ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ದಿನಾಂಕ 17-05-2022ರಂದು ಮಧ್ಯಾಹ್ನ ೦೧:೦೦ ಗಂಟೆಗೆ ಫರ‍್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿದ ದೂರು ಸಾರಾಂಶವೇನೆಂದರೆ, ನಾನು ದತ್ತು ತಂದೆ ಶಿವಪ್ಪ ಬರುಡ ವ:೩೫ವರ್ಷ  ಉ:ಸೆಕ್ಯೂರಿಟಿ ಗಾರ್ಡ ಜ್ಯಾ:ಮೆದಾ ಸಾ: ಗಾಂಧಿಚೌಕ ಆಲಮೇಲ ಜಿ:ವಿಜಯಪೂರ ಹಾ.ವ:ಫಿಲ್ಟರ್ ಕಮಾನ ಹತ್ತಿರ ಬಂಬೂ ಬಜಾರ ಕಲಬುರಗಿ ಆಗಿದ್ದು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನನ್ನ ಮಾವನವರಾದ ಶ್ರೀ ಪರಮಾನಂದ ತಂದೆ ಜಗದೇವಪ್ಪ ಇವರು ೨೦೧೬ನೇ ಸಾಲಿನಲ್ಲಿ ತಮ್ಮ ಹೆಸರಿನಲ್ಲಿ ಹಿರೋ ಸ್ಪ್ಲೇಂಡರ್ ಪ್ಲಸ್ ನಂ. KA32EM1090ನೇದ್ದು ಖರೀದಿ ಮಾಡಿದ್ದು ಆ ಮೋಟಾರ ಸೈಕಲನ್ನು ನನಗೆ ಉಪಯೋಗಕ್ಕಾಗಿ ಕಳೆದ ೭-೮ ವರ್ಷಗಳ ಹಿಂದೆ ನನಗೆ ಕೊಟ್ಟಿದ್ದು ಈ ಮೋಟಾರ ಸೈಕಲನ್ನು ನಾನೆ ಇಲ್ಲಿಯವರೆಗೆ ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು ದಿನಾಂಕ:೧೫/೦೨/೨೦೨೨ ರಂದು ಬೆಳಿಗ್ಗೆ ೦೮.೦೦ ಗಂಟೆಗೆ ಕುರಿ ಖರೀದಿ ಮಾಡಲು ನನ್ನ ಅಳಿಯನಾದ ಶ್ರೀ ಜಗನಾಥ ತಂದೆ ಗೋವಿಂದ ರವರೊಂದಿಗೆ ಎಪಿಎಂಸಿ ಒಳಗೆ ಹೋಗುವ ಕುರಿತು ನನ್ನ ಮೋಟಾರ ಸೈಕಲ್ ಎಪಿಎಂಸಿ ಗೇಟ ಎದುರುಗಡೆ ಇರುವ ಫಿಲ್ಟರ್ ಬೆಡ್ ಕಮಾನ ಹತ್ತಿರ ಇರುವ ಜೋಡ ಪೀರ ರ‍್ಗಾದ ಮುಖ್ಯ ದ್ವಾರದ ಹತ್ತಿರ ನಿಲ್ಲಿಸಿ ಹೋಗಿದ್ದು, ಕುರಿ ಖರೀದಿ ಮಾಡಿಕೊಂಡು ೮.೩೦ ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಕಾಣಿಸಲಿಲ್ಲ ಆವಾಗ ನಾವಿಬ್ಬರೂ ಕೂಡಿಕೊಂಡು ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳದ ಸುತ್ತಮುತ್ತ, ಕುರಿ ಮಾರ್ಕೇಟ , ಫಿಲ್ಟರ್ ಬೆಡ್ ಕಡೆಗೆ ಹುಡಕಾಡಿದರೂ ಸಿಗಲಿಲ್ಲ ಸದರಿ ನನ್ನ ಮೋಟಾರ ಸೈಕಲ್  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂದಿನಿಂದ ಇಂದಿನವರೆಗೆ ಎಲ್ಲಿಯಾದರೂ ಸಿಗಬಹುದೆಂದು ಕಲಬುರಗಿ ನಗರ ಗಂಜ ,ಫಿಲ್ಟರ್ ಬೆಡ್, ಗಂಜ ಕಾಲೋನಿ, ರೈಲ್ವೇ ಸ್ಟೇಶನ ಮತ್ತು ಕಲಬುರಗಿ ನಗರ ಹೊರವಲಯದಲ್ಲಿ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಹುಡುಕಾಡಿ ನನ್ನ ಮೋಟಾರ ಸೈಕಲ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಳ್ಳತನವಾದ ನನ್ನ ಮೋಟಾರ ಸೈಕಲ ವಿವರ ಈ ಕೆಳಗಿನಂತೆ ಇರುತ್ತದೆ.

೦೧.ಮೋಟಾರಸೈಕಲಮಾದರಿ&ನಂಬರ : HERO SPLENDOR +BSIII,KA32EM1090..೦೨. ಇಂಜನ್ ನಂಬರ: HA10EWGHE5108103. ಚೆಸ್ಸಿನಂಬರ:   MBLHA10BWGHE68285 ೦೪. ಮಾಡಲ್:   05/2016 ೦೫.ಬಣ್ಣ:  SILVER  ಕಲರ್ ೦೬.ಬೆಲೆ: ೨೭,೦೦೦/- ರೂ. ಕಾರಣ ಮಾನ್ಯರವರು HERO SPLENDOR+BSIII ನಂ. KA32EM1090 . ನೇದ್ದು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡ ಹೋದ ಯಾರೋ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನುಕ್ರ ಮಜರುಗಿಸಿ ನನ್ನ ಮೋಟಾರ ಸೈಕಲ್ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿ  ಅಂತ ಕೊಟ್ಟ ಫಿರ್ಯಾದಿಯ ಅರ್ಜಿಯ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ 17-05-2022  ರಂದು ೫:೦೦ ಪಿ.ಎಮ್ ಕ್ಕೆ ಎಮ್‌ಎಲ್‌ಸಿ ಕುರಿತು ಜಿಮ್ಸ ಆಸ್ಪತ್ರೆಗೆ ಭೇಟಿ ನೀಡಿದಾಗ  ಫಿರ್ಯಾದಿದಾರರಾದ ಶ್ರೀಮತಿ ಮಂಜುಳಾ ಗಂಡ ಮಲ್ಲಿಕಾರ್ಜುನ ಹುಗ್ಗಿ, ವಯ:೪೫ ವರ್ಷ ಉ: ಕೂಲಿ ಕೆಲಸ ಜಾ: ಹೊಲೆಯ ಸಾ: ಕೆಂಬ್ರಿಜ್ ಶಾಲೆಯ ಹಿಂದುಗಡೆ ಸೂಗೂರ ಮಠದ ಹತ್ತಿರ ಶಹಾಬಾದ ರೋಡ, ಕಲಬುರಗಿ ರವರು ಗಣಕೀಕೃತ ಮಾಡಿಸಿದ ದೂರು ಅರ್ಜಿ ಹಾಜರುಪಡಿಸಿದ್ದು, ಸದರಿ ದೂರು ಅರ್ಜಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ೬:೦೦ ಪಿ.