ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ;೦೯-೧೦-೨೦೨೨ ರಂದು ಬೆಳ್ಳಿಗೆ ೦೭-೦೦ ಗಂಟೆಯಲ್ಲಿ ನಮ್ಮ ಮನೆಯ ಬಾಗಿಲ ಬೀಗವನ್ನು ಹಾಕಿಕೊಂಡು ನನ್ನ ಮಗಳು ಪೂರ್ಣಿಮಾ ಜೊತೆಯಲ್ಲಿ ಬೆಂಗಳೂರಿಗೆ ಹೋಗಿರುತ್ತೇನೆ. ನನ್ನ ಮಗಳು ಪೂರ್ಣಿಮಾ ನಾನು ಬೆಂಗಳೂರಿನಿಂದ ವಾಪಸ್ಸು ದಿನಾಂಕ:೧೩-೧೧-೨೦೨೨ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕಲಬುರಗಿ ನಗರದ ಶಾಸ್ತ್ರಿ ನಗರದಲ್ಲಿರುವ ನಮ್ಮ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ವೆಂಟಿಲೇಟರ್ ಕಿಟಕಿಯನ್ನು ಮುರಿದಿದ್ದು. ನಂತರ ನಾವುಗಳು ಮನೆಯ ಒಳಗಡೆ ಹೋಗಿ ನೋಡಲಾಗಿ ಮನೆಯ ಬೆಡ್‌ರೂಮ ಬೀರುನಲ್ಲಿ ಇಟ್ಟಿದ್ದ ಬಟ್ಟೆಗಳು ಚೆಲ್ಲಾಪಿಲ್ಲಾಗಿ ಬಿದ್ದಿರುತ್ತವೆ. ನಮ್ಮ ಮನೆಯ ಬೆಡ್ ರೂಮ್ ಬೀರುವಿನಲ್ಲಿ ಇಟ್ಟಿದ್ದ ೧) ೫೦ ಗ್ರಾಂ ಬಂಗಾರದ ಮುತ್ತಿನ ನಕ್ಲೇಸ್ ಅ,ಕಿ ೨೦೦೦೦೦/-ರೂ ೨) ೬೦ ಗ್ರಾಂ ಬಂಗಾರದ ಪಾಟ್ಲಿಗಳು ಒಂದು ಜೊತೆ ಅ,ಕಿ ೨೪೦೦೦೦/-ರೂ ೩)೪೦ ಬಂಗಾರದ ಕರಿಮಣಿ ಸರ್ ಅ,ಕಿ ೧೬೦೦೦೦/-ರೂ ೪)೩೦ ಗ್ರಾಂ ಬಂಗಾರದ ಕತ್ತಿನ ಚೈನ್ ಅ,ಕಿ ೧೨೦೦೦೦/-ರೂ ೫) ೫ ಗ್ರಾಂ ಬಂಗಾರದ ವಂಕಿ ಉಂಗುರ ಅ,ಕಿ ೨೦೦೦೦/-ರೂ ೬) ೬ ಗ್ರಾಂ ಬಂಗಾರದ ಉಂಗುರ ಅ,ಕಿ ೨೫೦೦೦/-ರೂ ಹಾಗೂ ೭) ೬೦ ಗ್ರಾಂ ಬೆಳ್ಳಿಯ ಬಟ್ಲಗಳು ೬ ಅ.ಕಿ ೨೫೦೦೦/-ರೂ ಹೀಗೆ ಒಟ್ಟು ೭೯೦೦೦೦/-ರೂ ಬೆಲೆ ಬೆಲೆ ಬಾಳೂವುದನ್ನು ಕಳ್ಳತನ ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 17-11-2022  ರಂದು ೦೧:೦೦ ಗಂಟೆಗೆ ಶ್ರೀ ಪ್ರೇಮಕುಮಾರ ತಂದೆ ಭೋಜಪ್ಪ ಐಲಿ ವಯ: ೪೩ ವರ್ಷ ಉ: ಏರಿಯಾ ಮ್ಯಾನೇಜರ್ ಜಾ: ನೇಕಾರ ಸಾ: ಮನೆ ನಂ. ಸಿ೧೦೩ ಸಿ ಬ್ಲಾಕ್ ಕೆಹೆಚ್.