ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-2 :-  ದಿನಾಂಕ 16/02/2023 ರಂದು ಬೆಳಿಗ್ಗೆ 06:00 ಗಂಟೆಗೆ ಮಹಮ್ಮದ ಜಹೀರ ತಂದೆ ಖಾಜಾ ಮೈನೋದ್ದೀನ್ ವ; 35 ವರ್ಷ ಜಾ; ಮುಸ್ಲಿಂ ಉ; ವಾಟರ್ ಸರ್ವಿಸ್ ಕೆಲಸ ಸಾ; ಮಹೆಬೂಬ ನಗರ ಕಲಬುರಗಿ, ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಕೊಟ್ಟಿದ್ದು ಸಾರಂಶವೆನೆಂದರೆ, ದಿನಾಂಕ-08/02/2023 ರಂದು ನನ್ನ ಅಣ್ಣ ಮಹಮ್ಮದ ಖುತಬೋದ್ದೀನ್ ಈತನು ಮೋಟಾರ ಸೈಕಲ ನಂ ಕೆಎ-32 ಹೆಚ್.ಎ-1274 ನೇದ್ದರ ಮೇಲೆ ಲಾರಿ ತಂಗುದಾಣದ ಕಡೆಯಿಂದ ಆಳಂದ ಚಕ್ ಪೋಸ್ಟ್ ಕಡೆಗೆ ಕಲಬುರಗಿ ಕಲ್ಯಾಣ ಮಂಟಪದ ಹತ್ತಿರ ಹೋಗುತ್ತಿರುವಾಗ ಹಿಂದುಗಡೆ ರಿಂಗ್ ರೋಡನಿಂದ ಬಲ್ಕರ್ ಲಾರಿ ನಂ ಎಮ್.ಹೆಚ್-12 ಟಿವಿ-7376 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದ್ದರಿಂದ ಅಣ್ಣ ಮಹಮ್ಮದ ಖುತಬೋದ್ದೀನ್ ಆ ಲಾರಿಯ ಟೈರಿನಲ್ಲಿ ಸಿಲಿಕಿದಕ್ಕೆ ಎರಡು ಕಾಲುಗಳಿಗೆ ಭಾರಿ ಪ್ರಮಾಣದ ಗಾಯವಾಗಿ ಮೊಸಖಂಡ ಹೊರಬಂದು ಭಾರಿಗಾಯಗೊಂಡಿದ್ದು ಅಲ್ಲದೆ ಲಾರಿಯ ಚಾಲಕನು ಓಡಿ ಹೋಗಿದ್ದು. ಅಣ್ಣನು ಭಾರಿಗಾಯದ ಉಪಚಾರ ಕುರಿತು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಅಂದೆ ದಿನಾಂಕ-08/02/2023 ರಂದು ತಮ್ಮ ಠಾಣೆಯ ರಾಜಕುಮಾರ ಕೊಬಾಳ ಇವರ ಕಡೆಗೆ ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಅದರ ಮೇಲಿಂದ ಠಾಣಾ ಗುನ್ನೆ ನಂ 45/2023 ಕಲಂ 279.338 ಐಪಿಸಿ ಸಂ 187 ಐ.ಎಮ್.ವಿ ಆಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ,ಈ ವಿಷಯಕ್ಕೆ ಸಂಭಂದಪಟ್ಟಂತೆ ಇಂದು ದಿನಾಂಕ-16/02/2023 ರಂದು ಈಗ ಮುಂದುವರೆದು ಹೇಳುವುದೆನೆಂದರೆ, ನನ್ನ ಅಣ್ಣ ಮಹಮ್ಮದ ಖುತಬೋದ್ದಿನ್ ಈತನು ಈ ಮೇಲಿನ ಘಟನೆಯಲ್ಲಿ ಭಾರಿಗಾಯಗೊಂಡು ಮೊದಲು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಅಣ್ಣನ ಪರಸ್ಥಿತಿಯು ಚಿಂತಾಜನಕ ಆಗಿರುವುದರಿಂದ ಹೆಚ್ಚಿನ ಉಪಚಾರ ಕುರಿತು ಅಂದೆ ದಿನಾಂಕ-08/02/2023 ರಂದು ರಾತ್ರಿ ಮಣ್ಣೂರ ಆಸ್ಪತ್ರೆಯಲ್ಲಿ ಸೇರಿಕೆರ ಮಾಡಿರುತ್ತೇವೆ. ಮುಂದೆ ಅಣ್ಣನಿಗೆ ಮಣ್ಣೂರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಆಸ್ಪತ್ರೆಯವರು ಆತನ ಪರಸ್ಥಿತಿ ಕಂಡು ಆತನ ಎಡಗಾಲು ಮೊಳಕಾಲದ ಮೇಲ್ಬಾಗದವರೆಗೆ ಪೂರ್ತಿಯಾಗಿ ಕಟ್ಟ ಮಾಡಿ ತೆಗೆದಿದ್ದು ಮತ್ತು ಬಲಗಾಲಿಗೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಉಪಚರಿಸಿರುತ್ತಾರೆ, ಅಣ್ಣನು ಉಪಚಾರ ಪಡೆಯುತ್ತಿರುವಾಗ ಆತನ ಪರಸ್ಥಿತಿಯು ಗಂಭಿರವಾಗಿ ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಬಾದೆಯು ಗುಣಮುಖವಾಗದೆ ನಿನ್ನೆ ದಿನಾಂಕ-15/02/2023 ರಂದು ರಾತ್ರಿ 09:40 ಗಂಟೆ ಸುಮಾರಿಗೆ ಮಣ್ಣೂರ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ. ರಾತ್ರಿ ನಾವು ದುಖದಲ್ಲಿರುವದರಿಂದ ಇಂದು ದಿನಾಂಕ-16/02/2023 ರಂದು ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದಿದ್ದು. ಕಾರಣ ಈ ಘಟನೆಗೆ ಕಾರಣನಾದ ಬಲ್ಕರ್ ಲಾರಿ ನಂ ಎಮ್.ಹೆಚ್-12 ಟಿವಿ-7376 ನೇದ್ದರ ಚಾಲಕ ಹೆಸರು ವಿಚಾರಣೆಯಲ್ಲಿ ಸುನೀಲ ತಂದೆ ಅಶೋಕ ಚವ್ಹಾಣ ವ; 26 ವರ್ಷ ಸಾ; ಕೊಡಲಹಂಗರಗಾ ತಾ; ಆಳಂದ ಅಂತಾ ಗೋತ್ತಾಗಿರುತ್ತದೆ, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಕೊಂಡು ಅಣ್ಣನ ಶವವನ್ನು ಮರಳಿ ಕೊಡಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ-2 :-   ದಿನಾಂಕ 16/02/2023 ರಂದು ಮದ್ಯಾಹ್ನ 3-00 ಗಂಟೆಗೆ ಶ್ರೀಮತಿ ಸುವರ್ಣಾ ಗಂಡ ಚಂಧ್ರಕಾಂತ ಬಿರಾದಾರ ವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನಗೆ 2 ಜನ ಗಂಡು ಮಕ್ಕಳು ಒಬ್ಬಳು ಹೆಣ್ಣುಮಗಳಿದ್ದು ಹಿರಿಯ ಮಗ ಚೇತನ ವ: 24 ವರ್ಷ ಇತನು ಖಾಸಗಿ ಕೆಲಸ ಮಾಡಿಕೊಂಡು ಇದ್ದನ್ನು.  ದಿನಾಂಕ : 16-02-2023 ರಂದು ಆಳಂದ ರಸ್ತೆಗೆ ಬರುವ ವಿಶ್ವರಾದ್ಯ ಕಲ್ಯಾಣ ಮಂಟಪದಲ್ಲಿ ನಮ್ಮ ಸಂಬಂದಿಕರ ಮದುವೆ ಕಾರ್ಯಕ್ರಮ ಇರುವದರಿಂದ ನಾನು ಮತ್ತು ನನ್ನ ಮಗ ಚೇತನ ಇಬ್ಬರೂ ನಮ್ಮ ಮನೆಯಿಂದ ಲಗ್ನ ಕಾಯರ್ಾಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ನನ್ನ ಮಗ ಚೇತನ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-0927 