ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-17-10-2022 ರಂದು ಫಿರ್ಯಾದಿಯು ಠಾಣೆಗೆ ಹಾಜಾರಾಗಿ ನೀಡಿದ ಫಿರ್ಯಾದಿಯೇನೆಂದರೆ ನಾನು ಪಾನ್ ಡಬ್ಬ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು ನನ್ನ ಮಗ ಅಖಿಲೇಶ ಈತನಿಗೆ ದಿನಾಂಕಃ-೧೪/೧೦/೨೦೨೨ ಸಂಜೆ  ೭.೦೦ ಗಂಟೆಗೆ ನನ್ನನ್ಮ್ನ ಕರೆದುಕೊಂಡು ಬರಲು ನಾನು ಕರೆದಿದ್ದು ಅವನು ಬರುವಾಗ ಸದರಿ ಆರೋಪಿತರು ಅವನನ್ಮ್ನ ತಡೆದು ನಿಲ್ಲಿಸಿ ಏ ರಂಡಿ ಮಗನೆ ನಿನದು ಬಹಳ ಆಗಿದೆ ನಾವು ಇವತ್ತು ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಹೊಡೆ ಬಡೆ ಮಾಡಿ ರಕ್ತ ಗಾಯ ಮಾಡಿದ್ದು ಸದರಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ: 17.10.2022 ರಂದು ಸಾಯಂಕಾಲ 06:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಗೋವಿಂದರಾವ ತಂದೆ ದಾಮೋದರ ಆಳಂದಕರ್ ವಯ: 76 ವರ್ಷ ಜಾ: ಬ್ರಾಹ್ಮಣ ಉ: ನಿವೃತ್ತ ನೌಕರ ಸಾ|| ಪ್ಲಾಟ ನಂ. 270, ಶ್ರೀ ಭವಾನಿ, ಕೆ.ಹೆಚ್.ಬಿ.  ಅಕ್ಕಮಹಾದೇವಿ ಕಾಲೋನಿ, ಕಲಬುರಗಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನಿವೃತ್ತ ನೌಕರನಿದ್ದು ಮೇಲ್ಕಣಿಸಿದ ವಿಳಾಸದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು, ನಾನು ಕಲಬುರಗಿ ನಗರದ  ಎಸ್.ಬಿ.ಐ. ಬ್ಯಾಂಕ್ ಸಂಗಮೇಶ್ವರ ಕಾಲೋನಿ ಬ್ರಾಂಚನಲ್ಲಿ ಒಂದು ಉಳಿತಾಯ ಖಾತೆ ಹೊಂದಿದ್ದು  ಅದರ ಸಂಖ್ಯೆ 52204313529 ಇರುತ್ತದೆ. ಸದರಿ ಖಾತೆಗೆ ಎ.ಟಿ.ಎಂ. ಕಾರ್ಡ್ ಸಹ ಹೊಂದಿದ್ದು ಅದರ ವ್ಯವಹರಣೆಯನ್ನು ನಾನೇ ಮಾಡುತ್ತೇನೆ.   ಹಿಗಿದ್ದು ದಿನಾಂಕ: 03.10.2022 ರಂದು ಸಾಯಂಕಾಲ 05:20 ಪಿ.ಎಮ್.ಕ್ಕೆ ಹಣ ಪಡೆದುಕೊಳ್ಳುವ ಸಲುವಾಗಿ ನಮ್ಮ ಮನೆಯ ಹತ್ತಿರ ಇರುವ ಹೈಕೋರ್ಟ್ ಮೇನ್-ಗೇಟ್ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎ.ಟಿ.ಎಂ.ಗೆ ಹೋದಾಗ ನಾನು ಹಣ ತೆಗೆಯುವ ಸಲುವಾಗಿ ಎ.ಟಿ.ಎಮ್. ಮಶೀನನಲ್ಲಿ ಹಾಕಿದಾಗ ಹಣ ಬಂದಿರುವುದಿಲ್ಲ, ಆಗ ನನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ನನಗೆ ಸಹಾಯ ಮಾಡುತ್ತೇನೆ ಅಂತ ಅನ್ನುತ್ತಾ  ನನ್ನ ಅರಿವಿಗೆ ಬರದೇ ನನ್ನ ಎ.ಟಿ.