ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ ಠಾಣೆ :-  ದಿನಾಂಕ: 17.02.2023 ರಂದು ಮಧ್ಯಾಹ್ನ 12.30 ಗಂಟೆಗೆ ಜಿಜಿಎಚ ಕಲಬುರಗಿ ಓಪಿ ಸಿಬ್ಬಂದಿಯವರು ಚೌಕ ಪೊಲೀಸ ಠಾಣೆಗೆ ಫೋನ ಮಾಡಿ ಕಲ್ಯಾಣರಾವ ಇತನ ಹಲ್ಲೆ ಎಂ.ಎಲ್.ಸಿ. ಇದೆ ಅಂತಾ ಫೋನ ಮಾಡಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ 12.45 ಗಂಟೆಗೆ ಭೇಟ್ಟಿ ಕೊಟ್ಟು ಎಂ.ಎಲ್.ಸಿ. ಸ್ವೀಕರಿಸಿಕೊಂಡು ಗಾಯಾಳು ಶ್ರೀ ಕಲ್ಯಾಣರಾವ ತಂದೆ ಶಿವಬಸಪ್ಪ ಉದಂಡಿ ವ:34 ವರ್ಷ ಉ:ಚಿತ್ರ ಕಲಾವಿದ ಕೆಲಸ ಜಾ:ಲಿಂಗಾಯತ ಸಾ: ಶಿವಾಜಿ ನಗರ ಖದ್ದಿ ಹೊಟೇಲ ಹತ್ತಿರ ಕಲಬುರಗಿ ಇವರಿಗೆ ವಿಚಾರಣೆ ಮಾಡಲಾಗಿ ಅವನು ತನ್ನ ಹೇಳಿಕೆ ಫಿರ್ಯಾದಿ ಬರೆಯಿಸಿದ್ದರ ಸಾರಾಂಶವೆನೆಂದರೆ  ನಾನು ಈ ಮೇಲ್ಕಾಣಿಸಿದ ವಿಳಾಸದ ನಿವಾಸಿತನಿದ್ದು ಚಿತ್ರಕಲಾ ಕೆಲಸ ಮಾಡಿಕೊಂಡು  ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನಂತೆಯೇ ಸಹ ನಮ್ಮ ಬಡಾವಣೆಯಲ್ಲಿ ಶುಭಂ ನಾಗಭುಜಂಗೆ ಮತ್ತು ಅವನ ತಮ್ಮನಾಗಿರುವ ರೋಹಿತ ನಾಗಭುಜಂಗೆ ಇತರರು ಸಹ ವಾಸವಾಗಿರುತ್ತಾರೆ. ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ದತ್ತ್ ಟ್ರಾನ್ಸಪೋರ್ಟ ಮಾಲೀಕರಾದ ರಾಜಕುಮಾರ ಬಡಿಗೇರ ಇವರೂ ತೀರಿಕೊಂಡಿದ ಪ್ರಯುಕ್ತ ನಾನು, ಮಲ್ಲಿಕಾರ್ಜುನ ಹೊಸಪೇಟ ಇವರ ಕಿರಾಣಿ ಅಂಗಡಿ ಮುಂದೆ 10.30 ಎಎಂಕ್ಕೆ ಮಾತಾಡುತ್ತಾ ಕುಳಿತುಕೊಂಡಿದೇವು. ಆ ಸಮಯದಲ್ಲಿ ನನ್ನ ಹತ್ತಿರ ಇದ್ದ ಮೋಬೈಲ ಅಲ್ಲೆ ಕೆಳಗಡೆ ಬಿದಿದ್ದು ನಂತರ ನನಗೆ ಗೊತ್ತಾಗಿ ನಾನು ಅಲ್ಲಿ ಇಲ್ಲಿ ಹುಡುಕಾಡಿದರೂ ನನ್ನ ಮೋಬೈಲ ಸಿಗಲಿಲ್ಲಾ. ನನ್ನ ಪಕ್ಕದಲ್ಲಿ ಕುಳಿತಿದ ಶುಭಂ ನಾಗಭುಜಂಗೆ ಎಂಬುವವರಿಗೆ ನನ್ನ ಮೋಬೈಲ ಕೊಡು ಅಂತಾ ಕೇಳಿದಾಗ ಇತನು ನಿನ್ನ ಮೋಬೈಲ ಕೊಡುತ್ತೇನೆ ನನಗೆ 2000/-ರೂ ಕೊಡು ಅಂತಾ ಹೇಳಿದ್ದರಿಂದ ನಾನು ಶುಭಂ ಇತನಿಗೆ ಸುಮ್ಮನೇ ಮಜಾಕ್ ಮಾಡಬೇಡ್, ನನ್ನ ಮೋಬೈಲ ಕೊಡು ಅಂತಾ ಅವನಿಗೆ ಕೇಳಿದಾಗ ಆತನು ಮೋಬೈಲ ಕೊಡದೇ ಸತಾಯಿಸುತ್ತಿದ್ದರಿಂದ ನಾನು ಸಿಟ್ಟಿಗೆ ಬಂದು ನನ್ನ ಮೋಬೈಲ ಕೊಡುರ್ಲೇ ಸುಳೆ ಮಕ್ಕಳೆ ಅಂತಾ ಬೈದಾದಿದ್ದಕ್ಕೆ ನನ್ನ ಮತ್ತು ಶುಭಂ ಮಧ್ಯದಲ್ಲಿ ಬಾಯಿ ಮಾತಿನ ತಕರಾರು ಆಯಿತು. ಅಷ್ಟರಲ್ಲಿಯೇ ಅಲ್ಲಿಂದ ಜನರೂ ನಮ್ಮಿಬ್ಬರಿಗೆ ಸಮಜಾಯಿಸಿ ಮನೆಗೆ ಕಳುಹಿಸಿಕೊಟ್ಟರು.  