ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 17/01/2023 ರಂದು ಬೆಳಿಗ್ಗೆ 11:30 ಗಂಟೆಗೆ ಶ್ರೀ. ಮಾಳಪ್ಪಾ ತಂದೆ ರಾಣೋಜಿ ಸಲಗರ ವಯಃ 48 ವರ್ಷ ಜಾತಿಃ ಮರಾಠಾ ಉಃ ಒಕ್ಕಲುತನ ಸಾಃ ಧರ್ಮವಾಡಿ ತಾಃ ಆಳಂದ ಜಿಲ್ಲಾಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೆನೆ. ನನಗೆ ಅಂಜುಬಾಯಿ @ ರಂಜುಬಾಯಿ ಎಂಬ ಹೆಂಡತಿ ಇದ್ದು, ನಗೆ ಒಟ್ಟು ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳಿದ್ದು, ಇವರಲ್ಲಿ ಚಿತಂಬರಾಯ ವಯಃ 19 ವರ್ಷದವನಿದ್ದು, ಈತನು ಗ್ಯಾರೇಜ ಇಟ್ಟಿಕೊಂಡು ಮೆಕ್ಯಾನಿಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ನಮ್ಮದೊಂದು ಹೊಸ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ಚಸ್ಸಿ ನಂ. MBLHAW125N9M43928  ಇಂಜನ ನಂ. HA11EYN9M05071  ನೇದ್ದು ಇದ್ದು, ಇದನ್ನು ನಾನು ಮತ್ತು ನನ್ನ ಮಗ ಚಿತಂಬರಾಯ ಈತನೆ ಉಪಯೋಗಿಸಿಕೊಂಡು ಬರುತ್ತಿರುತ್ತಾನೆ. ಹೀಗಿದ್ದು, ಮೊನ್ನೆ ಮಕರ ಸಂಕ್ರಾಂತಿ ಹಬ್ಬದ ನಿಮಿತ್ಯ ಮಗ ಚಿತಂಬರಾಯ ಈತನು ಈ ಮೋಟರ ಸೈಕಲನ್ನು ತೆಗೆದುಕೊಂಡು ಕಲಬುರಗಿಯಿಂದ ನಮ್ಮೂರಾದ ಧರ್ಮವಾಡಿಗೆ ಬಂದು ಹಬ್ಬ ಮುಗಿಸಿಕೊಂಡು ನಿನ್ನೆ ಕರಿ ಮುಗಿದ ನಂತರ ಇಂದು ದಿನಾಂಕ 17/01/2023 ರಂದು ಮಗನು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಕೆಲಸಕ್ಕಾಗಿ ಕಲಬುರಗಿಗೆ ಹೋಗುತ್ತೆನೆಂದು ಈ ಮೋಟರ ಸೈಕಲ ತೆಗೆದುಕೊಂಡು ಬಂದನು ಮುಂದೆ 9:40 ಗಂಟೆ ನಂತರ ನಮ್ಮೂರಿನ ರವಿಂದ್ರ ತಂದೆ ಶಿವರಾಯ ಮದನೆ ಹಾಗು ಸಂಗಮನಾಥ ತಂದೆ ಎಗಪ್ಪಾ ಬಿರಾದಾರ ಇವರು ನಮಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ಬೆಳಿಗ್ಗೆ 9:25 ಗಂಟೆ ಸುಮಾರಿಗೆ ಕಲಬುರಗಿ ರೋಡಿನ ಬಳ್ಳಾ ತೋಟದ ದಸ್ತಯ್ಯ ಕಡಗಂಚಿ ಹೊಲದ ಸಮೀಪದಲ್ಲಿ ನಿಮ್ಮ ಮಗ ಚಿತಂಬರಾಯ ಈತನು ಹಿರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ಚಸ್ಸಿ ನಂ. MBLHAW125N9M43928 ಇಂಜನ ನಂ. HA11EYN9M05071 ಇದರ ಮೇಲೆ ಕಲಬುರಗಿಗೆ ಹೋಗುವಾಗ ಕಲಬುರಗಿ ಕಡೆಯಿಂದ ಒಂದು ಐಚರ ವಾಹನ ನಂ. ಎಮ್.