾಡಬೇಡಿರಿ ಇದು  ಬೇರೆಯವರ ಬಾಡಿಗೆ ಮನೆ ಇದೆ ಅಂತಾ ಹೇಳಿದಾಗ ನನ್ನ ಹೆಂಡತಿ ಸಾಧನಾ ಇವಳು ಅವರ ಪರವಹಿಸಿಕೊಂಡು ನನಗೆ ಒಮ್ಮೇಲೆ ಬೈಯ್ಯಲು ಪ್ರಾರಂಭಿಸಿದ್ದರಿಂದ ಇದರಿಂದ ನಾನು ನನ್ನ ಹೆಂಡತಿ ಸಾಧನಾ ಇವಳಿಗೆ ಇನ್ನು ಈಗ ಈ ಮನೆಗೆ ಬರುತ್ತಿದ್ದಿ ನೀನು ಬಂದವಳೆ ಜಗಳಾ ಮಾಡಲು ಪ್ರಾರಂಭಿಸಿದ್ದಿ ಏನು ಅಂತಾ ಅವಳಿಗೆ ಹೇಳಿದಾಗ ನನ್ನ ಅತ್ತೆಯ ತಂಗಿ ಶ್ರೀದೇವಿ ಮತ್ತು ಅವಳ ಗಂಡ ರಾಜಕುಮಾರ ಅವಳ ಹಿಂದೆ ಇದ್ದ ಅವಳ ಅಣ್ಣ ತಮ್ಮಂದಿರರಾದ ಸಂಗಮೇಶ, ಉದಯಕುಮಾರ, ಪ್ರೇಮಸಾಗರ ಇವರೆಲ್ಲರೂ ಸೇರಿಕೊಂಡವರೆ ನನಗೆ ನಿನಗೆ ಎಷ್ಟು ಬುದ್ದಿ ಹೇಳಿದರೂ ಸಹ ಕೇಳುವುದಿಲ್ಲಾ ಸುಳೆ ಮಗನೇ, ನಿನಗೆ ಇಂದು ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದು ಬೈಯ್ಯಲು ಪ್ರಾರಂಭಿಸಿ ನನ್ನ ಹೆಂಡತಿ ಸಾಧನಾ ಇವಳು ಒಮ್ಮೇಲೆ ನನಗೆ ಎರಡು ಕಪಾಳಕ್ಕೆ ಕೈಯಿಂದ ಹೊಡೆದಿದ್ದು, ಅತ್ತೆ ರಾಚಮ್ಮಾ ಇವಳು ಸಹ ಕೈಯಿಂದ ಎರಡು ಕಪಾಳಕ್ಕೆ ಹೊಡೆದಿದ್ದು ಆಗ ನಾನು ನನ್ನ ಕೂಸಿಗೆ ಎಟ್ಟು ಬಿಳುತ್ತದೆ ಎಂದು ತಿಳಿದು ಅವರ ಹತ್ತಿರ ಇದ್ದ ಕೂಡಿಗೆ ತೆಗೆದುಕೊಳ್ಳಲು ಹೋದಾಗ ನನ್ನ ಅತ್ತೆ ರಾಚಮ್ಮಾ ಇವಳು ಅವರ ಮಕ್ಕಳಾದ ಸಂಗಮೇಶ, ಉದಯಕುಮಾರ ಇವರಿಗೆ ನನಗೆ ಹಿಡಿದು ಹೊಡೆಯಲು ಹೇಳಿದ್ದರಿಂದ ಅವರು ನನಗೆ ಕೈಯಿಂದ ಒತ್ತಿ ಹಿಡಿದು ಕೈಯಿಂದ ಮುಖದ ಮೇಲೆ ಹೊಡೆದಿದ್ದು ಅವರ ಕೈಯಲ್ಲಿದ್ದ ಬ್ರಾಸಲೇಟ್ ಹತ್ತಿ ಎಡಗಲ್ದ ಮೇಲೆ, ಹಣೆಯ ಮೇಲೆ, ತುಟಿಯ ಮೇಲೆ ತೆರಚಿದ ರಕ್ತಗಾಯವಾಗಿದ್ದು ಅಲ್ಲದೇ ಅಳಿಯ ಸಂಗಮೇಶ ಇತನು ನನಗೆ ಕುತ್ತಿಗೆಗೆ ಒತ್ತಿ ಹಿಡಿದು ಕೈಯಿಂದ ಕಾಲಿನಿಂದ ಒದ್ದಿರುತ್ತಾನೆ. ಮತ್ತು ಹೂವಿನ ಕುಂಡಾ ತೆಗೆದುಕೊಂಡು ಟೊಂಕದ ಮೇಲೆ ಹೊಡೆದಿದ್ದು ಇದರಿಂದ ತೆರಚಿದ ರಕ್ತಗಾಯವಾಗಿರುತ್ತದೆ. ಉದಯ ಇತನು ಸಹ ಹೂವಿನ ಕುಂಡಾ ಎತ್ತಿ ಹಾಕಿರುತ್ತಾನೆ. ಸದರಿಯವರೆಲ್ಲರೂ ಸೇರಿಕೊಂಡು ನನಗೆ ಹೊಡೆಯುತ್ತಿರುವುದನ್ನು ಈ ಘಟನೆಯನ್ನು ನೋಡಿ ಅಲ್ಲೇ ಇದ್ದ ಬಸವರಾಜ ಶಿವಗೋಳ, ವಿಶ್ವನಾಥ ತಡಕಲ್, ಇವರುಗಳು ಜಗಳ ಬಿಡಿಸಿರುತ್ತಾರೆ. ಸದರಿ ಘಟನೆಯನ್ನು ಆ ಏರಿಯಾದ ಅಕ್ಕಪಕ್ಕದ ಜನರೂ ಸಹ ನೋಡಿರುತ್ತಾರೆ. ನನಗೆ ರಕ್ತಗಾಯವಾಗಿದ್ದರಿಂದ ಉಪಚಾರಕ್ಕಾಗಿ ನಾನು ಆಟೋದಲ್ಲಿ ನಾನು ಕುಳಿತುಕೊಂಡು ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ನನಗೆ ದಿನಾಂಕ:17-02-2023 ರಂದು ಸಾಯಂಕಾಲ 5:00 ಗಂಟೆಯಿಂದ 5:15 ಗಂಟೆಯ ಅವಧಿಯಲ್ಲಿ ವಿಜಯನಗರ ಕಾಲೋನಿಯ ನಾನು ಬಾಡಿಗೆಯಿಂದ ಪಡೆದುಕೊಂಡಿರುವ ಮನೆಯಲ್ಲಿ ಬಂದು ನನಗೆ ಕೈಯಿಂದ, ಹೂವಿನ ಕುಂಡದಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುವ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 18/02/2023 ರಂದು ಬೆಳಿಗ್ಗೆ 11:00 ಗಂಟೆಗೆ ಶ್ರೀ ಇವರು ನೀಡಿರುತ್ತಾರೆಂಬುವ ಕೈ ಬರಹದಿಂದ ಬರೆದ ಫಿರ್ಯಾದಿ ಅರ್ಜಿಯನ್ನು ಶ್ರೀ. ಬೀರಪ್ಪಾ ತಂದೆ ಸಿದ್ದಪ್ಪಾ ಹಿರೆ ಪೂಜಾರಿ ಎಂಬುವರು ತಂದೆ ಹಾಜರು ಪಡಿಸಿದ್ದು ಸಾರಂಶವೆನೆದರೆ, ದಿನಾಂಕ: 11/02/2023 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಮೋಟರ ಸೈಕಲ ನಂ. ಕೆಎ 32 ಇ.ಎಸ್ 3571 ಇದರ ಮೇಲೆ ಬೀರು ತಂದೆ ಮಾಳಪ್ಪಾ @ ಮಲ್ಲಪ್ಪಾ ಇವರನ್ನು ಮಲ್ಲು ತಂದೆ ಮಾಳಪ್ಪಾ @ ಮಲ್ಲಪ್ಪಾ ಈತನು ಕೂಡಿಸಿಕೊಂಡು ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ತಾವರಗೇರಾ ಗ್ರೀನ ಗಾರ್ಡನದ ಟೌನ ಹಾಲ ಹತ್ತೀರ ಬರುತ್ತಿರುವಾಗ ಅಪಘಾತವಾಗಿ ಮೋಟರ ಸೈಕಲದ ಮೇಲಿಂದ ಬಿದ್ದಿದ್ದರಿಂದ ಬೀರು ಈತನಿಗೆ ಮುಖಕ್ಕೆ, ಗದ್ದಕ್ಕೆ, ತಲೆಗೆ, ಕೈಕಾಲುಗಳಿಗೆ ಅಲ್ಲಲ್ಲಿ ರಕ್ತಗಾಯ ಮತ್ತು ಭಾರಿಗಾಯವಾಗಿದ್ದು, ಅಲ್ಲದೆ ಮೋಟರ ಸೈಕಲ ನಡೆಸುವನಿಗು ಕೂಡಾ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆಯನ್ನು ಮಹೇಶ ಜಾಧವ ಮತ್ತು ನರಸಿಂಗ ಎಂಬುವರು ನೋಡಿ ಸಹಾಯ ಮಾಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಈ ವಿಷಯದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಈಗ ಸ್ವಲ್ಪ ಗುಣಮುಖವಾಗಿ ತಡವಾಗಿ ಫಿರ್ಯಾದಿ ಸಲ್ಲಿಸಿದ್ದು, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 18/02/2023 ರಂದು ಸಾಯಂಕಾಲ 6:30 ಗಂಟೆಗೆ ಶ್ರೀ. ಫಯಾಜ ಹುಸೇನ ಇವರು ಠಾಣೆಗೆ ಹಾಜರಾಗಿ ತನ್ನ ಅಣ್ಣ ಶ್ರೀ. ಸೈಯದ ಫಿರೋಜ ತಂದೆ ಸೈಯದ ಹುಸೇನ ವಯಃ 35 ವರ್ಷ ಜಾತಿಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾಃ ಕಾಮ್ರಾನ ಕಾಲೋನಿ ಡಬರಾಬಾದ ರೋಡ ಕಲಬುರಗಿ ಇವರ ದೂರು ಅರ್ಜಿ ಹಾಜರು ಪಡಿಸಿದ್ದ ಸಾರಂಶವೆನೆಂದರೆ, ದಿನಾಂಕ: 15/02/2023 ರಂದು ಶಹಾಬಜಾರ ಬಡಾವಣೆಯಲ್ಲಿ ನನ್ನ ಕೆಲಸವಿರುವುದರಿಂದ ರಾತ್ರಿ ಸಮಯದಲ್ಲಿ ನಾನು ನನ್ನ ಮೋಟರ ಸೈಕಲ ನಂ. ಕೆಎ 32 ಕ್ಯೂ 8875 ನೇದ್ದನ್ನು ಚಲಾಯಿಸಿಕೊಂಡು ನಮ್ಮ ಮನೆಯಿಂದ ಡಬರಾಬಾದ ಕ್ರಾಸ್ ಹತ್ತೀರ ಬಂದು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಡಬರಾಬಾದ ಕ್ರಾಸ ದಿಂದ ಈದ್ಗಾ ಮೈದಾನ ರೋಡ ಕಡೆಗೆ ಹೋಗುವಾಗ ಒಬ್ಬ ಮೋಟರ ಸೈಕಲ ಸವಾರನು ಹೀರಾಪೂರ ರಿಂಗರೋಡ ಕಡೆಯಿಂದ ಆಳಂದ ರಿಂಗರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದನು. ನಾನು ನನ್ನ ಮೋಟರ ಸೈಕಲದೊಂದಿಗೆ ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ ಖುರೇಷಿ ಹಾಗು ಮಹಮ್ಮದ ಮುಸ್ತಫಾ ತಂದೆ ಬಾಶುಮಿಯಾ ರವರು ಬಂದು ನನಗೆ ಮತ್ತು ನನ್ನ ಡಿಕ್ಕಿ ಪಡಿಸಿ ಅಪಘಾತ ಮಾಡಿದ ಮೊಟರ ಸೈಕಲ ಸವಾರನಿಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದರು. ನಾನು ನನ್ನ ಮೋಟರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ ಮೋಟರ ಸೈಕಲ ನಂಬರ ನೋಡಲು ಕೆಎ-32 ಇಇ-5706 ಇದ್ದಿತ್ತು. ಸದರಿ ಘಟನೆ ಜರುಗಿದಾಗ ರಾತ್ರಿ ಅಂದಾಜು 8:30 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ಬಲಗಾಲಿನ ಹಿಮ್ಮಡಿಗೆ ಭಾರಿರಕ್ತಗಾಯ ಮತ್ತು ಪಾದಕ್ಕೆ ಭಾರಿರಕ್ತಗಾಯವಾಗಿತ್ತು. ಆಗ ನನ್ನ ಉಪಚಾರ ಕುರಿತು ಮಹಮ್ಮದ ಯುಸುಫ ಮತ್ತು ಮಹಮ್ಮದ ಮುಸ್ತಫಾ ಇಬ್ಬರು ಸೇರಿಕೊಂಡು ಒಂದು ಅಟೋರೀಕ್ಷಾ ವಾಹನದಲ್ಲಿ ಕುಡಿಸಿಕೊಂಡು ಪಕ್ಕದ ಕ್ಯೂಪಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನನಗೆ ಅಪಘಾತಪಡಿಸಿದ ಮೋಟರ ಸೈಕಲ ನಂ. ಕೆಎ-32, ಇಇ-5706 ನೇದ್ದರ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 20-02-2023 11:27 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080