ನಾನು ನನ್ನ ಮನೆಗೆ ಹೊದೇನು. ಇದಾದ ಸ್ವಲ್ಪ ಸಮಯದಲ್ಲಿ ಅಂದಾಜು 10.45 ಎಎಂದಿಂದ 11.00 ಎಎಂದ ಅವಧಿಯಲ್ಲಿ ನನ್ನ ಮನೆಯ ಹತ್ತಿರ ಇದ್ದಾಗ ನನ್ನೊಂದಿಗೆ ತಕರಾರು ಮಾಡಿದ ಶುಭಂ ನಾಗಭುಜಂಗೆ ಮತ್ತು ಅವರ ತಮ್ಮನಾದ ರೋಹಿತ ನಾಗಭುಜಂಗೆ ಇಬ್ಬರೂ ಕೂಡಿಕೊಂಡು ಬಂದವರೇ ನಮ್ಮ ಮನೆಯ ಹತ್ತಿರ ಬಂದು ಹೊರಗಡೆ ಬಾರೋ ರಂಡಿ ಮಗನೇ, ಬೋಸಡಿ ಮಗನೇ ಅಂತಾ ಬೈದಾಡುತ್ತಿರುವುದನ್ನು ಕಂಡು ಮನೆಯಿಂದ ಹೊರಗಡೆ ಬಂದು ನನಗೇಕೆ ಬೈಯುತ್ತಿದ್ದೀರಿ ಅಂತಾ ಶುಭಂ ನಾಗಭುಜಂಗೆಗೆ ಕೇಳಿದಾಗ ನನಗೇಕೆ ಕೇಳುತ್ತಿಯೋ ರಂಡಿ ಮಗನೇ ಅಂತಾ ಅವಾಚ್ಯ ಬೈಯ್ಯುತಾ ಅವನ ತಮ್ಮ ರೋಹಿತ ನಾಗಭುಜಂಗೆ ನನಗೆ ಹಿಡಿದುಕೊಳ್ಳಲು ಹೇಳಿದಾಗ ಅವನು ಒತ್ತಿಯಾಗಿ ಹಿಡಿದುಕೊಂಡಾಗ ಶುಭಂ ನಾಗಭುಜಂಗೆ ರಂಡಿ ಮಗನೇ, ಇವತ್ತು ನಿನಗೆ ಜೀವ ಸಹೀತ ಬಿಡುವುದಿಲ್ಲಾ ಅಂತಾ ಹೇಳುತ್ತಾ ಅಲ್ಲೇ ಬಿದ್ದ ಕಲ್ಲನು ತೆಗೆದುಕೊಂಡು ತಲೆಯ ಮೇಲೆ ಜೋರಾಗಿ ಹೊಡೆದು ಭಾರಿರಕ್ತಗಾಯ ಪಡಿಸಿದನು. ಅವನ ತಮ್ಮ ರೋಹಿತ ಇತನು ನನಗೆ ನೆಲಕ್ಕೆ ಕೇಡುವಿ ಹೊಟ್ಟೆಯ ಮೇಲೆ, ಹೊಡೆದು ಗುಪ್ತಗಾಯ ಪಡಿಸಿದನು. ಇದನ್ನು ಕಂಡ ಅಲ್ಲೇ ಇದ್ದ ಶಶಾಂಕ ಸಾಗರ, ರೇವಣಸಿದ್ದಪ್ಪ ಬೇನ್ನೂರ ಇವರು ನೋಡಿ ಜಗಳಾ ಬಿಡಿಸಿರುತ್ತಾರೆ. ಮತ್ತು ನನಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ಶಶಾಂಕ ಇತನು ಕರೆದುಕೊಂಡು ಬಂದಿರುತ್ತಾನೆ. ಕಾರಣ ನನಗೆ ಹೊಡೆ ಬಡೆ ಮಾಡಿದ ಶುಭಂ ನಾಗಭುಜಂಗೆ ಮತ್ತು ಅವನ ತಮ್ಮನಾಗಿರುವ ರೋಹಿತ ನಾಗಭುಜಂಗೆ ಇವರುಗಳ ವಿರುಧ್ಧ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ  ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 15-02-2023  ರಂದು ಮದ್ಯಾಹ್ನ ೩-೦೦ ಪಿ.ಎಮ್ ಸುಮಾರಿಗೆ ಕಲಬುರಗಿ ನಗರದ ರಾಜಾಪೂರ ಜಮೀನ ಸರ್ವೆ ನಂ. ೧/೨ ನೆದ್ದರಲ್ಲಿ  ಪ್ಲಾಟ ನಂ.೯೭, ೯೮ ಎರಡು ಪ್ಲಾಟ ನೇದ್ದರಲ್ಲಿ. ಆರೋಪಿತರು ಫಿರ್ಯಾದಿಗೆ ಸದರಿ ಜಾಗದ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳೀಂದ ಬೈದು ರಾಢನಿಂದ ಹೊಡೆದು ಕುತ್ತಿಗೆ ಹಿಡಿದು ಕೊಲೆಗೆ ಪ್ರಯತ್ನ ಮಾಡಿದ್ದು ಅಲ್ಲದೆ ಜೀವ ಭಯ ಹಾಕಿರುತ್ತಾರೆ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 18-02-2023 01:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080