ನೇದ್ದರ ಹಿಂದುಗಡೆ ನಮ್ಮ ಸಂಬಂದಿ ಸಿದ್ದರಾಮ ತಂದೆ ರಾಚಣ್ಣಾ ಜೋಳದ ಇತನು ಕುಳಿತುಕೊಂಡು ನಮ್ಮೂರಿನ ಶಂಭುಲಿಂಗ ತಂದೆ ಭೀಮಶಾ ಯಳವಂತಗಿ ಇವರು ಚಲಾಯಿಸುತ್ತೀರುವ ಮೋಟಾರ ಸೈಕಲ ಹಿಂದುಗಡೆ ನಾನು ಕುಳಿತು ವಿಶ್ವರಾದ್ಯ ಕಲ್ಯಾಣ ಮಂಟಪದಿಂದ ಶಹಾಬಜಾರ ನಾಕಾ ಹತ್ತೀರ ಬರುವ ನಮ್ಮ ಮನೆಯ ಕಡೆಗೆ ಹೋಗುವಾಗ ನಮ್ಮ ಮೋಟಾರ ಸೈಕಲ ಮುಂದುಗಡೆಯಿಂದ ನನ್ನ ಮಗ ಚೇತನ ಹಾಗೂ ಸಿದ್ದರಾಮ ಇವರು ಹೋಗುತ್ತಿದ್ದರು ನಾವು ಅವರ ಹಿಂದಿನಿಂದ ಹೋಗುವಾಗ ವಿಶ್ವರಾದ್ಯ ಕಲ್ಯಾಣ ಮಂಟಪ ಹ್ತತೀರ ಬರುವ ಪೆಟ್ರೊಲ ಪಂಪ ಹತ್ತೀರ ರೋಡ ಮೇಲೆ ಒಬ್ಬ ಕೆ.ಕೆ.ಆರ.ಟಿ.ಸಿ ಬಸ್ಸ ಚಾಲಕನು ಆಳಂದ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ಮಗ ಚಲಾಯಿಸಿಕೊಂಡು ಹೋಗುತ್ತೀರುವ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನನ್ನ ಮಗ ಕೆಳಗಡೆ ಬಿದ್ದಾಗ ಬಸ್ಸ ಚಾಲಕ ಆತನ ಮೈಮೇಲೆ ಬಸ್ಸಿನ ಗಾಲಿ ಚಲಾಯಿಸಿ ಬಸ್ಸನ್ನು ಮುಂದಕ್ಕೆ ಹೋಗಿ ನಿಲ್ಲಿಸಿದನು ಸದರ ಘಟನೆ ನೋಡಿದ ನಾನು ಮತ್ತು ಶಂಭುಲಿಂಗ ತಂದೆ ಭೀಮಶಾ ಹಾಗೂ ಲಗ್ನ ಕಾರ್ಯಕ್ರಮಕ್ಕೆ ಬಂದಿದ್ದ ನಮ್ಮೂರಿನ ರಾಜಕುಮಾರ ತಂದೆ ಅಪ್ಪಾರಾಯ ಮಂಗಾಣೆ, ಸಂತೋಷ ತಂದೆ ಅಣ್ಣಪ್ಪಾ  ಕೆಲಕೇರಿ, ಮತ್ತು ಸಂತೋಷ ತಂದೆ ಗುರುಲಿಂಗಪ್ಪಾ ಮುಲಗೆ ರವರು ಹೋಗಿ ನನ್ನ ಮಗನಿಗೆ ಹಾಗೂ ಸಿದ್ದರಾಮ ಇವರನ್ನು ಎಬ್ಬಿಸಿ ನನ್ನ ಮಗನಿಗೆ ರೋಡ ಪಕ್ಕದಲ್ಲಿ ಮಲಗಿಸಿದೆವು ಸದರ ಘಟನೆ ಜರುಗಿದಾಗ ಮದ್ಯಾಹ್ನ 12-50 ಗಂಟೆ ಸಮಯವಾಗಿತ್ತು. ಅಪಘಾತ ಪಡಿಸಿದ ಬಸ್ಸ ನಂಬರ ನೋಡಲು ಕೆಎ-32/ಎಫ್-2480 ನೇದ್ದು ಇದ್ದಿತ್ತು. ಸದರ ಘಟನೆಯಿಂದ ನನ್ನ ಮಗ ಚೇತನ ಇತನ ಎಡ ತೆಲೆಗೆ ಭಾರಿ ರಕ್ತಗಾಯ ಎಡ ಕಿವಿಗೆ ಭಾರಿ ರಕ್ತಗಾಯ, ಎಡ ಮೆಲಕಿನ ಹತ್ತೀರ ರಕ್ತಗಾಯ, ಎಡ ಭುಜಕ್ಕೆ ಭಾರಿ ಕಂದುಗಾಂವಾಗಿತ್ತು, ಸಿದ್ದರಾಮ ಇತನ ಎಡಗೈ ಮುಂಗೈ ಹತ್ತೀರ ರಕ್ತಗಾಯ, ಬಲಗೈ ತೊರಬೆರಳು, ಕಿರುಬೆರಳೀಗೆ ತರಚಿದಗಾಯವಾಗಿತ್ತು ಬಸ್ಸ ಚಾಲಕ ತನ್ನ ಬಸ್ಸಿನ ಹತ್ತೀರ ನಿಂತಿದ್ದನ್ನು ಅಂಬುಲೇನ್ಸ ವಾಹನವು ಅಪಘಾತ ಸ್ಥಳಕ್ಕೆ ಬಂದಾಗ ನಾನು ಮತ್ತು ಶಂಬುಲಿಂಗ, ಸಂತೋಷ, ರಾಜಕುಮಾರ ಹಾಗೂ ಸಂತೋಷ ಮುಲಗೆ ರವರು ಸೇರಿಕೊಂಡು ಅವರಿಬ್ಬರ ಉಪಚಾರ ಕುರಿತು ಖಾಸಗಿ ಮಣೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ನನ್ನ ಮಗ ಚೇತನ ಹಾಗೂ ಸಿದ್ದರಾಮ ಇಬ್ಬರೂ ಮಣೂರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದರು ಮದಾಹ್ನ 2-00 ಗಂಟೆ ಸುಮಾರಿಗೆ ನನ್ನ ಮಗನ ಜೊತೆಯಲ್ಲಿ ಮಣೂರ ಆಸ್ಪತ್ರೆಯಲ್ಲಿ ನಾನು ಇರುವಾಗ ನನ್ನ ಮಗ ಚೇತನ ಇತನಿಗೆ ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟನ್ನು. ಅಪಘಾತ ಪಡಿಸಿದ ಬಸ್ಸ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೇನೆ.    ಕೆ.ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2480 ನೇದ್ದರ ಚಾಲಕನು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಚೇತನ ಇತನು ಚಲಾಯಿಸಿಕೊಂಡು ಹೋಗುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-0927 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಮಗ ಚೇತನ ಹಾಗೂ ಸಿದ್ದರಾಮ ಇತನಿಗೆ ಗಾಯಗೊಳಿಸಿದ್ದು ನನ್ನ ಮಗ ಚೇತನ ಇತನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ: 16-02-2023  ರಂದು ಸಂಜೆ ೦೬-೦೦ ಗಂಟೆಗೆ ಫಿರ್ಯಾಧಿದಾರರಾದ, ಆಗಿದ್ದು. ನಾನು ಕಲಬುರಗಿ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ  ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ದಿನಾಂಕ : ೧೫-೦೨-೨೦೨೩ ರಂದು ರಾತ್ರಿ ೧೧-೩೦ ಗಂಟೆಯಲ್ಲಿ ಮನೆಯ ಬಾಗಿಲ ಬೀಗವನ್ನು ಹಾಕಿಕೊಂಡು ನಾನು ನಮ್ಮ ಮಾವನಾದ ಗುಂಡೇರಾವ್ ಕುಲಕರ್ಣೀ ರವರ ಮನೆಗೆ ಹೋಗಿ ಅಲ್ಲಿಯೇ ಮಲಗಿಕೊಂಡಿರುತ್ತೇನೆ. ನಂತರ ದಿನಾಂಕ:೧೬-೦೨-೨೦೨೩ ರಂದು ಬೆಳಗಿನ ಜಾವ ೦೪-೩೦ ಗಂಟೆಯಲ್ಲಿ ನಮ್ಮ ಮಗನಾದ ಶ್ರೀನಿಧಿ ದೇಸಾಯಿ ರವರು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಾಗ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಮುರಿದಿರುತ್ತಾರೆಂದು ನಾನು ಮಲಗಿಕೊಂಡಿದ್ದ ಗುಂಡೇರಾವ್ ಕುಲಕರ್ಣಿ ರವರ ಮನೆಯ ಹತ್ತಿರ ಬಂದು