ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್ ಠಾಣೆ ಕಲಬುರಗಿ :- ಇಂದು ದಿನಾಂಕ: ೧೬/೧೧/೨೦೨೧ ರಂದು ೭-೪೦  ಪಿ ಎಮ್ ಕ್ಕೆ ಪಿರ್ಯಾದಿ ದಾರರಾದ ಶ್ರೀ ಸಂತುಮನ್ನಾ ತಂದೆ ಶಕ್ತಿಪೋದು ವಯಸ್ಸು ೪೧ ವರ್ಷ ಜಾತಿ; ಬಂಗಾಲಿ ಉ; ಬಂಗಾರ ವ್ಯಾಪಾರ ಸಾ; ಬಡೋ ಅಗ್ನಾ ಜಿಲ್ಲಾ; ಪುಣಬೋ ಮೆಗ್ನಪೂರ ರಾಜ್ಯ ಪಶ್ಚಿಮ ಬಂಗಾಳ ಹಾ:ವ; ವಾಸಕ ಬಿಲ್ಡಿಂಗ್ ಬೋವಿ ಗಲ್ಲಿ ಕಲಬುರಗಿ ಇದ್ದು ಈ ಮೂಲಕ ವಿನಂತಿ ಅರ್ಜಿ ಸಲ್ಲಿಸುವದೆನೆಂದರೆ ನಾನು ಈಗ ಸುಮಾರು ೨೨ ವರ್ಷಗಳಿಂದ ಕಲಬುರಗಿ ನಗರದ ಸರಾಫ ಬಜಾರದ ಮೆಹತಾ ಕಾಂಪ್ಲೇಕ್ಸದಲ್ಲಿ ಬಂಗಾರದ ಆಭರಣಗಳನ್ನು ತಯ್ಯಾರುವ ಮಾಡುವ ಅಂಗಡಿ ಇದ್ದು, ನನ್ನ ಅಂಗಡಿಯಲ್ಲಿ ನಮ್ಮ ರಾಜ್ಯದ ೧) ಸುಲ್ತಾನ, ೨) ಓಮಿತ ೩)  ಶೇಖ ಐದುಲ್ಲಾ ಎಂಬುವರು ಬಂಗಾರದ ಆಭರಣಗಳನ್ನು ತಯ್ಯಾರು  ಮಾಡುವ ಕೆಲಸಕ್ಕೆ ಇಟ್ಟುಕೊಂಡಿದ್ದೆ. ನನ್ನ ಅಂಗಡಿಗೆ ಕಲಬುರಗಿ ನಗರದ ಬಂಗಾರದ ವ್ಯಾಪಾರಸ್ಥರು ತಮ್ಮ ಅಂಗಡಿಗೆ ಬೇಕಾಗುವ ಸಾಮಾನುಗಳನ್ನು ತಯ್ಯಾರು ಮಾಡಿಕೊಂಡು ಹೋಗಲು ಬಂಗಾರವನ್ನು ಕೊಟ್ಟು, ಸಾಮಾನುಗಳನ್ನು ನಂತರ ತೆಗೆದುಕೊಂಡು ಹೋಗುತ್ತಿದ್ದರು. ನಾನು ಬೆಳಗ್ಗೆ ೯-೦೦ ಗಂಟೆಯ ಸುಮಾರಿಗೆ ನನ್ನ ಅಂಗಡಿಯನ್ನು ತೆಗೆದು ರಾತ್ರಿ ೧೦-೦೦ ಗಂಟೆಯ ಮುಚ್ಚಿಕೊಂಡು ಮನಗೆ ಹೋಗುತ್ತಿದ್ದೆ. ೨೦೨೦ ನೇ ಸಾಲಿನಲ್ಲಿ ನವೆಂಬರ್ ತಿಂಗಳಲ್ಲಿ ಸರಾಫ ಬಜಾರ್ ಕೆಲವು ಬಂಗಾರದ ವ್ಯಾಪಾರಸ್ಥರು ತಮಗೆ ಬಂಗಾರದ ಆಭರಣಗಳನ್ನು ತಯ್ಯಾರು ಮಾಡಿ ಕೊಡಲು ಸುಮಾರು ೨೦ ತೊಲೆ ಬಂಗಾರ ಅದರಂತೆ ನನ್ನ ಅಂಗಡಿಯಲ್ಲಿ ೫ ತೊಲೆ ಬಂಗಾರ ಹೀಗೆ ಸುಮಾರು ೨೫ ತೊಲೆ ಬಂಗಾರ ಅಂದಾಜು ಕಿಮ್ಮತ್ತು ಹಳೆಯ ೮ ಲಕ್ಷ ರೂಪಾಯಿ ಕಿಮ್ಮಿತ್ತಿನದು ನನ್ನ ಅಂಗಡಿಯಲ್ಲಿ ಇಟ್ಟಿದ್ದು, ನಾನು ಸಾಮಾನುಗಳನ್ನು ತಯ್ಯಾರು ಮಾಡಬೇಕೆಂದು ನನ್ನ ಅಂಗಡಿಯಲ್ಲಿ ಇಟ್ಟಿದ್ದೆ. ದಿನಾಂಕ ೨೬/೧೧/೨೦೨೦ ರಂದು ಬೆಳಗ್ಗೆ ೯-೦೦ ಗಂಟೆಗೆ ನನ್ನ ಅಂಗಡಿಯನ್ನು ತೆಗೆದು ರಾತ್ರಿ ೧೦-೦೦ ಗಂಟೆಯವರೆಗೆ ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಅಂಗಡಿಯ ಕೆಲಸಗಾರರೊಂದಿಗೆ ಕೆಲಸ ಮಾಡಿ ನಂತರ ನನ್ನ ಅಂಗಡಿ ಬಂದ ಮಾಡಿಕೊಂಡು ಮನೆಗೆ ಹೋಗಿದ್ದೆ. ನಂತರ ದಿನಾಂಕ ೨೭/೧೧/೨೦೨೦ ರಂದು ಬೆಳಗ್ಗೆ ೮-೦೦ ಗಂಟೆಯ ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿರುವ ಉಮೇಶ ಎಂಬುವರು ನನಗೆ ಪೋನ ಮಾಡಿ ನಿನ್ನ ಅಂಗಡಿಯ ಶೆಟರ್‌ಬಾಗಿಲು  ತೆರೆದಿದ್ದು, ಚಾವಿ ಮುರಿದಿರುತ್ತದೆ. ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಬಂದು ನೋಡಲಾಗಿ ಹಕಿಕತ್ ನಿಜವಿತ್ತು. ಮತ್ತು ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿಟ್ಟ ತಯ್ಯಾರು ಮಾಡುವ ಬಂಗಾರ ಇರಲಿಲ್ಲ. ನಂತರ ನಮ್ಮ ಕೆಲಸಗಾರರಿಗೂ ಮತ್ತು ಇತರರಿಗೂ ವಿಚಾರಣೆ ಮಾಡಲಾಗಿ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನನಗೆ ಏನು ತೊಚದೇ ಇರುವದರಿಂದ ಹಾಗೂ ಕೊರೊನಾ  ಇದ್ದ ಪ್ರಯುಕ್ತ ಮನೆಯಲ್ಲಿಯೇ ಉಳಿದು ಹಾಗಿಯೇ ನಮ್ಮ ಕೆಲಸಗಾರರು ಸಹ ಊರಿಗೆ ಹೋಗಿದ್ದು, ನಾನು ಸಹ ಕೆಲವು ದಿವಸ ನಮ್ಮ ಊರಿಗೆ ಹೋಗಿ ಉಳಿದುಕೊಂಡು ಮರಳಿ ಬಂದಾಗ ನನಗೆ ಬಂಗಾರದ ಸಾಮಾನು ಮಾಡಲು ಬಂಗಾರ ಕೊಟ್ಟವರು ತಮ್ಮ ಬಂಗಾರ ಸಾಮಾನುಗಳು ಮರಳಿ ಕೊಡುವಂತೆ ಕೇಳಿದಾಗ ನಾನು ಈ ವಿಷಯವನ್ನು ಅವರಿಗೆ ತಿಳಿಸಿದ್ದು, ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿದ ಮೇರೆಗೆ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ದಿನಾಂಕ ೨೬/೧೧/೨೦೨೦ ರ ರಾತ್ರಿ ೧೦:೦೦ ಪಿ.ಎಮದಿಂದ ದಿನಾಂಕ: ೨೭/೧೧/೨೦೨೦ ರ ಬೆಳಗಿನ ೮-೦೦  ಮದ್ಯದ ಅವದಿಯಲ್ಲಿ ಈ ಘಟನೆ ಜರುಗಿರುತ್ತದೆ.ಕಾರಣ ನನ್ನ ಅಂಗಡಿಯಲ್ಲಿದ್ದ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋದವರನ್ನು ಮತ್ತು ಬಂಗಾರವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು  ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 18-11-2021 11:51 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080