ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ:೦೧-೦೭-೨೦೨೨ರಂದು ಮದ್ಯಾಹ್ನ ಸುಮಾರು ೦೩-೦೦ ಗಂಟೆಗೆ ನಮ್ಮ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವ ಶ್ರೀ.ಮಹಾದೇವ ಲೊಂಡೆ ಅವರು ನಮ್ಮ ಬ್ಯಾಂಕಿಗೆ ಬಂದು ತನ್ನ ಖಾತೆ ಸಂಖ್ಯೆ 11140101030965 ದಿಂದ ತನ್ನ ಬ್ಯಾಂಕ್ ಆಫ್ ಬರೋಡಾ ಅಕ್ಲೂಜ್ ಶಾಖೆ ಸೊಲ್ಲಾಪೂರ ಜಿಲ್ಲೆಯ ಬ್ಯಾಂಕಿನ ಖಾತೆ ಸಂಖ್ಯೆ 08850100020932 ಗೆ ರೂ.೫,೨೭,೫೦೦/-(ರೂಪಾಯಿ ಐದು ಲಕ್ಷ ಇಪ್ಪತ್ತೇಳು ಸಾವಿರದ ಐದು ನೂರು ಮಾತ್ರ) ಹಣವನ್ನು ವರ್ಗಾವಣೆ ಮಾಡಲು ಆರ್.ಟಿ.ಜಿ.ಎಸ್ ಸ್ಲೀಪ್ (ಓಚರ್)  ಬರೆದು ಕೊಟ್ಟಿರುತ್ತಾನೆ. ನಂತರ ಇದೆ ದಿನ ನಮ್ಮ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ಸಿಬ್ಬಂದಿ ಗೊವಿಂದ್ ಮತ್ತು ಪ್ರತಿಭಾ ಇಬ್ಬರು ಕೂಡಿಕೊಂಡು ಮದ್ಯಾಹ್ನ ಸುಮಾರು ೦೩-೩೦ ಗಂಟೆಯಲ್ಲಿ ಶ್ರೀ ಮಹಾದೇವ ಲೊಂಡೆ ಯವರ ಖಾತೆ ಸಂಖ್ಯೆ 11140101030965 ಯಿಂದ ಬ್ಯಾಂಕ್ ಆಫ್ ಬರೋಡಾ ಅಕ್ಲೂಜ್ ಶಾಖೆಗೆ ಆರ್.ಟಿ.ಜಿ.ಎಸ್ ಮೂಲಕ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ದಿನಾಂಕ:೦೪-೦೭-೨೦೨೨ ರಂದು ಸಂಜೆ ೦೪-೧೫ ಗಂಟೆಗೆ ಮಹಾದೇವ ಲೊಂಡೆ ನಮ್ಮ ಬ್ಯಾಂಕಿಗೆ ದೂರವಾಣಿ ಕರೆ ಮಾಡಿ ತಾನು ದಿನಾಂಕ:೦೧-೦೭-೨೦೨೨ ರಂದು ಮದ್ಯಾಹ್ನ ೦೩-೦೦ ಗಂಟೆಗೆ ಬಂದು ತನ್ನ ಅಕೌಂಟ್ ನಂ, 11140101030965 ದಿಂದ ತನ್ನ ಬ್ಯಾಂಕ್ ಆಫ್ ಬರೋಡಾ ಅಕ್ಲೋಜ್ ಶಾಖೆ ಸೊಲ್ಲಾಪೂರ ಜಿಲ್ಲೆಯ ಬ್ಯಾಂಕಿನ ಅಕೌಂಟ್ ನಂ. 08850100020932  ಖಾತೆಗೆ ರೂ ೫೨೭೫೦೦/- ಹಣವನ್ನು ವರ್ಗಾವಣೆ ಮಾಡಲು ಕೊಟ್ಟಿರುತ್ತೇನೆ. ಆದರೆ ಹಣವು ತನ್ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಗೆ ಜಮಾ ಆಗಿರುವುದಿಲ್ಲ ಎಂದು ಹೇಳಿರುತ್ತಾನೆ. ನಂತರ ನಾವು ನಮ್ಮ ಬಾಂಕಿನ ಸಾಫ್ಟವೇರ್‌ನಲ್ಲಿ ನೋಡಿದಾಗ ಹಣವು ಖಾತೆ ಸಂಖ್ಯೆ 08850100020932  ಬದಲಿಗೆ ಖಾತೆ ಸಂಖ್ಯೆ 08850100020432ಗೆ ವರ್ಗಾವಣೆಯಾಗಿರುತ್ತದೆ. ನಂತರ ನಾವು ಬ್ಯಾಂಕ್ ಆಫ್ ಬರೋಡಾ ಅಕ್ಲೂಜ್ ಶಾಖೆಯಲ್ಲಿ ವಿಚಾರಿಸಿದಾಗ ಖಾತೆ ಸಂಖ್ಯೆ. 08850100020432 ನೋಡಿದಾಗ ಬ್ಯಾಂಕ್ ಆಫ್ ಬರೋಡಾ ಅಕ್ಲೋಜ್ ಶಾಖೆ ಸೊಲ್ಲಾಪೂರ ಜಿಲ್ಲೆಯ ಋಷಿಕೇಶ ತಂದೆ ವಿನಾಯಕ ಗಾಡೆ ಸಾ: ಶಿಂಗೋರ್ಣಿ ಮಾಳಸಿರಸ್ ಸೊಲ್ಲಾಪೂರ ಜಿಲ್ಲೆ ಮಹಾರಾಷ್ಟç ರಾಜ್ಯ ಎಂಬುವವರಿಗೆ ಹಣವು ವರ್ಗಾವಣೆ ಆಗಿರುತ್ತದೆ ಎಂದು ತಿಳಿದು ಬಂದಿರುತ್ತದೆ.  ನಂತರ ನಾವು ಬ್ಯಾಂಕ್ ಆಫ್ ಬರೋಡಾ ಅಕ್ಲೋಜ್ ಶಾಖೆ ಸೊಲ್ಲಾಪೂರ ಜಿಲ್ಲೆಯ ರವರಿಗೆ ಈ ಮೇಲ್ ಮಾಡಿ ಬ್ಯಾಂಕ್ ಆಫ್ ಬರೋಡಾ ಅಕ್ಲೋಜ್ ಶಾಖೆಯ ಖಾತೆ ಸಂಖ್ಯೆ. 08850100020432 ಯಲ್ಲಿರುವ ಹಣವು ತಪ್ಪಾಗಿ ಹೋಗಿದ್ದು ಅದನ್ನು ಮರಳಿ ಹಾಕುವಂತೆ ಮನವಿ ಮಾಡಿದ್ದು. ನಂತರ ಸದರಿ ಬ್ಯಾಂಕಿನವರು ನಿಮ್ಮ ಹಣ ವರ್ಗಾವಣೆ ಮಾಡಿದ ಖಾತೆ ಸಂಖ್ಯೆ. 08850100020432 ಹಣವನ್ನು ಋಷಿಕೇಶ ತನ್ನ ಖಾತೆಯಿಂದ ರೂ.೨೧೫೦೦೦/- ಡ್ರಾ ಮಾಡಿದ್ದು, ಉಳಿದ ರೂ.೩೦೦೦೦೦/- ಗಳನ್ನು ತನ್ನ ತಂದೆ ವಿನಾಯಕ ತಂದೆ ಬಾಪು ಗಾಡೆ ಖಾತೆ ಸಂಖ್ಯೆ  ೦೮೮೫೦೧೦೦೦೨೩೦೪೬ ಗೆ ಜಮಾ ಮಾಡಿದ್ದಾನೆ. ಇದರಲ್ಲಿ ರೂ.೧೦೦೦೦೦/- ರೂ ಹಣವನ್ನು ವಿನಾಯಕ ಡ್ರಾ ಮಾಡಿ ಇನ್ನೂಳಿದ ರೂ.೨೦೦೦೦೦/-ವಿನಾಯಕ ಖಾತೆಯಲ್ಲಿರುತ್ತವೆ ಎಂದು ಸದರಿ ಬ್ಯಾಂಕಿನವರು ತಿಳಿಸಿರುತ್ತಾರೆ. ನಂತರ ನಾನು ಋಷಿಕೇಶ ಇತನ ಹತ್ತಿರ ಹೋಗಿವರ್ಗಾವಣೆಯಾದ ಹಣವನ್ನು ವಾಪಸ್ಸು ಹಾಕುವಂತೆ ನಾವು ಮುಖತ:ಶ್ರೀಋಷಿಕೇಶನನ್ನು ಭೇಟಿಯಾಗಿ ವಿನಂತಿಸಿದರು.