Feedback / Suggestions

ರೋಜಾ ಪೊಲೀಸ ಠಾಣೆ :- ದಿನಾಂಕ: 15/11/2022 ರಂದು ಮಧ್ಯಾಹ್ನ 15.30 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಅಣ್ಣನ ಮಗಳಾದ ನೇಹಾ ಕಶಫ್ ಇವಳೊಂದಿಗೆ ಪ್ರೀತಿ ಮಾಡಿರುವ ಆಮೇರ ಇತನ ಮೇಲೆ ಮತ್ತು ಆತನ ಗೆಳಯರೊಂದಿಗೆ ಕೂಡಿ ಬಂದು ಫಿರ್ಯಾದಿ ಹಾಗೂ ಆತನ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಬ್ಬಿಣದ ರಾಡಿನಿಂದ ಹೊಡೆಬಡೆ ಮಾಡಿ ಗಾಯಪಡಿಸಿ ಚಾಕುವಿನಿಂದ ಫಿರ್ಯಾದಿ ಮಗನಿಗೆ ಜೋರಾಗಿ ಬೆನ್ನಿಗೆ ಚುಚ್ಚಿ ಭಾರಿ ಗಾಯ ಪಡಿಸಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿಬೇಕೆಂದು ನೀಡಿದ್ದರ ದೂರಿನ ಅನ್ವಯ ತನಿಖೆ ಕೈಕೊಂಡಿದ್ದು ಗಾಯಾಳು ಮುದ್ದಸಿರ ಈತನು ಚಿಕಿತ್ಸೆ ಫಲಕಾರಿಯಾಗದೇ ಮಣ್ಣೂರ ಆಸ್ಪತ್ರೆ ಕಲಬುರಗಿಯಲ್ಲಿ ದಿನಾಂಕ 15/11/2022 ರಂದು ರಾತ್ರಿ 10-00 ಗಂಟೆಗೆ ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ 302 ಐಪಿಸಿ ಅಳವಡಿಸಿಕೊಂಡ ಬಗ್ಗೆ ವರದಿ.

 

 

ಸಿ.ಇ.ಎನ್‌ ಪೊಲೀಸ್‌‍ ಠಾಣೆ :- ಈ ಮೂಲಕ ಮಾನ್ಯರವರಲ್ಲಿ ವರದಿ ಸಲ್ಲಿಸುವುದೆನೆಂದರೆ, ನಾನು ಅಮರನಾಥ ಸಿಪಿಸಿ: ೨೭೩ ಮತ್ತು ಗೋಪಾಲ್ ಸಿ.ಪಿ.ಸಿ-೧೩೨ ರವರು ಕೂಡಿಕೊಂಡು ಮಾನ್ಯರವರ ಆದೇಶದಂತೆ ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ  ಸೇವನೆ ಮಾಡುವವರ ಮಾಹಿತಿ ಸಂಗ್ರಹ ಮತ್ತು ಬೀಟ್ ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ: ೧೫/೧೧/೨೦೨೨ ರಂದು ೧೯-೩೦ ಗಂಟೆಗೆ ಹೊರಟು ಕಲಬುರಗಿ ನಗರದ ವಿವಿಧ ನಗರದ ಹಾಗೂ ಗಲ್ಲಿಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡಿಕೊಂಡು ನಂತರ ಸಮಯ ರಾತ್ರಿ ೨೦-೦೦ ಖಾದಿಮ್ ಕರ್ಬಸ್ತಾನ್ ಎಮ್.ಎಸ್.ಕೆ ಮಿಲ್ ರೋಡ್ ಹತ್ತಿರ ಹೋಗಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ಆತನು ತನ್ನ ಹೆಸರು ಅಬು ಶೇಖ್ ತಂದೆ ಯೂಸುಫ್ ಶೇಖ್ ವಯ|| ೨೨ ವರ್ಷ ಜಾತಿ|| ಮುಸ್ಲಿಂ ಉ||  ವಾಟರ್ ಸರ್ವಿಸಿಂಗ್ ಕೆಲಸ ಸಾ|| ಅಶೋಕ ನಗರ ವಾಟರ್ ಟ್ಯಾಂಕ್ ಹತ್ತಿರ ಕಲಬುರಗಿ ಅಂತಾ ತೊದಲುತ್ತಾ ತಿಳಿಸಿದ್ದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಖಚಿತ ಪಡಿಸಿಕೊಂಡು ಸದರಿಯವನಿಗೆ ಸಿ,ಇ,ಎನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮಾನ್ಯ ಎ.ಎಸ್.ಐ ಸಾಹೇಬರ ಮುಂದೆ ಹಾಜರುಪಡಿಸಿದ್ದು ಅವರು ಆದೇಶಿಸಿದಂತೆ ವ್ಯೆಧ್ಯಕೀಯ ಪರೀಕ್ಷೆ ಕುರಿತು ಸಮಯ: ೨೦-೪೫ ಗಂಟೆಗೆ ನನಗೆ ಹಾಗೂ ಠಾಣೆಯ ಸಿಬ್ಬಂದಿಯಾದ ಶ್ರೀ ಶಿವರಾಜ ಸಿಪಿಸಿ: ೩೯೬ ರವರ ಬೆಂಗಾವಲಿನಲ್ಲಿ ಸದರಿಯವನಿಗೆ ಜಿಲ್ಲಾ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ  ಕಲಬುರಗಿ ರವರಲ್ಲಿ ಕಳುಹಿಸಿದ್ದು ಸದರಿ ವ್ಯಕ್ತಿಯು ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ಇಂದು ದಿನಾಂಕ: ೧೫-೧೧-೨೦೨೨ ರಂದು ೨೧:೩೦ ಗಂಟೆಗೆ POSITIVE FOR 1) THC: MARIJUANA (GANJA) 2) BZO: BENZODIAZEPINE  ಅಂತಾ ವೈಧ್ಯರು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ, ಅಂತಾ ನೀಡಿದ ವರದಿಯ ಸಾರಾಂಶದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :- ನನಗೆ ಶ್ರೀದೇವಿ ಎಂಬ ಹೆಂಡತಿ ಇದ್ದು, ನಮ್ಮಿಬ್ಬರ ಹೊಟ್ಟೆಯಿಂದ ಪ್ರಜ್ವಲ 21 ವರ್ಷ, ಮಹಾಲಕ್ಷ್ಮಿ 18 ವರ್ಷ, ಪ್ರಕಾಶ 15 ವರ್ಷದ ಮೂರು ಜನ ಮಕ್ಕಳಿರುತ್ತಾರೆ. ದಿನಾಂಕ 13/11/2022 ರಂದು ನನ್ನ ಮಗ ಪ್ರಜ್ವಲ ಈತನು ತನ್ನ ಕೂಲಿ ಕೆಲಸಕ್ಕೆ ಹೋಗುತ್ತೆನೆಂದು ಹೋಗಿದ್ದು, ಸಾಯಂಕಾಲ 6:15 ಗಂಟೆ ಸುಮಾರಿಗೆ ನಮ್ಮೂರಿನ ಬಸವೇಶ ಪಾಳಾ ಇವರು ಓಡಿ ಬಂದು ನನಗೆ ತಿಳಿಸಿದ್ದೆನೆಂದರೆ, ಈಗ ತಾನೆ 6:00 ಗಂಟೆ ಸುಮಾರಿಗೆ ನಂದೂರ(ಕೆ) ಗ್ರಾಮದ ಹನುಮಾನ ಗುಡಿಯ ಹತ್ತೀರ ಪ್ರಜ್ವಲ ಈತನು ರೋಡಿನ ಬದಿಯಿಂದ ನಡೆದುಕೊಂಡು ಬರುವಾಗ ಕಲಬುರಗಿ ಕಡೆಯಿಂದ ಒಂದು ಸ್ಕೂಟಿ ಮೋಟರ ಸೈಕಲ ನಂ. ಕೆಎ 32 ಇ.ಡಬ್ಲೂ 3931 ಇದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಆತನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಕ್ಕೆ ತಲೆಯ ಭಾಗಕ್ಕೆ, ಗಲ್ಲದ ಹತ್ತೀರ, ಎದೆಯ ಭಾಗಕ್ಕೆ, ಬಲಗೈ ಮೊಳಕೈಗೆ ಭಾರಿಗಾಯವಾಗಿ ಮೂಗಿನಿಂದ, ಬಾಯಿಯಿಂದ ಮತ್ತು ಕಿವಿಯಿಂದ ರಕ್ತ ಬಂದಿರುತ್ತದೆ. ಆತನು ಬೆಹೋಶನಲ್ಲಿ ಬಿದ್ದಿರುತ್ತಾನೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಸ್ಧಳಕ್ಕೆ ಹೋಗಿ ನೋಡಲಾಗಿ ನನ್ನ ಮಗನು ಮೇಲಿನಂತೆ ಗಾಯವಾಗಿ ಬೆಹೋಶನಲ್ಲಿ ಬಿದ್ದಿದ್ದು, ನಾನು ಮತ್ತು ಬಸವೇಶ ಕೂಡಿಕೊಂಡು ನಮ್ಮೂರಿನ ಕೃಜರ ಜೀಪಿನಲ್ಲಿ ಹಾಕಿಕೊಂಡು ಎ.ಎಸ್.ಎಮ್ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು, ಮಗನು ಒಳರೋಗಿಯಾಗಿ ಚಿಂತಾಜನಕ ಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿದ್ದು, ಕೇಸು ಮಾಡುವ ಬಗ್ಗೆ ನಮಗೆ ಗೊತ್ತಾಗದಕ್ಕೆ ಇಂದು ಅಪಘಾತ ಪಡಿಸಿದ ಸ್ಕೂಟಿ ಗಾಡಿ ಮತ್ತು ಅದರ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :- ನಾನು ಬಿ.ಬಿ ಮರಿಯಮ ಗಂಡ ದಿ.ಅಬ್ದುಲ್ ಅಜೀಜ ವ:27ವರ್ಷ ಉ:ಮನೆಗೆಲಸ ಜ್ಯಾ:ಮುಸ್ಲಿಂ ಸಾ:ಮನೆ.ನಂ.5-470/15/ಎ/17 ಹಸನ್ ಮಜೀದ ಹತ್ತಿರ ಖಮರ ಕಾಲೋನಿ ರಿಂಗರೋಡ ಕಲಬುರಗಿ ಆಗಿದ್ದು ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನನ್ನ ಪತಿಯವರಾದ ಶ್ರೀ ಅಬ್ದುಲ್ ಅಜೀಜ ರವರು ಹಳೆಯ ಸಾಮಾನು ಸಾಗಾಣಿಕೆಯ ವ್ಯವಹಾರಕ್ಕಾಗಿ 2014ರಲ್ಲಿ ತಮ್ಮ ಹೆಸರಿನಲ್ಲಿ ಅಶೋಕ ಲೇ ಲ್ಯಾಂಡ ಕಂಪನಿಯ ಗೂಡ್ಸ ಗಾಡಿ ನಂ. KA 32 C 2284 ನೇದ್ದು ಖರೀದಿ ಮಾಡಿಕೊಂಡಿದ್ದು ಇರುತ್ತದೆ. ನನ್ನ ಪತಿಯವರು ತೀರಿಕೊಂಡಿದ ನಂತರ ನನ್ನ ಮೈದುನರಾದ ಶ್ರೀ ಇಮ್ರಾನ ತಂದೆ ಅಬ್ದುಲ್ ಸತ್ತಾರ ರವರು ಸಾಮಾನು ಸಾಗಾಣಿಕೆಯ ವ್ಯವಹಾರಕ್ಕಾಗಿ  ಉಪಯೋಗ ಮಾಡಿಕೊಂಡು ಬಂದಿದ್ದು ಇರುತ್ತದೆ. ಹೀಗಿದ್ದು,ದಿನಾಂಕ:07/10/2020 ರಂದು ರಾತ್ರಿ 08.30 ಪಿ.ಎಂ ನನ್ನ ಮೈದುನ  ಶ್ರೀ ಇಮ್ರಾನ ರವರು ಭವಾನಿ ನಗರದ ಬೆಂಗಳೂರು ಕಾಟಾದ ಎದುರುಗಡೆ ಇರುವ ತಮ್ಮ ಸ್ಕ್ರ್ಯಾಪ ಅಂಗಡಿ ಬಂದಮಾಡಿಕೊಂಡು ನಮ್ಮ ಗೂಡ್ಸ ಗಾಡಿ ನಂ. KA 32 C 2284 ನೇದ್ದುಅಂಗಡಿಯ ಮುಂದೆ ನಿಲ್ಲಿಸಿ ಮನೆಗೆ ಬಂದ್ದಿದ್ದು ಇರುತ್ತದೆ. ಎಂದಿನಂತೆ ನನ್ನ ಮೈದುನ ರವರು ದಿನಾಂಕ:08/10/2022 ರಂದು ಮುಂಜಾನೆ 10.30 ಎ.ಎಂಕ್ಕೆ ಅಂಗಡಿ ತೆರೆಯಲು ಹೋದಾಗ ಅಂಗಡಿಯ ಮುಂದೆ ನಿಲ್ಲಿಸಿದ ಗೂಡ್ಸ ಗಾಡಿ ನಂ. KA 32 C 2284 ನೇದ್ದು ಕಾಣಿಸಲಿಲ್ಲ ಅವಾಗ ಅವರು ಗಾಬರಿಗೊಂಡು ನನಗೆ ಮತ್ತು ನನ್ನ ಅಣ್ಣ ನಜೀರವರಿಗೆ ಫೋನ ಮಾಡಿ ತಿಳಿಸಿದರಿಂದ ನನ್ನ ಅಣ್ಣ ಮತ್ತು ಮೈದಿನ ವಾಹನ ಕಳ್ಳತನವಾದ ಸ್ಥಳದ ಸುತ್ತಮುತ್ತಾ ಮತ್ತು ಆಳಂದ ಚಕ್ಕ ಪೊಸ್ಟ್ , ಪಟ್ನಾ ಟೂಲ್ ನಾಕಾ, ಬೆಲೂರ ಕ್ರಾಸ ಮತ್ತು ಇಂಡಿಯನ್ ಕಡೆಗೆ ಹುಡಿಕಾಡಿದರೂ ಎಲ್ಲಿಯೂ ನನ್ನ ಗೂಡ್ಸ ಗಾಡಿ ಪತ್ತೆಯಾಗಿರುವುದಿಲ್ಲ. ದಿನಾಂಕ:08/10/2022 ರಂದು ರಾತ್ರಿ 02:39 ಎ.ಎಂ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸಿಸಿ ಕ್ಯಾಮರಾದ ವಿಡಿಯೋದಲ್ಲಿ ಕಂಡುಬಂದಿರುತ್ತದೆ. ಸದರಿ ಗೂಡ್ಸ ಗಾಡಿ ಕಳ್ಳತನವಾದ ದಿವಸದಿಂದ ಇಲ್ಲಿಯವರೆಗೆ ಆಳಂದ, ಉಮ್ಮರ್ಗಾ, ಬಸವಕಲ್ಯಾಣ, ಹುಮನಾಬಾದ,ಕಮಲಾಪೂರ,ಮಹಾಗಾಂವ ಕಡೆಗೂ ಹುಡುಕಿ ಎಲ್ಲಿಯಾದರೂ ನನ್ನ ಗೂಡ್ಸ ಗಾಡಿ ನಂ. KA 32 C 2284 ನೇದ್ದು ಸಿಗಬಹುದು ಅಂತ ಪೊಲೀಸ ಠಾಣೆಗೆ ಬಂದು  ದೂರು  ಕೊಟ್ಟಿರುವುದಿಲ್ಲ. ಇಂದು ಪೊಲೀಸ ಠಾಣೆಗೆ ಬಂದು ತಡವಾಗಿ ದೂರು ಕೊಟ್ಟಿದ್ದು ಇರುತ್ತದೆ. ಸದರಿ ಕಳುವಾದ ಗೂಡ್ಸ ವಾಹನ ನ ವಿವರಈ ಕೆಳಗಿನಂತಿರುತ್ತದೆ.