ಹೇಳಿದಾಗ ನಾನು ಮನೆಯ ಹತ್ತರಿ ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದಿದ್ದು ನೋಡಿ ಮನೆಯ ಒಳಗಡೆ ಹೋಗಿ ಪ್ರವೇಶ ಮಾಡಿ ಬೆಡ್ ರೂಮ್ ಒಳಗಡೆ ಹೋಗಿ ನೋಡಲಾಗಿ ಬೆಡ್ ಕಳೆಗಡೆ ಇಟ್ಟಿದ್ದ ೧) ನಗದು ಹಣ ೪೧೦೦೦/-ರೂ ಮತ್ತು ೨) ಆಲಾಮರಿಯಲ್ಲಿ ಇಟ್ಟಿದ್ದ ಒಂದು ೧೦ ಗ್ರಾಂ ಬಂಗಾರದ ಉಂಗುರ ಅ,ಕಿ ೪೦೦೦೦/-ರೂ  ಹೀಗೆ ಒಟ್ಟು ೮೧೦೦೦/-ರೂ ಬೆಲೆ ಬಾಳೂವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 15-02-2023  ರಂದು ಮದ್ಯಾಹ್ನ ೨:೩೦ ಪಿ.ಎಮ್ ಸುಮಾರಿಗೆ ರಾಜಾಪೂರ ಸರ್ವೆ ನಂ ೧/೧ ಹಿಸ್ಸಾ ೫ ನೇದ್ದರ ಜಾಗದಲ್ಲಿ ಆರೋಪಿತರು ಫಿರ್ಯಾದಿಗೆ ಸದರಿ ಜಾಗದ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳೀಂದ ಬೈದು ರಾಢನಿಂದ ಹೊಡೆದು ಕುತ್ತಿಗೆ ಹಿಡಿದು ಕೊಲೆಗೆ ಪ್ರಯತ್ನ ಮಾಡಿದ್ದು ಅಲ್ಲದೆ ಜೀವ ಭಯ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :- ದಿನಾಂಕ 16/02/2023 ರಂದು ಸಾಯಂಕಾಲ 4-00 ಗಂಟೆಗೆ ಶ್ರೀ ನಾಗರಾಜ ಇವರು ಠಾಣೆಗೆ ಹಾಜರಾಗಿ ತನ್ನ ಮಗ ಅಭಿಷೇಕ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ : 15-02-2023 ರಂದು ಬೆಳಿಗ್ಗೆ ಕಪನೂರ ಗ್ರಾಮದಲ್ಲಿರುವ ನಮ್ಮ ಕಿರಾಣಿ ಅಂಗಡಿಯಿಂದ ಬೇಲೂರ ಕ್ರಾಸ ಹತ್ತೀರ ಬರುವ ಹೊಲಸೆಲ್ ಕಿರಾಣಾ ಅಂಗಡಿಯಿಂದ ನಮ್ಮ ಕಿರಾಣಿ ಅಂಗಡಿ ಸಾಮಾನುಗಳನ್ನು ತರುವ ಸಲುವಾಗಿ ನಾನು ಮೋಟಾರ ಸೈಕಲ ನಂಬರ ಕೆಎ-39/ಜೆ-7832 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತೀರುವಾಗ ಕಪನೂರ ಗ್ರಾಮದ ಬ್ರಿಡ್ಜ್ ಸಮೀಪ ಬರುವ ಕಸದ ತೊಟ್ಟಿ ಸಮೀಪ ರೋಡ ಮೇಲೆ ಒಬ್ಬ ಆಟೋರಿಕ್ಷಾ ಚಾಲಕನು ಹುಮನಾಬಾದ ರಿಂಗ ರೋಡ ಕಡೆಯಿಂದ ಬೇಲೂರ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಬಂದು ವಾಪಸ್ಸ ಹುಮನಾಬಾದ ರಿಂಗ ರೋಡ ಕಡೆಗೆ ಹೋಗುವ ಕುರಿತು ತಿರುಗಿಸಿ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಆಟೋರಿಕ್ಷಾ ವಾಹನವನ್ನು ಪಲ್ಟಿ ಮಾಡಿದನು. ಸದರಿ ಘಟನೆ ನೋಡಿದ ಬ್ರಿಡ್ಜ್ ಹತ್ತೀರ ಇರುವ ನಮ್ಮೂರಿನ ಶ್ರೀಶೈಲ ತಂದೆ ಈರಣ್ಣಾ ಕುಂಬಾರ ಹಾಗೂ ರವಿಂಧ್ರ ತಂದೆ ಅಣ್ಣಪ್ಪಾ ಕುಂಬಾರ ರವರು ಬಂದು ನನಗೆ ಮತ್ತು ಆಟೋರಿಕ್ಷಾ ಚಾಲಕನಿಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಮಲಗಿಸಿದರು. ನಾನು ಆಟೋರಿಕ್ಷಾ ನಂಬರ ನೋಡಲು ಕೆಎ-32/ಸಿ-8865 ಇದ್ದಿತ್ತು. ಅದರ ಚಆಲಕನ ಹೆಸರು ಮಲ್ಲಿಕಾರ್ಜುನ ತಂದೆ ದುಳಫ್ಪಾ ಬಡಿಗೇರ್ ಸಾ: ಬೇಲೂರ (ಜೆ) ಗ್ರಾಮ  ಅಂತಾ ಗೋತ್ತಾಯಿತು. ಸದರ ಘಟನೆ ಜರುಗಿದಾಗ ಬೆಳಿಗ್ಗೆ ಅಂದಾಜು 10-30 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಬಲಗೈ ರಿಸ್ಟ ಹತ್ತೀರ ಭಾರಿ ರಕ್ತಗಾಯ, ಎಡಗೈ ಹಸ್ತದ ಹಿಂದುಗಡೆ ಭಾರಿ ರಕ್ತಗಾಯ ಎಡ ಕಪಾಳ ಮೇಲೆ, ಎಡ ಹುಬ್ಬಿಗೆ ಎಡ ರಟ್ಟೆಗೆ ರಕ್ತಗಾಯ ಹಾಗೂ ಬಲ ಭುಜಕ್ಕೆ ರಕ್ತಗಾಯವಾಗಿತ್ತು. ಆಟೋರಿಕ್ಷಾ ಚಾಲಕ ಮಲ್ಲಿಕಾರ್ಜುನ ಇತನಿಗೂ ಕೂಡಾ ಪೆಟ್ಟು ಬಿದ್ದಿತ್ತು. ಅಪಘಾತ ಸ್ಥಳಕ್ಕೆ ಒಂದು ಅಂಬುಲೇನ್ಸ ವಾಹನ ಬಂದು ಆಟೋರಿಕ್ಷಾ ಚಾಲಕ ಮಲ್ಲಿಕಾರ್ಜುನ ಇತನ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು, ಇನ್ನೊಂದು ಅಂಬುಲೇನ್ಸ ವಾಹನ ಬಂದಾಗ ಶ್ರೀಶೈಲ ಮತ್ತು ರವೀಂದ್ರ ರವರು ನನ್ನ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಕೂಡಿಸಿಕೊಂಡು ಕಲಬುರಗಿ ಖಾಸಗಿ ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಿನ್ನೆ ನಾನು ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆದು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರಿಂದ ಇಂದು ನಾನು ನಮ್ಮ ಮನೆಯವರಿಗೆ ವಿಚಾರ ಮಾಡಿಕೊಂಡು ದೂರು ಬರೆಯಿಸಿರುತ್ತೇನೆ.  ಕಾರಣ ನಾನು ಚಲಾಯಿಸಿಕೊಂಡು ಹೋಗುತ್ತೀರುವ ಮೋಟಾರ ಸೈಕಲ ನಂಬರ ಕೆಎ-39/ಜೆ-7832 ನೇದ್ದಕ್ಕೆ  ಆಟೋರಿಕ್ಷಾ ನಂಬರ ಕೆಎ-32/ಸಿ-8865 ನೇದ್ದರ ಚಾಲಕ ಮಲ್ಲಿಕಾರ್ಜುನ ಇತನು ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತಾನು ಗಾಯ ಹೊಂದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 17-02-2023 05:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080