Feedback / Suggestions

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ: 16.02.2022 ರಂದು ಸಾಯಂಕಾಲ ೭ ಗಂಟೆಗೆ ಫಿರ್ಯಾದಿ ಶ್ರೀ ಪರಶುರಾಮ ತಂದೆ ಶಿವರಾಯ ಕಣ್ಣೂರ ವಯ: ೫೪ ವರ್ಷ ಉ: ಕೂಲಿಕೆಲಸ ಜಾತಿ:ಹೊಲೆಯ (ಎಸ್.ಸಿ) ಸಾ:ಸೋಮನಾಥ ಹಳ್ಳಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ನಾನು ನಮ್ಮೂರಿನ ಚಾಹುಸೇನ ತಂದೆ ಅಬ್ದುಲಸಾಬ್ ಯಲಗೋಡ ಇವರ ಹತ್ತಿರ ದುಡಿಯಲು ಇದ್ದಿರುತ್ತೆನೆ. ದಿನಾಂಕ:೧೦.೦೨.೨೦೨೨ ರಂದು ನಾನು ನಮ್ಮ ಮಾಲೀಕರಾದ ಚಾಹುಸೇನಿ ಇವರ ಹೊಲದಲ್ಲಿ ಘಳೆ ಹೊಡೆಯಲು ಹೋದಾಗ ಮದ್ಯಾಹ್ನ ೩.೩೦ ಗಂಟೆಯ ಸುಮಾರಿಗೆ ನಾನು ಘಳೆ ಹೊಡೆಯುವುದು ಬಿಟ್ಟು ಪಕ್ಕದ ಹೊಲದವರಾದ ಫೀರೋಜಾಬಾದ ಸೀಮಾಂತರದಲ್ಲಿರುವ ಫಿರೋಜಾಬಾದ ಗ್ರಾಮದ ಬಾಬಾಪಟೇಲ ತಂದೆ ಹುಸೇನ ಪಟೇಲ ಪೊಲೀಸ ಗೌಡರ ಇವರ ಹೊಲಕ್ಕೆ ನೀರು ಕುಡಿಯಲು ಹೋಗಿದ್ದಾಗ ನಮ್ಮ ಎತ್ತುಗಳು ಬಾಬಾಪಟೇಲ ಇವರ ಹೊಲದಲ್ಲಿನ ಜೋಳದ ಬೆಳೆ ತಿಂದಿರುತ್ತವೆ. ಇದನ್ನು ನೋಡಿದ ಬಾಬಾಪಟೇಲನು ನನ್ನ ಹತ್ತಿರ ಬಂದು ಏ ಹೊಲೆಯ ಜಾತಿ ಸೂಳೇ ಮಗನೇ ನನ್ನ ಹೊಲದಲ್ಲಿನ ಬೆಳೆಯನ್ನು ಮೈಯಿಸಿದೆ ರಂಡಿ ಮಗನೇ ಅಂತಾ ಜಾತಿ ನಿಂದನೆ ಮಾಡಿ ಅಲ್ಲೆ ಬಿದ್ದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದನು. ಆಗ ನನ್ನ ಹೆಂಡತಿ ನೀಲಮ್ಮ ಇವಳು ಅವನ ಕಾಲಿಗೆ ಬಿದ್ದು ನನ್ನ ಗಂಡನಿಗೆ ಬಿಡ್ರಿ ಅಂತಾ ಕೇಳಿದಾಗ ಅವಳಿಗೆ ಅವಾಚ್ಯವಾಗಿ ಬೈದಿರುತ್ತಾನೆ. ಆಗ ನಾನು ನಮ್ಮ ಮಾಲೀಕರಾದ ಚಾಹುಸೇನಿ ಇವರಿಗೆ ಫೋನ್ನ ಮಾಡಿ ವಿಷಯ ತಿಳಿಸುತ್ತಿದ್ದಾಗ ಬಾಬಾಪಟೇಲನು ನನಗೆ ರಂಡಿ ಮಗನೇ ಇನ್ನೊಂದು ಸಲ ನಿಮ್ಮ ಎತ್ತುಗಳು ನಮ್ಮ ಹೊಲದಲ್ಲಿ ಬಂದರೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಾ ಅಲ್ಲಿಂದ ಹೋಗಿರುತ್ತಾನೆ. ನಂತರ ಚಾಹುಸೇನಿ ಈತನು ಅಲ್ಲಿಗೆ ಬಂದು ನನಗೆ ಉಪಚಾರ ಕುರಿತು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಾನು ಉಪಚಾರ ಪಡೆದುಕೊಂಡು ನಮ್ಮ ಸಂಬಂಧಿಕರಲ್ಲಿ ವಿಚಾರಣೆ ಮಾಡಿ ತಡವಾಗಿ ಬಂದು ದೂರು ಸಲ್ಲಿಸುತ್ತಿದ್ದೆನೆ. ಕಾರಣ ನನಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 17-02-2022 05:12 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080