ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :-ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೧೮/೦೯/೨೦೨೧ ರಂದು ಬೆಳಿಗ್ಗೆ ೫:೩೦ ಎ.ಎಮ್ ಕ್ಕೆ ಶ್ರೀ. ಗುಂಡಪ್ಪಾ ತಂದೆ ಭೀಮರಾಯ ಯರಬೋಳ ವಯಃ ೫೯ ರ‍್ಷ ಜಾತಿಃ ಲಿಂಗಾಯತ ಉಃ ಸಹ ಶೀಕ್ಷಕರು ಸಾಃ ಜವಳಗಾ ತಾಃ ಯಡ್ರಾಮಿ ಹಾ.ವಃ ಸಿದ್ದಾರೂಢ ಮಠದ ಹಿಂದೆ ಕೊಟನೂರ(ಡಿ) ಕಲಬುರಗಿ ಇವರು ಪೊಲೀಸ್ ಠಾಣೆಯಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡಿದ್ದು, ಸಾರಂಶವೆನೆಂದರೆ, ನಾನು ಗವಾರ ಗ್ರಾಮದ ತ್ರಿವಿಕ್ರಮಾನಂದ ಪ್ರೌಢ ಶಾಲೆಯಲ್ಲಿ ಸಹ ಶೀಕ್ಷಕ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ನನಗೆ ಶರಣಮ್ಮ ಹೆಂಡತಿ ಇದ್ದು, ನಮಗೆ ಮೂರು ಜನ ಹೆಣ್ಣು ಮಕ್ಕಳು ಒಬ್ಬನು ಗಂಡು ಮಗನಿರುತ್ತಾನೆ. ಮಗ ಭೀಮಾಶಂಕರ ವಯಃ ೨೭ ರ‍್ಷದವನಿದ್ದು, ಈತನು ವಿಧ್ಯಾಭ್ಯಾಸ ಮಾಡಿಕೊಂಡಿರುತ್ತಾನೆ. ಹೀಗಿದ್ದು, ನಿನ್ನೆ ದಿನಾಂಕ ೧೭/೦೯/೨೦೨೧ ರಂದು ರಾತ್ರಿ ೯:೩೦ ಗಂಟೆ ನಂತರ ಅಕ್ಕಮಹಾದೇವಿ ಕಾಲೋನಿಯಲ್ಲಿ ತನ್ನ ಗೆಳೆಯರಿರುವುದರಿಂದ ಅಲ್ಲಿಗೆ ಹೋಗಿ ಬರುತ್ತೆನೆಂದು ನಮ್ಮ ಸಂಬಂಧಿಕರ ಹಿರೊ ಸ್ಲೇಂಡರ ಮೋಟರ ಸೈಕಲ ನಂ. ಕೆಎ ೩೨ ಇ.ಎಕ್ಸ ೭೯೮೩ ನೇದ್ದನ್ನು ತೆಗೆದುಕೊಂಡು ಹೋದನು. ಮುಂದೆ ೧೦:೦೦ ಗಂಟೆ ಸುಮಾರಿಗೆ ಸಿರನೂರ ಗ್ರಾಮದ ಮಹೇಶ ತಂದೆ ಬಸವರಾಜ ಇವರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈತನ ೯:೫೦ ಗಂಟೆ ಸುಮಾರಿಗೆ ಹೈ ಕರ‍್ಟನ ಎದುರುಗಡೆ ಇರುವ ಅಕ್ಕ ಮಹಾದೇವಿ ಕ್ರಾಸಿನ ಹತ್ತೀರ ರೋಡ ಡಿವೈಡರಕ್ಕೆ ಮೋಟರ ಸೈಕಲ ನಂ. ಕೆಎ ೩೨ ಇ.