ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ: 16.02.2022 ರಂದು ಸಾಯಂಕಾಲ ೭ ಗಂಟೆಗೆ ಫಿರ್ಯಾದಿ ಶ್ರೀ ಪರಶುರಾಮ ತಂದೆ ಶಿವರಾಯ ಕಣ್ಣೂರ ವಯ: ೫೪ ವರ್ಷ ಉ: ಕೂಲಿಕೆಲಸ ಜಾತಿ:ಹೊಲೆಯ (ಎಸ್.ಸಿ) ಸಾ:ಸೋಮನಾಥ ಹಳ್ಳಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ನಾನು ನಮ್ಮೂರಿನ ಚಾಹುಸೇನ ತಂದೆ ಅಬ್ದುಲಸಾಬ್ ಯಲಗೋಡ ಇವರ ಹತ್ತಿರ ದುಡಿಯಲು ಇದ್ದಿರುತ್ತೆನೆ. ದಿನಾಂಕ:೧೦.೦೨.೨೦೨೨ ರಂದು ನಾನು ನಮ್ಮ ಮಾಲೀಕರಾದ ಚಾಹುಸೇನಿ ಇವರ ಹೊಲದಲ್ಲಿ ಘಳೆ ಹೊಡೆಯಲು ಹೋದಾಗ ಮದ್ಯಾಹ್ನ ೩.೩೦ ಗಂಟೆಯ ಸುಮಾರಿಗೆ ನಾನು ಘಳೆ ಹೊಡೆಯುವುದು ಬಿಟ್ಟು ಪಕ್ಕದ ಹೊಲದವರಾದ ಫೀರೋಜಾಬಾದ ಸೀಮಾಂತರದಲ್ಲಿರುವ ಫಿರೋಜಾಬಾದ ಗ್ರಾಮದ ಬಾಬಾಪಟೇಲ ತಂದೆ ಹುಸೇನ ಪಟೇಲ ಪೊಲೀಸ ಗೌಡರ ಇವರ ಹೊಲಕ್ಕೆ ನೀರು ಕುಡಿಯಲು ಹೋಗಿದ್ದಾಗ ನಮ್ಮ ಎತ್ತುಗಳು ಬಾಬಾಪಟೇಲ ಇವರ ಹೊಲದಲ್ಲಿನ ಜೋಳದ ಬೆಳೆ ತಿಂದಿರುತ್ತವೆ. ಇದನ್ನು ನೋಡಿದ ಬಾಬಾಪಟೇಲನು ನನ್ನ ಹತ್ತಿರ ಬಂದು ಏ ಹೊಲೆಯ ಜಾತಿ ಸೂಳೇ ಮಗನೇ ನನ್ನ ಹೊಲದಲ್ಲಿನ ಬೆಳೆಯನ್ನು ಮೈಯಿಸಿದೆ ರಂಡಿ ಮಗನೇ ಅಂತಾ ಜಾತಿ ನಿಂದನೆ ಮಾಡಿ ಅಲ್ಲೆ ಬಿದ್ದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದನು. ಆಗ ನನ್ನ ಹೆಂಡತಿ ನೀಲಮ್ಮ ಇವಳು ಅವನ ಕಾಲಿಗೆ ಬಿದ್ದು ನನ್ನ ಗಂಡನಿಗೆ ಬಿಡ್ರಿ ಅಂತಾ ಕೇಳಿದಾಗ ಅವಳಿಗೆ ಅವಾಚ್ಯವಾಗಿ ಬೈದಿರುತ್ತಾನೆ. ಆಗ ನಾನು ನಮ್ಮ ಮಾಲೀಕರಾದ ಚಾಹುಸೇನಿ ಇವರಿಗೆ ಫೋನ್ನ ಮಾಡಿ ವಿಷಯ ತಿಳಿಸುತ್ತಿದ್ದಾಗ ಬಾಬಾಪಟೇಲನು ನನಗೆ ರಂಡಿ ಮಗನೇ ಇನ್ನೊಂದು ಸಲ ನಿಮ್ಮ ಎತ್ತುಗಳು ನಮ್ಮ ಹೊಲದಲ್ಲಿ ಬಂದರೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಾ ಅಲ್ಲಿಂದ ಹೋಗಿರುತ್ತಾನೆ. ನಂತರ ಚಾಹುಸೇನಿ ಈತನು ಅಲ್ಲಿಗೆ ಬಂದು ನನಗೆ ಉಪಚಾರ ಕುರಿತು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಾನು ಉಪಚಾರ ಪಡೆದುಕೊಂಡು ನಮ್ಮ ಸಂಬಂಧಿಕರಲ್ಲಿ ವಿಚಾರಣೆ ಮಾಡಿ ತಡವಾಗಿ ಬಂದು ದೂರು ಸಲ್ಲಿಸುತ್ತಿದ್ದೆನೆ. ಕಾರಣ ನನಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 17-02-2022 05:12 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080