ಎಮ್. ಕಾರ್ಡ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ನಂತರ ನಾನು ಮನೆಗೆ ಬಂದಿದ್ದು ಸುಮಾರು ಒಂದು ಗಂಟೆ ನಂತರ ಮನೆಗೆ ಹೋಗಿ ನೋಡಿದಾಗ ನನ್ನ ಮೊಬೈಲಗೆ ಸಂದೇಶ ಬಂದಿದ್ದೆನೆಂದರೆ, ನಾನು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಪ್ರೀನ್ಸ್ ಎ.ಟಿ.ಎಮ್.ದಿಂದ 9,500/-ರೂಪಾಯಿ ನಗದು ಹಣ ಹೀಗೆ 02 ಬಾರಿ ತೆಗೆದಿದ್ದು ಮತ್ತೆ ಅದೇ ಎ.ಟಿ.ಎಮ್.ದಿಂದ 1,000/-ರುಪಾಯಿ ನಗದು ಹಣ ತೆಗೆದಿದ್ದು ಇರುತ್ತದೆ. ನಂತರ ಹಿರಾಪೂರ ಕ್ರಾಸ್ ಬಳಿ ಇರುವ ರೆಡ್ಡಿ ಪೇಟ್ರೋಲಿಯಮ್ ಪಂಪದಿಂದ 10,000/-ರೂಪಾಯಿ ಹಾಗೂ 20,000/-ರೂಪಾಯಿ ನಗದು ಹಣ ಹೀಗೆ ಒಟ್ಟು 50,000/-ರೂ ನೇದ್ದರ ಹಣವನ್ನು ಯಾರೋ ಕಳ್ಳರು ನನ್ನ ಎ.ಟಿ.ಎಮ್. ಕಾರ್ಡ್ ಕಳ್ಳತನ ಮಾಡಿ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಬ್ಯಾಂಕ ಸ್ಟೇಟಮೆಂಟ ಪಡೆದುಕೊಂಡು ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ದಿನಾಂಕ: 03.10.2022 ರಂದು ನನ್ನ ಎ.ಟಿ.ಎಮ್. ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ ನನ್ನ ಉಳಿತಾಯ ಖಾತೆಯಿಂದ ನಗದು ಹಣ 50,000/- ರೂಪಾಯಿಗಳನ್ನು ಕಳ್ಳನನ್ನು ಪತ್ತೆ ಮಾಡಿ ಅವನ ವಿರುದ್ಧ ಕ್ರಮ ಜರುಗಿಸಿ ನನ್ನ ಹಣ ದೊರಕಿಸಿಕೊಡಲು ವಿನಂತಿ ಅಂತ ವಗೈರೆಯಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.\

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:17-10-2022 ರಂದು 3:30 ಪಿಎಮ್ ಕ್ಕೆ ಶ್ರೀ ಚಂದ್ರಶ್ಯಾ ತಂದೆ ಕಂಟೆಪ್ಪ ಸಾ: ಹಾರೂತಿ ಹಡಗಿಲ ತಾ:ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಅರ್ಜಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನನಗೆ ಸಂಬಂಧಿಸಿದ ಜಮೀನು ಸರ್ವೇ ನಂ:19  ವಿಸ್ತೀರ್ಣ 4.13 ಎ.ಗುಂಟೆ ಜಮೀನಿನಲ್ಲಿ ಸುಮಾರು 8 ವರ್ಷಗಳ ಹಿಂದೆ ಬೋರವೆಲ್ ಹಾಕಿಸಿದ್ದು ಸದರಿ ಬೋರವೆಲಗೆ ಪಿ.ಎಸ್.ಜಿ ಕಂಪನಿಯ 5 ಹೆಚ್.ಪಿ ಸಬ್-ಮರ್ಷಿಬಲ್ ಮೋಟಾರ, ಒಂದು ಸ್ಟಾರ್ಟರ್ ಮತ್ತು 200 ಪೀಟ್ ಕೇಬಲ ಹಾಕಿರುತ್ತೇನೆ. ಸದರಿ ಬೋರವೆಲನಿಂದ ಪ್ರತಿ ದಿವಸ ನನ್ನ ಜಮೀನಿಗೆ ನೀರು ಹಾಯಿಸಿ ಬೆಳೆ ಬೇಳೆಯುತ್ತೇನೆ. ನನಗೆ ಸಂಬಂಧಿಸಿದ ಜಮೀನಿನಲ್ಲಿರುವ  ಬೋರವೆಲ ಹತ್ತಿರ ಎರಡು ಕೋಣೆಗಳು ಮತ್ತು ಉಳ್ಳಿಗಡ್ಡಿ ಹಾಕುವ ಶೆಡ್ ಇರುತ್ತದೆ. ಶೆಡ್ ನಲ್ಲಿ ಆಕಳುಗಳನ್ನು ಕಟ್ಟುತ್ತೇವೆ. ಹೀಗಿದ್ದು ದಿನಾಂಕ:10-10-2022 ರಂದು ಬೆಳೆಗ್ಗೆ 9 ಗಂಟೆಗೆ ಬೋರವೆಲದಿಂದ ಹೊಲಕ್ಕೆ ನೀರು ಹಾಯಿಸುತ್ತಿರುವಾಗ ಸಾಯಂಕಾಲ 4ಪಿಎಮ್ ಕ್ಕೆ ಕರೆಂಟ್ ಹೋಗಿದ್ದರಿಂದ ಬೋರವೆಲ್ ಬಂದಾಗಿರುತ್ತದೆ. ಆಗ ನಾನು ಹೊಲದಿಂದ ಮನೆಗೆ ಬಂದಿರುತ್ತೇನೆ.  