ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್ ಠಾಣೆ :- ದಿನಾಂಕ; ೧೭/೧೧/೨೦೨೧ ರಂದು ಮದ್ಯಾನ ೧೨:೩೦ ಗಂಟೆಯ ಸುಮಾರಿಗೆ ನಾನು ಪೋಲಿಸ ಠಾಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ,  ಠಾಣಾ ವ್ಯಾಪ್ತಿಯ ಮಿಜಗುರಿಯ ಆಟೋ ನಿಲ್ದಾಣ   ಹತ್ತಿರ ಸರ‍್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ, ಅಂತಾ ಬಾತ್ಮಿ ಬಂದ ಮೇರೆಗೆ ಕೂಡಲೆ ಸಿಬ್ಬಂದ್ದಿಯವರಾದ ಅಹ್ಮದ ಹುಸೇನ್ ಂSI ಹಾಗೂ ಪಿಸಿ ೯೫೩, ೧೦೨೧ ೧೧೪೨. ರವ ಹಾಗೂ ಇಬ್ಬರು ಪಂಚರಾದ ೦೧) ಶ್ರೀ ಜಹೀರಶ್ಯಾ ತಂದೆ ಸೀಲಾರಶ್ಯಾ ವಯಃ ೩೮ ರ‍್ಷ ಜಾಃ ಮುಸ್ಲಿಂ  ಉಃ ಅಟೋ ಡ್ರೈವರ ಸಾಃ ಯಾದುಲಾ ಕಾಲೋನಿ  ರೋಜಾ  ೦೨) ಶ್ರೀ ಮಹ್ಮದ ಜಮೀರ ತಂದೆ ಮಹ್ಮದ ಜಮೀಲ್ ವಯಾ: ೪೦ ರ‍್ಷ ಉ: ಆಟೋ ಚಾಲಕ ಸಾ: ಜಲಾಲವಾಡಿ ಕಲಬುರಗಿ ಇವರಿಗೆ ಪೊಲೀಸ್ ಠಾಣೆಯ ಹತ್ತಿರ ಬರಮಾಡಿಕೊಂಡು , ನಮ್ಮ ಸರಕಾರಿ ಜೀಪ್ ನಂ: ಕೆಎ ೩೨ ಜಿ ೭೯೬ ನೇದ್ದರಲ್ಲಿ ಎಲ್ಲರೂ ಕುಳಿತು  ಠಾಣೆಯಿಂದ ೧೩:೩೦ ಗಂಟೆಗೆ ಹೊರಟು ಮಿಜಗುರಿಯ ಆಟೋ ನಿಲ್ದಾಣ   ಹತ್ತಿರ  ಸ್ವಲ್ಪ ದೂರದಲ್ಲಿ ಜೀಪನ್ನು  ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ೧ ರೂ ಗೆ ೮೦ ರೂ ಕೊಡುತ್ತೇನೆಂದು ಹೇಳಿ ತನ್ನ ಲಾಭಕ್ಕೋಸ್ಕರ ಸರ‍್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನನ್ನು  ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ದಾಳಿ ಮಾಡಿ ಸದರಿ ವ್ಯಕ್ತಿಗೆ ೧೪.೦೦  ಗಂಟೆಗೆ  ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಖರ‍್ಷಿದ ಅಲಿ ತಂದೆ ಅಬ್ದುಲ ಹಮೀದ  ವಯಾ: ೫೦ರ‍್ಷ ಉ: ಹಣ್ಣಿನ ವ್ಯಾಪಾರ   ಸಾ: ಹಜ ಕಮಿಟಿ ಹತ್ತಿರ ಮಿಜಗುರಿ   ಕಲಬುರಗಿ, ಅಂತಾ ತಿಳಿಸಿದ್ದು,  ನಂತರ ನಾವು ಹಿಡಿದು ಕೊಂಡ ವ್ಯೆಕ್ತಿಗೆ, ಪಂಚರ ಸಮಕ್ಷಮದಲ್ಲಿ ಅಂಗ ಶೋಧನೆ ಮಾಡಲಾಗಿ ಇವನ ಹತ್ತಿರ ನಗದು ಹಣ ೧೨೯೦/- ರೂ, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಹೀಗೆ ಮುದ್ದೆ ಮಾಲನ್ನು ಸಿಕ್ಕಿದ್ದು ಅವೂಗಳನ್ನು ಮದ್ಯಾನ ೧೪.