ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ: 16-01-2023 ರಂದು ಬೆಳಿಗ್ಗೆ 4:30 ಗಂಟೆಗೆ ಶ್ರೀಮತಿ ಲಕ್ಷ್ಮಿ ಗಂಡ ಸದಾಶಿವ @ ಸದಾನಂದ ಹಡಪದ ಸಾ: ಹಡಗಿಲ ಹಾರುತಿ ಗ್ರಾಮ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ಈಗ ಒಂದು ತಿಂಗಳ ಹಿಂದುಗಡೆ ನನ್ನ ಮಗಳು ಕಾಯಿಲೆಯಿಂದ ಮೃತಪಟ್ಟಿದ್ದರಿಂದ ನನ್ನ ತವರು ಮನೆಯವರು ನನಗೆ ಸುರಪೂರಕ್ಕೆ ಕರೆದುಕೊಂಡು ಹೋಗಿದ್ದು ನಾನು ಒಂದು ತಿಂಗಳಿನಿಂದ ಸುರಪೂರದಲ್ಲಿ ಇರುತ್ತೇನೆ. ನನ್ನ ಗಂಡ ಮತ್ತು ನನ್ನ ಮೂರು ಜನರ ಮಕ್ಕಳು ಹಡಗಿಲ ಹಾರುತಿ ಗ್ರಾಮದಲ್ಲಿ ವಾಸವಿದ್ದರು. ಆಗಾಗಾ ನಾನು ನನ್ನ ಗಂಡ ಮಕ್ಕಳೊಂದಿಗೆ ಪೋನ ಮುಖಾಂತರ ಮಾತನಾಡಿಕೊಂಡು ಇದ್ದೆನು. ದಿನಾಂಕ: 15-01-2023 ರಂದು ಸಾಯಂಕಾಲದ ಸಮಯದಲ್ಲಿ ನಾನು ಸುರಪೂರದಲ್ಲಿರುವ ನನ್ನ ತವರು ಮನೆಯಲ್ಲಿರುವಾಗ ನನ್ನ ಗಂಡ ಸದಾಶಿವ @ ಸದಾನಂದ ಇವರು ಪೋನ ಮಾಡಿ ಸಾಯಂಕಾಲ ಸಮಯದಲ್ಲಿ ನಾನು ಸುರಪೂರಕ್ಕೆ ಬರುತ್ತೇನೆ ಬರುವಾಗ ನದಿ ಸಿನ್ನೂರ ಸಿಮಾಂತರದಲ್ಲಿ ಬರುವ ಥರ್ಮಲ ಪ್ಲ್ಯಾಂಟನಲ್ಲಿ ಇರುವ ನಮಗೆ ಪರಿಚಯದವರನ್ನು ಬೇಟಿಯಾಗಿ ಬರುತ್ತೆನೆ ಅಂತಾ ತಿಳಿಸಿದರೂ. ರಾತ್ರಿ ನಮ್ಮ ಅಣ್ಣತಮ್ಮಕಿಯ ಹಡಗಿಲ ಗ್ರಾಮದ ಮಹಾಂತೇಶ ತಂದೆ ವಿಠಲ ಹಡಪದ ಇವರು ಪೋನ ಮಾಡಿ ನಾನು ರಾತ್ರಿ ಸಮಯದಲ್ಲಿ ಜೇವರ್ಗಿಯಿಂದ ಕಲಬುರಗಿ ಕಡೆಗೆ ಮೋಟಾರ ಸೈಕಲ ಮೇಲೆ ಬರುತ್ತೀರುವಾಗ ನದಿ ಸಿನ್ನೂರ ಸಿಮಾಂತರದ ಥರ್ಮಲ ಪ್ಲ್ಯಾಂಟ ಸಮೀಪ ರೋಡ ಮೇಲೆ ನಿಮ್ಮ ಗಂಡ ಸದಾಶಿವ @ ಸದಾನಂದ ಇತನು ರೋಡ ಮೇಲೆ ಬಿದ್ದಿದ್ದನ್ನು ಆತನಿಗೆ ಯಾವದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತ ಮಾಡಿ ಆತನ ಮೈಮೇಲೆ ಗಾಲಿ ಹಾಯಿಸಿಕೊಂಡು ಹೋದ ಬಗ್ಗೆ ಕಂಡು ಬರುತ್ತದೆ ಸದರಿ ಘಟನೆಯು ರಾತ್ರಿ ಅಂದಾಜು 11:30 ಗಂಟೆ ಸುಮಾರಿಗೆ ಜರುಗಿರುತ್ತದೆ ನಿಮ್ಮ ಗಂಡನಿಗೆ ತೆಲೆಗೆ ಭಾರಿ ಪೆಟ್ಟು ಮತ್ತು ಎರಡು ಕಾಲುಗಳಿಗೆ ಭಾರಿ ಪೆಟ್ಟು ಬಿದ್ದು ಅಪಘಾತವಾದ ತಕ್ಷಣವೇ ಮೃತಪಟ್ಟಿರುತ್ತಾನೆ. ಸದ್ಯ ಹೈ ವೇ ಪೆಟ್ರೊಲಿಂಗ ಪೊಲೀಸನವರು ಕೂಡಾ ಅಪಘಾತ ಸ್ಥಳಕ್ಕೆ ಬಂದಿರುತ್ತಾರೆ. ನಿಮ್ಮ ಗಂಡನ ಶವದ ಸುರಕ್ಷತೆಗಾಗಿ ಪೊಲೀಸನವರು ಒಂದು ಅಂಬುಲೇನ್ಸ ವಾಹನಕ್ಕೆ ಪೋನ ಮಾಡಿದ್ದರಿಂದ ಅಂಬುಲೇನ್ಸ ವಾಹನ ಅಪಘಾತ ಸ್ಥಳಕ್ಕೆ ಬಂದಾಗ ನಾನು ನಿಮ್ಮ ಗಂಡನ ಶವದ ಸುರಕ್ಷತೆಗಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆನೆ ಅಂತಾ ತಿಳಿಸಿದ್ದರಿಂದ ನಾನು ನಮ್ಮ ಸಂಬಂದಿಕರೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ನನ್ನ ಗಂಡನ ಶವವನ್ನು ನೋಡಲು ನನ್ನ ಗಂಡನ ತೆಲೆಗೆ ಮತ್ತು ಹಣೆಗೆ ಭಾರಿ ಪೆಟ್ಟು ಬಿದ್ದು ಮೌಂಸ ಹೊರೆಗೆ ಬಂದಿದ್ದು ಎಡ ಕಣ್ಣಿಗೆ ರಕ್ತಗಾಯ, ಬಲ ಗೈ ಮುಂಗೈ ಹತ್ತೀರ ಭಾರಿ ಗುಪ್ತಪೆಟ್ಟು ಎಡ ರಟ್ಟೆಗೆ ಭಾರಿ ಗುಪ್ತಪೆಟ್ಟು ಎಡ ಸೊಂಟಕ್ಕೆ ತರಚಿದಗಾಯ, ಎಡ ತೊಡೆಗೆ ಭಾರಿ ಕಂದುಗಾಯ, ಬಲ ತೊಡಗೆ ಭಾರಿ ಗುಪ್ತಪೆಟ್ಟು  ಬಲ ಮೊಳಕಾಲ ಕೆಳೆಗೆ ಎಡ ಮೊಳಕಾಲ ಕೆಳೆಗೆ ಭಾರಿ ರಕ್ತಗಾಯವಾಗಿ ಮೌಂಸ ಹೊರಗೆ ಬಂದಿತ್ತು. ಮಹಾಂತೇಶ ಇವರಿಗೆ ವಿಚಾರಿಸಲು ನನ್ನ ಗಂಡನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ವಾಹನದ ಬಗ್ಗೆ ಗೋತ್ತಿರುವದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ. ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಪಕ್ಕದಲ್ಲಿ ನಿಂತಿರುವ ನ್ನನ ಗಂಡ ಸದಾಶಿವ @ ಸದಾನಂದ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ಅವರ ಮೈಮೇಲೆ ವಾಹನ ಚಲಾಯಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ನನ್ನ ಗಂಡ ಸದಾಶಿವ @ ಸದಾನಂದ ಇವರು ಭಾರಿಗಾಯದಿಂದ ಅಪಘಾತ ಸ್ಥಳದಲ್ಲಿ ಮೃತ ಪಟ್ಟಿದ್ದು ಹೊಡೆದು ಹೊದ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:16-01-2023 ರಂದು  12:30 ಪಿ.ಎಂಕ್ಕೆ ಫಿರ್ಯಾದಿ ಶ್ರೀ ಪವನ್ ಕುಮಾರ ತಂದೆ ದಿ:ಶಿವಕುಮಾರ ಜೇವರ್ಗಿ ವಯ: 25 ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ|| ಪ್ಲಾಟ ನಂ.11-470-473, ಗಚ್ಚಿನಮನೆ ಆಸ್ಪತ್ರೆ ಎದುರುಗಡೆ, ಬ್ರಹ್ಮಪೂರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2019ನೇ ಸಾಲಿನಲ್ಲಿ ಒಂದು ಬಜಾಜ್  ಪಲ್ಸರ್ ಎನ್.ಎಸ್.-160 ಮೋಟರ್ ಸೈಕಲ್ ನಂ ಕೆ.ಎ-32 ಇ.ಯು.-3521 ಕಂದು ಮತ್ತು ಕಪ್ಪು ಬಣ್ಣದ್ದು ಇಂಜನ್ ನಂಬರ್  JEYCJJ87005 ಚೆಸ್ಸಿ ನಂಬರ್ MD2A92CY7JCJ58837 ಅ.ಕಿ.78,000/-ರೂ ನೇದ್ದು ಖರೀದಿಸಿದ್ದು ಇರುತ್ತದೆ.ಹೀಗಿದ್ದು ದಿನಾಂಕ:08.01.2023 ರಂದು ರಾತ್ರಿ 09:30  ಗಂಟೆಗೆ ನಾನು ನನ್ನ ಮೋಟರ್ ಸೈಕಲನ್ನು ಅಮರ್  ಫಂಕ್ಷನ್ ಹಾಲ್ ಹೊರಗಡೆ ನಿಲ್ಲಿಸಿ ಒಳಗಡೆ ಹೋಗಿ ದಿನಾಂಕ: 08-01-2023 ರಂದು ರಾತ್ರಿ 10:00 ಗಂಟೆಗೆ ನಾನು ಹೊರಗಡೆ ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ನಾನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ ಮತ್ತು ಹೊರ ವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ಸಿಕ್ಕಿರುವುದಿಲ್ಲ. ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ನನ್ನ ವಾಹನ ನನಗೆ ದೊರಕಿಸಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 17-01-2023 03:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080