ಎಕ್ಸ ೭೯೮೩ ನೇದ್ದರ ಮೇಲೆ ಭೀಮಾಶಂಕರ ಈತನು ರಾಮ ಮಂದಿರ ಕಡೆಯಿಂದ ಹೈಕರ‍್ಟ ಅಕ್ಕಮಹಾದೇವಿ ಕಾಲೋನಿ ಕಡೆಗೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹೈಕರ‍್ಟನ ಎದುರುಗಡೆ ಇರುವ ರೋಡ ಡಿವೈಡರ ಕಡೆಗೆ ತಾನೆ ಡಿಕ್ಕಿ ಹೊಡೆದುಕೊಂಡು ತಲೆಯ ಹಿಂಭಾಗಕ್ಕೆ ಭಾರಿ ಪ್ರಮಾಣದ ರಕ್ತಗಾಯ ಮತ್ತು ಬಲಭಾಗದ ಸೈಡಿಗೆ ರಕ್ತಸ್ರಾವ ಆಗಿ ಸ್ಧಳದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದಕ್ಕೆ, ನಾವು ಗಾಬರಿಗೊಂಡು ನಾನು, ನನ್ನ ಹೆಂಡತಿ ಶರಣಮ್ಮ ಹಾಗು ನಮ್ಮ ಅಣ್ಣನ ಮಗ ಶಿವಣ್ಣ ಕೂಡಿಕೊಂಡು ಸ್ಧಳಕ್ಕೆ ಹೋಗಿ ನೋಡಲಾಗಿ ಮಗ ಭೀಮಾಶಂಕರನು ಮೇಲಿನಂತೆ ಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿದ್ದು, ಮಹೇಶ ಪೊಲೀಸ್ ಪಾಟೀಲ ಇವರಿಗೆ ವಿಚಾರಿಸಲು ಈ ಮೇಲಿನ ವಿಷಯವನ್ನೆ ತಿಳಿಸಿರುತ್ತಾನೆ. ಕಾರಣ ನನ್ನ ಭೀಮಾಶಂಕರನು ಮೋಟರ ಸೈಕಲ ನಂ. ಕೆಎ ೩೨ ಇ.ಎಕ್ಸ ೭೯೮೩ ನೇದ್ದರ ಮೇಲೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಹೈಕರ‍್ಟ ಎದುರುಗಡೆ ಇರುವ ರೋಡ ಡಿವೈಡರಗೆ ಅಪಘಾತ ಪಡಿಸಿಕೊಂಡು ಭಾರಿಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿದ್ದು, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಮಗನ ಶವವನ್ನು ಮರಳಿ ಕೊಡಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ವಿಶ್ವವಿದ್ಯಾಲಯ ಪೊಲೀಸ ಠಾಣೆ :- ಇಂದು ದಿನಾಂಕ ೧೭-೦೯-೨೦೨೧ ರಂದು ೮.೩೦ ಪಿಎಮ್ ಕ್ಕೆ ಪರ‍್ಯಾದಿ ಶ್ರೀ ಮಹಾಂತಗೌಡ ತಂದೆ ಭೀಮರಾಯಗೌಡ ತುಪ್ಪದ ವಯ : ೪೧ ವರ್ಷ ಜಾತಿ : ಲಿಂಗಾಯತ ಉ : ಬಂಗಾರ ಅಂಗಡಿ ಸಾ: ರಾಜಮಹಲ ಲೇಔಟ ಕಲಬುರಗಿ ಮೊ.ನಂ. ೬೩೬೩೪೧೬೧೮೪ ಇದ್ದು. ನಾನು ಕಲಬುರಗಿ ನಗರದ ಶರಾಫ ಬಜಾರನಲ್ಲಿ ಶ್ರೀಗುರು ಬಸವ ಜ್ಯುವೇರ‍್ಸ ಅಂತಾ ಬಂಗಾರದ ಅಂಗಡಿ ಇಟ್ಟುಕೊಂಡು ಉಪ ಜೀವಿಸುತ್ತೇನೆ.ಹೀಗಿರುವಾಗ ನಿನ್ನೆ ದಿನಾಂಕ ೧೬-೦೯-೨೦೨೧ ರಂದು ರಾತ್ರಿ ೧೧.