ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :-  ದಿನಾಂಕ 17-03-2022 ರಂದು ಬೆಳಿಗ್ಗೆ ೬:೦೦ ಗಂಟೆಗೆ ಶ್ರೀ. ನಾನು ಪ್ರಕಾಶ ತಂದೆ ವಿಠಲರಾವ ಜಮಾದಾರ ವಯಃ ೩೫ ವರ್ಷ ಜಾತಿಃ ಕಬ್ಬಲಿಗೇರ ಉಃ ಟೇಲರ ಕೆಲಸ ಸಾಃ ಭವಾನಿ ನಗರ ಹನುಮಾನ ಗುಡಿ ಹತ್ತೀರ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ ೧೬/೦೩/೨೦೨೨ ರಂದು ರಾತ್ರಿ ೧೧:೦೦ ಗಂಟೆ ನಂತರ ನನ್ನ ತಮ್ಮ ಚನ್ನವೀರ ಜಮಾದಾರ ಈತನು ನನಗೆ ಮನೆಯ ಹತ್ತೀರ ಸಿಕ್ಕಾಗ, ನಾನು, ಸೋಮರೆಡ್ಡಿ ತಂದೆ ಮಾಣಿಕರೆಡ್ಡಿ, ಸುಧಾಕರ ಬಂಡಾ ಮತ್ತು ಸುಖದೇವ ಜಮಾದಾರ ಎಲ್ಲರೂ ಕೂಡಿಕೊಂಡು ತಾವರಗೇರಾ ಕ್ರಾಸಿನ ಹತ್ತೀರ ಇರುವ ದಾಭಾಕ್ಕೆ ಹೊಗಿ ಊಟ ಮಾಡಿಕೊಂಡು ಬರುತ್ತೆವೆಂದು ಸೋಮರೆಡ್ಡಿ ಈತನ ಮೋಟರ ಸೈಕಲ ನಂ. ಕೆಎ ೩೨ ಇ.ಎಫ್ ೦೬೦೮ ನೇದ್ದರ ಮೇಲೆ ನನ್ನ ತಮ್ಮ ಚನ್ನವೀರ ಹಾಗು ಸೋಮರೆಡ್ಡಿ, ಇನ್ನೊಂದು ಮೋಟರ ಸೈಕಲದ ಮೇಲೆ ಸುಧಾಕರ ಬಂಡಾರಿ ಮತ್ತು ಸುಖದೇವ ಜಮಾದಾರ ರವರು ಕೂಡಿಕೊಂಡು ಹೋಗುವಾಗ ಸೋಮರೆಡ್ಡಿ ಈತನೆ ಮೋಟರ ಸೈಕಲ ನಡೆಯಿಸಿಕೊಂಡು ಹೋದನು. ಮುಂದೆ ಮಧ್ಯರಾತ್ರಿ ೦೦:೩೦ ಗಂಟೆ ಸುಮಾರಿಗೆ ಸುಧಾಕರ ಮತ್ತು ಸುಖದೇವ ಇವರು ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾವೆಲ್ಲರೂ ಊಟಕ್ಕೆ ದಾಭಾದ ಕಡೆಗೆ ಹೋಗುವಾಗ ಇಂದು ದಿನಾಂಕ ೧೭/೦೩/೨೦೨೨ ರಂದು ಈಗ ೦೦:೧೦ ಗಂಟೆ ಸುಮಾರಿಗೆ ಕಪನೂರ ಬ್ರಿಡ್ಜದಾಟಿ ಸಿಟಿ ಹೈವೆ ದಾಭಾದ ಎದುರುಗಡೆ ಹೋಗುವಾಗ ಎದುರುಗಡೆ ರೋಡಿನಿಂದ ಒಂದು ಡಿಜಲ್ ಟ್ಯಾಂಕರದ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಸೋಮರೆಡ್ಡಿ ಮತ್ತು ಚನ್ನವೀರ ಇವರು ಹೋಗುವ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಹಾರಿ ಮೋಟರ ಸೈಕಲ ಸಮೇತವಾಗಿ ರೋಡಿಗೆ ಬಿದ್ದಿದ್ದು, ಟ್ಯಾಂಕರದ ಚಾಲಕನು ಹಾಗೆ ವೇಗವಾಗಿ ಕಲಬುರಗಿ ಕಡೆಗೆ ಓಡಿಸಿಕೊಂಡು ಹೋದನು. ಚನ್ನವೀರ ಈತನಿಗೆ ತಲೆಯ ಭಾಗಕ್ಕೆ ಮತ್ತು ಅಲ್ಲಲ್ಲಿ ಭಾರಿಗಾಯವಾಗಿ ರಕ್ತಸ್ರಾವದಿಂದ ಸ್ಧಳದಲ್ಲಿಯೇ ಮೃತ ಪಟ್ಟಿರುತ್ತಾನೆ ಮತ್ತು ಸೋಮರೆಡ್ಡಿ ಈತನಿಗೆ ಬಲಭುಜಕ್ಕೆ ಭಾರಿ ಪ್ರಮಾಣದ ಗಾಯವಾಗಿ ಕೈ ಮುರಿದು, ಇತರೆ ಕಡೆಗಳಲ್ಲಿ ಗಾಯವಾಗಿರುತ್ತದೆ ಇವರನ್ನು ಖಾಸಗಿ ಅಂಬುಲೇನ್ಸದಲ್ಲಿ ಕಲಬುರಗಿ ಸರಕಾರಿ ಆಸ್ಪತ್ರೆಯ ಕಡೆಗೆ ತೆಗೆದುಕೊಂಡು ಹೋಗುತ್ತಿರುತ್ತವೆ ಅಂತಾ ತಿಳಿಸಿದಕ್ಕೆ, ಕೂಡಲೆ ನಾನು ಗಾಬರಿಗೊಂಡು ನಾನು ಮತ್ತು ಸೋಮರೆಡ್ಡಿ ಈತನ ಅಣ್ಣ ಸಂತೋಷ ರೆಡ್ಡಿ ಇಬ್ಬರೂ ಕೂಡಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಚನ್ನವೀರನಿಗೆ ಮತ್ತು ಸೋಮರೆಡ್ಡಿ ಇವರಿಗೆ ನೋಡಲು ಮೇಲಿನಂತೆ ಗಾಯವಾಗಿದ್ದು, ನನ್ನ ತಮ್ಮ ಚನ್ನವೀರ ಮೃತ ಪಟ್ಟಿದನು. ಮುಂದೆ ಸಂತೋಷರೆಡ್ಡಿ ಈತನು ಆತನ ತಮ್ಮನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾನೆ. ಅಲ್ಲಿಯೆ ಇರುವ ಸುಧಾಕರ ಮತ್ತು ಸುಖದೇವ ಇವರಿಗೆ ವಿಚಾರಿಸಲು ಈ ಮೇಲಿನ ವಿಷಯವನ್ನೆ ತಿಳಿಸಿರುತ್ತಾರೆ. ಕಾರಣ ನನ್ನ ತಮ್ಮ, ಆತನ ಗೆಳೆಯರೊಂದಿಗೆ ದಾಭಕ್ಕೆ ಊಟಕ್ಕೆ ಹೋಗಬೇಕೆಂದು ಹೋಗುವಾಗ ಎದುರುಗಡೆ ರೋಡಿನಿಂದ ಡಿಜಲ್ ಟ್ಯಾಂಕರದ ಲಾರಿಯ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ತಮ್ಮನು ಸ್ಧಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಸೋಮರೆಡ್ಡಿ ಈತನು ಭಾರಿಗಾಯಗೊಂಡಿದ್ದು ಅಪಘಾತ ಪಡಿಸಿದ ಟ್ಯಾಂಕರ ಚಾಲಕನು ಹಾಗೆ ತನ್ನ ವಾಹನವನ್ನು ಓಡಿಸಿಕೊಂಡು ಹೋಗಿದ್ದು, ಆತನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಹೇಳಿಕೆ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಸಬ್ ಅರ್ಬನ್ ಪೊಲೀಸ್ ಠಾಣೆ:-  ದಿನಾಂಕ. 17-03-2022  ರಂದು ೧೧;೩೦ ಎ.