ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ 17/12/2022 ರಂದು 06:15 ಪಿ.ಎಮ್ ಕ್ಕೆ ಗಂಟೆ ಸುಮಾರಿಗೆ ಮಹಮ್ಮದ ಸಾಹೀಲ ತಂದೆ ಮಹೇಮುದ ಶಮನ ವಯ:19 ವರ್ಷ ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ: ಗೋಳಾ(ಕೆ) ತಾ: ಶಹಾಬಾದ ಜಿ:ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ನಿನ್ನೆ ದಿನಾಂಕ 16/12/2022 ರಂದು ಬೆಳಗ್ಗೆ ನಾನು ಮತ್ತು ನಮ್ಮ ಗೆಳೆಯರಾದ ಮಹಮ್ಮದ ಇಶಾಕ ತಂದೆ ನಬಿಸಾಬ ಹಾಗೂ ಮಹಮ್ಮದ ಅಜರೋದ್ದಿನ್ ತಂದೆ ಹಸನ್ನೋದ್ದಿನ್ ಮೂರು ಜನರು ಸೇರಿ ಶಹಾಬಾದ ದಿಂದ ನನ್ನ ಕಾರ ನಂ.ಕೆಎ-41 ಪಿ-1150 ನೇದ್ದರಲ್ಲಿ ಹುಮನಾಬಾದಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಶಹಾಬಾದ ಕಡೆಗೆ ಹೋಗುವ ಕುರಿತು ಸಾಯಂಕಾಲ ಕಲಬುರಗಿ ಹುಮನಾಬಾದ ರಿಂಗ್ ರೋಡ ಸರ್ಕಲನಲ್ಲಿ ಸಿಗ್ನಲ್ ಬಿಡಲು ನಿಂತಿರುವಾಗ ಸಾಯಂಕಾಲ 7-00 ಗಂಟೆ ಸುಮಾರಿಗೆ ಒಂದು ಡಿಸೇಲ್ ಟ್ಯಾಂಕರ ವಾಹನದ ಚಾಲಕನು ಹುಮನಾಬಾದ ಕಡಯಿಂದ ಸೇಡಂ ರಿಂಗ್ ರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನನ್ನ ಕಾರಿನ ಹಿಂದಿನಿಂದ ಬಂದು ನಿಂತಿದ್ದ ನನ್ನ ಕಾರಿಗೆ ಓವರಟೇಕ ಮಾಡಲು ಹೋಗಿ ನನ್ನ ಕಾರಿನ ಬಲಭಾಗಕ್ಕೆ ಡಿಕ್ಕಿಪಡಿಸಿದನು. ಆಗ ನಾವು ಮೂರು ಜನರು ಗಾಬರಿಗೊಂಡು ಕೆಳಗೆ ಇಳಿದು ನೋಡಲು ನಮ್ಮ ಕಾರಿನ ಎರಡು ಡೋರಗಳು ಡ್ಯಾಮೇಜ ಆಗಿದ್ದು ನಮ್ಮ ಕಾರಿಗೆ ಡಿಕ್ಕಿಪಡಿಸಿದ ವಾಹನ ನಂಬರ ನೋಡಲು ಡಿಸೇಲ್ ಟ್ಯಾಂಕರ ನಂ.ಕೆಎ-32 ಡಿ-8811 ನೇದ್ದು ಇದ್ದು ಅದರ ಚಾಲಕನ ಹೆಸರು ಬಸವರಾಜ ಅಂತಾ ಗೊತ್ತಾಗಿದ್ದು. ಸದರ ಘಟನೆಯಿಂದ ನಮಗೆ ಮೂರು ಜನರಿಗೆ ಯಾವೂದೇ ಗಾಯಗಳು ಆಗಿರುವದಿಲ್ಲ ನಾನು ನಮ್ಮ ಮನೆಯವರೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ನನ್ನ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಡಿಸೇಲ್ ಟ್ಯಾಂಕರ ನಂ.