ನಮಗೆ ಹಣವನ್ನು ಹಾಕದೆ ಸದರಿ ವರ್ಗಾವಣೆಯಾದ ಹಣವನ್ನು ಋಷಿಕೇಶ್ ತಂದೆ ವಿನಾಯಕ ಹಾಗೂ ವಿನಾಯಕ ತಂದೆ ಬಾಪು ಇಬ್ಬರು ಕೂಡಿಕೊಂಡು ದುರುಪಯೋಗ ಪಡಿಸಿಕಂಡು ಮೋಸ ಮಾಡಿರುತ್ತಾರೆ. ಬ್ಯಾಂಕ್ ಆಫ್ ಬರೋಡಾ ಅಕ್ಲೋಜ್ ಶಾಖೆಯಿಂದ ಹಣದ ಮರು ಪಾವತಿಗಾಗಿ ದಿನಾಂಕ:೧೯.೦೭.೨೦೨೨ ರಂದು ಪತ್ರದ ಮೂಲಕ ವಿನಂತಿಸಲಾಗಿದೆ, ಆ ಪತ್ರಕ್ಕೆ ಋಷಿಕೇಶ ಮತ್ತು ವಿನಾಯಕ ಸ್ಪಂದಿಸಿರುವುದಿಲ್ಲ.  ನಂತರ ಅವರು ಹಣ ವಾಪಸ್ಸು ನೀಡಲು ನಿರಾಕರಿಸಿರುವುದರಿಂದ ಮುಂದಿನ ಕ್ರಮಕ್ಕಾಗಿ ನಮ್ಮ ಕೇಂದ್ರ ಕಚೇರಿ ಬಳ್ಳಾರಿಯರಿಂದ ಅನುಮತಿ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.ಆದ್ದರಿಂದ ಮಹಾದೇವ ಲೊಂಡೆ ಅವರ ಖಾತೆ ಸಂಖ್ಯೆ 11140101030965 ರಿಂದ ಋಷಿಕೇಶ ತಂದೆ ವಿನಾಯಕ ಗಾಡೆ, ಇತನಿಗೆ ವರ್ಗಾವಣೆಯಾದ ಹಣವನ್ನು ತನ್ನ ತಂದೆ ವಿನಾಯಕ ತಂದೆ ಬಾಪು ರವರಿಗೆ ಹಣವನ್ನು ವರ್ಗಾವಣೆ ಮಾಡಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡು ಮೋಸ ಮಾಡಿರುತ್ತಾರೆ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೩೧-೦೭-೨೦೨೨ ರಂದು ೯.೦೦ ಪಿ.ಎಮ್ ದಿಂದ ೦೧-೦೮-೨೦೨೨ ರಂದು ೪.೩೦ ಎ.ಎಮ್ ಮಧ್ಯ ಯಾರೋ ಕಳ್ಳರು ಫಿರ್ಯಾದಿಯು ತಮ್ಮ ಮನೆಯ ಮುಂದೆ ಹಚ್ಚಿ ಮೊ. ಸೈ ನಂ. ಕೆಎ೩೨ ಇಕೆಸ್ ೩೫೭೧ ಅ.ಕಿ ೨೫೦೦೦/- ನೆದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-   ದಿನಾಂಕ 16-08-2022  ರಂದು ೧.೦೦ ಎಎಮ್ ದಿಂದ ೦೫.೦೦ ಎ.ಎಮ್ ಮಧ್ಯ ಯಾರೋ ಕಳ್ಳರು ಫಿರ್ಯಾದಿಯು ಮನೆಯಲ್ಲಿಟ್ಟಿದ್ದ ಗೋಡೆಯ ಕಪಾಟಿನಲ್ಲಿಟ್ಟಿದ್ದ ಒಟ್ಟು ೧೫ ರಾಂ ಬಂಗಾರದ ಆಭರಣಗಳು  ಅ.ಕಿ ೮೨೦೦೦/- ರೂ ಮತ್ತು ೧೫೦ ಗ್ರಾಂ ಬೆಳ್ಳಿಯ ಸಾಮಾನುಗಳು ಅ.ಕಿ ೬೫೦೦/- ರೂ ಮತ್ತು ೧೬೦೦ ನಗದು ಹಣ ನೆದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:16.08.2022 ರಂದು 11:00 ಎ.ಎಂ.ಕ್ಕೆ ಮಾನ್ಯ 5ನೇ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆದೇಶ ಪತ್ರದೊಂದಿಗೆ ಉಲ್ಲೇಖಿತ ಗುನ್ನೆ ನಂ. ಪಿ.ಸಿ.ಆರ್ ನಂ. 399/2022 ದಿನಾಂಕ:16.06.2022 ನೇದ್ದರ ಖಾಸಗಿ ದೂರನ್ನು ಸ್ವೀಕರಿಸಿಕೊಂಡಿದ್ದು, ಸದರಿ ದೂರಿನ ಫಿರ್ಯಾದಿದಾರರಾದ ಶ್ರೀ ಶಂರಗೌಡ ತಂದೆ ಭೀಮರಾವ @ ಭವನರಾವ ವಯ: 65 ವರ್ಷ ಉ: ಒಕ್ಕಲುತನ ಸಾ|| ಬ್ರಹ್ಮಪೂರ ಕಲಬುರಗಿ ಇವರು ಸಲ್ಲಿಸಿದ ದೂರು ಅರ್ಜಿಯ ಸಾರಾಂಶವೆನೆಂದರೆ, ಫಿರ್ಯಾದಿದಾರರಿಗೆ ಸಂಬಂಧಿಸಿದ ಜಮೀನು ಸರ್ವೆ ನಂ. 107/2 ರಲ್ಲಿಯ  1 ಎಕರೆ 16 ಗುಂಟೆ ಜಮೀನು ತಮ್ಮದಿದ್ದು, ಸದರಿ ಜಮೀನಿನಲ್ಲಿ ತಮ್ಮ ಗಮನಕ್ಕೆ ಬರದಂತೆ ಮತ್ತು ತಮ್ಮ ಪರವಾನಿಗೆ ಸಹ ಪಡೆದುಕೊಳ್ಳದೆ ಆಯುಕ್ತರು ಮಹಾ ನಗರ ಪಾಲಿಕೆ ಕಲಬುರಗಿ, ಕಂದಾಯ ನಿರೀಕ್ಷಕರು, ಮಹಾ ನಗರ ಪಾಲಿಕೆ ಕಲಬುಗಿ, ಸಹಾಯಕ ಇಂಜಿನಿಯರ ಮಹಾ ನಗರ ಪಾಲಿಕೆ ಕಲಬುರಗಿ ,ಮತ್ತು ಮಾನ್ಯ ಆಯುಕ್ತರು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಲಬುರಗಿ ರವರು, ಸದರಿ ಸ್ಥಳದಲ್ಲಿ ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಕಾಮಗಾರಿಗಳನ್ನು ಕೊಂಡಿರುತ್ತಾರೆ ಕಾರಣ ಸದರಿಯವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಕೊಳ್ಳಬೇಕು ಅಂತ ಇತ್ಯಾದಿಯಾಗಿ ಇದ್ದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ ಠಾಣೆ :- ದಿನಾಂಕ: 16.08.2022 ರಂದು ಬೆಳಿಗ್ಗೆ 11.30 ಎಎಂಕ್ಕೆ ಫಿರ್ಯಾದಿದಾರಾದ ಶಶಿಕಾಂತ ತಂದೆ ಚಂದ್ರಕಾಂತ ಮಹಾಜನ ವ:45ವರ್ಷ ಉ:ವ್ಯಾಪಾರ ಜ್ಯಾ:ಲಿಂಗಾಯತ ಸಾ:ಕೆ.ಹೆಚ್.ಬಿ ಕಾಲೋನಿ ಜಿಲ್ಲಾ ನ್ಯಾಯಾಲಯದ ಹಿಂದುಗಡೆ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಫಿರ್ಯಾದಿ ದೂರು ಅರ್ಜಿ ನೀಡಿದ್ದು ಸದರಿ ದೂರು ಅರ್ಜಿಯ ಸಾರಂಶವೇನೆಂದರೆ ನಾನು ಶಶಿಕಾಂತ ತಂದೆ ಚಂದ್ರಕಾಂತ ಮಹಾಜನ ವ:45ವರ್ಷ ಉ:ವ್ಯಾಪಾರ ಜ್ಯಾ:ಲಿಂಗಾಯತ ಸಾ:ಕೆ.ಹೆಚ್.ಬಿ ಕಾಲೋನಿ ಜಿಲ್ಲಾ ನ್ಯಾಯಾಲಯದ ಹಿಂದುಗಡೆ ಕಲಬುರಗಿ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಸುಮಾರು 14 ವರ್ಷಳಿಂದ ಕಲಬುರಗಿ ನಗರದ ನೆಹರು ಗಂಜ ಯಾರ್ಡ ನ ನಂ.08-1534 ವಿನಾಯಕ ಟ್ರೇಡರ್ಸ ಕಂಪನಿ ಇಟ್ಟಿಕೊಂಡು ತೊಗರಿ ಮತ್ತು ಕಡಲೆ ಧಾನ್ಯಗಳ ವ್ಯಾಪಾರ ಮಾಡಿಕೊಂಡು ನನ್ನ ಕುಟುಂದೊಂದಿಗೆ ವಾಸವಾಗಿರುತ್ತೇನೆ. ನಿನ್ನೆ ದಿನಾಂಕ: 15.08.2022 ರಂದು ಸಾಯಂಕಾಲ 05.30 ಗಂಟೆಗೆ ನಾನು ಮನೆಗೆ ಹೋಗಿದ್ದು, ಸದರಿ ನನ್ನ ಕಂಪನಿಗೆ 1) ಶ್ರೀ ಬಸರಾಜ 2) ಶ್ರೀ ಸಂಗನಬಸಪ್ಪ  ಮತ್ತು 3)ಶ್ರೀ ಬಾಲಾಜಿ ಇವರಿಗೆ ಕೀಲಿ ಹಾಕಿಕೊಂಡು ಬರಲು ಹೇಳಿದ್ದು, ಸದರಿಯವರು ಎಂದಿನಂತೆ ರಾತ್ರಿ 07.50 ಗಂಟೆ ಕೀಲಿ ಹಾಕಿಕೊಂಡು ಬೀಗದ ಕೀಲಿಕೈಯನ್ನು ಶ್ರೀ ಬಾಲಾಜಿ ಹತ್ತಿರ ಇಟ್ಟಿಕೊಂಡು ಮನೆಗೆ  ಹೋಗಿರುತ್ತಾರೆ.   ಹೀಗಿದ್ದು ಇಂದು ದಿನಾಂಕಃ 16.08.2022 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮುನೀಮನಾರಾದ 1) ಶ್ರೀ ಬಸವರಾಜ ತಂದೆ ಶಿವಶರಣ್ಪಪ 2) ಶ್ರೀ ಮಹಾದೇವಪ್ಪ ತಂದೆ ಚನ್ನಪ್ಪ 3) ದೌಲತ ತಂದೆ ಮಲ್ಕಪ್ಪ ಹಳ್ಳಿ ಮತ್ತು ಕೂಲಿ ಕೆಲಸದವಳಾದ 4) ಶ್ರೀಮತಿ  ನಾಗಮ್ಮ ಗಂಡ ಶಂಕರ ನಾವೆಲ್ಲರೂ ಕೂಡಿಕೊಂಡು ಕಲಬುರಗಿ ನಗರದ ನೆಹರು ಗಂಜ ಯಾರ್ಡ ನಲ್ಲಿರವ ನಂ.08-1534 ವಿನಾಯಕ ಟ್ರೇಡರ್ಸ ಕಂಪನಿಗೆ ಹಾಕಿದ ಕೀಲಿ ತೆರೆದು ಒಳಗಡೆ ಹೋಗಿ ನೋಡಿದಾಗ ಹಿಂದುಗಡೆ ಮೂಲೆಯ ಮೇಲಗಡೆ ಛಾವಣಿಯ ಪತ್ರಾ ಕತ್ತರಿಸಿದ್ದು, ಮೇಲಿಂದ ಕಂಪನಿಯ ಒಳಗಡೆ ಇಳಿದುಕೊಂಡು ಬಂದು 7 ಕ್ವಿಂಟಲ್ ತೊಗರಿ ಅ.