ಅಭಿಪ್ರಾಯ / ಸಲಹೆಗಳು

ಗ್ರಾಮೀಣ ಪೊಲೀಸ್ ಠಾಣೆ :-   ಇಂದು ದಿನಾಂಕ.೧೬-೦೯-೨೦೨೧ ರಂದು ೬-೦೦ ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ. ರವೀಂದ್ರ ತಂದೆ ನಾಗೇಂದ್ರಪ್ಪಾ ಹಲಚೇರಿ ವಯ;೩೩ವರ್ಷ ಜ್ಯಾತಿ;ಎಸ್.ಸಿ. ಉ; ಖಾಸಗಿಕೆಲಸ ಸಾ; ಲಂಗರ ಹನುಮಾನ ನಗರ ರಿಂಗರೋಡ ಕಲಬುರಗಿ ಇವರು ಕೊಟ್ಟ ಫರ‍್ಯಾದಿ ಸಾರಂಶ ಏನೆಂದರೆ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಾಲಾಶ್ರೀ  ಹಾಗೂ ಒಂದು ಮಗುವಿನೊಂದಿಗೆ ಇರುತ್ತೇನೆ. ನನಗೆ ಪರಿಚಯದ ಗಣಪತಿ ತಂದೆ  ಶ್ರೀಮಂತ ಮರಾಠಿ ಸಾ; ಲಂಗರ ಹನುಮಾನ ನಗರ ಕಲಬುರಗಿ ಇತನು ತನ್ನ ಸೊಸೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ತೋರಿಸುವದಿದೆ ಅಂತಾ ಹೇಳಿ ಕಳೆದ ೨೦೧೮ ನೇ ಸಾಲಿನಲ್ಲಿ ನನ್ನ ಹತ್ತಿರ ೨ ಲಕ್ಷ ರೂಪಾಯಿಗಳನ್ನು ಸಾಲ ರೂಪದಲ್ಲಿ ಹಣ ತೆಗೆದು ಕೊಂಡಿರುತ್ತಾನೆ. ಸದರಿ ಹಣವನ್ನು ಮರಳಿ ಕೋಡುವಂತೆ ಕೇಳಿದಕ್ಕೆ ಕೊಟ್ಟಿರುವದಿಲ್ಲಾ, ಕಳೆದ ಒಂದುವರೆ ತಿಂಗಳ ಹಿಂದೆ ನಾವು ಪಂಚಾಯಿತಿ ಮಾಡಿಕೊಂಡಿದ್ದು ಪ್ರತಿ ತಿಂಗಳ ೨೦,೦೦೦/-ರೂಪಾಯಿ ಕೋಡುತ್ತೆನೆ ಅಂತಾ ಹೇಳಿದ್ದು ಕಳೆದ ತಿಂಗಳ ೨೦,೦೦೦/- ರೂಪಾಯಿ ಕೊಟ್ಟಿದ್ದು ಈ ತಿಂಗಳ ಅಂದರೆ ಸೆಪ್ಟಂಬರ ತಿಂಗಳಲ್ಲಿ ಕೋಡಬೇಕಾದ ಕಂತಿನ ಹಣವನ್ನು ಕೊಟ್ಟಿರುವದಿಲ್ಲಾ, ಅಲ್ಲದೆ ೧ ತಿಂಗಳ ಹಿಂದೆ ನನಗೆ ಎಕ್ಸಿಡೆಂಟದಲ್ಲಿ ನನಗೆ ಎಡಕೈ ಭುಜಕ್ಕೆ ಪೆಟ್ಟಾಗಿದ್ದು ನಾನು ಉಪಚಾರ ಪಡೆಯುತಿದ್ದು , ನನಗೆ ಆಸ್ಪತ್ರೆಗೆ ತೋರಿಸಿಕೊಳ್ಳಲು ಹಣ ಕೋಡುವಂತೆ ಕೇಳಿದಕ್ಕೆ ಕೊಟ್ಟಿರುವದಿಲ್ಲಾ. ಹೀಗಿದ್ದು  ದಿನಾಂಕ೧೦-೯-೨೦೨೧ರಂದು ಮುಂಜಾನೆ ೮-೩೦ ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಾಲಾಶ್ರೀ ಕೂಡಿಕೊಂಡು ಸದರಿ ಗಣಪತಿ ಮರಾಠ ಇತನ ಮನೆಯ ಹತ್ತಿರ ಹೋಗಿ ನಾವು ಆಸ್ಪತ್ರೆಗೆ ತೊರಿಸಿಕೊಳ್ಳುವದಿದೆ ಹಣ ಕೋಡುವಂತೆ ಕೇಳಿದಕ್ಕೆ ಮನೆಯೊಳಗಿನಿಂದ ಗಣಪತಿ ಮತ್ತು ಆತನ ಮಕ್ಕಳಾದ ದತ್ತು ಹಾಗೂ ಮೈಲಾರಿ ಎಂಬುವರು ಬಂದು ನನಗೆ“ಏನೋ ಹೊಲೆ ಸೂಳೆ ಮಗನೆ ನಿನ್ನ ಉಪದ್ರ ಬಹಳಾಗಿದೆ , ನಿನಗೆ ಹಣ ಕೊಡುವದು ಆಗುವದಿಲ್ಲಾ ಇಲ್ಲಿ ನಿಲ್ಲಬೇಡಾ ಹೋಗು ಅಂತಾ ಅವಾಚ್ಯವಾಗಿ ಜ್ಯಾತಿ ಎತ್ತಿ ಬೈಯ್ದುರು , ಆಗ ನಾನು ಜ್ಯಾತಿ ಎತ್ತಿ ಏಕೆಬೈಯುತ್ತಿ ಅಂತಾ ಕೇಳಿದಕ್ಕೆ ಸದರಿ ಮತ್ತು ಮೈಲಾರಿ ಮತ್ತು ಗಣಪತಿ ಇವರಿಬ್ಬರು ನನಗೆ ಅಕ್ರಮವಾಗಿ ತಡೆ ಹಿಡಿದ್ದು ಒತ್ತಿ ಹಿಡಿದು ಕೈಯಿಂದ ಹೊಡೆದಿದ್ದು  ದತ್ತು ಇತನು ಒಂದು ಬಡಿಗೆಯಿಂದ ನನ್ನ ತಲೆಯ ಎಡಭಾಗದಲ್ಲಿ ಹೊಡೆದಿದ್ದು  ತಲೆಗೆ ರಕ್ತಗಾಯವಾಗಿರುತ್ತದೆ, ಮತ್ತು ಎಡ ಭುಜಕ್ಕೆ  ಹೊಡೆದಿದ್ದು ಒಳಪೆಟ್ಟಾಗಿರುತ್ತದೆ. ಆಗ ನನ್ನ ಹೆಂಡತಿ ಮಾಲಾಶ್ರೀ ಇವಳು ಬಿಡಿಸಿಕೊಳ್ಳಲು ಬಂದಾಗ ಸದರಿ ಗಣಪತಿಯ ಹೆಂಡತಿ ತಾಬಾಯಿ ಇವಳು ನನ್ನ ಹೆಂಡತಿ ತಲೆಯ ಮೇಲಿನ ಕೂದಲು ಹಿಡಿದು ಕೈಯಿಂದ ಹೊಡೆದಿರುತ್ತಾಳೆ ಆಗ ನಾವು ಚೀರಾಡುವಾಗ ಪಕ್ಕದಲ್ಲಿ ಇದ್ದ  ಶಫೀಕ ತಂದೆ ರಫೀಕ ಹಾಗೂ ಶಾರುಖ ತಂದೆ ಮಹಮ್ಮದ ಶುಕುರ ಇವರಿಬ್ಬರು ಬಂದು ಜಗಳಬಿಡಿಸಿಕೊಂಡಿರುತ್ತಾರೆ. ಹೊಲೆ ಸೂಳೆ ಮಗನೆ ಇನ್ನೊಂದು ಸಾರಿ ನಮ್ಮ ಮನೆ ಹತ್ತಿರ ಬಂದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವಬೆದರಿಕೆ ಹಾಕಿದರು, ನಂತರ ನನ್ನ ಹೆಂಡತಿ ಮಾಲಾಶ್ರೀ ಮತ್ತು ಶಫೀಕ್, ಮತ್ತು ಶಾರುಕ ಇವರೆಲ್ಲರೂ ಕೂಡಿಕೊಂಡು ನನಗೆ ಉಪಚಾರ ಕುರಿತು ಒಂದು ಆಟೋ ರಿಕ್ಷಾದಲ್ಲಿ ಕೂಡಿಸಿಕೊಂಡು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ.ದಿನಾಂಕ. ೧೦-೯-೨೦೨೧ ರಂದು ನಾನು ನಂತರ ಮನೆಯಲ್ಲಿ ತಾಯಿಯವರಿಗೆ ವಿಚಾರಿಸಿ ನಂತರ ಫರ‍್ಯಾದಿ ಕೊಡುತ್ತೇನೆ , ಹೇಳಿದ್ದು ನಂತರ ನಮ್ಮ ತಾಯಿಯವರು ಊರಿಂದ ಬಂದಿದ್ದು ಅವರನ್ನು ವಿಚಾರಿಸಿ ಫರ‍್ಯಾದಿ ಕೋಡಲು ವಿಳಂಬವಾಗಿರುತ್ತದೆ.ಆದುದರಿಂದ ನನಗೆ ಕೋಡಬೇಕಾದ ಹಣವನ್ನು ಕೇಳಲು ಹೋದಾಗ ನನಗೆ “ಹೊಲೆ ಸೂಳೆ ಮಗನೆ ನಿನ್ನ ಉಪದ್ರಬಹಳಾಗಿದೆ ಎಂದು ಜ್ಯಾತಿ ಎತ್ತಿ ಬೈಯ್ದು ಜ್ಯಾತಿ ನಿಂದನೆ ಮಾಡಿ ಬಡಿಗೆಯಿಂದ , ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿ ಹೋದ ೧]ದತ್ತು ತಂದೆ ಗಣಪತಿ ಮರಾಠಾ ವಯ;೨೬ವರ್ಷ ಜ್ಯಾತಿ;ಮರಾಠಾ ಉ;ಆಟೋಚಾಲಕ ೨]ಮೈಲಾರಿ ತಂದೆ ಗಣಪತಿ ಮರಾಠಾ ವಯ;೨೨ ವರ್ಷ ಜ್ಯಾತಿ;ಮರಾಠಾ ಉ; ಆಟೋಚಾಲಕ ೩] ಗಣಪತಿ ತಂದೆ ಶ್ರೀಮಂತ ಮರಾಠಾ ವಯ;೫೫ ವರ್ಷ ಜ್ಯಾತಿ;ಮರಾಠಾ ಉ;ಆಟೋಚಾಲಕ, ಮತ್ತು ೪] ತಾನಾಬಾಯಿ ಗಂಡ ಗಣಪತಿ ಮರಾಠಾ ವಯ;೫೦ ವರ್ಷ ಜ್ಯಾತಿ; ಮರಾಠಾ ಉ;ಮನೆಕೆಲಸ ಸಾ;ಎಲ್ಲರೂ ಲಂಗರ ಹನುಮಾನಗರ ಕಲಬುರಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಗೈರೆ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಂಶಧ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಎಂ.ಬಿ ನಗರ ಪೊಲೀಸ ಠಾಣೆ :- ಇಂದು ದಿನಾಂಕ ೧೬/೦೯/೨೦೨೧ ರಂದು ೦೧.