ಎಂ.ಕ್ಕೆ. ಪಿರ್ಯಾದಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದೆನೆಂದರೆ ನಾನು ಮಹೇಶ ತಂದೆ ಶಾಂತಪ್ಪಾ ರುದ್ರಕರ್ ವಯಾ: ೩೮ ವರ್ಷ ಜಾ: ಹರಿಜನ ಉ; ಖಾಸಗಿ ಶಿಕ್ಷಕ ಸಾ: ತಾಜ ಸುಲ್ತಾನಪೂರ ತಾ:ಜಿ: ಕಲಬುರಗಿ ಇದ್ದು ನಾವು ನಮ್ಮ ತಂದೆ-ತಾಯಿಗೆ ಒಟ್ಟು ಮೂರು ಜನ ೧) ನಾನು ೨) ಮನೋಹರ (ಮೃತ) ೩) ಸುಶೀಲಕುಮಾರ ಎಂಬ ಮಕ್ಕಳಿದ್ದು . ನಮ್ಮ ತಂದೆ-ತಾಯಿ ಸುಮಾರು ೧೦-೧೫ ವರ್ಷಗಳ ಹಿಂದೆ ಮರಣಹೊಂದಿದ್ದು ಇರುತ್ತದೆ. ನಾನು ಸಂತ ಜೇವಿಯರ್ಸ ಕಾಲೇಜಿನಲ್ಲಿ ಉಪನ್ಯಾಶಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು. ನನ್ನ ತಮ್ಮ ಮನೋಹರ ಇತನು ನಮ್ಮ ಸಂಬಂದಿಕರಲ್ಲಿಯ ಅಶ್ವೀನಿ ಎಂಬವಳೊಂದಿಗೆ ಮದುವೆಯಾಗಿದ್ದು ಅವರಿಗೆ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಇದ್ದಿರುತ್ತಾರೆ. ನನ್ನ ತಮ್ಮ ತನ್ನ ಕುಟುಂಬದೊಂದಿಗೆ ೧೦ ವರ್ಷಗಳಿಂದ ಪುಣೆಯಲ್ಲಿ ಚಾಲಕ ಕೆಲಸ ಮಾಡಿಕೊಂಡು ಇದ್ದಿರುತ್ತಾನೆ. ಇಲ್ಲಿ ನಾನು ಮತ್ತು ನನ್ನ ಇನ್ನೊಬ್ಬ ತಮ್ಮ ಸುಶೀಲಕುಮಾರ ಇರುತ್ತೇವೆ. ಹೀಗಿದ್ದು ದಿನಾಂಕ ೧೫/೦೩/೨೦೨೨ ರಂದು ನನ್ನ ತಮ್ಮ ಮನೋಹರ ಇತನು ಬೆಳಗಿನ ಜಾವ ನಮ್ಮ ಮನೆಗೆ ಬಂದಿದ್ದು ಬೆಳಿಗ್ಗೆ ಈಗ ಏಕೆ ಬಂದಿದೆ ಅಂತಾ ಕೇಳಿದಾಗ ನಾನು ತಿರುಪತಿಗೆ ಹೋಗುವುದಿದೆ ಅದಕ್ಕಾಗಿ ಬಂದಿದೆನೆ ಅಂತಾ ಹೇಳಿರುತ್ತಾನೆ. ನಂತರ ನಿನ್ನೆ ದಿನಾಂಕ ೧೬/೦೩/೨೦೨೨ ರಂದು ರಾತ್ರಿ ೦೮:೦೦ ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಹೊರಗಡೆ ಹೋಗಿರುತ್ತಾನೆ. ಆದರೆ ರಾತ್ರಿ ಆದರೂ ಮನೆಗೆ ಬರದೆ ಇರುವುದರಿಂದ ನಾನು ಮತ್ತು ನನ್ನ ತಮ್ಮ ಸುಶೀಲಕುಮಾರ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ರಾತ್ರಿ ಆಗಿರುವುದರಿಂದ ನಾವು ಮಲಗಿಕೊಂಡಿರುತ್ತೇವೆ. ಇಂದು ಬೆಳಿಗ್ಗೆ  ೧೦:೦೦ ಗಂಟೆ ಸುಮಾರಿಗೆ ಸುಲ್ತಾನಪೂರ ಪೊಲೀಸ ಕ್ವಾಟರಸ್ ಪಕ್ಕದ ಹೋಲದಲ್ಲಿ ಒಬ್ಬ ವ್ಯಕ್ತಿಗೆ ಕೊಲೆ ಮಾಡಿ ಸುಟ್ಟಿರುತ್ತಾರೆ ಅಂತಾ ಜನ ಅಂದಾಡುತ್ತಿರುವುದರಿಂದ ನಾನು ಮತ್ತು ನನ್ನ ತಮ್ಮ ಸುಶೀಲಕುಮಾರ ಹೋಗಿ ನೋಡಲು ಸುಟ್ಟ ಶವ ನೋಡಿದ್ದು ಅವನ ಕೈಯಲ್ಲಿ ಕಡ್ಯಾ ಇರುವುದನ್ನು ಮತ್ತು ಅವನು ಹಾಕಿಕೊಂಡಿರುವ ಕಪ್ಪು ಬಣ್ಣದ ಜಿನ್ಸ ಪ್ಯಾಂಟ ನೋಡಿ ನನ್ನ ತಮ್ಮನ ಶವ ಇರುವ ಬಗ್ಗೆ ಗುರ್ತಿಸಿದ್ದು ಇರುತ್ತದೆ. ಶವ ನೋಡಲು  ನನ್ನ ತಮ್ಮನ ಶವವು ಎಡಭಾಗ ಭುಜದ ಹತ್ತಿರ ಮತ್ತು ಎಡಕುತ್ತಿಗೆ ಗಾಯವಾಗಿರುವ ಬಗ್ಗೆ ಮತ್ತು ಎಡ ಎದೆಯ ಮೇಲಿನ ತೊಗಲು ಕಿತ್ತಿದಂತೆ ಮತ್ತು  ಎಡಗೈಯ ಅಂಗೈ ಬಾಗ ಪೂರ್ತಿ ಸುಟ್ಟು ಅಂಗೈ ಮೇಲ್ಭಾಗ ಕಟ್ ಆದಂತೆ  ಹಾಗು ಮುಖದ ಭಾಗ ಹೊಟ್ಟೆ, ಬೆನ್ನು ಸುಟ್ಟಿದ್ದು ಕಂಡುಬಂದಿರುತ್ತದೆ .  ನನ್ನ ತಮ್ಮನಿಗೆ ಯ್ಯಾರೋ ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಸಾಕ್ಷಿ ನಾಶ ಮಾಡಲು ಗುರ್ತುಸಿಗಬಾರದು ಅಂತಾ ಸುಲ್ತಾನಪೂರ ಕ್ವಾಟರ ಕೌಂಪೌಂಡಿಗೆ ಇರುವ ಸತೀಶ ತಂದೆ ರೇವಣಸಿದ್ದಪ್ಪಾ ಪಾಟೀಲ ರವರ ಹೋಲ ಸರ್ವೆ ನಂ ೧೨೪/೯ ರಲ್ಲಿ ಇರುವ ಜೋಳದ ಕಣಕಿದಲ್ಲಿ ಹಾಕಿ ಸುಟ್ಟಿದ್ದು ಇರುತ್ತದೆ. ಅಂದಾಜು ನಿನ್ನೆ ದಿನಾಂಕ ೧೬/೦೩/೨೦೨೨ ರಂದು ರಾತ್ರಿ ೧೦:೦೦ ಗಂಟೆಯಿಂದ ಇಂದು ದಿನಾಂಕ ೧೭/೦೩/೨೦೨೨ ರ ಬೆಳಗಿನ ೦೬:೦೦ ಗಂಟೆಯ ಮದ್ಯದಲ್ಲಿ ಮಾಡಿದ್ದು ಇರುತ್ತದೆ. ಕಾರಣ ಸದರಿ ನನ್ನ ತಮ್ಮನನ್ನು ಕೊಲೆ ಮಾಡಿದ ಆಪಾದಿತರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಈ ದೂರಿನ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಪಿರ್ಯಾದಿ ದೂರಿನ ಸಾರಾಂಶ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-04-2022 06:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080