ಅಭಿಪ್ರಾಯ / ಸಲಹೆಗಳು

ಸಬ್ ಅರ್ಬನ್ ಪೊಲೀಸ್ ಠಾಣೆ‌ :-  ದಿನಾಂಕ 16-04-2022 ರಂಡು ೫:೦೦ ಪಿ.ಎಮ್ ಕ್ಕೆ ಫಿರ್ಯಾದಿ ಡಾ|| ಬಸವರಾಜ ತಂದೆ ಬಸಪ್ಪ ಸಣ್ಣಕಿ ವ:೫೪ ವರ್ಷ ಉ: ಪ್ರೊಪೇಸರ ಜಾ: ವಾಲ್ಮಿಕಿ (ಪ.ಪಂಗಡ) ಸಾ: ಮನೆ ನಂ ೨೬, “ಚನ್ನಬಸವ” ಸಿದ್ದಗಂಗಾ ನಗರ ಇ.ಎಎಸ್.ಐ.ಸಿ ಆಸ್ಪತ್ರೆ ಎದರುಗಡೆ ಸೇಡಂ ರೋಡ ಕಲಬುರಗಿ, ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದೆನೆಂದರೆ, ನಾನು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಫಿಜಿಕ್ಸ ಅಧ್ಯಾಯನ ವಿಭಾಗದಲ್ಲಿ ಪ್ರೊಫೇಸರ ಅಂತ ಕೆಲ ಮಾಡಿಕೊಂಡು ಇರುತ್ತೆನೆ. ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ವಿಣಾ ಮಗಳು ದಿಪ್ತಿ ಎಲ್ಲರು ಕೂಡಿ ಇರುತ್ತೆವೆ.       ದಿನಾಂಕ ೧೪-೦೨-೨೦೨೨ ರಂದು ರಾತ್ರಿ ೯:೦೦ ಪಿ.ಎಮ್ ಕ್ಕೆ ನಮ್ಮ ಮಾವನವರಾದ ದೊಡ್ಡಗೌಡ್ರು ಓಬಣ್ಣ, ಇವರು ದಾವಣಗೇರೆ ಜಿಲ್ಲೆಯ ಜಗಲೂರು ತಾಲುಕಿನ ನಿಂಗದ ಹಳ್ಳಿ ಗ್ರಾಮದಲ್ಲಿ ತಿರಿಕೊಂಡಿದ್ದರಿಂದ ಅವರ ಶವ ಸಂಸ್ಕಾರಕ್ಕೆ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ವಿಣಾ ಇಬ್ಬರು ಕೂಡಿ ಹೋಗಿರುತ್ತೆವೆ. ನನ್ನ ಮಗಳು ದಿಪ್ತಿ ಇವಳಿಗೆ ಮನೆಯಲಿ ಬಿಟ್ಟು ಹೋಗಿರುತ್ತೆವೆ. ಮತ್ತು ನನ್ನ ಅಣ್ಣನ ಮಗಳಾದ  ಚನ್ನಮ್ಮ ಮತ್ತು ಅವನ ಗಂಡ ರಾಜೇಶ ಇವರಿಗೆ ಮನೆ ಕಡೆ ನಿಗಾ ವಹಿಸುವಂತೆ ಹೇಳಿ ಹೋಗಿರುತ್ತೆವೆ. ದಿನಾಂಕ ೧೬-೦೨-೨೦೨೨ ರಂದು ನಾನು ಕಲಬುರಿಗೆ ನಾನು ಒಬ್ಬನೆ ಮನಗೆ ಬಂದಿರುತ್ತೆನೆ. ದಿನಾಂಕ ೧೮-೦೨-೨೦೨೨ ರಂದು ಬೆಳಿಗ್ಗೆ ೯:೩೦ ಗಂಟೆಗೆ ನಾನು ಎಂದಿನಂತೆ ಕರ್ತವ್ಯಕ್ಕೆ  ಹೋಗಿರುತೆನೆ. ನನ್ನ ಅಳಿಯ  ರಾಜೇಶ ಇವರು ಸಹ ಕರ್ತವ್ಯಕ್ಕೆ ಹೋಗಿರುತ್ತಾರೆ. ಮನೆಯಲ್ಲಿ ನನ್ನ ಮಗಳು ದಿಪ್ತಿ ಮತ್ತು ಅಣ್ಣನ ಮಗಳು ಚನ್ನಮ್ಮ ಇಬ್ಬರು ಇರುತ್ತಾರೆ. ಮಧ್ಯಾಹ್ನ ೧೨:೧೫ ಪಿ.ಎಮ್ ಕ್ಕೆ ನನ್ನ ಮಗಳು ದಿಪ್ತಿ ಇವಳು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ಅಕ್ಕ ಚನ್ನಮ್ಮ ಇಬ್ಬರು ಬಿಳಿಗ್ಗೆ ೧೧:೩೦ ಗಂಟೆಗೆ ನಮ್ಮ ಮನೆಗೆ ಕೀಲಿ ಹಾಕಿ ಇಬ್ಬರು ಕೂಡಿ ಅವರ ಮನೆಗೆ ಹೋಗಿರುತ್ತೆವೆ. ನಂತರ ನಾನು ನಮ್ಮ ಮನಗೆ ಬಂದು ನೋಡಲು ನಮ್ಮ ಮನೆಯ ಬಾಗಿಲು ಖಲ್ಲಾ ಆಗಿದ್ದು, ಮನೆ ಕಳುವು ಆದಂತೆ ಕಂಡು ಬಂದಿರುತ್ತಿದ್ದು, ನೀವು ಬೇಗ ಬರಬೆಕು ಅಂತ ಹೇಳಿದರಿಂದ ನಾನು ಗಾಬರಿಗೊಂಡು ಮನೆಗೆ ಹೋಗಿ ನೋಡಲು ನಾವು ಮನೆಯ ಕಂಪೌಡ ಮಾಡದಲ್ಲಿ ಇಟ್ಟಿದ ಮನೆಯ ಕೀಲಿ ಕೈಯನ್ನು ತೆಗೆದು ಮನೆಯ ಬಾಗಿಲ ತೆಗೆದು ಯಾರೋ ಕಳ್ಳರು ಮನೆಯ ಒಳಗೆ ಹೋಗಿ ಮನೆಯ ಬೆಡರೂಮದಲ್ಲಿ ಅಲಮಾರ ಬಾಗಿಲು ತೆರೆದು ಅದರಲ್ಲಿಟ್ಟಿದ್ದ ೧) ೧೦ ಗ್ರಾಂ ಬಂಗಾರದ ಒಂದು ಚೈನ್ ಅ.ಕಿ. ೪೫,೦೦೦/- ೨) ೧೦ ಗ್ರಾಂ ಬಂಗಾರದ ಒಂದು ಚೈನ್ ಅ.ಕಿ. ೪೫,೦೦೦/- ೩) ೫ ಗ್ರಾಂ ಬಂಗಾರದ ಒಂದು ಉಂಗುರು ಅ.ಕಿ. ೨೨,೦೦೦/- ೪) ೫ ಗ್ರಾಂ ಬಂಗಾರದ ಒಂದು ಉಂಗುರು ಅ.ಕಿ. ೨೨,೦೦೦/- ೫) ೧೦ ಗ್ರಾಂ ಬಂಗಾರದ ಒಂದು ಬ್ರೇಸ ಲೇಟ ಅ.ಕಿ. ೪೫,೦೦೦/- ೬) ೫ ಗ್ರಾಂ ಬಂಗಾರದ ೪ ಸುತ್ತುಂಗುರು ಒಟ್ಟು ೨೦ ಗ್ರಾಂ ೯೦,೦೦೦/- ೭) ೫ ಗ್ರಾಂ ಬಂಗಾರದ ಒಂದು ಜೋತೆ ಕಿವಿಯೋಲೆ ಅ.ಕಿ. ೨೨,೦೦೦/- ಹಿಗೆ ಒಟ್ಟು ೬೫ ಗ್ರಾಂ ಬಂಗಾರದ ಆಭರಣಗಳು ಅ.ಕಿ.೨,೯೧,೦೦೦/- ರೂ ಮೌಲ್ಯದ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮನೆಯಲ್ಲಿ ವಿಚಾರ ಮಾಡಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಅರ್ಜಿಸಲ್ಲಿಸುತ್ತಿದ್ದು, ಕಾರಣ ಯಾರೋ ಕಳ್ಳರು ದಿನಾಂಕ ೧೮-೦೨-೨೦೨೨ ರಂದು ಬೆಳಿಗ್ಗೆ ೧೧;೩೦ ಗಂಟೆಯಿಂದ ೧೨:೦೦ ಪಿ.ಎಮ್ ಮಧ್ಯದ ಅವಧಿಯಲ್ಲಿ  ನಮ್ಮ ಮನೆಯ ಬಾಗಿಲು ಕೀಲಿ ತೆಗೆದು ಓಳಗೆ ಹೋಗಿ ಈ ಮೇಲಿನ ಬಂಗಾರದ ಆಭರಣಗಳು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಮಾಡಿ  ಅವರ ಮೇಲೆ ಸೂಕ್ತ ಕಾನುನು ಕ್ರಮ ಜರುಗಿಸಿ ಕಳುವಾದ ನಮ್ಮ ಬಂಗಾರದ ಆಭರಣಗಳು ಪತ್ತೆ ಮಾಡಿಕೊಡಬೆಕೆಂದು ಮಾನ್ಯವರಲ್ಲಿ ವಿನಂತಿ. ಅಂತ ಇತ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 19-04-2022 04:24 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080