೩೦ ಪಿಎಮ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರೇಖಾ ಹಾಗು ಮಗಳು ಸ್ಮೀತಾ ಕೂಡಿ ಊಟ ಮಾಡಿಕೊಂಡು ಮನೆಯ ಒಳಗಿನದ ಬಾಗಿಲದ ಕೊಂಡಿ ಹಾಖಿಕೊಂಡು ಬೆಡ್‌ರೂಮದಲ್ಲಿ ಮಲಗಿಕೊಂಡಿದ್ದು ಇಂದು ದಿನಾಂಕ ೧೭-೦೯-೨೦೨೧ ರಂದು ಬೆಳಗಿನ ಜಾವ ೪:೪೦ ಎ ಎಮ್ ಸುಮಾರಿಗೆ ನನ್ನ ಹೆಂಡತಿಯು ಏನೋ ಸಪ್ಪಳ ಕೇಳಿ ಎದ್ದು ನೋಡಲಾಗಿ ಯಾರೋ ಅಪರಿಚಿತ ವ್ಯಕ್ತಿ ಮನೆಯ ಒಳಗಡೆಯಿಂದ ಹೊರಗಡೆ ಹೊಗುತ್ತಿದ್ದಾನೆ ಅಂತಾ ಹೇಳಿದಾಗ ನಾನು ಗಾಬರಿಯಾಗಿ ಎದ್ದು ನೋಡಲಾಗಿ ಬಾಗಿಲು ತೆರೆದಿದ್ದು ಹೊರಗೆ ಹೋಗಿ ನೋಡಲು ಯಾರು ಇರಲಿಲ್ಲ ನಂತರ ಮನೆÀಯ ಒಳಗೆ ಬಂದು ನೋಡಲಾಗಿ ಅಲಮಾರಿ ತೆದಿದು,್ದ ನೋಡಲಾಗಿ ಅಲಮಾರಿಯಟ್ಟಿದ್ದ ಬಂಗಾರದ ಸಾಮಾನುಗಳಾದ ೧) ೫೦ ಗ್ರಾಂ ಬಂಗಾರದ ಪಾಟ್ಲಿ ಅ.ಕಿ. ೨,೫೪,೯೨೬/- ರೂ. ೨) ೪೯.೦೯  ಗ್ರಾಂ ಬಂಗಾರದ ಬಿಲವಾರ ಅ.ಕಿ ೨,೫೪,೪೧೫/- ರೂ. ೩) ೨.೮ ಗ್ರಾಂ ಬಂಗಾರದ ರಿಂಗ ಅ.ಕಿ ೨೨,೩೫೫/- ರೂ ೪) ೫.೮೭ ಗ್ರಾಂ ಬಂಗಾರದ ರಿಂಗ ೩೭,೬೦೦/- ರೂ. ೫) ೪೮.೪೫೦ ಗ್ರಾಂ ಬಂಗಾರದ ಚೈನ ಅ.ಕಿ ೧,೩೮,೫೦೦/- ರೂ ೬) ೭.೯೮ ಗ್ರಾಂ ಡೈಮಂಡ ರಿಂಗ ಅ.ಕಿ. ೭೨,೭೦೦/- ರೂ ಹೀಗೆ ಒಟ್ಟು ಅ.ಕಿ ೭,೮೦,೪೯೬/- ಕಿಮ್ಮತ್ತಿ ಬಂಗಾರದ ಸಾಮಾನುಗಳು ಮತ್ತು ನಗದು ಹಣ ೧,೭೦,೦೦೦/- ರೂ ಕಳ್ಳತನವಾಗಿದ್ದವು. ಸದರಿ ಘಟನೆಯು ಬೆಳಗಿನ ಜಾವ ೪.೧೫ ಎ ಎಮ್ ದಿಂದ ೪.೪೦ ಎ ಎಮ್ ದ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ.ಕಾರಣ ಅಪರಿಚಿತ ವ್ಯಕ್ತಿ ಹೇಗೋ ನಮ್ಮ ಮನೆಯ ಬಾಗಿಲದ ಒಳಗಿನ ಕೊಂಡಿ ಮುರಿದು ಮನೆಯ ಒಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟ ಬಂಗಾರದ ಆಭರಣ ಮತ್ತು ನಗದು ಹಣ ಸೇರಿ ಹೀಗೆ ಒಟ್ಟು ಅ.