ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ ಠಾಣೆ:- 17.02.2022 ರಂದು ಸಂಜೆ ೦೬-೩೦ ಗಂಟೆಗೆ ನಮ್ಮ ಠಾಣೆಯ ಶ್ರೀ ರಾಜಶೇಖರ ವಿ. ಹಳಿಗೋಧಿ ಪಿ.ಐ. ಚೌಕ ಪೊಲೀಸ  ಠಾಣೆ  ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೇ ಮಾಲಿನೊಂದಿಗೆ ತಮ್ಮದೊಂದು ಸರಕಾರ ಪರ ದೂರು  ಮತ್ತು ಮಟಕಾ ದಾಳಿ ಜಪ್ತಿ ಪಂಚನಾಮೆ  ಕೊಟ್ಟಿದ್ದರ ಸಾರಾಂಶವೆನೆಂದೆರೆ, ಇಂದು ದಿನಾಂಕ ೧೭/೦೨/೨೦೨೨ ರಂದು ಮಧ್ಯಾಹ್ನ ೪-೧೫ ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ದೇವಿ ನಗರ ಕಮಾನ ಎದುರುಗಡೆ ಇರುವ ಜೈಭವಾನಿ ಮತ್ತು ಹೋಮ ಅಪ್ಲಾಯನ್ಸೆಸ್ ಅಂಗಡಿ ಎದುರಿನ ಖುಲ್ಲಾ ಜಾಗೆಯಲ್ಲಿ ಇಬ್ಬರು  ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದು ಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ ೧)ಶ್ರೀ ಮಾಹಾದೇವ ತಂದೆ ಶಿವಪ್ಪ ಯಾದಗೀರ ವ:೩೧ ವರ್ಷ ಉ: ಹಮಾಲಿ ಕೆಲಸ  ಜಾತಿ ಪ.ಪಂ. (ಬೇಡರ) ಸಾ:ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ೨)ಶ್ರೀ ಶರಣು ತಂದೆ ನಾಗೇಂದ್ರಪ್ಪ  ಕಾಂಬಳೆ ವ:೨೬ ವರ್ಷ ಉ: ಹಮಾಲಿ ಕೆಲಸ  ಜಾತಿ ಪ.ಜಾತಿ (ಮಾದಿಗ) ಸಾ; ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ಮತ್ತು ಸಿಬ್ಬಂದಿಯವರಾದ ಹೆಚಸಿ ೨೨೨ ಸಿದ್ರಾಮಯ್ಯ ಸಿಪಿಸಿ ೧೧೧ ಉಮೇಶ, ಸಿಪಿಸಿ ೭೯ ನಾಗೇಂದ್ರ, ಸಿಪಿಸಿ ೬೨೫ ಅಶೋಕ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ನಾವು ಪಂಚರು ಅದಕ್ಕೆ ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ನಂತರ ದಾಳಿ ಕುರಿತು ಸರಕಾರಿ ಜೀಪು  ಕೆಎ ೩೨ ಜಿ ೮೭೪ ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡು ಮಾನ್ಯ ಎ.ಸಿ.ಪಿ.(ಎನ್) ಉಪವಿಭಾಗ ಕಲಬುರಗಿ ರವರ ಮರ‍್ಗರ‍್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ ೪-೩೦ ಗಂಟೆಗೆ ಹೊರಟಿದ್ದು, ಜೀಪು ಹೆಚ.ಸಿ.೨೨೨ ಸಿದ್ರಾಮಯ್ಯ ಇವರು ಚಾಲನೆ ಮಾಡುತ್ತಿದ್ದರು. ತದನಂತರ ಚೌಕ ಸರ್ಕಲ್, ಶಹಾಬಜಾರ ನಾಕಾ ರೋಡ ಮುಖಾಂತರವಾಗಿ ಬಾತ್ಮಿ ಸ್ಥಳವಾದ ದೇವಿ ನಗರ ಕಮಾನ ಎದುರುಗಡೆ ಇರುವ ಜೈಭವಾನಿ ಮತ್ತು ಹೋಮ ಅಪ್ಲಾಯನ್ಸೆಸ್ ಅಂಗಡಿ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಜೈಭವಾನಿ ಮತ್ತು ಹೋಮ ಅಪ್ಲಾಯನ್ಸೆಸ್ ಅಂಗಡಿ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ನಿಂತು ನೋಡಲಾಗಿ ಇಬ್ಬರು ಜೈಭವಾನಿ ಮತ್ತು ಹೋಮ ಅಪ್ಲಾಯನ್ಸೆಸ್ ಅಂಗಡಿ ಎದುರಿನ ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ ೧ ರೂ.