೦೦ ಗಂಟೆಯಿಂದ  ೧೫.೦೦ ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಬರೆದುಕೊಂಡು ಅವೂಗಳನ್ನು ಜಪ್ತಿ ಪಡಿಸಿ ಕೊಳ್ಳಲಾಗಿದೆ.  ನಂತರ ಮರಳಿ ಪೋಲಿಸ ಠಾಣೆಗೆ ೧೫;೩೦ ಗಂಟಗೆ  ಬಂದು ಸದರಿ ಆರೋಪಿತನ ವಿರುದ್ದ 78 (iii ) KP ACT ಅಡಿಯಲ್ಲಿ ಜರುಗಿಸಿದ್ದು ಇರುತ್ತದೆ.

     ಅಶೋಕ ನಗರ ಠಾಣೆ:- ಇಂದು ದಿನಾಂಕ: ೧೭.೧೧.೨೦೨೧ ರಂದು ೧೧:೦೦ ಎ.ಎಂ. ಕ್ಕೆ ಫರ‍್ಯಾದಿ ಶ್ರೀ  ವಿಜಯಕುಮಾರ ತಂದೆ ಗುರುಲಿಂಗಪ್ಪ ನಿಂಬಾಳಕರ ವಯ: ೩೯ ರ‍್ಷ ಜಾ: ಎಸ್.ಸಿ.(ಹೊಲೆಯ) ಉ: ಕೆ.ಎಸ್.ಆರ್. ಟಿ.ಸಿ. ಡ್ರೈವರ ಕಂ. ಕಂಡಕ್ಟರ ಸಾ|| ಮ.ನಂ. ೨೧೫  ವಿದ್ಯಾ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ರ‍್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ ೨೦೧೩ ನೇ ಸಾಲಿನಲ್ಲಿ ಒಂದು ಹೊಂಡಾ ಶೈನ್ ಮೋಟಾರ ಸೈಕಲ್ ನಂ ಕೆ.ಎ-೩೨ ಇಇ-೮೧೬೯ ಗ್ರೇ ಬಣ್ಣದ್ದು  ಚೆಸ್ಸಿ ನಂ ME4JC36JLD7702829    ಇಂಜಿನ್ ನಂ JC36E73148923 ಅ. ಕಿ.೧೮,೦೦೦/-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ.             ಹೀಗಿದ್ದು ದಿನಾಂಕ:.೧೦.೧೦.೨೦೨೧ ರಂದು ಬೆಳಿಗ್ಗೆ ೧೦:೦೦ ಗಂಟೆಗೆ ನಾನು ನನ್ನ ಮೋಟರ್ ೦ಸೈಕಲನ್ನು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ  ಜನರ ವಾಹನಗಳನ್ನು  ನಿಲುಗಡೆ  ಮಾಡುವ  ಸ್ಥಳದಲ್ಲಿ ನನ್ನ  ಹೊಂಡಾ ಶೈನ್ ವಾಹನ ಸಂಖ್ಯೆ ಕೆ.ಎ-೩೨ ಇಇ- ೮೧೬೯ ನೇದ್ದನ್ನು ನಿಲ್ಲಿಸಿದ್ದು ರಾತ್ರಿ ೦೯:೦೦ ಗಂಟೆಗೆ ನನ್ನ ರ‍್ತವ್ಯ  ಮುಗಿದ ನಂತರ ಮರಳಿ ಬಂದು  ಮನೆಗೆ  ಹೋಗುವ ಕಾಲಕ್ಕೆ ದ್ವಿ-ಚಕ್ರ ವಾಹನ ನಿಲುಗಡೆ  ಸ್ಥಳದಲ್ಲಿ ನಿಲ್ಲಿಸಿದ್ದ  ನನ್ನ ವಾಹನ  ಇದ್ದಿರುವುದಿಲ್ಲ.  