Feedback / Suggestions

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:17.09.2022 ರಂದು 4 ಪಿಎಮ್ ಕ್ಕೆ ಕೇಂದ್ರ ಕಾರಾಗೃಹ ಕಲಬುರಗಿಯಿಂದ ಶ್ರೀ ಬಿ.ಎಮ್.ಕೋಟ್ರೇಶ ಮುಖ್ಯ ಅಧೀಕ್ಷಕರು ಅವರ ಸಿಬ್ಬಂದಿಯಾದ ಶ್ರೀ ಶ್ರೀಧರ ಬಿ.ಸಿ, ವಾರ್ಡರ್ ರವರಿಂದ ಕಳುಹಿಸಿದ ದೂರನ್ನು ಸದರಿ ಸಿಬ್ಬಂದಿಯವರು ಠಾಣೆಗೆ ತಂದು ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:17-09-2022 ರಂದು ಕಾರಾಗೃಹದ ಬ್ಯಾರಕ್ ಸಂಖ್ಯೆ 5 ರಿಂದ 7 ರ ವರೆಗೆ ಬೆಳೆಗಿನ ಪಹರೆಯ ಭದ್ರತೆಯನ್ನು ನಿರ್ವಹಿಸಲು ಈ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ಅರುಣ ಬೋಗಾರ, ವಾರ್ಡರ್ ಇವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅದರಂತೆ ದಿನಾಂಕ: 17-09-2022 ರಂದು ಬೀಗ ಮುದ್ರೆಯ ಪೂರ್ವದಲ್ಲಿ ಕಾರಾಗೃಹದ ಬ್ಯಾರಕ್ ಸಂಖ್ಯೆ 5 ರಿಂದ 7 ರ ಬ್ಯಾರಕಿನ ಮೇಲ್ಚಾವಣಿಯ ಮೇಲೆ ಬೆಳಿಗ್ಗೆ ಸಮಯ 6-20 ಘಂಟೆಗೆ ಸಿಸಿಟಿವಿ ಪಹರೆದಾರರು ಸಿಸಿಟಿವಿ ಪರಿಶೀಲಿಸುವ ವೇಳೆಯಲ್ಲಿ ನಿಷೇಧಿತ ವಸ್ತುಗಳು ಬಿದ್ದಿರುವ ಬಗ್ಗೆ ರಾತ್ರಿ ಪಹರೆದಾರಿಗೆ ಮಾಹಿತಿ ನೀಡಿರುವ ಮೇರೆಗೆ ಬ್ಯಾರಕ್ ಸಂಖ್ಯೆ 5 ರಿಂದ 7 ರ ವರೆಗಿನ ಕರ್ತವ್ಯ ನಿರತ ಪಹರೆ ಸಿಬ್ಬಂದಿಯಾದ ಶ್ರೀ ಅರುಣ ಬೋಗಾರ, ವಾರ್ಡರ್ ಇವರು  ಕಾರ್ಯನಿರ್ವಹಕ ಸಹಾಯಕ ಜೈಲರ್ ಆದ ಶ್ರೀಮತಿ ವಿಜಯಲಕ್ಷ್ಮಿ ಕುಲಕುಂದ, ರವರ ಸಮ್ಮುಖದಲ್ಲಿ ತಪಾಸಣೆ ಮಾಡುವ ವೇಳೆಯಲ್ಲಿ ಕಪ್ಪು ಹಾಗೂ ಹಳದಿ ಬಣ್ಣದ ಪ್ಲಾಸ್ಟಿಕ್ ಸುತ್ತಿರುವ 02 ಸಂಖ್ಯೆ ಕವರ್ಗಳು ದೊರೆತ್ತಿರುತ್ತವೆ. ಅವುಗಳನ್ನು ದಿನಾಂಕ:17-09-2022 ರಂದು ಬೆಳಿಗ್ಗೆ ಸಮಯ 7-00 ಗಂಟೆಗೆ ಕಾರಾಗೃಹ ಬಂದಿಗಳ ಬೀಗ ಮುದ್ರೆಯ ತೆರೆಯುವ ಸಮಯದಲ್ಲಿ ಸದರಿ ಪ್ಲಾಸ್ಟಿಕ್ ಕವರ್ನಲ್ಲಿರುವ ವಸ್ತುಗಳು ನಿಷೇಧಿತ ವಸ್ತುಗಳಿರುಬಹುದೆಂದು ಅನುಮಾನಸ್ಪದವಾಗಿ ಕಂಡು ಬಂದಿರುವುದರಿಂದ ಅವುಗಳನ್ನು ಕಾರ್ಯನಿರ್ವಾಹಕರ ಜೈಲರ್ರವರ ವಶಕ್ಕೆ ಒಪ್ಪಿಸಿರುತ್ತಾರೆ. ಮುಂದುವರೆದು ದಿನಾಂಕ:17-09-2022 ರಂದು ಕಾರಾಗೃಹದ ಮುಖ್ಯ ಕಾಂಪೌಂಡ್ ಗೋಡೆಯ ಹೊರಗೆ ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಗಳನ್ನು ರಾತ್ರಿ ಮತ್ತು ಹಗಲು ಪಹರೆಯ ಕರ್ತವ್ಯಕ್ಕೆ ನೇಮಿಸಲಾಗಿದ್ದರೂ ಸಹ ಕಾರಾಗೃಹದ ಮುಖ್ಯ ಕಾಂಪೌಂಡ್ ಹೊರ ಭಾಗದಿಂದ 2 ಸಂಖ್ಯೆಯ ಪ್ಲಾಸ್ಟಿಕ್ ಸುತ್ತಿದ ಕವರ್ ಎಸೆದಿದ್ದು, ಅದರಲ್ಲಿ 04 ಸಂಖ್ಯೆಯ ಮೊಬೈಲ್ ಫೋನ್ಗಳು, 1 ಸಂಖ್ಯೆಯ ಚಾಜರ್್ರ್ ಮತ್ತು 1 ಸಂಖ್ಯೆಯ ಈಯರ್ ಫೋನ್ ಇರುತ್ತವೆ. ಮೊಬೈಲ್ ಫೋನ್, ಚಾರ್ಜರ ಮತ್ತು ಈಯರ್ ಫೋನ್ ಯಾರ ಹೆಸರಿನಲ್ಲಿದೆ? ಜೈಲಿನೊಳಗೆ ಯಾರಿಗೆ ಸರಬರಾಜು ಮಾಡಲು ಪ್ರಯತ್ನಿಸಲಾಗಿದೆಂಬುದರ ಬಗ್ಗೆ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ.  ಕಾರಾಗೃಹದಲ್ಲಿ ದೊರೆತ್ತಿರುವ 02 ಸಂಖ್ಯೆ ಪ್ಲಾಸ್ಟಿಕ್ ಸುತ್ತಿರುವ ಕವರ್ನಲ್ಲಿರುವ ನಿಷೇಧಿತ ವಸ್ತುಗಳು ಈ ಕೆಳಗಿನಂತಿದೆ.

1.1 ಸಂಖ್ಯೆ ಸ್ಯಾಮ್ಸಾಂಗ್ ಮೊಬೈಲ್ ಫೋನ್ & ಬ್ಯಾಟರಿ

 IMEI  No.357672/70/055052/3

 1. 1 ಸಂಖ್ಯೆ ಸ್ಯಾಮ್ಸಾಂಗ್ ಮೊಬೈಲ್ ಫೋನ್ & ಬ್ಯಾಟರ         IMEI  No.356660/82/473078/3

 2. 1 ಸಂಖ್ಯೆ ಸ್ಯಾಮ್ಸಾಂಗ್ ಮೊಬೈಲ್ ಫೋನ್ & ಬ್ಯಾಟರಿ     IMEI  No. 356821/09/899537/5

 3. 1 ಸಂಖ್ಯೆ KECHADDA ಮೊಬೈಲ್ ಫೋನ್ & ಬ್ಯಾಟರಿ      IMEI  No. 1) 86000306115807

                    2) 860003061158088

 1. 01 ಸಂಖ್ಯೆ ಮೊಬೈಲ್ ಚಾರ್ಜರ.

 2. 01 ಸಂಖ್ಯೆಯ ಈಯರ್ ಫೋನ್.

ಆದುದರಿಂದ ಕರ್ನಾಟಕ ಕಾರಾಗೃಹಗಳ ನಿಯಮಗಳು 1974 ರ ನಿಯಮ 42 (3) ರ ಪ್ರಕಾರ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳು ನಿಷೇಧಿತ ವಸ್ತುಗಳು ಎಂಬುದಾಗಿ ಘೋಷಿಸಿರುವುದರಿಂದ ಸದರಿ ನಿಷೇಧಿತ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದು ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ಹಾಗೂ ಭಾ,ದ.ಸಂ. ಕಲಂ ಗಳಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ತಪಾಸಣೆ ವೇಳೆಯಲ್ಲಿ ದೊರೆತ್ತಿರುವ 04 ಸಂಖ್ಯೆಯ ಮೊಬೈಲ್ ಫೋನ್ಗಳು, 1 ಸಂಖ್ಯೆಯ ಚಾರ್ಜರ ಮತ್ತು 1 ಸಂಖ್ಯೆಯ ಈಯರ್ ಫೋನ್ಗಳನ್ನು ಶ್ರೀ ಶ್ರೀಧರ ಬಿ.ಸಿ, ವಾರ್ಡರ್ ರವರ ಹಸ್ತ ಈ ಪತ್ರದೊಂದಿಗೆ ಕಳುಹಿಸಿಕೊಡಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ:17.09.2022 ರಂದು ಬೆಳಗ್ಗೆ 8.30 ಗಂಟೆಗೆ ಫಿರ್ಯಾದಿ ಶ್ರೀ ಶರಣಬಸವ ತಂದೆ ಮಲ್ಲೇಶಪ್ಪಾ ಮಂದರವಾಡ ವಯ:35 ವರ್ಷ ಉ:ಸಮಾಜ ಸೇವೆ/ಪುಣ್ಯಕೋಟಿ ಗೋಶಾಲೆ ಅಧ್ಯಕ್ಷರು ಜಾತಿ:ಕಬ್ಬಲಿಗಾ ಸಾ:ಹಾಗರಗುಂಡಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:17.09.2022 ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಖಣದಾಳ ತಾಂಡಾದ ಕಡೆಯಿಂದ ಕಲಬುರಗಿ ಕಡೆಗೆ ಎರಡು ವಾಹನಗಳಲ್ಲಿ ದನಗಳನ್ನು ಹಾಕಿಕೊಂಡು ಬರುತ್ತಿದ್ದ ಬಗ್ಗೆ ಮಾಹಿತಿ ಗೊತ್ತಾಗಿದ್ದರಿಂದ ನಾನು ಖಣದಾಳ ರೋಡ ಮೂಖಾಂತರ ಖಣದಾಳಕ್ಕೆ ಹೋಗುವಾಗ ಬೆಳಗ್ಗೆ 6.30 ಗಂಟೆಗೆ ಖಣದಾಳ ಹಳ್ಳದ ಹತ್ತಿರ ಎರಡು ವಾಹನಗಳು ನಿಂತಿರುವುದನ್ನು ನೋಡಿದಾಗ ಅವುಗಳಲ್ಲಿ ದನಗಳು, ಎಮ್ಮೆಗಳು ಹಾಗೂ ಆಕಳು ಕರುಗಳು ಇದ್ದಿದ್ದು , ವಾಹನಗಳಲ್ಲಿ ಇವಳಿಗೆ ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಚಿತ್ರ ಹಿಂಸೆ ಕೊಟ್ಟು ವಾಹನದಲ್ಲಿ ನಿಲ್ಲಿಸಿ ಸಾಗಾಣೆ ಮಾಡುವ ಸಲುವಾಗಿ ನಿಂತಿದ್ದು , ನಂತರ ನಾನು ವಾಹನ ನಂಬರಗಳನ್ನು ನೋಡಲಾಗಿ 1) ಬುಲೆರೋ ಪಿಕಪ ವಾಹನ ಸಂಖ್ಯೆ ಕೆಎ-38/7886 ಅಂತಾ ಇದ್ದು ಇದರಲ್ಲಿ ಎರಡು ಕಪ್ಪು ಬಣ್ಣದ ಎಮ್ಮೆಗಳು ಅ:ಕಿ: 30,000/- ರೂ, ಹಾಗೂ ಒಂದು ಕೆಂಪು ಬಣ್ಣದ ಆಕಳು ಕರು ಇದ್ದಿದ್ದು ಅ:ಕಿ 5000/-ರೂ ಹಾಗೂ ಇನ್ನೊಂದು ವಾಹನ 2) ಅಶೋಕ ಲೇಲೆಂಡ ಮಿನಿ ಪಿಕಪ್ ಇದ್ದು ಅದರ ನಂಬರ ಕೆಎ-28/ಸಿ-1638 ಅಂತಾ ಇದ್ದು ಇದರಲ್ಲಿ ಎರಡು ಆಕಳುಗಳು ಅ:ಕಿ:15000/- ಹಾಗೂ ಮೂರು ಆಕಳಿನ ಕರುಗಳು ಅ:ಕಿ:15,000/-ರೂ ಇದ್ದು, ಇವುಗಳಲ್ಲಿ ಒಂದು ಆಕಳು ಕಪ್ಪು ಮಾಸ ಬಣ್ಣದು, ಒಂದು ಆಕಳು ಕೆಂಪು ಬಣ್ಣದ್ದು, ಒಂದು ಕಪ್ಪು ಮಾಸದ ಹೋರಗರು ಇದ್ದು, ಎರಡು ಬಿಳಿ ಬಣ್ಣದ ಆಕಳ ಕರುಗಳು ಇದ್ದಿದ್ದು, ನಾನು ಈ ಎರಡು ವಾಹನಗಳ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲಾಗಿ ವಾಹನ ಸಂಖ್ಯೆ ಕೆಎ-38/7886 ನೆದ್ದರ ಚಾಲಕ ಯಲ್ಲಪ್ಪಾ ತಂದೆ ಅಂಬಾಜಿ ಗಂಗಿಎತ್ತಿನವರ ಸಾ: ಖಣದಾಳ ಹಾಗೂ ವಾಹನ ಸಂಖ್ಯೆ ಕೆಎ-28/ಸಿ-1638 ನೆದ್ದರ ಚಾಲಕನಿಗೆ ಹೆಸರು ಕೇಳಲಾಗಿ ಆತನು ತನ್ನ ಹೆಸರು ಸಣ್ಣಯಲ್ಲಪ್ಪಾ ತಂದೆ ಅಂಬಾಜಿ ಗಂಗಿಎತ್ತಿನವರ ಸಾ: ಖಣದಾಳ ತಾಂಡಾ ಅಂತಾ ಹೇಳಿದ್ದು, ನಾನು ಕೂಡಲೇ ಫರಹತಾಬಾದ ಪೊಲೀಸ ಠಾಣೆಗೆ ಫೊನ್ನ ಮಾಡಿ ವಿಷಯ ತಿಳಿಸಿದಾಗ ಬೆಳಗ್ಗೆ 7 ಗಂಟೆಯ ಸುಮಾರಿಗೆ ಫರಹತಾಬಾದ ಪೋಲೀಸ ಠಾಣೆಯ ಸಿಬ್ಬಂದಿಗಳಾದ ಧರ್ಮಣ್ಣಾ ಸಿಹೆಚ್ಸಿ 219, ರಾಜಕುಮಾರ ಸಿಪಿಸಿ 140 ಹಾಗೂ ತಿರುಪತಿ ಸಿಪಿಸಿ 291 ರವರು ಸ್ಥಳಕ್ಕೆ ಬಂದ್ದಿದ್ದ ನಂತರ ನಾನು ಅಲ್ಲಿದ್ದ ವಾಹನಗಳ ಚಾಲಕರಿಗೆ ಈ ವಾಹನಗಳಲ್ಲಿ ಪ್ರಾಣಿಗಳಿಗೆ ಸಾಗಿಸುತ್ತಿದ್ದ ಬಗ್ಗೆ ಯಾವುದಾದರೂ ದಾಖಲಾತಿಗಳಿವೆ ಎಂದು ಪೊಲೀಸರು ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲಾ, ಸದರಿ ಜಾನುವರುಗಳನ್ನು ಕಲಬುರಗಿಯ ಶನಿವಾರ ಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ತಿಳಿಸಿದರಿಂದ ನಾನು ಪೊಲೀಸರ ಸಹಾಯದಿಂದ ಈ ಎರಡು ವಾಹನಗಳನ್ನು ಮುಂದಿನ ಕ್ರಮಕ್ಕಾಗಿ ಫರಹತಾಬಾದ ಪೊಲೀಸ ಠಾಣೆಗೆ ತಂದು ಹಾಜರಪಡಿಸಿರುತ್ತೆನೆ.  