ಕಿ ೯,೫೦,೪೯೬/- ಕಿಮ್ಮತ್ತಿನ ಸಮಾನುಗಳನ್ನು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇತ್ಯಾದಿ ಕೊಟ್ಟ ದೂರಿನ ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಮಹಿಳಾ ಪೊಲೀಸ ಠಾಣೆ:-  ಇಂದು ದಿನಾಂಕ ೧೭.೦೯.೨೦೨೧ ರಂದು ಸಾಯಂಕಾಲ ೭ ಗಂಟೆಗೆ ಫರ‍್ಯಾದಿ ಶ್ರೀಮತಿ ಶಿಲ್ಪಾ ಗಂಡ ನಿತೇಶ ಜಾಧವ ವಯಾ: ೨೨ ವರ್ಷ ಸಾ: ಸುವರ್ಣ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನಿತೇಶ ತಂದೆ ಅನಂತರಾವ ಜಾಧವ ಸಾ: ಸುವರ್ಣಾ ನಗರ ಕಲಬುರಗಿ ಇವರೊಂದಿಗೆ ನನ್ನ ತಂದೆ ತಾಯಿಯವರು ನಮ್ಮ ಸಂಪ್ರದಾಯದAತೆ ದಿನಾಂಕ ೧೦-೧-೨೦೨೧ ರಂದು ಕಲಬುರಗಿ ನಗರದಲ್ಲಿ ಬರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಲ್ಲಿ ೧೫ ತೊಲೆ ಬಂಗಾರ  ೧ಲಕ್ಷö ರೂಪಾಯಿ ಮತ್ತು ೧ಲಕ್ಷ ರೂಪಾಯಿಯ ಮೊಟಾರ ಸೈಕಲ್ ಹಾಗು ಗೃಹ ಬಳಕೆಯ ಅಂದಾಜ ೫ ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆ ನಂತರ ನನಗೆ ಗಂಡನ ಮನೆಯಲ್ಲಿ ನನ್ನ ಗಂಡ ಅತ್ತೆ. ಮಾವ ಸರಿಯಾಗಿ ಇಟ್ಟುಕೊಂಡಿದ್ದರು. ನನ್ನ ಗಂಡ ನನಗೆ ವಾಡಿಗೆ ಕೆರದುಕೊಂಡು ಅಲ್ಲಿ ಕೆವಲ ೮ ದಿವಸಗಳ ವರಗೆ ಇಟ್ಟುಕೊಂಡು ನಂತರ ಕಲಬುರಗಿಗೆ ಕರೆದುಕೊಂಡು ಬಂದು ಎ ರಂಡಿ ಬೋಷಡಿ ನೀನು ನಿನ್ನ ತವರಿನಿಂದ ೫ ತೊಲೆ ಬಂಗಾರ ಮತ್ತು ೩ ಲಕ್ಷ ರೂಪಾಯಿ ತರಬೇಕು ಅಂತ ಹೊಡೆ ಬಡೆ ಮಾಡಿ ನೀನು ನಮ್ಮ ಮನೆಯಲ್ಲಿ ಆಳು ಮಗನ ಹಾಗೆ ಕೆಲಸ ಮಾಡಿಕೊಂಡು ಮುಸರಿ ತೋಳೆಯುತ್ತ ಬಿಳಬೇಕು ಇಲ್ಲದಿದ್ದರೆ ನೀನಗೆ ಜೀವ ಸಹಿತ ಬಿಡುವದಿಲ್ಲಾ ಅಂತ ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆದು ನಾನು ನನ್ನ ಕೆಲಸಕ್ಕೆ ಹೊಗುತ್ತೆನೆ ಅಂತ ಹೋದನು. ದಿನಾಂಕ ೧೫-೩-೨೦೨೧ ರಂದು ಮದ್ಯಾಹ್ನ ೨ ಗಂಟೆಯ ಸುಮಾರಿಗೆ ನನ್ನ ಅತ್ತೆ ಶೋಭಾಬಾಯಿ ಮಾವ ಅನಂತರಾವ. ಮೈದುನರಾದ ಅಶೋಕ. ಸುಜೀತ. ಮತ್ತು ಸಂದೀಪ ಹಾಗು ನನ್ನ ಗಂಡನ ಚಿಕ್ಕಪ್ಪಾ ಸಂತೋಷ ಜಾಧವ ಮತ್ತು ಅವನ ಹೆಂಡತಿ ಉಷಾ ಜಾಧವ ಇವರೆಲ್ಲರು ಕೂಡಿಕೊಂಡು ಎ ರಂಡಿ ಭೊಷಡಿ ನಿನ್ನ ತಂದೆ ತಾಯಿಯವರು ನಿನ್ನ ಮದುವೆಯಲ್ಲಿ ಬಹಳ ಕಡಿಮೆ ವರದಕ್ಷಣೆ ಕೊಟ್ಟಿರುತ್ತಾರೆ.  ನಿನ್ನ ತವರಿನಿಂದ ಇನ್ನು ೫ ತೊಲೆ ಬಂಗಾರ ಮತ್ತು ೩ಲಕ್ಷ ರೂಪಾಯಿ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇಟ್ಟು ಕೊಳ್ಳುತ್ತೆವೆ ಅಂತ  ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ನನ್ನ ಗಂಡ ವಾಡಿಯಿಂದ ಆಗಾಗ ಮನೆಗೆ ಬಂದು ಏ ರಂಡಿ ನನ್ನ ತಂದೆ ತಾಯಿಯವರು ಹಾಗೂ ನಮ್ಮ ಕುಟುಂಬ ಸದಸ್ಯರು ಹೇಳಿದ ಮಾತು ಕೇಳಬೇಕು ಅವರು ಹೇಳಿದ ಹಾಗೆ ಕೆಲಸ ಮಾಡಿಕೊಂಡು ಬಿದ್ದಿರಬೇಕು. ಅಂತ ಹೇಳಿ ಮಾನಸಿಕ ಕಿರುಕೂಳ ನೀಡಿ ಹೊಡೆ ಬಡೆ ಮಾಡುತ್ತಾ ಬಂದಿರುತ್ತಾನೆ. ದಿನಾಂಕ ೬-೭-೨೦೨೧ ರಂದು ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ನನ್ನ ಅತ್ತೆ .ಮಾವ ಮತ್ತು ಮೈದುನರು ಹಾಗು ನನ್ನ ಗಂಡನ ಚಿಕ್ಕಪ್ಪಾ ಮತ್ತು ಚಿಕ್ಕಪ್ಪನ ಹೆಂಡತಿ ಎಲ್ಲರು ಕೂಡಿಕೊಂಡು ಏ ರಂಡಿ ಭೊಷಡಿ ನೀನು ನಿನ್ನ ತವರಿನಿಂದ ನಾವು ಹೇಳಿದಷ್ಟು ಹಣ ಮತ್ತು ಬಂಗಾರ ಏಕೆ ತರುತ್ತಿಲ್ಲಾ ಈಗ ನಮ್ಮ ಮನೆಯಲ್ಲಿ ಇರಬೇಡ ಅಂತ ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ನನಗೆ ವರಕ್ಷಣೆ ಕಿರುಕುಳ ನೀಡಿ  ಹೊಡೆ ಬಡೆ ಮಾಡಿ ಜೀವ ಭಯ ಹಾಕಿದ ನನ್ನ ಗಂಡ ಮತ್ತು ಅತ್ತೆ. ಮಾವ ಮೈದುನರು ಮತ್ತು ಗಂಡನ ಚಿಕ್ಕಪ್ಪಾ ಮತ್ತು ಸದರಿ ಚಿಕ್ಕಪ್ಪಾನ ಹೆಂಡತಿಯ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 22-09-2021 01:54 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080