ಕೆಎ-32 ಡಿ-8811 ನೇದ್ದರ ಚಾಲಕ ಬಸವರಾಜ ಈತನ ಮೇಲೆ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಫಿರ್ಯಾಧಿ ಅರ್ಜಿ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 17/12/2022 ರಂದು ಪಿರ್ಯಾದಿ ದೂರು ಎನೆಂದರೆ ಹೊಂಡಾ ಆ್ಯಕ್ಟೀವಾ  ಬಿಳಿ  ಬಣ್ಣದ   ಮೋ ಸೈಕಲ ನಂ ಕೆಎ-32-ಇ.ಎನ್-2942  ನೇದ್ದು ಖರೀದಿ ಮಾಡಿದ್ದು ಇರುತ್ತದೆ.  ಅದರ ENGGIN NO- JF50ET6001784 & CHESIS NO- ME4JF509LGT001645 ನೇದ್ದು ಇರುತ್ತದೆ. ಇದರ ಅ.ಕಿ. 20,000/- ರೂ. ಇರುತ್ತದೆ. 25/10/2022 ರಂದು ರಾತ್ರಿ 11:00 ಗಂಟೆಗೆ  ಮನೆಯ ಮುಂದೆ  ನಿಲ್ಲಿಸಿದ ಗಾಡಿಯು ದಿನಾಂಕ 26/10/2022 ರಂದು 07:30 ಗಂಟೆಗೆ ಬೇಳಿಗ್ಗೆ  ಎದ್ದು ನೋಡಿದಾಗ ಕಾಣುವುದಿಲ್ಲ ನಂತರ ಎಲ್ಲಾ ಕಡೆ ಹುಡುಕಾಡಿದರು  ಎಲ್ಲಿ ಸಿಗದ ಕಾರಣ ಯಾರೋ ಕಳ್ಳರು ನನ್ನ ಗಾಡಿಯನ್ನು ಕಳ್ಳತನ ಮಾಡಿದ್ದು  ಇರುತ್ತದೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ:- ದಿನಾಂಕಃ 17/12/2022 ರಂದು ‍ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ‍ಫಿರ್ಯಾದಿಯು ಸದರಿ ಆರೋಪಿತರ ನನಗೆ ಸಹೋದರರಿದ್ದು ನಾನು ಮತ್ತು ನಮ್ಮ ಹಿರಿಯ ಅಣ್ಣ ರಿಯಾಜ ಈತನು ಕೂಡಿಕೊಂಡು ಒಂದು ಪ್ಲಾಟ್‌ಅನ್ನು ಖರೀದಿಸಿದ್ದು ಇಬ್ಬರೂ ಕೂಡಿ ಅಲ್ಲಿಯೇ ವಾಸವಾಗಿದ್ದು  ಸದರಿ ಆರೋಪಿತರ ಮತ್ತು ನಡುವೆ ನಮಗೆ ಯಾವಾಗಲೂ ಆಸ್ತಿಯ ವಿಚಾರಕ್ಕೆ ಆಗಾಗ ತಕರಾರು ನಡೆಯುತ್ತಾ ಬಂದಿದ್ದು ಹೀಗಿದ್ದು ನಾನು ಮತ್ತು ನಮ್ಮ ಅಣ್ಣ ರಿಯಾಜ ಆತನ ಹೆಂಡತಿ ಮನೆಯಲ್ಲಿದ್ದಾಗ ಸದರಿ ಆರೋಪಿತರು ದಿನಾಂಕಃ-೧೬/೧೨/೨೦೨೨ ರಂದು ಬೆಳಗ್ಗೆ ೮.೦೦ ಗಂಟೆಗೆ ಬಂದು ಸದರಿ ಆರೋಪಿತರು ನಮ್ಮ ಹತ್ತಿರ ತಕರಾರು ಮಾಡಿಕೊಂಡು ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-12-2022 01:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080