೧೫ ಪಿಎಮ್ ಕ್ಕೆ ಫಿರ್ಯಾಧಿದಾರರಾದ ಮಹಮ್ಮದ್ ಅಯಾಜ್ ಅಲಿ ತಂದೆ ಮಹಮ್ಮದ್ ಖುರ್ಷಿದ್. ವಯ:-೩೨ ವರ್ಷ ಜಾತಿ:- ಮುಸ್ಲಿಂ ಉ:- ಹಣ್ಣಿನ ವ್ಯಾಪಾರ. ಸಾ//ಬಟ್ಲಿಯಾಲಾವಾ ಮೋಮಿನಪುರ ಕಲಬುರಗಿ ಹೇಳಿಕೆ ನಿಡಿದ್ದೇನೆಂದರೆ ಬಸವೇಶ್ವರ ಕಾಲೋನಿಯ ಎಂ ಜಿ ರಸ್ತೆಯ ಪುಡ್ ಝೋನ್ ಎದುರುಗಡೆ ಎವರ್‌ಗ್ರಿನ್ ಪ್ರೂಟ್&ಜೂಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೋಂಡಿರುತ್ತೇನೆ. ನಾನು ದಿನಾಲೂ ಬೆಳಿಗ್ಗೆ ೦೭.೦೦ ಗಂಟೆಗೆ ಅಂಗಡಿ ತೆರೆದು ರಾತ್ರಿ ೧೦.೦೦ ಗಂಟೆಗೆ ಮುಚ್ಚಿಕೊಂಡು ಮನೆಗೆ ಹೋಗುತ್ತಿರುತ್ತೇನೆ.ಹಿಗಿದ್ದು ದಿನಾಂಕ ೧೫/೦೯/೨೦೨೧ ರಂದು ನಾನು ಬೇಳಿಗ್ಗೆ ೭.೩೦ ಗಂಟೆಗೆ ನನ್ನ ಹಣ್ಣಿನ ಅಂಗಡಿ ತೆರೆಯಲೂ  ಬಂದಾಗ ನನ್ನ ಅಂಗಡಿಯ ಮುಂದೆ ಸುಮಾರು ಜನರು ನೆರೆದಿದ್ದು ನಾನು ಹೋಗಿ ನೋಡಿದಾಗ ಅಲ್ಲಿ ನಮಗೆ ಪರಿಚಯ ವಿರುವ ದಸ್ತಗಿರ್ ಈತನು ಹಾಜರಿದ್ದು ನಾವು ಸದರಿ ವ್ಯಕ್ತಿಗೆ ನೋಡಲಾಗಿ ನಮ್ಮ ಅಂಗಡಿಯ ಶೇಟರ್ ಮುಂದುಗಡೆ ರಾತ್ರಿ ಸಮಯದಲ್ಲಿ  ಆಗಾಗ ಮಲಗುತ್ತಿದ್ದ ಬಿಕ್ಷÄಕ ಇದ್ದು ಸದರಿ ಬಿಕ್ಷುಕನಿಗೆ ಎರಡು ಕಾಲಿಗೆ ಭಾರಿ ರಕ್ತಗಾಯವಾಗಿದ್ದು ಎರಡು ಕಾಲೂ ಮುರಿದಿದ್ದು ಸ್ಥಳದಲ್ಲೆ ರಕ್ತ ಸೋರುತ್ತಿದ್ದು ಆತನಿಗೆ ವಿಚಾರಿಸಿದಾಗ ಸದರಿ ವ್ಯಕ್ತಿ ಹೇಸರು ಸಿದ್ದಲಿಂಗ ಗೌಡ ತಂದೆ ಬಸಲಿಂಗ ಗೌಡ ವಯ:-೪೫ ವರ್ಷ ಜಾತಿ:-ಲಿಂಗಾಯತ ಎಂದು ತಿಳಿಸಿದ್ದು ಆತನ ವಿಳಾಸ ತಿಳಿಸಲಿಲ್ಲಾ ಅವನು ಅಸ್ವಸ್ತನಾಗಿದ್ದು  ಅಲ್ಲಿದ್ದ ಜನರು ಯಾವುದೋ ಗಾಡಿ ಅಪಘಾತ ಮಾಡಿ ಹೋಗಿರಬಹುದು  ಮಾತನಾಡಿಕೊಳ್ಳುತ್ತಿದ್ದರು Ä. ತಕ್ಷಣ ನಾನು ಅಂಬೂಲೇನ್ಸ್ಗೆ  ಬಂದು  ಸದರಿ ಬಿಕ್ಷುಕನಿಗೆ ಅಂಬೂಲೈನ್ಸ್ನಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋಗಿದ್ದು ನಂತರ ಸಂಚಾರಿ ಪೊಲೀಸರು ಸದರಿ ಅಪಘಾತದ ಬಗ್ಗೆ ವಿಚಾರಿಸಿದ ವಿಷಯ ನನಗೆ ಗೋತ್ತಿರುತ್ತದೆ. ಅಲ್ಲದೆ ಸದರಿ ವ್ಯಕ್ತಿ ಸರಿಯಾದ ರಿತಿಯಲ್ಲಿ ಹೇಲಿಕೆ ನಿಡದೆ ಇದ್ದುದರಿಂದ ಯಾವುದೆ ಪ್ರಕರಣ ದಾಖಲಾಗಿರುದಿಲ್ಲಾ ಅಂತಾ ಮಾಹಿತಿ ಗೋತ್ತಾಗಿರುತ್ತದೆ. ಇಂದು ದಿನಾಂಕ ೧೬/೦೯/೨೦೨೧ ರಂದು ೧೧.೪೫ ಎಎಮ್ ಸಮಯಕ್ಕೆ ಎಂ ಬಿ ನಗರ ಪೊಲೀಸರು ನಮ್ಮ ಪ್ರೂಟ್ ಮತ್ತು ಜೂಸ್ ಅಂಗಡಿಯ ಹತ್ತಿರ ಬಂದು ನಿನ್ನೆ ನಿಮ್ಮ ಅಂಗಡಿಯ ಮುಂದೆ ಗಾಯ ಹೊಂದಿ ಇದ್ದಂತಹ ಬಿಕ್ಷÄಕ, ಸಿದ್ದಲಿಂಗ ಗೌಡ ತಂದೆ ಬಸಲಿಂಗ ಗೌಡ ವಯ:-೪೫ ವರ್ಷ ಈತನು ಚಿಕಿತ್ಸೆ ಫಲಕಾರಿಯಾಗದೆ ಇಂದು ಸರಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ಮೃತಪಟ್ಟಿರುತ್ತಾನೆ  ಎಂದು ಡೆತ್ ಎಂಎಲ್‌ಸಿ ವಸೂಲಾಗಿದ್ದು ಪೊಲೀಸರು ಆಸ್ಪತ್ರೆಗೆ ಬೇಟಿ ನಿಡಿದಾಗ ಮೃತ ವ್ಯಕ್ತಿಯ ವಿಳಾಸ ಸಿಗದ ಕಾರಣನಮ್ಮ ಅಂಗಡಿಗೆ ಬಂದು ಭೇಟಿ ನಿಡಿದಾಗ ನಾನು ತಿಳಿಸಿದ್ದೇನೆಂದರೆ ನಮ್ಮ ಅಂಗಡಿಯ ಮುಂದೆ ಮಲಗಿರುವ ಬಿಕ್ಷುಕ  ಸಿದ್ದಲಿಂಗ ಗೌಡ ಇತನಿಗೆ ದಿನಾಂಕ ೧೫/೦೯/೨೦೨೧ ರಂದು ಬೇಳಗಿನ ಜಾವ ೩.೩೦ ರಿಂದ ೩.೪೦ ರ ಅವಧಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳೂ ಬಂದು ಉದ್ದವಾದ ಕಟ್ಟಿಗೆಗಳಿಂದ ಹೋಡೆದು ಮಾರಣಂತಿಕ ಹಲ್ಲೆ ಮಾಡಿರುತ್ತಾರೆ ಮತ್ತು ಆತನ ಕಾಲಿಗೆ ಹೋಡೆದಿರುತ್ತಾರೆ ಎಂದು ನಮ್ಮ ಅಂಗಡಿಯಲ್ಲಿರವ ಸಿಸಿಟಿವಿ ಪುಟೇಜ್ ನೋಡಿದಾಗ ನನಗೆ ಗೋತ್ತಾಗಿರುತ್ತದೆ.  