Feedback / Suggestions

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 11.07.2022 ರಂದು 11:00 ಎ,ಎಮಕ್ಕೆ ಫಿರ್ಯಾದಿ ಮಲ್ಲಿಕಾರ್ಜನ ತಂದೆ ಶರಣಪ್ಪಾ ಅವಂಟಗಿ ವಯ:30 ವರ್ಷ ಉ: ಸಾಮಾಜಿಕ ಕೆಲಸ ಹಾಗೂ ಪ್ರಗತಿಪರ ಹೋರಾಟಗಳನ್ನು ಮಾಡುತ್ತಿದ್ದು ಫರಹತಾಬಾಧ ಇವರು ನೀಡಿದ ದೂರಿನ ಸಾರಾಂಶವೆನೆಂದರೆ, ಫರಹತಾಬಾಧ ಗ್ರಾಮ ಪಂಚಾಯತಿಯಲ್ಲಿ ಮನೆ ಹಂಚಿಕೆಯ ಅಕ್ರಮದ ಬಗ್ಗೆ ನಾನು ಜಿಲ್ಲಾ ಪಂಚಾಯಿತ ಕಾರ್ಯನಿರ್ವಾಹಕರಿಗೆ ದೂರನ್ನು ಸಲ್ಲಿಸಿರುತ್ತೆನೆ. ಆ ಕಾರಣದಿಂದಾಗಿ ನಾನು ಸಂಬಂದ ಪಟ್ಟವರ ವಿಡಿಯೋಗಳನ್ನು ಹಾಗೂ ಅವರು ಮಾತಾಡಿರುವ ಆಡಿಯೋ ರೇಕಾರ್ಡಿಂಗ ಅನ್ನು ನಾನು ಸಾಮಾಜಿಕ ಜಾಲ ತಾಣಗಳಲ್ಲಿ ಬಿಟ್ಟಿರುತ್ತೆನೆ.  ಈ ವಿಷಯ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷರಾದ ಹುಣಚಪ್ಪಾ ಪೂಜಾರಿ ಹಾಗೂ ಅವರ ಅಣ್ಣನಾದ ಶಿವಣ್ಣ ಪೂಜಾರಿ ಮತ್ತು ಅವರ ಸಂಬಂದಿಕರೇಲ್ಲರೂ ಫರಹತಾಬಾದ ಗ್ರಾಮದಲ್ಲಿ ದಿನಾಂಕ 10.07.2022 ರಂದು 09:58 ಗಂಟೆಗೆ ನನ್ನ ಅಂಗಡಿಗೆ ಬಂದು ಹಲ್ಲೆಗೆ ಮುಂದಾಗಿದ್ದಾರೆ ಹಾಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕೋಲೆ ಬೆದರಿಕೆ ಹಾಕಿದಾರೆ ಆದರಿಂದ ನಾನು ನಿನ್ನೆ ಹೊರಗಡೆ ಬರುವುದಕ್ಕೆ ಆಗದ ಕಾರಣ ಇವತ್ತು ಬಂದು ದೂರು ಸಲ್ಲಿಸುತ್ತಿದ್ದೆನೆ. ಆದಕಾರಣ ಅವರ ವಿರುದ್ದ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ  ಠಾಣೆಯ ಎನ್.ಸಿ.ಆರ್ ನಂ 17/2022 ನೆದ್ದರಲ್ಲಿ ದಾಖಲಿಸಿ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಕೊರಿದ್ದು, ಇಂದು ದಿನಾಂಕ 16.07.2022 ರಂದು ಮದ್ಯಾಹ್ನ 02:30 ಗಂಟೆಗೆ ಮಾನ್ಯ ನ್ಯಾಯಾಲಯದ ಅನುಮತಿ ಆದೇಶ ವಸುಲಾಗಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ :- ದಿನಾಂಕ 16.07.2022      ರಂದು ಬೆಳಿಗ್ಗೆ 11-15 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಓಪಿ ಸಿಬ್ಬಂದಿರವರು ಠಾಣೆಗೆ ಪೋನ ಮಾಡಿ ವಂದನಾ ಇವರು ರಸ್ತೆ ಅಪಘಾತ ಹೋಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀಮತಿ ವಂದನಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆದರೆ ದಿನಾಂಕ 16-07-2022 ರಂದು ಬೆಳಿಗ್ಗೆ 9-45 ಗಂಟೆಗೆ  ಸುಮಾರಿಗೆ ನಾನು ಮನೆಯಿಂದ ಲಾಲಗೇರಿಕ್ರಾಸ ಹತ್ತಿರ ಬರುವ  ಉರ್ದು ಶಾಲೆಯಲ್ಲಿ ಡ್ಯೂಟಿ ಮಾಡುವ ಸಲುವಾಗಿ ಅರ.ಟಿ.ಓ ಕ್ರಾಸ ಮುಖಾಂತರವಾಗಿ ಮೋಟಾರ ಸೈಕಲ ನಂಬರ ಕೆಎ32/ಇಯು-7516 ನೇದ್ದನ್ನು ಚಲಾಯಿಸಿಕೊಂಡು ಟೌನ ಹಾಲ ಕ್ರಾಸ ಕಡೆಗೆ  ಹೋಗುವಾಗ ದಾರಿ ಮದ್ಯ ವಿರೇಶ ನಗರ ಕ್ರಾಸ ಹತ್ತಿರ ರೋಡ ಮೇಲೆ ಹಿಂದಿನಿಂದ ಕಾರ ನಂಬರ ಕೆಎ32/ಜೆಡ-1938 ನೇದ್ದರ ಚಾಲಕ ಮಹ್ಮದ್ ಮತೀನ ಅಹಮದ್ ಇವರು ಕಾರನ್ನು   ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ   ನನಗೆ ಭಾರಿಗಾಯಗೊಳಿಸಿದ್ದು ತಾವು ಕಾರ ಚಾಲಕನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

  

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:05.07.2022 ರಂದು ಮದಾಹ್ನ 03:00 ಗಂಟೆ ಸುಮಾರಿಗೆ ನಾನು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಂಕುಲ ಮಕ್ಕಳ ಆಸ್ಪತ್ರೆ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ ಆಸ್ಪತ್ರೆ ಮುಂದುಗಡೆ ಅಂದಾಜು 35 ವರ್ಷದ ಒಬ್ಬ ಅಪರಿಚಿತ ಗಂಡು ವ್ಯಕ್ತಿ (ಬಿಕ್ಷುಕ) ತನಗಿದ್ದ ಯಾವುದೊ ಕಾಯಿಲೆಯಿಂದ ನರಳಿ ಮೃತಪಟ್ಟಿದ್ದು ಇರುತ್ತದೆ. ಸದ್ಯ ಅಪರಿಚಿತ ವ್ಯಕ್ತಿಯ ಶವವು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರ ಕೊಣೆಯಲ್ಲಿರುತ್ತದೆ. ಸದರಿ ಅಪರಿಚಿತ ವ್ಯಕ್ತಿಯು ಅಂದಾಜು 5.6 ಎತ್ತರ, ಸಾದಾ ಕಪ್ಪು ಬಣ್ಣ, ಉದ್ದನೆಯ ಮುಖ, ತಲೆಯ ಮೇಲೆ ಉದ್ದನೇಯ ಕಪ್ಪು ಕೂದಲು, ಉದ್ದನೇಯ ಮುಗು, ತೆಳ್ಳನೆಯ ಮೈಕಟ್ಟು, ಹೊಂದಿದ್ದು ಮೈ ಮೇಲೆ ನೀಲ ಬಣ್ಣದ ಶರ್ಟ, ಬುದಿ ಬಣ್ಣದ ಪ್ಯಾಂಟ್ ಧರಿಸಿದ್ದು ಇರುತ್ತದೆ. ಸದರಿ ಅಪರಿಚಿತ ವ್ಯಕ್ತಿಯ ವಾರಸುದಾರರ ಬಗ್ಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಇಲ್ಲಿಯವರೆಗೆ ಅವನ ವಾರಸುದಾರರು ಪತ್ತೆಯಾಗಿರುವುದಿಲ್ಲ. ಕಾರಣ ಸದರಿ ಅಪರಿಚಿತ  ವ್ಯಕ್ತಿಯ ಮರಣದಲ್ಲಿ ನನಗೆ ಯಾರ ಮೇಲೆ  ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ ಕಾರಣ ಈ ಬಗ್ಗೆ ಮುಂದಿನ ಕ್ರಮ  ಜರುಗಿಸಲು ವಿನಂತಿ ಅಂತ ವಗೈರೆಯಾಗಿದ್ದ  ಅರ್ಜಿ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

  ಚೌಕ ಪೊಲೀಸ್‌ ಠಾಣೆ :-  ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ನನಗೆ ವಾರ್ಡ ನಂ. 5 ರಿಂದ 8  ನೇದ್ದವುಗಳು  ನನ್ನ ವ್ಯಾಪ್ತಿಯಲ್ಲಿ ಬರುತ್ತೇವೆ. ಇಂದು ದಿನಾಂಕ 16/07/2022 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಏರಿಯಾದಲ್ಲಿ ಇದ್ದಾಗ, ನನ್ನ ವ್ಯಾಪ್ತಿಯಲ್ಲಿ ಬರುವ ಫೀಲ್ಟರ ಬೇಡ ತಾಜ ನಗರ ಮುಸ್ಲಿಂ ಸಂಘ ಬಳಿ ಇರುವ ಮನೆಯೊಂದರ ಮುಂದುಗಡೆ ಇರುವ  ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಗ್ಯಾಸ ಸಿಲಿಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸನ್ಸ ಇಲ್ಲದೇ ಅಡುಗಿಗೆ ಉಪಯೋಗಿಸುವ ಸಿಲಿಂಡರಗಳನ್ನು ಆಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆಂದು ಬಂದು ಬಾತ್ಮಿ ಬಂದ ಮೇರೆಗೆ  ಇಬ್ಬರು  ಪಂಚರಾದ 1)ಶ್ರೀ ಮುಸಾ ಪಟೇಲ್ ತಂದೆ ಮಹ್ಮದ ಪಟೇಲ್ ವ:29 ವರ್ಷ  ಉ:ಖಾಸಗಿ ಕೆಲಸ ಜಾತಿ ಮುಸ್ಲಿಂ ಸಾ: ಖಾದ್ರಿ ಚೌಕ ಕಲಬುರಗಿ 2)ಶ್ರೀ ಭೀಮರಾವ ತಂದೆ ಶ್ರೀಮಂತ ಜಮಖಂಡಿ ವ:23 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಶಹಾಬಜಾರ ಕಲಬುರಗಿ ಇವರುಗಳನ್ನು ಮತ್ತು ನನ್ನ ಸಹದ್ಯೋಗಿ ಶ್ರೀ ಶ್ರೀನಿವಾಸ ಆಹಾರ ನಿರೀಕ್ಷಕರು ಇವರೊಂದಿಗೆ ಚೌಕ ಪೊಲೀಸ ಠಾಣೆಗೆ ಬಂದು ತಾಜ ನಗರ ಮುಸ್ಲಿಂ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ  ಶ್ರೀ ಬಸವರಾಜ ಪಿ.ಎಸ್.ಐ. (ಕಾ.ಸು.) ರವರಿಗೆ ಈ ಮೇಲಿನ ಬಾತ್ಮಿ ವಿಷಯ ತಿಳಿಸಿ ಪಂಚರಿಗೆ  ದಾಳಿ ಕಾಲಕ್ಕೆ ಹಾಜರಿದ್ದು, ನಾವು ಮಾಡುವ ದಾಳಿ ಜಪ್ತಿ ಪಂಚನಾಮೆ, ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಪಂಚರು ಒಪ್ಪಿಕೊಂಡಿದ್ದು,  ನನ್ನ ಜೊತೆಯಲ್ಲಿ ದಾಳಿಗೆ ಬರಲು   ಶ್ರೀ ಯಾಲ್ಲಿಂಗ ಆಹಾರ ನಿರೀಕ್ಷಕರು, ಶ್ರೀ ಬಸವರಾಜ ಪಿ.