ಕಾರಣ ಈ ಮೇಲ್ಕಂಡ ವಾಹನಗಳಲ್ಲಿ ಯಾವುದೇ ದಾಖಲಾತಿಗಳಿಲ್ಲದೇ ಸದರಿ ದನ, ಕರುಗಳಿಗೆ ಹಾಗೂ ಎಮ್ಮೆಗಳಗೆ ಚಿತ್ರ ಹಿಂಸೆ ಕೊಟ್ಟು ಸಾಗಿಸುತ್ತಿದ್ದ ಯಲ್ಲಪ್ಪಾ ತಂದೆ ಅಂಬಾಜಿ ಗಂಗಿಎತ್ತಿನವರ ಸಾ: ಖಣದಾಳ ಹಾಗೂ ಸಣ್ಣಯಲ್ಲಪ್ಪಾ ತಂದೆ ಅಂಬಾಜಿ ಗಂಗಿಎತ್ತಿನವರ ಸಾ: ಖಣದಾಳ ತಾಂಡಾ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಲ್ಲಿಸಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:101/2022 ಕಲಂ 5,8,9,11 KARNTAKA PREVENTION OF COW SLANGHTER & CATTLE PREVENTION ACT-2020 & 11 PREVENTION OF CRUELTY TO ANIMALS ACT, 1960,   ಕಲಂ 192 ಐಎಮ್ವಿ ಎಕ್ಟ್ ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ 17-09-2022 ರಂದು ಖಚಿತ ಬಾತ್ಮಿ ಬಂದ ಮೇರೆಗೆ ಪಟ್ಟಣ ಗ್ರಾಮದ ಹತ್ತಿರ ಇರುವ ಜವಳಿ ಕಲ್ಯಾಣ ಮಂಟಪ  ಹಿಂದುಗಡೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಆಟ ಆಡುತ್ತಿರುವಾಗ ಸಿಬ್ಬಂದಿ ಜನರ ಸಮಕ್ಷದಲ್ಲಿ ಹೊಗಿ ದಾಳಿ ಮಾಡಿ ಆಪಾದಿತರಿಂದ ನಗದು ಹಣ : 35,200 /- ರೂ ಮತ್ತು ೫೨ ಇಸ್ಪಟ ಎಲೆಗಳು .ಕಿ ೦೦ ರೂ ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ ೧೪-೦೯-೨೦೨೨ ರಂದು ೧೧-೩೦ ಪಿ. ಎಮ್ ದಿಂದ ದಿನಾಂಕ ೧೫-೦೯-೨೦೨೨ ರ ೫-೩೦ ಎ.ಎಮ್ ಮಧ್ಯದ ಅವಧಿಯಲ್ಲಿ ಫರ‍್ಯಾದಿ ಕುಟುಂಬ ಸಮೇತ ಮನೆಯಲ್ಲಿ ಮಲಗಿದಾಗ ಯಾರೋ ಕಳ್ಳರು ಮನೆ ಬಾಗಿಲು ಮುರಿದು ಮನೆಯೊಳಗೆ ಬಂದು ಅಲಮಾರಿ ಮುರಿದು ೧,0೦,೬೦೦/- ರೂ ಕಿಮತ್ತಿನ ಬಂಗಾರ ಮತ್ತು ಬೆಳಿ ಹಾಗೂ ನಗದು ಹಣ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 06-10-2022 12:26 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080