ಎಮ್ ಕ್ಕೆ ಬಂದಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ದಿನಾಂಕ ೧೬-೦೫-೨೦೨೨ ರಂದು ಸಾಯಂಕಾಲ ೪.೦೦ ಗಂಟೆಗೆ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಮತ್ತು ೧) ಕುಮಾರ ತಂದೆ ಗಣಪತಿ ೨) ರಾಜು ತಂದೆ ಗಣಪತಿ ೩) ಚೌಡಮ್ಮಾ ಗಂಡ ಗಣಪತಿ ಇವರ ಮನೆಯಿಂದ ಹೋಗಿ ಬಂದು ಕೆಲಸ ಮಾಡುವುದು ಅವಶ್ಯಕತೆ ಇರುತ್ತದೆ. ಇವರೆಲ್ಲರೂ ಜಾತಿ: ಕಬ್ಬಲಿಗಾ (ಕೋಲಿ) ಸಮಾಜಕ್ಕೆ ಹೊಂದಿರುತ್ತಾರೆ. ನನಗೆ ಏ ರಂಡಿ ನಮ್ಮ ಮನೆಯ ಮುಂದಿನಿAದ ಯಾಕೆ ಹೊಗುತ್ತೀರಿ ಎಂದು ನೆಮ ಮಾಡಿಕೊಂಡು ನನಗೆ ರಂಡಿ, ಬೋಸಡೀ ಸೂಳೆ ಮಗಳೇ ಎಂದು ಬೈಯುತ್ತಿರುವಾಗ ನನಗೆ ಸುಮ್ಮನೆ ಯಾಕ  ಬೈಯುತ್ತಿದ್ದೀರಿ ಎಂದು ಕೇಳಿದರೆ ಆಗ ಅವರಿಗೂ ನಮಗೂ ಮಾತಿನ ಚಕಮಕಿಯಾಗುತ್ತಿದ್ದಾಗ ನಮ್ಮ ಮನೆಯ ಜೋಪಡಿ ಬಡಗಿ ಕಿತ್ತುಕೊಂಡು ಮೇಲೆ ನಮೂದಿಸಿ ಎಲ್ಲರೂ ಹೊಲೆ ಜಾತಿ ರಂಡಿ ನಿನ್ನದು ಬಾಳ ಆಗಿರುತ್ತದೆ ನಿಮಗೆ ಜೀವಂತ ಖಲ್ಲಾಸ ಮಾಡುತ್ತೇವೆ ಎಂದು ನನಗೆ ಹೊಡೆದು ಒಳಪಟ್ಟು ಮಾಡಿರುತ್ತಾರೆ. ಆಗ ನನ್ನ ಗಂಡನು ಬಿಡಿಸಲು ಬಂದರೇ ಅವನಿಗೂ ಸಹ ಹೊಡೆದು ಒಳಪೆಟ್ಟು ಮಾಡಿರುತ್ತಾರೆ, ರಂಡಿ ನಿನಗೆ ಟ್ರಾಕ್ಟರಗೆ ಕಟ್ಟಿ ಹಡತೀವಿ ನೋಡು ಯಾರ ಇದ್ದಾರೆ ನಿನ್ನ ಹಿಂದೆ ಹೊಲೆ ಜಾತಿ, ಕೀಳು ಜಾತಿ ರಂಡಿ ಮಕ್ಕಳಿಗೆ ಎಂದು ಹೊಡೆದಿರುತ್ತಾರೆ, ಮತ್ತು ನನಗೆ ಕೊಲೆ ಮಾಡುವ ಉದ್ದೇಶದಿಂಧ ಬಡಿಗೆ ಇಟ್ಟಂಗಿ ಕಲ್ಲಿನಿಂದ ಹೊಡೆದು ಕುತ್ತಿಗೆ ಒತ್ತುತ್ತಿದ್ದಾಗ ನಾನು ಪ್ರಜ್ಞೆ ತಪ್ಪಿ ಬಿದ್ದಿರುತ್ತೇನೆ ಆಗ ನನ್ನ ಪತಿಯವರು ತಂದು ನನಗೆ ಆಸ್ಪತ್ರೆಗೆ ಬಂದು ಅಡ್ಮಿಟ್ ಮಾಡಿರುತ್ತಾರೆ. ಹೊಡೆಯುವ ಸಮಯದಲ್ಲಿ ಸಿಟ್ಟಿನಿಂದ ನಮಗೆ ಒಂದು ವೇಳೆ ನೀವು ಪೊಲೀಸ ಕಂಪ್ಲೇಂಟ್ ಮಾಡಿದರೆ ಆ ಪೊಲೀಸರು ನಮಗೆ ಏನು ಮಾಡುವಂತಿಲ್ಲ ಅವರಿಗೆ ಸ್ವಲ್ಪ ಲಂಚದ ರೂಪದಲ್ಲಿ ಹಣ ಕೊಟ್ಟರೇ ಬಾಯಿ ಮುಚ್ಚಿಕೊಂಡು ಉಲ್ಟಾ ನಿಮಗೆ ಒದ್ದು  ಒಳಗೆ ಹಾಕುತ್ತಾರೆ. ಮತ್ತು ನೀವು ಕೇಸ್ ಮಾಡಿದರೇ ನಿಮ್ಮೇಲ್ಲರಿಗೂ ರಾತ್ರಿ ಸಮಯದಲ್ಲಿ ನಿಮ್ಮ ಮನೆಗೆ ಬೆಂಕಿ ಹಚ್ಚಿ ಜೀವಂತ ಸುಡುತ್ತೇವೆ ಎಂದು ಜೀವ ಬೇದರಿಕೆ ಕೂಡಾ ಹಾಕಿರುತ್ತಾರೆ. ಇವರು ಈ ತರಹ ಮಾತನಾಡಿದ್ದರಿಂದ ನಾವು ತುಂಬಾ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಈಗಂತು ದಿನನಿತ್ಯ ಮಿಡಿಯಾಗಳಲ್ಲಿ ಮತ್ತು ದಿನಪತ್ರಿಕೆಯಲ್ಲಿ ಸ್ವಲ್ಪ ಸ್ವಲ್ಪ ಮಾತಿಗೆ ಜಗಳ ಆಗಿ ಕೊಲೆಗಳು ಆಗುತ್ತಿರುವುದು ದಿನನಿತ್ಯ ನೋಡುತ್ತಿದ್ದೇವೆ, ಹೀಗಾಗಿ ಇವರು ಯಾವ ಸಮಯದಲ್ಲಿ ಏನು ಮಾಡಿಬಿಡುತ್ತಾರೆ ಎಂದು ನಮಗೆ ತುಂಬಾ ಭಯವಾಗುತ್ತಿದೆ.  ಆದಕಾರಣ ದಯಮಾಡಿ ತಾವುಗಳು ಸದರಿ ದೂರನ್ನು ಗಂಭೀರವಾಗಿ ಪರಿಗಣಿಸಿ ಕುಮಾರ ತಂದೆ ಗಣಪತಿ, ೨) ರಾಜು ತಂದೆ ಗಣಪತಿ ೩) ಚೌಡಮ್ಮಾ ಗಂಡ ಗಣಪತಿ, ಇವರೆಲ್ಲರೂ ಕೂಡಿಕೊಂಡು ನನಗೆ ರಂಡಿ, ಬೋಸಡೀ, ಸೂಳೆ ಮಗಳೇ ಹೊಲೆ ಜಾತಿ ಸೇರಿದವಳೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಒಳಪೆಟ್ಟು ಮಾಢಿ ಜೀವ ಬೇದರಿಕೆ ಹಾಖಿರುವ ಇವರ ಮೇಲೆ ಜಾತಿವೇದ ಕೇಸು ದಾಖಲಿಸಿ(ಅಟ್ರಾಸಿಟಿ) ಸೂಕ್ತವಾದ ಕಾನೂನು ಕ್ರಮ ಕೈಗೊಂಡು ನಮಗೆ ಜೀವ ರಕ್ಷಣೆ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ಮುಂದಿನ ದಿನಗಳಲ್ಲಿ ನನಗೆ ಮತ್ತು ನನ್ನ ಕುಟುಂಬದವರಿಗೆಜೀವಕ್ಕೆ ಏನಾದರು ತೊಂದರೆ/ ಹಾನಿಯಾದರೆ ೧) ಕುಮಾರ ತಂದೆ ಗಣಪತಿ, ೨) ರಾಜು ತಂದೆ ಗಣಪತಿ ೩) ಚೌಡಮ್ಮಾ ಗಂಡ ಗಣಪತಿ, ಇವರೆಲ್ಲರೂ ನೇರ ಹೊಣೆಗಾರರಾಗುತ್ತಾರೆ ಎಂದು ಈ ಮೂಲಕ ತಮ್ಮಲ್ಲಿ ಮತ್ತೊಮ್ಮೇ ವಿನಂತಿಸಿಕೊಳ್ಳುತ್ತೇನೆ. ಜಗಳದ ಸಮಯದಲ್ಲಿ ಶಿವರಾಜಕುಮಾರ ತಂದೆ ಸಾಯಬಣ್ಣ ಮಡಿವಾಳ ಅವರು ಜಗಳ ನೋಡಿರುತ್ತಾರೆ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 24-05-2022 03:30 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080