ಬಿ. ಕಾಲೋನಿ ಗ್ರೀನ್ ಪಾರ್ಕ ಸಂತೋಷ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ದೂರು ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಾನು ೭ ವರ್ಷಗಳಿಂದ ಕಲಬುರಗಿ ನಗರದ ಮೇಹ್ತಾ ಕಾಂಪ್ಲೇಕ್ಸದಲ್ಲಿರುವ ಅಂಗಡಿ ಸಂಖ್ಯೆ ೧೧ ರಲ್ಲಿದ್ದ ಮೈ ಜೀಯೋ ಸ್ಟೋರ ಮೊಬೈಲ ಮಾರಾಟ ಅಂಗಡಿಯಲ್ಲಿ ಏರಿಯಾ ಮ್ಯಾನೇಜರ್ ಅಂತ ಕೆಲಸ ಮಾಡಿಕೊಂಡಿರುತ್ತೇನೆ. ಈ ಅಂಗಡಿಯಲ್ಲಿ ಮಹೇಶ ಗುತ್ತೆದಾರ ಮ್ಯಾನೇಜರ್ ಅಂತ, ಕುಮಾರ ಹಣಮಂತ ಸೇಲ್ಸ್ ಅಸೋಸಿಯೇಟ್, ನಾಗರಾಜ ಅಂಬಾಡಿ ಸೇಲ್ಸ್ ಅಸೋಸಿಯೇಟ್, ಅರ್ಜುನ ಸುದೈ ಸೇಲ್ಸ್ ಅಸೋಸಿಯೇಟ್ ಅಂತ ಕೆಲಸ ಮಾಡುತ್ತಾರೆ. ನಾನು ಕಲಬುರಗಿ, ಬೀದರ್, ಬಸವಕಲ್ಯಾಣ, ಯಾದಗಿರಿ, ಗಂಗಾವತಿ, ಸಿಂಧನೂರ, ರಾಯಚೂರಗಳಲ್ಲಿ ಇದ್ದ ಅಂಗಡಿಗಳ ಏರಿಯಾ ಮ್ಯಾನೇಜರ್ ಅಂತ ಕೆಲಸ ಮಾಡುತ್ತ್ತೇನೆ. ಮಹೇಶ ಗುತ್ತೆದಾರ  ಸ್ಟೋರ ಮ್ಯಾನೇಜರ್ ಇತನು ಅವನಿಗೆ ಮೈಯಲ್ಲಿ ಆರಾಮವಿಲ್ಲದ್ದರಿಂದ ಸುಮಾರು ಒಂದು ವಾರಗಳಿಂದ ಅಂಗಡಿಗೆ ಬಂದಿರುವದರಿಲ್ಲ. ಕುಮಾರ ಹಣಮಂತ, ನಾಗರಾಜ ಅಂಬಾಡಿ, ಅರ್ಜುನ ಸುದೈವ ಈ ಮೂವರು ಕೂಡಿಕೊಂಡು ದಿನಾಲೂ ಅಂಗಡಿಯಲ್ಲಿದ್ದ ಮೊಬೈಲ ಹ್ಯಾಂಡಸೆಟ್‌ಗಳನ್ನು ಮಾರಾಟ ಮಾಡಿ ಹಣವನ್ನು ಮರುದಿವಸ ಬೆಳಿಗ್ಗೆ ೧೦:೦೦ ಗಂಟೆ ಸುಮಾರಿಗೆ ಸಿ.ಎಮ್.ಎಸ್. ಅರೆಂಜ್‌ಮೆಂಟ್ ಕ್ಯಾಶ್ ಪಿಕಪ್ ಏಜೆನ್ಸಿರವರು ಬಂದು ಹಣವನ್ನು ತೆಗೆದುಕೊಂಡು ಹೋಗುತ್ತಾರೆ. ಅಂಗಡಿಯಲ್ಲಿ ಮೊಬೈಲ ಹ್ಯಾಂಡಸೆಟ್‌ಗಳನ್ನು ಮಾರಾಟ ಮಾಡಿದ, ಹಣ ಜಮಾ ಮಾಡಿದ ಲೆಕ್ಕಪತ್ರವನ್ನು ನಮ್ಮ ಜಿಯೋ ಕಂಪನಿಯ ಅಡಿಟ್ ಮಾಡುವವರು ಪ್ರತಿ ೧೫ ದಿನಗಳಿಗೊಮ್ಮೆ ಬಂದು ಲೆಕ್ಕಪತ್ರ ನೋಡಿಕೊಂಡು ಹೋಗುತ್ತಾರೆ. ಮೊಬೈಲ ಹ್ಯಾಂಡಸೆಟ್‌ಗಳನ್ನು ದಿನಾಲೂ ಮಾರಾಟ ಮಾಡಿದ್ದನ್ನು ನೋಡಿ ಕಂಪನಿಯವರು ವಾರದಲ್ಲಿ ಎರಡು ಮೂರು ಸಲ ಮೊಬೈಲ ಹ್ಯಾಂಡಸೆಟ್‌ಗಳನ್ನು ಮಾರಾಟ ಮಾಡಲು ನಮಗೆ ಕಳುಹಿಸಿ ಕೊಡುತ್ತಾರೆ. ದಿನಾಂಕ: ೧೨/೧೧/೨೦೨೨ ರಂದು ಜೀಯೋ ಅಂಗಡಿಯಲ್ಲಿಯ ಆಪಲ್ ಐಪೋನ್ ೧೪ ಪ್ರೋ ಮ್ಯಾಕ್ಸ್ ಒಂದು ಟಿಬಿ, ಅದರ ಕಿಮ್ಮತ್ತು ೧,೯೮,೧೩೬/- ರೂಪಾಯಿಗಳು ಇದನ್ನು ಮಾರಾಟ ಮಾಡಿರುತ್ತಾರೆ. ದಿನಾಂಕ; ೧೩/೧೧/೨೦೨೨ ರಂದು ರವಿವಾರ ಇದ್ದ ಪ್ರಯುಕ್ತ ಸಿ.ಎಮ್.ಎಸ್. ಏಜೆನ್ಸಿರವರು ಹಣ ಸಂಗ್ರಹಣೆ ಮಾಡುವದಕ್ಕೆ ಬರದೇ ಇದ್ದ ಪ್ರಯುಕ್ತ ದಿನಾಂಕ: ೧೪/೧೧/೨೦೨೨ ರಂದು ಹಣವನ್ನು ಸಿ.ಎಮ್.ಎಸ್. ಏಜೆನ್ಸಿರವರಿಗೆ ಜಮಾ ಮಾಡದೇ ಇದ್ದರಿಂದ ನಾನು ಗಣಕಯಂತ್ರದಲ್ಲಿ ಚೆಕ್ ಮಾಡಿ, ಸುಪರ ಮಾರ್ಕೆಟನಲ್ಲಿರುವ ಮೈ ಜಿಯೋ ಅಂಗಡಿಗೆ ಹೋಗಿ ಅಂಗಡಿಯಲ್ಲಿ ಕೆಲಸ ಮಾಡುವ ಅರ್ಜುನ ಸುದೈ, ನಾಗರಾಜ ಅಂಬಾಡಿ, ಕುಮಾರ ಹಣಮಂತ  ರವರಿಗೆ ವಿಚಾರಿಸಲು ಅರ್ಜುನ ಇತನು ನಾನು ಮೊಬೈಲ ಮಾರಾಟ ಮಾಡಿದ್ದು ಹಣ ಕಟ್ಟಬೇಕಾಗಿತ್ತು ಹಣ ಕಟ್ಟಿರುವದಿಲ್ಲ ಅಂತ ತಿಳಿಸಿದನು. ನಂತರ ನಾನು ಸಂಶಯ ಬಂದು ಅಂಗಡಿಯಲ್ಲಿ ಎಷ್ಟು ಮೊಬೈಲ ಹ್ಯಾಂಡಸೆಟ್‌ಗಳು ಮಾರಾಟ ಆಗಿವೆ, ಎಷ್ಟು ಉಳಿದೆವು ಅಂತ ಗಣಕಯಂತ್ರದಲ್ಲಿ ನೋಡಿ ಮೊಬೈಲ ಹ್ಯಾಂಡಸೆಟ್‌ಗಳನ್ನು ಪರೀಶೀಲನೆ ಮಾಡಲು ಅಂಗಡಿಯಲ್ಲಿದ್ದ ಈ ಕೆಳಗೆ ನಮೂದು ಮಾಡಿದ ವಿವಿಧ ನಮೂನೆಯ ಒಟ್ಟು ೨೪ ಮೊಬೈಲ ಹ್ಯಾಂಡಸೆಟ್‌ಗಳು ಅವುಗಳ ಅಂದಾಜು ಮೊತ್ತ ೧೮,೭೮,೨೯೦/- ರೂ ನೇದ್ದವುಗಳು ಅಂಗಡಿಯಲ್ಲಿ ಇರಲಿಲ್ಲ. ಅರ್ಜುನ ಸುದೈ ಸೇಲ್ಸ್ ಅಸೋಸಿಯೇಟ್ ಇತನು ಮೈ ಜೀಯೋ ಮೊಬೈಲ ಅಂಗಡಿಯಲ್ಲಿಯ ವಿವಿಧ ನಮೂನೆಯ ೨೪ ಮೊಬೈಲಗಳನ್ನು ಅಂಗಡಿಯಲ್ಲಿದ ತೆಗೆದುಕೊಂಡು ಹೋಗಿದ್ದು ಅದರ ಕಿಮ್ಮತ್ತು ೧೮,೭೮,೨೯೦/-ರೂ ಮತ್ತು ಒಂದು ಆಪಲ್ ಮೊಬೈಲನ್ನು ಮಾರಾಟ ಮಾಡಿ ಅದರಿಂದ ಬಂದ ಹಣ ೧,೯೮,೧೩೬/- ರೂ ಹೀಗೆ ಒಟ್ಟು  ೨೦,೭೬,೪೨೬/-ರೂಪಾಯಿ ನೇದ್ದವುಗಳನ್ನು ತೆಗದುಕೊಂಡು ಹೋಗಿ, ಮಾರಾಟ ಮಾಡಿ ಹಣವನ್ನು ಅಂಗಡಿಯ ಮಾಲಿಕರಿಗೆ ಕಟ್ಟದೇ ಮೈ ಜೀಯೋ ಸ್ಟೋರ ಅಂಗಡಿಯ ಮಾಲಿಕರಿಗೆ ಅಪರಾದಿಕ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾನೆ. ಅಂತ ಗೊತ್ತಾದ ನಂತರ ನಾನು ನಮ್ಮ ಜೀಯೋ ಕಂಪನಿಯಲ್ಲಿ ಕೆಲಸ ಮಾಡುವ ಶಿವಮಂಜು ಅಡಿಟ್ ಆಫೀಸರ್ ಮತ್ತು ಪ್ರಶಾಂತ ಏರಿಯಾ ಮ್ಯಾನೇಜರವರಿಗೆ ತಿಳಿಸಿದ್ದು ಅವರು ಕೂಡ ಬಂದು ಅಂಗಡಿಯಲ್ಲಿ ಪರೀಶೀಲನೆ ಮಾಡಿದರು.ಅರ್ಜುನ ಸುದೈ ಸೇಲ್ಸ್ ಅಸೋಸಿಯೇಟ್ ಇತನು ದಿನಾಂಕ: ೨೮/೧೦/೨೦೨೨ ರಿಂದ ೧೪/೧೧/೨೦೨೨ ರ ಮಧ್ಯದ ಅವಧಿಯಲ್ಲಿ ಮೇಲ್ಕಂಡ ಅಪರಾಧ ಮಾಡಿರುತ್ತಾನೆ. ಈ ಬಗ್ಗೆ ನಾನು ನಮ್ಮ ಕಂಪನಿಯ ಅಧಿಕಾರಿಯವರೊಂದಿಗೆ ಚರ್ಚಿಸಿ ಇಂದು ತಡವಾಗಿ ನಾನು ಮತ್ತು ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಶಿವಮಂಜು ಅಡಿಟ್ ಆಫೀಸರ್, ಪ್ರಶಾಂತ ಏರಿಯಾ ಮ್ಯಾನೇಜರವರೊಂದಿಗೆ ಠಾಣೆಗೆ ಬಂದು ನನ್ನ ಅರ್ಜಿ ಸಲ್ಲಿಸಿರುತ್ತೇನೆ. ಸದರಿಯವನ ಮೇಲೆ ಸೂಕ್ತ ಕಾನೂನುಕ್ರಮ ಕೈಕೊಳ್ಳಬೇಕು ಅಂತ ಇತ್ಯಾಧಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-11-2022 05:17 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080