ನಾನು ಅಕ್ಕ ಪಕ್ಕದಲ್ಲಿ  ಎಲ್ಲಾ ಕಡೆಗಳಲ್ಲಿ  ಹುಡುಕಾಡಿರು ನನ್ನ ವಾಹನ ಇದ್ದಿರುವುದಿಲ್ಲ. ಯಾರೋ ಕಳ್ಳರು  ನನ್ನ  ವಾಹನವನ್ನು  ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ.  ನಾನು ಕಳುವಾದ  ನನ್ನ ವಾಹನವನ್ನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ  ಎಲ್ಲಾ  ಕಡೆಗಳಲ್ಲಿ ಹುಡುಕಾಡಿ  ಈ ಬಗ್ಗೆ ಮನೆಯಲ್ಲಿ  ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿ ಇದ್ದ ಫರ‍್ಯಾದಿಯ ರ‍್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

         ಅಶೋಕ ನಗರ ಠಾಣೆ:-    ಇಂದು ದಿನಾಂಕ:೧೭.೧೧.೨೦೨೧ ರಂದು ೦೬:೩೦ ಪಿ.ಎಂ.ಕ್ಕೆ ಶ್ರೀ ಪಂಡೀತ ಸಗರ ಪಿ.ಐ. ಅಶೋಕ ನಗರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಒಂದು ವರದಿಯನ್ನು ಹಾಜರ ಪಡಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ:೧೭.೧೦.೨೦೨೧ ರಂದು ೦೪:೦೦ ಪಿ.ಎಂ.ಕ್ಕೆ  ಠಾಣೆಯಲ್ಲಿದ್ದಾಗ ಖಚಿತವಾದ  ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಎಂ.ಎಸ್.ಕೆ. ಮಿಲ್ ಗೇಟ್ ಎದರುಗಡೆ ಒಬ್ಬ ವ್ಯಕ್ತಿಯು ಸರ‍್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾನೆ ಅಂತ ಮಾಹಿತಿ ಬಂದ ಮೆರೆಗೆ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ೧)  ಸಂಜುಕುಮಾರ ಹೆಚ್.ಸಿ-೧೪೨ ಮತ್ತು ೨) ಶಿವಲಿಂಗ್ ಸಿ.ಪಿ.ಸಿ-೧೨೪೧ ಇವರುಗಳನ್ನು ಹಾಗೂ ಇಬ್ಬರು ಪಂಚ ಜನರಾದ ೧) ಶ್ರೀ ಆತೀಶ ತಂದೆ ಸುರೇಶ ಗಾಯಕವಾಡ ವಯ: ೩೨ ರ‍್ಷ ಜಾ: ಎಸ್.ಸಿ. (ಹೊಲೆಯ) ಉ: ಖಾಸಗಿ ಕೆಲಸ  ಸಾ|| ಸಿದ್ದರ‍್ಥ ನಗರ ಕಲಬುರಗಿ ಮತ್ತು ೨) ಶ್ರೀ ಶಿವುಕುಮಾರ ತಂದೆ ರಾಮಚಂದ್ರ ದುಮ್ಮನಸೂರ ವಯ: ೩೧ ರ‍್ಷ ಜಾ: ಎಸ್.ಸಿ(ಮಾದಿಗ) ಉ: ಕೂಲಿ ಕೆಲಸ ಸಾ|| ಬಸವ ನಗರ  ಕಲಬುರಗಿ ರವರನ್ನು  ಬರಮಾಡಿಕೊಂಡು ಅವರಿಗೆ ಸದರಿ ವಿಷಯ ತಿಳಿಸಿ ಅವರು ಮತ್ತು ಸಿಬ್ಬಂದಿಯೊಂದಿಗೆ  ಕೂಡಿಕೊಂಡು  ೦೪:೪೫ ಪಿಎಂ.ಕ್ಕೆ ಠಾಣೆಯಿಂದ ಹೊರಟು ಎಂ.