ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -1 :-  ದಿನಾಂಕ 18-01-2023 ರಂದು ಸಾಯಂಕಾಲ 6-00 ಗಂಟೆಗೆ ಖಾಸಗಿ ಪಿ.ಜಿ ಶಹಾ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಲಕ್ಷ್ಮಿ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಲಕ್ಷ್ಮಿ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 18-01-2023 ರಂದು ಬೆಳಿಗ್ಗೆ 10-45 ಗಂಟೆ ಸುಮಾರಿಗೆ ನಾನು ದಿನ ನಿತ್ಯದಂತೆ ಸಿದ್ದಿಪಾಶಾ ದರ್ಗಾ ಎದುರುಗಡೆ ಬರುವ ಅರ್ಚಿಡ ಮಹಲನಲ್ಲಿ ಬರುವ ಹೊಟೇಲನಲ್ಲಿ ಅಡುಗೆ ಕೆಲಸಕ್ಕೆ ಹೋಗುವ ಸಲುವಾಗಿ ಮನೆಯಿಂದ ನಡೆದುಕೊಂಡು ಕೆ.ಬಿ ಎನ್ ದರ್ಗಾ ಹತ್ತೀರ ಬಂದಾಗ ರೈಲ್ವೆ ಸ್ಟೇಷನ ಕಡೆಗೆ ಹೋಗುವ ಸಲುವಾಗಿ ಬಂದು ಆಟೋರಿಕ್ಷಾ ನಂಬರ ಕೆಎ-32/ಬಿ-4304 ನೇದ್ದು ನಿಂತಿತ್ತು ಅದರಲ್ಲಿ ನಾನು ಕುಳಿತಾಗ ಆಟೋರಿಕ್ಷಾ ಚಾಲಕ ಮಹ್ಮದ ಯೂನುಸ ಇತನು ಕೆ.ಬಿ ಎನ್ ದರ್ಗಾ ಆಟೋಸ್ಟ್ಯಾಂಡನಿಂದ ಆಟೋರಿಕ್ಷಾ ಚಲಾಯಿಸಿಕೊಂಡು ನ್ಯಾಷನಲ್ ಚೌಕ ಕಡೆಗೆ ಹೋಗುತ್ತೀರುವಾಗ ದಾರಿ ಮದ್ಯ ಫಾಕೀಜಾ ಕಾಂಪ್ಲೇಕ್ಸ ಎದುರಿನ ರೋಡ ಮೇಲೆ ಆಟೋರಿಕ್ಷಾ ನಂಬರ ಕೆಎ-32/ಎ-8798 ನೇದ್ದರ ಚಾಲಕನು ನ್ಯಾಷನಲ ಚೌಕ ಕಡೆಯಿಂದ ಕೆ.ಬಿ.ಎನ್ ದರ್ಗಾ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಕುಳಿತು ಹೋಗುತ್ತಿದ್ದ ಆಟೋರಿಕ್ಷಾ ವಾಹನಕ್ಕೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ಚಾಲಕ ಮಹ್ಮದ ಯೂನುಸ ಇತನಿಗೆ ಗಾಯಗೊಳಿಸಿ ತನ್ನ ಆಟೋರಿಕ್ಷಾ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 16-01-2023 ರಂದು ೧೧:೦೦ ಎ.ಎಮ್ ಕ್ಕೆ ಪಿರ್ಯಾದಿಗೆ ಆರೋಪಿತರು ಪಿರ್ಯಾದಿಯ ಮನೆಯ ಎದುರು ಬಂದು ತಮ್ಮ ಮೊಟಾರ ಸೈಕಲ್ ಮೇಲೆ ಕರೆದುಕೊಂಡು ಆಳಂದ ಚೆಕ್ ಪೋಸ್ಟ ಹತ್ತಿರ ಕರೆದುಕೊಂಡು ಹೋಗಿ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ನಾವು ಕೊಟ್ಟ ಹಣ ಕೊಡು ಕೇಳಿದಾಗ ಪಿರ್ಯಾದಿ ನಾನು ಪಡೆದ 5000/-ರೂ ಹಣ ನಿಮಗೆ ಕೊಟ್ಟಿದ್ದೇನೆ ಮತ್ತು ಅದಕ್ಕೆ ಬಡ್ಡಿಯು ಕೊಟ್ಟಿದ್ದೇನೆ ಅಂತಾ ಅಂದಾಗ ಆರೋಪಿತರು ಇನ್ನೂ 5000/-ರೂ ಹಣ ಕೊಡಬೇಕು ಅಂತಾ ಅಂದು ಹೊಡೆಬಡೆ ಮಾಡಿ ಜೀವ ಭಯ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 20-01-2023 11:34 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080