ದಿನಾಂಕ:11-10-2022 ರಂದು ಬೆಳೆಗ್ಗೆ 8 ಗಂಟೆಗೆ ನನ್ನ ಮಗನಾದ ಬಸವರಾಜ ಈತನು ನಮ್ಮ ಹೊಲಕ್ಕೆ ಹೋಗಿ ಬೋರವೆಲ್ ಚಾಲು ಮಾಡಲು ಹೋದಾಗ ಸ್ಟ್ರಾಟರ್, ಬೇರವೆಲನಲ್ಲಿದ್ದ ಮೋಟಾರ ಮತ್ತು 200 ಪೀಟ್ ಕೇಬಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಮನೆಗೆ ಬಂದು ನನಗೆ ತಿಳಿಸಿರುತ್ತಾನೆ. ಆಗ ನಾನು ನಮ್ಮ ಹೊಲಕ್ಕೆ ಹೋಗಿ ಬೋರವೆಲ್ ನೋಡಲಾಗಿ ಯಾರೋ ಕಳ್ಳರು ನನ್ನ ಬೋರವೆಲಿನ 5 ಹೆಚ್.ಪಿ ಮೋಟಾರ , ಒಂದು ಸ್ಟಾಟರ್ ಮತ್ತು 200 ಪೀಟ್ ಕೇಬಲ ಕಳ್ಳತನ ಮಾಡಿಕೊಂಡು ಹೋಗಿದ್ದನ್ನು ನೋಡಿ ಊರಲ್ಲಿ ಅಲ್ಲಿ ಇಲ್ಲಿ ಹುಡುಕಾಡಿದರೂ ನಮ್ಮ ಮೋಟಾರ, ಸ್ಟಾಟರ್ ಮತ್ತು ಕೇಬಲ ವೈಯರ ಸಿಕ್ಕಿರುವುದಿಲ್ಲ. ನಮ್ಮ ಊರಿನ ಜನರ ಮುಂದೆ ನಮ್ಮ ಬೋರವೆಲ್ ಕಳ್ಳತನ ಮಾಡಿಕೊಂಡು ಹೋದ ವಿಷಯ ತಿಳಿಸಿರುತ್ತೇನೆ. ಇಂದು ದಿನಾಂಕ:17-10-2022 ರಂದು ನಮ್ಮೂರಿನ ಕುತುಬಸಾಬ ತಂ/ಬಾಷಾಸಾಬ ಅಟೋ ಚಾಲಕ ಇತನು ನನಗೆ ತಿಳಿಸಿದ್ದೇನೆಂದರೆ ನಮ್ಮ ಹತ್ತಿರ ಕೆಲಸ ಮಾಡಿರುವ ಅನೀಲ ಮಡಿವಾಳ ಮತ್ತು ವಿಜಯಕುಮಾರ ತಂ/ಧೋಳಪ್ಪ ಮಡಿವಾಳ ಸಾ:ಹಾರೂತಿ ಹಡಗಿಲ ಇಬ್ಬರು ಸೇರಿಕೊಂಡು ದಿನಾಂಕ:11-10-2022 ರಂದು ಬೆಳೆಗ್ಗೆ ನನ್ನ 11 ಗಂಟೆಯ ಸುಮಾರಿಗೆ ಒಂದು ಮೋಟಾರ, ಸ್ಟಾರ್ಟ ಮತ್ತು ಕೇಬಲ ವೈಯರನ್ನು ನನ್ನ ಅಟೋದಲ್ಲಿ ಹಾಕಿಕೊಂಡು ಗಂಜಿಗೆ ಹೋಗಿ ಮಾರಾಟ ಮಾಡಿರುತ್ತಾರೆ ಅಂತ ತಿಳಿಸಿ ಅನೀಲ & ವಿಜಯಕುಮಾರವರು ಗಂಜಿನಲ್ಲಿ ಮಾರಾಟ ಮಾಡಿದ ಅಂಗಡಿ ನನಗೆ ತೋರಿಸಿದ್ದು, ಅಂಗಡಿಯಲ್ಲಿದ್ದ ಮೋಟಾರ್,ಸ್ಟಾರ್ಟ ಮತ್ತು ಕೇಬಲ್  ನನ್ನವೆ ಇರುತ್ತವೆ.ಕಾರಣ ನಮ್ಮ ಹೊಲದಲ್ಲಿದ್ದ ಬೋರವೆಲನ 5 ಹೆಚ್.ಪಿ ಸಬ-ಮರ್ಷಿಬಲ್ ಮೋಟಾರ ಅ.ಕಿ 25000/- , ಸ್ಟಾರ್ಟ ಅ.ಕಿ 5000/-  ಮತ್ತು 200 ಪೀಟ್ ಕೇಬಲ್  ಅ.ಕಿ 4000/- ಹೀಗೆ ಒಟ್ಟು 34,000/- ರೂ ಬೆಲೆಬಾಳುವ ಬೋರವೆಲ್ ಸಾಮರ್ಗಿಗಳನ್ನು ಕಳ್ಳತನ ಮಾಡಿಕೊಂಡು ಹೋದ ವಿಜಯಕುಮಾರ ತಂ/ಧೂಳಪ್ಪ ಮಡಿವಾಳ ಮತ್ತು ಅನೀಲ ಮಡಿವಾಳ ಸಾ: ಇಬ್ಬರೂ ಹಾರುತಿ ಹಡಗಿಲ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-11-2022 05:04 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080