ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ದಿನಾಂಕ:17-06-2022  ರಂದು ಮಧ್ಯಾಹ್ನ ೩.೦೦ ಗಂಟೆಗೆ ಘಟನಾ ಸ್ಥಳದಲ್ಲಿ ಫರ‍್ಯಾದಿ ಶ್ರೀ ರವಿಕುಮಾರ ತಂದೆ ಸುಭಾಷರಡ್ಡಿ ವ:೪೬ ವರ್ಷ  ಉ:ಕಾರ ಚಾಲಕ ಜಾತಿ:ರಡ್ಡಿ(ಮುನ್ನೂರರಡ್ಡಿ) ಸಾ:ಶೇಖ ರೋಜಾ ಕಲಬುರಗಿ ಇವರು ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡೇನು. ಸದರಿ ದೂರಿನ ಸಾರಾಂಶವೆನೆಂದರೆ  ಇಂದು ದಿನಾಂಕ ೧೭/೦೬/೨೦೨೨ ರಂದು ಬೆಳಿಗ್ಗೆ ೧೦-೦೦ ಗಂಟೆ ಸುಮಾರಿಗೆ ಮನೆಯಿಂದ ಕಿರಾಯಿ ಹೊಡೆಯುವ ಕುರಿತು ನನ್ನ ಇನೋವಾ ಕಾರ ತೆಗೆದುಕೊಂಡು  ಕಲಬುರಗಿ ನಗರ ಎಸ್.ಬಿ.ಎನ್.ಎಲ್. ಆಫೀಸ ಎದುರುಗಡೆ ಇರುವ ಕಾರಸ್ಟ್ಯಾಂಡನಲ್ಲಿ ಕಾರ ಹಚ್ಚಿ ಗಿರಾಕಿಗಾಗಿ ಕಾಯುತ್ತಾ ನಿಂತಾಗ ಮಧ್ಯಾಹ್ನ ೦೧-೦೦ ಗಂಟೆ ಸುಮಾರಿಗೆ ಕಾರ ಸ್ಟ್ಯಾಂಡನಿಂದ ಸ್ವಲ್ಪ ದೂರದಲ್ಲಿ ಇರುವ ಕೋಟೆ ಕಂಪೌಂಡ ಹತ್ತಿ ಏಕಿ ಮಾಡಲು ಹೋದಾಗ, ಕಂಪೌಂಡ ಗೋಡೆ ಆಚೆ ಇರುವ ಕಣ್ಣಿಗೆ ಕಾಣುವ ದೂರದಲ್ಲಿ ಕೋಟೆ ಒಳಗಡೆ ಇರುವ ಹಾಳು ಬಿದ್ದ ಬಾವಿಯಲ್ಲಿ ಒಬ್ಬ ವ್ಯಕ್ತಿಯ ಮೃತ ದೇಹ ಬೋರಲಾಗಿ ನೀರಿನಲ್ಲಿ ತೇಲಾಡುತ್ತಿದ್ದನ್ನು  ನೋಡಿದೆನು. ಈ ವಿಷಯ ಚೌಕ ಪೊಲೀಸ ಠಾಣೆಗೆ ಪೋನ ಮಾಡಿ ತಿಳಿಸಿದಾಗ ಸ್ವಲ್ಪ ಸಮಯದಲ್ಲಿ ಚೌಕ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಬಂದು ಕೋಟೆ ಕಂಪೌಂಡ  ಒಳಗಡೆ ಇರುವ ಹಾಳು ಬಿದ್ದ ಬಾವಿಯ ನೀರಿನಲ್ಲಿ ಬೋರಲಾಗಿ ತೇಲಾಡುತ್ತಿದ್ದ ಮೃತ ದೇಹವನ್ನು ನಾನು ಮತ್ತು ನನ್ನಂತೆ ಕಾರ ಚಾಲನೆ ಕೆಲಸ ಮಾಡುತ್ತಿದ್ದ ಸೈಯ್ಯದ ಜೈನೋದ್ದಿನ ಮತ್ತು ಅಲ್ಲಿಗೆ ಬಂದ ಫಹೀಮ ಮರ‍್ಜಾ ಹಾಗೂ ಆಟೋ ಚಾಲಕ ಉಸ್ಮಾನ ಮತ್ತು ಪೊಲೀಸರು ಎಲ್ಲರೂ ಕೂಡಿಕೊಂಡು ಮೃತ ದೇಹವನ್ನು ಹಾಳು ಬಾವಿಯಿಂದ ಹೊರಗಡೆ ತೆಗೆದು ಹೊರೆಗೆ ಹಾಕಿದಾಗ ಶವ ನೋಡಲಾಗಿ ಸದರಿ ಅಪರಿಚಿತ ವ್ಯಕ್ತಿ ಅಂದಾಜ ೨೫ ರಿಂದ ೩೦ ವರ್ಷ ವಯಸ್ಸಿನವನಿದ್ದು, ಅವನ ತಲೆಯಿಂದ ಕಾಲಿನ ಬೆರಳುಗಳ ವರೆಗೆ ಪೂರ್ತಿ ಚರ್ಮ ಬಿಳಿ ಮತ್ತು ಕೆಂಪು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಹುಳುಗಳು ಬಿದ್ದು ಡಿಕಾಂಪೋಜ್ ಆಗಿ ಶವದ ಚಹರೆ ಗುರುತು ಮತ್ತು ಅವನ ಮೈಮೇಲಿನ ಯಾವುದೇ ಗಾಯ ಗುರುತುಗಳು ಕಂಡು ಬರುತ್ತಿಲ್ಲಾ. ಬಾಯಿ ತೆರೆದು