ಹೆಚ್ 12 ಎಮ್.ವಿ 0387 ಇದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಚಿತಂಬರಾಯನಿಗೆ ಮತ್ತು ಆತನ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಆತನು ಮೋಟರ ಸೈಕಲ ಸಮೇತ ಹಾರಿ ಬಿದ್ದ ಪ್ರಯುಕ್ತ ತಲೆಯ ಭಾಗಕ್ಕೆ, ಮುಖದ ಭಾಗಕ್ಕೆ, ಕೈ ಕಾಲುಗಳಿಗೆ ಭಾರಿಗಾಯವಾಗಿ ಸ್ಧಳದಲ್ಲಿ ರಕ್ತಸ್ರಾವದಿಂದ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನನ್ನ ಅಣ್ಣ ದತ್ತು ಸಲಗರ ಈತನೊಂದಿಗೆ ಸ್ಧಳಕ್ಕೆ ಕೂಡಲೆ ಬಂದು ಮಗನಿಗೆ ನೋಡಲಾಗಿ ಮೇಲಿನಂತೆ ಗಾಯಗಳಾಗಿ ಮತ್ತು ಘಟನೆ ಜರುಗಿ ಮೃತ ಪಟ್ಟಿದ್ದು, ಅಲ್ಲಿಯೇ ಇರುವ ರವಿಂದ್ರ ಮತ್ತು ಸಂಗಮನಾಥ ಈ ಮೇಲಿನ ಘಟನೆ ಬಗ್ಗೆ ಪುನಃ ತಿಳಿಸಿದರು. ಘಟನೆ ನಂತರ ಐಚರ ವಾಹನದ ಚಾಲಕನು ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಆತನಿಗೆ ನೋಡಿರುತ್ತೆವೆ ಅಂತಾ ಹೇಳಿದ್ದು, ಮುಂದೆ ಯಾವುದೋ ಖಾಸಗಿ ಅಂಬುಲೇನ್ಸ ಬಂದಿದ್ದು, ಅದರಲ್ಲಿ ಮಗನಿಗೆ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೆವೆ  ಕಾರಣ ಐಚರ ವಾಹನ ನಂ. ಎಮ್.ಹೆಚ್ 12 ಎಮ್.ವಿ 0387 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ 17-01-2023  ರಂದು ಬೆಳಿಗ್ಗೆ ೮:೩೦ ಗಂಟೆಯಲ್ಲಿ ಹಳೆ ಜೇವರ್ಗಿ ರಸ್ತೆಯ ಪಿಡಬ್ಲುಡಿ ಕ್ವಾಟರ್ಸ ಹತ್ತಿರ ಸಿಸಿ ರಸ್ತೆಯ ಮೇಲೆ ಹಳೆ ಜೇವರ್ಗಿ ರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಯಾರೋ ಒಬ್ಬನು ನನ್ನ ಹಿಂದೆಯಿಂದ ಬಂದು ನನ್ನ ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡು ನನ್ನ ಹಿಂದೆ ಓಡಿ ಹೋಗಿ ತನ್ನ ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಹೋಗಿರುತ್ತಾನೆ ನನ್ನ ೧) ವ್ಯಾನಿಟಿ ಬ್ಯಾಗ ಗ್ರೀನ್ ಬಣ್ಣದಿದ್ದು ಅಃಕಿ ೧೦೦/- ಸದರಿ ಬ್ಯಾಗಿನಲ್ಲಿದ್ದ ೨) ವಿವೋ ಕಂಪನಿಯ ಮೊಬೈಲ ಫೋನ ಅಃಕಿ 13000/- ಐಎಮ್‌ಇಐ ನಂ: 864302064368918/14/864302064368900/14 ೩) ಸ್ಯಾಮಸಂಗ ಕಂಪನಿಯ ಮೊಬೈಲ ಫೋನ ಅಃಕಿ 6000/-ಐಎಮ್‌ಇಐ ನಂ: 354483116458340/01/ 354484116458348/01-ಇರುತ್ತದೆ. ಹೀಗೆ ಒಟ್ಟು 19100/- ರೂ ಬೆಲೆಬಾಳುವುದನ್ನು ಕಿತ್ತುಕೊಂಡು ಹೋಗಿರುತ್ತಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 17-01-2023  ರಂದು ೧೨-೩೬ ಗಂಟೆಗೆ ಶ್ರೀ ಭೀರಪ್ಪ ತಂದೆ ಚಂದ್ರಾಮಪ್ಪಾ ಜೋಗರ ವಯಾ: ೫೦ ವರ್ಷ ಉ: ಸ-ಶಿಕ್ಷಕ ಜಾತಿ: ಕುರಬ ಸಾ: ನೆಲೋಗಿ ತಾ: ಜೇವರಗಿ ಹಾ.ವ ಕೊಟನೂರ (ಡಿ) ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ ಸಾರಾಂಶ ಏನಂದರೆ  ನನ್ನದೊಂದು ಹೊಂಡಾ ಶೈನ್ ಮೊಟಾರ ಸೈಕಲ ನಂ ಕೆಎ32/ ಇಕೆ-1402  ನೇದ್ದು ಇರುತ್ತದೆ. ದಿನಾಲು ನಾನು ನನ್ನ ಮೊಟಾರ ಸೈಕಲನ್ನು ರಾಮಮಂದಿರ ಸರ್ಕಲ ಜೇವರಗಿ ರೋಡಿನ ಹತ್ತಿರ ಇರುವ ಮರಗಮ್ಮ ಗುಡಿಯ ಹತ್ತಿರ ನಿಲ್ಲಿಸಿ ಹೋಗುತ್ತೇನೆ. ಹೀಗಿರುವಾಗ ದಿನಾಂಕ: 16-01-2023 ರಂದು ಮುಂಜಾನೆ ೦೮-೧೫ ಗಂಟೆಗೆ ಮೇಲೆ ನಮೂದಿಸಿದ ನನ್ನ ಹೊಂಡಾ ಶೈನ್ ಮೊಟಾರ ಸೈಕಲ ನಂ ಕೆಎ32/ ಇಕೆ-1402 ನೇದ್ದು ರಾಮಮಂದಿರ ಸರ್ಕಲ ಜೇವರಗಿ ರೋಡಿನ ಹತ್ತಿರ ಇರುವ ಮರಗಮ್ಮ ಗುಡಿಯ ಹತ್ತಿರ ನಿಲ್ಲಿಸಿ ಹೋಗಿರುತ್ತೇನೆ. ನನ್ನ ಮಗ ಚಂದ್ರಶೇಖರ ಇವರು ಮೊಟಾರ ಸೈಕಲ ತಾನು ಕಾಲೇಜಿಗೆ ಹೋಗುವ ಸಲುವಾಗಿ ತೆಗೆದುಕೊಂಡು ಹೋಗುವದಾಗಿ ಹೇಳಿದನು ಸ್ವಲ್ಪ ಸಮಯದ ಹತ್ತಿ ನನ್ನ ಮಗನು ಫೋನ ಮಾಡಿ ನಿವು ನಿಲ್ಲಿಸಿದ ಮೊಟಾರ ಸೈಕಲ ಕಾಣುತ್ತಿಲ್ಲಾ ಅಂತಾ ಹೇಳಿದಾಗ ನಾನು ಕೂಡಲೆ ನಮ್ಮ ಅಳಿಯ ಹಣಮಂತರಾಯ ಇವರಿಗೆ ಮೊಟಾರ ಸೈಕಲ ನಿಲ್ಲಿಸಿದ ಜಾಗಕ್ಕೆ ಹೋಗಲು ತಿಳಿಸಿರುತ್ತಾನೆ ಅವರು ಕೂಡ ಸ್ಥಳಕ್ಕೆ ಬಂದು ನೋಡಿದಾಗ ಮೊಟಾರ ಸೈಕಲ ಇರುವದಿಲ್ಲಾ ಅಂತಾ ತಿಳಿಸಿದನು ನಾನು ಕೂಡಲೆ ನಾಲವಾರದಿಂದ ಮನೆಗೆ ಬಂದಿರುತ್ತೇನೆ. ನಂತರ ಅಲ್ಲಿಂದ ನಾವು ಮೊಟಾರ ಸೈಕಲ ಇಟ್ಟ ಸ್ಥಳಕ್ಕೆ ಹೋದೆವು. ಮೊಟಾರ ಸೈಕಲ ಇರಲಿಲ್ಲಾ. ನಾವು ಅಲ್ಲೆ ಸುತ್ತಾಮುತ್ತಲು ಹುಡುಕಾಡಿದೇವು. ಆದರು ನಮ್ಮ ಮೊಟಾರ ಸೈಕಲ ಸಿಕ್ಕಿರುವದಿಲ್ಲಾ. ಕಾರಣ ಮೇಲೆ ನಮೂದಿಸಿದ ನನ್ನ ಹೊಂಡಾ ಶೈನ್ ಮೊಟಾರ ಸೈಕಲ ನಂ ಕೆಎ32/ ಇಕೆ-1402  Chassis No ME4JC651HFTO71354 Engine No JC65ET0102945 ಅ.ಕಿ 30,000/-ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ ಠಾಣೆ:-ದಿನಾಂಕ-17-01-2023 ರಂದು ಫಿರ್ಯಾಧಿದಾರರು ನಿಡಿದ ಫಿರ್ಯಾಧಿ ಸಾರಾಂಶವೆನೆಂದರೆ, ಫಿರ್ಯಾಧಿದಾರರು ದಿನಾಂಕ-೨೩/೧೨/೨೦೨೨ರಂದು ರಾತ್ರಿ ೧೧:೪೫ ಕ್ಕೆ ಕೆಲಸ ಮುಗಿಸಿಕೊಂಡು ಬಂದು ತಮ್ಮ ಮೋ.ಸೈಕಲ್ ನಂ ಕೆಎ-೩೨ ಹೆಚ್.ಸಿ-೪೯೨೦ ಅ.ಕಿ ೩೦,೦೦೦/- ನೇದ್ದನ್ನು ತಾವು ಇರುವ ಬಾಡಿಗೆ ಮನೆಯಮುಂದೆ ನಿಲ್ಲಿಸಿ ವಿಶ್ರಾಂತಿ ಕುರಿತು ಹೋಗಿ ಮರುದಿನ ದಿನಾಂಕ-೨೪/೧೨/೨೦೨೨ ರಂದು ಬೆಳಿಗ್ಗೆ ೦೫:೩೦ ಕ್ಕೆ ಎದ್ದು ನೊಡುವಷ್ಟರಲ್ಲಿ ರಾತ್ರಿ ನಿಲ್ಲಿಸಿದ ಮೊ.ಸೈಕಲ್ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಸಿಗದ ಕಾರಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-15-01-2023  ರಂದು ಫಿರ್ಯಾದಿಯು ಕಾಕಡೆ ನಗರದ ತನ್ನ ಬೈಕ್ ನಂ ಕೆಎ 32 ಇಎಮ್ 2424 ಅನ್ನು ಕೆಲಸ ಮುಗಿಸಿಕೊಂಡು ಬಂದು ತನ್ನ ಮನೆಯ ಎದುರುಗಡೆ ನಿಲ್ಲಿಸಿ ಮಧ್ಯಾಹ್ನ್ ೦೨.೩೦ ಪಿಎಮ್ ಗಂಟೆಗೆ ಮನೆಯ ಒಳಗೆ ಊಟ ಮಾಡಲೆಂದು ಹೋಗಿದ್ದು ೩.೩೦ ಗಂಟೆಗೆ ಬಂದು ನೋಡಲು ತಾನು ನಿಲ್ಲಿಸಿದ ಜಾಗದಲ್ಲಿ ಬೈಕ್ ಇರದ ಕಾರಣ ಅದನ್ನು ಎಲ್ಲಾ ಕಡೆ ಹುಡುಕಾಡಿದರು ಅದು ನಮಗೆ ದೊರಕಿರುವುದಿಲ್ಲ ಸದರಿ ನಮ್ಮ ಬೈಕ್ ಅನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು  ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 20-01-2023 11:28 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080