ಇಂದು ಬೆಳಿಗ್ಗೆ ಸಮಯಕ್ಕೆ  ಸದರಿ ಸಿದ್ದಲಿಂಗ ಗೌಡ ತಂದೆ ಬಸಲಿಂಗ ಗೌಡ ವಯ:-೪೫ ವರ್ಷ ಈತನು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಎಂದು ಪೊಲೀಸರು ನನಗೆ ತಿಳಿಸಿದ್ದು ಇರುತ್ತದೆ. ಸದರಿ ಬಿಕ್ಷುಕ ಸಿದ್ದಿಲಿಂಗ ಗೌಡ ಈತನು ಆಗಾಗ ನಮ್ಮ ಅಂಗಡಿಯ ಮುಂದೆ ರಾತ್ರಿಯಲ್ಲಿ ಮಲಗುತ್ತಿದ್ದನು ನಾನು ಮುಂಜಾನೆ ಬಂದು ಎಬ್ಬಿಸಿ ಕಳೂಹಿಸುವವರೆಗೂ ಅವನು ಮಲಗಿರುತ್ತಿದ್ದನು ಸದರಿ ವ್ಯಕ್ತಿಗೆ ಅಪಘಾತವಾಗಲೂ ಸಾದ್ಯವಿಲ್ಲಾ ಯಾರೋ ಆತನಿಗೆ ಹೋಡೆದು ಹೋಗಿರಬಹುದು ಎಂದು ಅಲ್ಲಿದ್ದ ಜನರು ಮಾತನಾಡುತ್ತಿದ್ದರು.   ಕಾರಣ ನಮ್ಮ ಅಂಗಡಿಯ ಮುಂದೆ ರಾತ್ರಿಯಲ್ಲಿ ಮಲಗಿದ್ದಿ ಬಿಕ್ಷÄಕ ಸಿದ್ದಲಿಂದ ಗೌಡ ತಂದೆ ಬಸಲಿಂಗ ಗೌಡ ವಯ:-೪೫ ವರ್ಷ ಜಾತಿ:- ಲಿಂಗಾತ ಉ:- ಬಿಕ್ಷುಕ. ವಿಳಾಸ ಗೋತ್ತಾಗಿರುವುದಿಲ್ಲಾ ಇತನ ಮೆಲೆ ಮಾರಣಾಂತಿಕ ಹಲ್ಲೆಮಾಡಿ ಕಟ್ಟಿಗೆಯಿಂದ ಕಾಲಿಗೆ ಹೋಡೆದು ಎರಡು ಕಾಲೂ ಮುರಿದಿದ್ದು ಮತ್ತು ಗುಪ್ತಗಾಯ ಗೋಳಿಸಿ. ಕೋಲೆ ಮಾಡಿರುವ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರಿತಿಯ ಕ್ರಮ ಜರೂಗಿಸಬೆಕೆಂದು ನಾನು ಹೇಳಿಕೆ ನಿಡಿದ್ದು ನೀಜವಿರುತ್ತದ್ದೆ ಎಂದು ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳಿ ಲ್ಯಾಪಟಾಪ್‌ನಲ್ಲಿ ಟೈಪ್ ಮಾಡಿಸಿದ ಹೇಳಿಕೆ ನೀಜವಿರುತ್ತದೆ. ಎಂದು ನಿಡಿದ ಹೇಳಿಕೆ ಪಡೆದುಕೊಂಡು ಸದರಿ ಹೇಳಿಕೆ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.                                                      

                                                              

ಇತ್ತೀಚಿನ ನವೀಕರಣ​ : 22-09-2021 01:39 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080