ಗೆ ೮೦ ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ, ನನ್ನ ಜೊತೆಯಲ್ಲಿ ಬಂದ ಪಂಚರಿಗೆ ಮತ್ತು  ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಸಂಜೆ ೦೫-೦೦ ಗಂಟೆಗೆ ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರು ದಾಳಿ ಮಾಡಿದಾಗ ಅವರಲ್ಲಿ ಒಬ್ಬನು ನಮ್ಮ ಪೊಲೀಸ ಸಮವಸ್ತ್ರ ನೋಡಿ ಅಲ್ಲಿಂದ ಓಡಿ ಹೋದನು. ಇನ್ನೊಬ್ಬನು ನಮ್ಮ ಕೈಯಲ್ಲಿ ಸಿಕ್ಕಿ ಬಿದ್ದನು. ಸಿಕ್ಕಿ ಬಿದ್ದವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ದಯಾನಂದ ತಂದೆ ಶರಣಪ್ಪ ಭಾಸಗಿ ವ:೨೭ ವರ್ಷ ಉ: ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಉಮ್ರಾಣಿ ತಾ: ಇಂಡಿ ಜಿ: ವಿಜಯಪೂರ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:೦೦ ರೂ. ಮತ್ತು ಒಂದು ಬಾಲಪೆನ್ನು ಅ:ಕಿ:೦೦ ರೂ. ಹಾಗೂ ನಗದು ಹಣ ೧೪,೫೦೦/- ರೂ. ದೊರೆತವು. ನಂತರ ಅವನಿಗೆ ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲೂ ಅವನ ಹೆಸರು ಬಸವರಾಜ ಹತಗುಂದಿ ಸಾ:ಶಿವ ನಗರ ಕಲಬುರಗಿ ಅಂತಾ ತಿಳಿಸಿದನು. ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ ಅವನು ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ. ಆಗ ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ. ಒಂದು ಬಾಲಪೆನ್ನು, ನಗದು ಹಣ ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ನನ್ನ ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು. ಮತ್ತು ದಯಾನಂದ ತಂದೆ ಶರಣಪ್ಪ ಭಾಸಗಿ ಸಾ: ಉಮ್ರಾಣಿ ತಾ: ಇಂಡಿ  ಮತ್ತು ಬಸವರಾಜ ಹತಗುಂದಿ ಸಾ:ಶಿವ ನಗರ ಕಲಬುರಗಿ ಇವರುಗಳು ಮಟಕಾ ಜೂಜಾಟದಲ್ಲಿ ನಿರತರಾದ ಬಗ್ಗೆ ಖಚಿತ ಪಟ್ಟಿದ್ದರಿಂದ ಅವನಿಗೆ ನಾನು ಮತ್ತು ಅವರ ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದು ಕೊಂಡೇವು. ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ ೧೫/೦೨/೨೦೨೨ ರಂದು ಸಂಜೆ ೦೫-೦೦ ಗಂಟೆಯಿಂದ ಸಂಜೆ ೦೬-೦೦ ಗಂಟೆಯವರೆಗೆ  ಸದರ ಸ್ಥಳದಲ್ಲಿ ಕುಳಿತು ಬರೆದು ಮುಗಿಸಲಾಯಿತು. ಮಟಕಾ ಜೂಜಾಟದಲ್ಲಿ ನಿರತನದ ದಯಾನಂದ ತಂದೆ ಶರಣಪ್ಪ ಭಾಸಗಿ ಸಾ: ಉಮ್ರಾಣಿ ತಾ: ಇಂಡಿ  ಮತ್ತು ಬಸವರಾಜ ಹತಗುಂದಿ ಸಾ: ಶಿವ ನಗರ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಿಕ್ಕಿ ಬಿದ್ದ ದಯಾನಂದ ಇತನಿಗೆ ಹಾಜರಪಡಿಸಿ ಆತನಿಂದ ಜಪ್ತಪಡಿಸಿಕೊಂಡ ಮುದ್ದೆ ಮಾಲು ಮತ್ತು ಅಸಲು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸರಕಾರ ಪರ ದೂರು ಕೊಟ್ಟಿರುತ್ತೇನೆ. ಈ ಕೂಡಾ ಮೂಲ ಸರಕಾರ ಪರ ದೂರು ಮತ್ತು ಮೂಲ ಜಪ್ತಿ ಪಂಚನಾಮ ಆಧರದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 22-02-2022 02:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080