ಎಸ್.ಕೆ ಮಿಲ್ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ೧/- ರೂಪಾಯಿಗೆ ೮೦/- ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನುಹಿಡಿದು ಕೊಂಡಿದ್ದು ಆಗ ಸಮಯ ೦೫:೦೦ ಪಿ.ಎಂ. ಆಗಿತ್ತು. ನಂತರ ಆತನ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವನು ತನ್ನ ಹೆಸರು ಮೆಹಬೂಬ ಸಾಬ @ ಬುಲಬುಲ್ ತಂದೆ ಮಸ್ತಾನ ಸಾಬ ವಯ: ೪೩ ರ‍್ಷ ಜಾ: ಮುಸ್ಲಿಂ ಉ: ಸೆಂಟ್ರಿಂಗ್ ಕೆಲಸ ಸಾ|| ದೇವಲಗಲ್ಲಿ ಎಂ.ಎಸ್.ಕೆ. ಮಿಲ್ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ೧) ನಗದು ಹಣ ರೂ. ೧೪೩೦/-  ೨) ಒಂದು ಬಾಲ ಪೆನ್ ಅ.ಕಿ. ೦೦ ಮತ್ತು ೩) ಎರಡು ಮಟಕಾ ಚೀಟಿಗಳು ಅ.ಕಿ. ೦೦ ಸಿಕ್ಕಿರುತ್ತವೆ. ನಂತರ ಸದರಿ ವ್ಯಕ್ತಿಗೆ ಮಟಕಾ ಚೀಟಿ ಬರೆದುಕೊಂಡು ಯಾರಿಗೆ ಕೊಡುತ್ತಿಯಾ ಅಂತ ಕೇಳಿದಾಗ ಅವನು ಮಟಕಾ ಚೀಟಿಗಳನ್ನು ಬರೆದುಕೊಂಡು ನಸೀರ ಗುಟುರ ಸಾ|| ಎಂ.ಎಸ್.ಕೆ. ಮಿಲ್ ಇತನಿಗೆ ಕೊಡುತ್ತೇನೆ ಅಂತ ತಿಳಸಿರುತ್ತಾನೆ. ನಂತರ ಸದರಿಯವನ ಹತ್ತಿರ ಸಿಕ್ಕ ಹಣ, ಬಾಲ್ ಪೆನ್ ಮತ್ತು ಮಟಕಾ ಚೀಟಿಗಳ  ಬಗ್ಗೆ  ೦೫:೦೦ ಪಿ.ಎಂ. ದಿಂದ ೦೬:೦೦ ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಕೇಸಿನ ಪುರಾವೆ ಕುರಿತು ಮುದ್ದೆಮಾಲು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ೦೬:೩೦ ಪಿ.ಎಂ.ಕ್ಕೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಪಿತನನ್ನು ಹಾಜರುಪಡಿಸಿ ಸರಕಾರದ ಪರವಾಗಿ ಜಪ್ತಿ ಪಂಚನಾಮೆಯೊಂದಿಗೆ ಈ ಫರ‍್ಯಾದಿ ನೀಡಿದ್ದು, ಸದರಿ ಫರ‍್ಯಾದಿ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲೆ ಠಾಣೆ ಗುನ್ನೆ ನಂ. ೧೪೩/೨೦೨೧  ಕಲಂ ೭೮(೩) ಕೆ.ಪಿ. ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 18-11-2021 12:00 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080