ಎಸ್.ಐ. (ಕಾ.ಸು.) ಚೌಕ ಪೊಲೀಸ ಠಾಣೆಗೆ ಕಲಬುರಗಿ ರವರಿಗೆ  ಸೂಚಿಸಿದೆನು. ನಾವೆಲ್ಲರೂ ಕೂಡಿಕೊಂಡು ಶ್ರೀ ಬಸವರಾಜ ಪಿ.ಎಸ್.ಐ. ರವರು ಜೀಪು ಕೆಎ 32 ಪಿ 4189 ರಲ್ಲಿ ನಾನು ಮತ್ತು ಪಂಚರು ಹಾಗೂ ಮೇಲಿನ ಅಧಿಕಾರಿಯವರು ಕುಳಿತುಕೊಂಡು, ಮಧ್ಯಾಹ್ನ 1-30 ಗಂಟೆಗೆ  ಠಾಣೆಯಿಂದ ಹೊರಟು ಬಾತ್ಮಿ ಸ್ಥಳವಾದ ಫೀಲ್ಟರ ಬೇಡ ತಾಜ ನಗರ ಮುಸ್ಲಿಂ ಸಂಘ ಬಳಿ ಇರುವ  ಮನೆಯೊಂದರ ಮುಂದುಗಡೆ ಇರುವ  ಖುಲ್ಲಾ ಜಾಗೆ ಇನ್ನೂ ಸ್ವಲ್ಪ ದೂರವಂತೆ ಎಲ್ಲರೂ ಜೀಪನಿಂದ ಇಳಿದು  ಮರೆಯಲ್ಲಿ ನಿಂತು ನೋಡಲಾಗಿ ಒಂದು ಮನೆ  ಮುಂದಿನ ಶೆಟರ ಅಂಗಡಿ ಮುಂದುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಒಬ್ಬನು 02 ಹೆಚ.ಪಿ. ಕಂಪನಿಯ ಸಿಲೆಂಡರಗಳು, 01 ಅರ್ಧ ಹೆಚ.ಪಿ. ಮೋಟಾರ ಹಾಗೂ 01 ಎಲೆಕ್ಟ್ರೋ ಇಂಡಿಯಾ ಕಂಪನಿಯ ತೂಕದ ಯಂತ್ರಗಳು ಇಟ್ಟುಕೊಂಡು ಅಟೋ ರಿಕ್ಷಾಗಳಿಗೆ  ಗ್ಯಾಸ ಕಡಿಮೆ ದರದಲ್ಲಿ ತುಂಬಿಸಿಕೊಳ್ಳಿರಿ ಅಂತಾ ಕೂಗುತ್ತಿದ್ದಾಗ ಇದನ್ನು ನೋಡಿ ನಾನು  ಪಂಚರಿಗೆ ಮತ್ತು ಜೊತೆಗೆ ಬಂದಿದ್ದಅಧಿಕಾರಿಯವರಿಗೆ  ತೋರಿಸಿ ಖಚಿತಪಡಿಸಿಕೊಂಡು ಮಧ್ಯಾಹ್ನ 2-00 ಗಂಟೆಗೆ ಪಂಚರ ಸಮಕ್ಷಮದಲ್ಲಿ ನಾವೆಲ್ಲರೂ ದಾಳಿ ಮಾಡಿದಾಗ  ಈ ಮೇಲಿನ  ಗ್ಯಾಸ ಸಿಲಿಂಡರ ಅರ್ಧ ಹೆಚ.ಪಿ. ಮೋಟಾರ ಹಾಗೂ 01 ಎಲೆಕ್ಟ್ರೋ ಇಂಡಿಯಾ ಕಂಪನಿಯ ತೂಕದ ಯಂತ್ರ ಇಟ್ಟುಕೊಂಡು ಕೂಗುತ್ತಿದ್ದ ವ್ಯಕ್ತಿ ನಮಗೆ ನೋಡಿ ಸ್ಥಳದಲ್ಲಿ ಈ ಮೇಲಿನ ಎಲ್ಲಾ ವಸ್ತುಗಳು ಬಿಟ್ಟು ಅಲ್ಲಿಂದ  ಓಡಿ ಹೋದನು.  ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲೂ  ಮಹ್ಮದ ಗೌಸ ತಂದೆ ಬಾಬಾ ಸಾ: ತಾಜ ನಗರ ಮುಸ್ಲಿಂ ಸಂಘ ಕಲಬುರಗಿ ಅಂತಾ ಗೊತ್ತಾಯಿತು. ಮಹ್ಮದ ಗೌಸ ಇತನಿಗೆ ಮನೆಯ ಮಾಲೀಕ  ಮಹ್ಮದ  ಇಸ್ಮಾಯಿಲ್  ಇತನು ಒಂದು ಶೆಟರ ಬಾಡಿಗೆ ಕೊಟ್ಟು ಅವನ ವ್ಯವಹಾರಕ್ಕೆ ಸಹರಿಕರಿಸುತ್ತಾನೆ ಎಂದು ತಿಳಿದು ಬಂದಿರುತ್ತದೆ. ಸದರಿ ಮಹ್ಮದ ಗೌಸ ಸಾ: ತಾಜ ನಗರ ಮುಸ್ಲಿಂ ಸಂಘ ಕಲಬುರಗಿ ಇತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗೃಹ ಬಳಕೆಯ ಸಿಲಿಂಡರಗಳನ್ನು  ಅನಧಿಕೃತವಾಗಿ ಸಂಗ್ರಹಿಸಿಕೊಂಡು ಆಟೋರಿಕ್ಷಾಗಳಿಗೆ ತುಂಬುತ್ತಿರುವುದು ಖಚಿತಪಟ್ಟಿದ್ದರಿಂದ ಗುನ್ನೆ ಸ್ಥಳದಲ್ಲಿ ದೊರೆತ 02 ಹೆಚ.