ಕಿ 56,000/- ಮತ್ತು 1  ಕಂಪ್ಯೂಟರ್ ಮಾನಿಟರ್ ಅ.ಕಿ 3000/-ನೇದ್ದರು  ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ: 15.08.2022 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ:16.08.2022 ರಂದು ಬೆಳಿಗ್ಗೆ 9.30 ಗಂಟೆಯ ಮಧ್ಯದ ಅವಧಿಯಲ್ಲಿ  ಜರೂಗಿರುತ್ತದೆ.  ಸದರಿ ನನ್ನ  ವಿನಾಯಕ ಟ್ರೇಡರ್ಸ ಕಂಪನಿಯಲ್ಲಿದ್ದ 07 ಕ್ವಿಂಟಲ್ ತೊಗರಿ ಮತ್ತು 01 ಕಂಪ್ಯೂಟರ್ ಮಾನೀಟರ ಕಳ್ಳತನ ಮಾಡಿದ ಕಳ್ಳರನ್ನು  ಪತ್ತೆ ಹಚ್ಚಿ  ಅವರಿಂದ ಕಳುವು ಮಾಡಿದ ತೊಗರಿ ಮತ್ತು ಕಂಪ್ಯೂಟರ ಮಾನೀಟರ ನಮಗೆ ಮರಳಿ ಕೊಡಿಸಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಂಶದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ ಠಾಣೆ :-  ದಿನಾಂಕ 16/08/2022 ರಂದು ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಓ.ಪಿ.ಸಿಬ್ಬಂದಿಯವರು ನಿಸ್ತಂತುಮೂಲಕ ದುಬೈ ಕಾಲನಿ ಕಲಬುರಗಿಂದ ಗೌರಮ್ಮ ಗಂಡ ರೇವಪ್ಪ  ಇವಳ ಹಲ್ಲೆ ಎಂ.ಎಲ್.ಸಿ. ಇದೆ ಅಂತಾ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆ ಭೇಟ್ಟಿ ಕೊಟ್ಟು ಅಲ್ಲಿ ಉಪಚಾರ ಹೊಂದುತ್ತಿದ್ದ  ಗಾಯಾಳು ಶ್ರೀಮತಿ ಗೌರಮ್ಮಾ ಗಂಡ ರೇವಪ್ಪ ಪೇಠಶಿರೂರ ವ:75 ವರ್ಷ ಉ: ಮನೆಗೆಲಸ ಜಾತಿ ಲಿಂಗಾಯತ ಸಾ; ದುಬೈ ಕಾಲನಿ ಕಲಬುರಗಿ ಇವಳಿಗೆ ವಿಚಾರಣೆ ಮಾಡಲಾಗಿ ಅವಳು ತನ್ನ ಹೇಳಿಕೆ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದೆರೆ, ವಯಸ್ಸಾಗಿದ್ದರಿಂದ ಮನೆಯಲ್ಲಿಯೇ ವಾಸವಾಗಿರುತ್ತೇನೆ. ನನಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗ ಹೀಗೆ ಎರಡು ಮಕ್ಕಳಿರುತ್ತಾರೆ. ನನ್ನ ಮಗ ಬಸವರಾಜ  ಇತನು 08 ವರ್ಷದ ಹಿಂದೆ ತೀರಿಕೊಂಡಿರುತ್ತಾನೆ. ಮಗಳು ನಾಗರತ್ನ ಮತ್ತು ಅಳಿಯ ಸೂರ್ಯಕಾಂತ ಇಬ್ಬರು ಬೆಂಗಳೂರನಲ್ಲಿ ಸರಕಾರಿ ನೌಕರಿ ಮಾಡುತ್ತಾ ವಾಸವಾಗಿರುತ್ತಾರೆ.. ನನಗೆ ಖರ್ಚಿಗೆ ಹಣ ಅಳಿಯ ಮತ್ತು ಮಗಳು ಕೊಡುತ್ತಾರೆ. ನನ್ನ ಹೆಸರಿಗೆ ಇದ್ದ ಆಸ್ತಿಯನ್ನು ನನ್ನ ಮಗ ಬಸವರಾಜ ಇತನಿಗೆ ಹೊಲ 06 ಎಕರೆ 20 ಗುಂಟೆ ಮತ್ತು ಒಂದು ಮನೆ ನನ್ನ ಮಗ ಬಸವರಾಜನಿಗೆ ಕೊಟ್ಟಿರುತ್ತೇನೆ.  ನನ್ನ ಮೊಮ್ಮಗ ರೇವಪ್ಪ ತಾಯಿ ಸುನಿತಾ, ರೇವಣಸಿದ್ಧಪ್ಪ ಮೂವರು ನನ್ನ ಮಗನಿಗೆ ಕೊಟ್ಟ ಮನೆಯಲ್ಲಿ ವಾಸವಾಗಿರುತ್ತಾರೆ. ನಾನು ದುಬೈ ಕಾಲನಿಯಲ್ಲಿ ಇರುವ ಮನೆಯಲ್ಲಿ ಒಬ್ಬಳೇ ವಾಸವಾಗಿರುತ್ತೇನೆ. ಸದರಿ ಮನೆ ನನ್ನ ಹೆಸರಿನಲ್ಲಿ ಇರುತ್ತದೆ. ನನ್ನ ಮಗಳು ಮತ್ತು ಅಳಿಯ ಇಬ್ಬರು ನನ್ನ ದೇಖರಖ ನೋಡಿಕೊಳ್ಳುತ್ತಿದ್ದರಿಂದ ಅವರಿಗೆ ನಾನು ವಾಸವಾಗಿರುವ ಮನೆ ಅವರ ಹೆಸರಿನಲ್ಲಿ ಮಾಡುತ್ತೇನೆ ಎಂದು ಹೇಳಿದ್ದರಿಂದ ನನ್ನ ಮೊಮ್ಮಗ ರೇವಪ್ಪ ತಂದೆ ಬಸವರಾಜ ಪೇಠಶಿರೂರ ಇತನಿಗೆ ಈ ವಿಷಯ ಗೊತ್ತಾಗಿ ನನಗೆ ನನ್ನ ಹೆಸರಿನಿಂದ ಮನೆ ಮಾಡಲು ನನ್ನ ಮಗಳಾದ ನಾಗರತ್ನ ಇವಳ ಹೆಸರಿಗೆ ಮನೆ ಮಾಡಬೇಡಾ ಎಂದು ಆಗ್ಗಾಗೆ ನನ್ನ ತಕರಾರು ಮಾಡುತ್ತಾ ಬಂದಿರುತ್ತಾನೆ.    ಹೀಗಿದ್ದು ದಿನಾಂಕ 16/08/2022 ರಂದು ರಾತ್ರಿ 01-00 ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದಾಗ ಬಾಗಿಲು ಬಡಿಯವ ಸಪ್ಪಳ ಕೇಳಿ ಎದ್ದು ಬಾಗಿಲು ತೆರೆದಾಗ ನನ್ನ ಮೊಮ್ಮಗ ರೇವಪ್ಪ ತಂದೆ ಬಸವರಾಜ ಪೇಠಶಿರೂರ ಇತನು ಮನೆಯಲ್ಲಿ ಬಂದು  ನನಗೆ ಎ ರಂಡಿ ಭೋಸಡಿ ಬಿಳಿ ತಲೆ ಮುದಕೀ ನನ್ನ ಹೆಸರಿನಿಂದ ಮನೆ ಮಾಡು ಅಂತಾ ಎಷ್ಟು ಸಲ ಹೇಳಿದರೂ ಯಾಕೇ ನನ್ನ ಹೆಸರಿಗೆ ಮನೆ ಮಾಡುತ್ತಿಲ್ಲಾ. ಅಂತಾ ಬೈಯ್ಯುತ್ತಾ  ನನ್ನ ಕೈ ಮುಷ್ಟಿ ಮಾಡಿ ಎಡಗಣ್ಣಿನ ಮೇಲೆ ಮತ್ತು ಕೆಳೆಗೆ  ಹೊಡೆದು ಗುಪ್ತಗಾಯಗೊಳಿಸಿದನು. ಮತ್ತು ನೂಕಿಸಿ ಕೊಟ್ಟಾಗ ತಲೆ  ಗೋಡೆಗೆ ಬಡಿದು ನೆಲಕ್ಕೆ ಬಿದ್ದೆನು.  ಇದರಿಂದಾಗಿ ತಲೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಕಾಲನಿಂದ ನನ್ನ ಟೊಂಕ, ಎದೆ, ಹೊಟ್ಟೆ, ಗದ್ದಕ್ಕೆ, ಬಾಯಿಯ ಮೇಲೆ ಮೈಮೇಲೆ ಅಲ್ಲಿಲ್ಲಿ ಒದ್ದು ಗುಪ್ತಗಾಯಗೊಳಿಸಿದನು. ಮನೆಯಲ್ಲಿದ್ದ ಸಣ್ಣ ಚಾಕು ತೆಗೆದುಕೊಂಡು ನನ್ನ ಬಲಗೈ ಮುಂಗೈ ಮೇಲೆ ಹರಿದು ಭಾರಿ ರಕ್ತಗಾಯಗೊಳಿಸಿದನು. ಚೀರಾಡುವ ಸಪ್ಪಳ ಕೇಳಿ ಅಕ್ಕ ಪಕ್ಕ ಮನೆಯವರಾದ ಸುಲೋಚನಾ ಗಂಡ ಬಸವರಾಜ, ಸಿದ್ಧಮ್ಮಾ ಕಡಗಂಚಿ ಇವರುಗಳು ಬಂದು ಜಗಳಾ ಬಿಡಿಸಿಕೊಂಡರು. ನನ್ನ ಮೊಮ್ಮಗ ರೇವಪ್ಪ ಕೈಯಲ್ಲಿದ್ದ ಚಾಕು ಅಲ್ಲಿಯೇ ಬಿಸಾಕಿ ನನಗೆ ನಿನ್ನ ಹೆಸರಿನಲ್ಲಿ ಇರುವ ಮನೆಗೆ ನನ್ನ ಹೆಸರಿಗೆ ಮಾಡದೇ ಹೋದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ ಹೋದೆನು. ರಾತ್ರಿಯಾಗಿದ್ದರಿಂದ ಮನೆಯಲ್ಲಿ ಇದ್ದುಕೊಂಡು  ಬೆಳಗಿನ ಸಮಯದಲ್ಲಿ  ಓಣಿಯ ಬಸವಣ್ಣ ಗುಡಿವರೆಗೆ ನಡೆದುಕೊಂಡು ಬಂದು ದಾರಿ ಹೊರಟ ಯಾವುದೋ ಆಟೋ ಹಿಡಿದುಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿರುತ್ತೇನೆ. ನನಗೆ ಅವಾಚ್ಯವಾಗಿ ಕೈಯಿಂದ ಕಾಲನಿಂದ ಚಾಕುವಿನಿಂದ ಹೊಡೆದು ಗುಪ್ತಗಾಯ ಮತ್ತು ಭಾರಿ ರಕ್ತಗಾಯಗೊಳಿಸಿ ಜೀವ ಭಯ ಹಾಕಿದ  ನನ್ನ ಮೊಮ್ಮಗ ರೇವಪ್ಪ ತಂದೆ ಬಸವರಾಜ ಪೇಠಶಿರೂರ ಸಾ: ದುಬೈ ಕಾಲನಿ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 02-09-2022 02:12 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080