ಗೂಡ್ಸ ವಾಹನ ವಿವರ  : ASHOK LEYLAND DOST LS  ಗೂಡ್ಸ ವಾಹನ ನಂ :  KA 32 C 2284 ಗೂಡ್ಸ ವಾಹನ ಚೆಸ್ಸಿ ನಂ:  MBIAA22E1ERA72846ಗೂಡ್ಸ ವಾಹನ ಇಂಜೀನ ನಂ  :  AEH016717P ಗೂಡ್ಸ ವಾಹನ ಮಾದರಿ: 2014ಗೂಡ್ಸ ವಾಹನ ಬಣ್ಣ  :  IRIS CREAM , ಗೂಡ್ಸ ವಾಹನ ಅ.ಕಿ  :  80,000/- ರೂ ಇರುತ್ತದೆ.  ಅಂತ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-16-11-2022 ರಂದು ಫಿರ್ಯಾದಿಯು ಆಸ್ಪತ್ರೆಯಲ್ಲಿ ಫರ‍್ಯಾದಿ ಹೇಳಿಕೆ ನೀಡಿದ್ದೇನೆಂದರೆ ನಾನು ಆಪಾದಿತ ಡಿಗ್ಗಿ ಇಮ್ರಾನ್ ಈತನ ಹತ್ತಿರ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಅವರು ನನಗೆ ಸರಯಾಗಿ ಸಂಬಳ ಕೊಡದ ಕಾರಣ ನಾನು ಅವರ ಹತ್ತಿರ ಕೆಲಸ ಬಿಟ್ಟಿರುತ್ತೇನೆ ಆದರೆ ಅವರು ನನಗೆ ನಾವು ಕೊಟ್ಟ ಹಣ ಕೊಡು ಎಂದು ದಿನಾಂಕಃ-೧೩/೧೧/೨೦೨೨ ರಂದು ರಾತ್ರಿ ನಾನು ನನ್ನ ಹೆಂಡತಿ ಮತ್ತು ನನ್ನ ಹೆಂಡತಿಯ ತಮ್ಮ ಮನೆಯಲ್ಲಿದ್ದಾಗ ಇಮ್ರಾಖಾನ್ ಮತ್ತು ರ‍್ವೇಜ್ ಖಾನ್ ಬಂದು ಏ ರಂಡಿ ಮಗನೆ ನಾವು ಕೊಟ್ಟ ಹಣ ಕೊಡು ನಮ್ಮ ಹತ್ತಿರ ಕೆಲಸ ಬಿಡುತ್ತಿ ಎಂದು ಬಡಿಗೆಯಿಂದ ನನಗೆ ಹೊಡೆದು ಗುಪ್ತ ಗಾಯ ಮಾಡಿದ್ದು ಅಲ್ಲದೆ ನನ್ನ ಹೆಂಡತಿಗೆ ಕಾಲಿನಿಂದೆ ಹೊಡೆದು ಕೈ ಹಿಡಿದು ಎಳೆದಾಡಿದ್ದಾರೆ ಮತ್ತು ನನ್ನ ಹೆಂಡತಿಯ ತಮ್ಮನ ಬೈಕಿಗೆ ಬಡಿಗೆಯಿಂದ ಹೊಡೆದು ಜಕಂ ಮಾಡಿದ್ದಾರೆ ಎಂದು ಹೇಳಿಕೆ ನೀಡಿದರ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 23-11-2022 05:08 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080