ಪಿ. ಕಂಪನಿಯ ಸಿಲೆಂಡರಗಳು ನೋಡಲಾಗಿ ಅದರಲ್ಲಿ  01 ತುಂಬಿದ ಸಿಲಿಂಡರ ಮತ್ತು  ಒಂದು ಖಾಲಿ ಸಿಲಿಂಡರ ಇದ್ದು,  ಅ:ಕಿ: 2000/- ರೂ.  01 ಅರ್ಧ ಹೆಚ.ಪಿ. ಮೋಟಾರ  ಅ:ಕಿ: 2000/- ರೂ. ಹಾಗೂ 01 ಎಲೆಕ್ಟ್ರೋ ಇಂಡಿಯಾ ಕಂಪನಿಯ ತೂಕದ ಯಂತ್ರಗಳು ಅ:ಕಿ: 2000/- ರೂ.  ಹೀಗೆ ಒಟ್ಟು 6000/- ರೂ ನೇದ್ದವುಳು ಕೇಸಿನ ಪುರಾವೆಗೋಸ್ಕರ ಕುರಿತು  ಪಂಚರ ಸಮಕ್ಷಮದಲ್ಲಿ ಜಪ್ತ ಪಡಿಸಿಕೊಳ್ಳಲಾಯಿತು.  ಜಪ್ತಿ ಪಡಿಸಿಕೊಂಡಿರುವ  ಎಲ್ಲಾ ಸಾಮಾಗ್ರಿಗಳನ್ನು  ಮಾರ್ಡನ್ ಗ್ಯಾಸ ಎಜೆನ್ಸಿ ಸುಪರ ಮಾರ್ಕೆಟ್ ಕಲಬುರಗಿ ತಾಬಾಕ್ಕೆ ನೀಡಲಾಗಿರುತ್ತದೆ. ಕಾರಣ ಮಹ್ಮದ ಗೌಸ ತಂದೆ ಬಾಬಾ ಸಾ: ತಾಜ ನಗರ ಮುಸ್ಲಿಂ ಸಂಘ ಕಲಬುರಗಿ ಮತ್ತು  ಮಹ್ಮದ  ಇಸ್ಮಾಯಿಲ್ ಇವರುಗಳ ವಿರುದ್ಧ ಕಲಂ 3 & 7 ಅಗತ್ಯ ವಸ್ತುಗಳ ಕಾಯಿದೆ  -1955  ಹಾಗೂ ಕಲಂ    6 & 7  ಲಿಕ್ವಿಪೈಢ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000 ಪ್ರಕರಣ ದಾಖಲಿಸಲು ಕೋರಲಾಗಿದೆ. ಎಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿದ ದೂರು ಮತ್ತು ಜಪ್ತಿ ಪಂಚನಾಮೆ ಹಾಜರಪಡಿಸಿದ್ದು, ಸದರ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಚೌಕ ಪೊಲೀಸ ಠಾಣೆ ಗುನ್ನೆ ನಂಬರ 87/2022 ಕಲಂ3&7 ಈ.ಸಿ.ಎಕ್ಟ ಮತ್ತು ಕಲಂ 6 & 7  ಲಿಕ್ವಿಪೈಢ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000   ಈ ಕೂಡಾ  ಮೂಲ ದೂರು ಮತ್ತು ಜಪ್ತಿ ಪಂಚನಾಮೆ ಲಗತ್ತಿಡಲಾಗಿದೆ ಸದರಿ ದೂರಿನ ಸಾರಂಶದ ಮೇಲಿಂದ ಗುನ್ನೆ ನಂಬರ 87/2022 ಕಲಂ ಕಲಂ3&7 ಈ.ಸಿ.ಎಕ್ಟ ಮತ್ತು ಕಲಂ 6 & 7  ಲಿಕ್ವಿಪೈಢ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000  

Last Updated: 21-07-2022 02:02 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080