ನಾಲಿಗೆ ಕಚ್ಚಿದ್ದು ಕಂಡು ಬಂತು. ಅವನ ಮೈಮೇಲೆ ಒಂದು ಬಿಳಿ ಕರಿ ಕಪ್ಪು ಬೂದ ಬಣ್ಣದ ಚೌಕಡಿ ಶರ್ಟ, ಒಂದು ಕಪ್ಪು ಬಣ್ಣದ ಪ್ಯಾಂಟು, ಒಂದು ಕಪ್ಪು ಬಣ್ಣದ ಬನಿಯನ್, ಒಂದು ಚಾಕಲೇಟ್ ಕಲರ್ ಝಾಂಗ ಇದ್ದು. ಅಪರಿಚಿತ ವ್ಯಕ್ತಿ ಬಾವಿಯಲ್ಲಿ ಸುಮಾರು ೪-೫ ದಿವಸಗಳ ಹಿಂದೆ ಬಾವಿಯಲ್ಲಿ ಬಿದ್ದಂತೆ ಕಂಡು ಬರುತ್ತದೆ. ಅಪರಿಚಿತ ಗಂಡು ಮನುಷ್ಯ ೨೫ ರಿಂದ ೩೦ ವರ್ಷ ವಯಸ್ಸಿವನು ಕಳೆದ ೪-೫ ದಿವಸದ ಹಿಂದೆ ಸಂಡಾಸಕ್ಕೆ ಹೋಗಿ ಹೇಗೋ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿಬಹುದು ಅಂತಾ ಕಂಡು ಬಂದಿರುತ್ತದೆ. ಆದರೂ ಅವನ ಸಾವಿನ ಬಗ್ಗೆ ನನಗೆ ಸಂಶಯ ಇರುತ್ತದೆ. ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆ ಹಚ್ಚಿ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಬ್ರಹ್ಮಪೂರ ಪೊಲೀಸ್ ಠಾಣೆ :- ದಿನಾಂಕ: 17-06-2022  ರಂದು ೧೨:೩೦ ಪಿಎಮ್ ಕ್ಕೆ ಫಿರ್ಯಾದಿದಾರರಾದ ನಾಗರಾಜ ತಂದೆ ಯಲ್ಲಪ್ಪ ತೆಲಗೂರ ವಯ:೨೪ವರ್ಷ ಜಾ:ಮಾದಿಗ ಉ:ತರಕಾರಿ ವ್ಯಾಪಾರ ಸಾ//ಮನೆ ನಂ ಇ/೧/೪೧೯೨ ೧೪ಕ್ರಾಸ್ ತಾರಪೈಲ್ ಕಲಬುರಗಿ ನಗರ ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಸ್ಪ್ಲೆಂಡರ್‌ ಪ್ಲಸ್‌  ಮೋಟಾರ ಸೈಕಲ್ ನಂ: ಏಂ-೩೨- ಇಕಿ-೩೫೦೪ ನೇದ್ದು ಇದ್ದು ಸದರಿ ಮೋಟಾರ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ ಸೈಕಲವು ದಿನಾಂಕ: ೦೪/೦೬/೨೦೨೨ ರಂದು ಮದ್ಯಾನ ೦೧:೫೦ ಗಂಟೆಗೆ ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಪಕ್ಕದಲ್ಲಿರುವ ಕಿರು ಮೃಗಾಲಯದ ದ್ವಿಚಕ್ರ ವಾಹನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿ ಬಾಜು ಗಾರ್ಡನ್ ಒಳಗಡೆ ಹೋಗಿ ಜು ನೋಡಿಕೊಂಡು ಮರಳಿ ಅದೆ ದಿನ ಮದ್ಯಾನ ೦೩:೩೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ ಸೈಕಲ್ ನೋಡಲಾಗಿ ನನ್ನ ಮೋಟಾರ ಸೈಕಲ್ ಇರಲಿಲ್ಲಾ, ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೊಟಾರ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 18-06-2022 03:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080