ಅಭಿಪ್ರಾಯ / ಸಲಹೆಗಳು

ಚೌಕ್‌ ಪೊಲೀಸ್‌ ಠಾಣೆ :- ದಿನಾಂಕ: 15/12/2022  ರಂದು 09:15 ಪಿ.ಎಂಕ್ಕೆ ಶ್ರೀ ಶೇಕ ಯಾಸೀನ ತಂದೆ ಶೇಕ ಹಾರೂನ ವ:35ವರ್ಷ ಉ:ಬಂಗಾರದ ಆಭರಣ ತಯಾರಿಸು ಕೆಲಸ (ಗೋಲ್ಡಸ್ಮಿತ್) ಜ್ಯಾ:ಮುಸ್ಲಿಂ ಸಾ:ಡೊಂಕುನಿ ಜಿಲ್ಲಾ:ಹೂಗ್ಲಿ ಕಲ್ಕತ್ತಾ ರಾಜ್ಯ:ಪಶ್ಚಿಮ ಬಂಗಾಳ ಹಾ.ವ:ಮನೆ.ನಂ.6-589 ಬೀ ಬೀ ಮಜೀದ ನಬಿ ಹೋಟೆಲ್ ಹತ್ತಿರ ಮೊಮಿನಪೂರ ಕಲಬುರಗಿರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿಸಿದ ದೂರು ಅರ್ಜಿಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ,  ನಾನು ಶೇಕ ಯಾಸೀನ ತಂದೆ ಶೇಕ ಹಾರೂನ ವ:35ವರ್ಷ ಉ:ಬಂಗಾರದ ಆಭರಣ ತಯಾರಿಸು ಕೆಲಸ (ಗೋಲ್ಡಸ್ಮಿತ್) ಜ್ಯಾ:ಮುಸ್ಲಿಂ ಸಾ:ಡೊಂಕುನಿ ಜಿಲ್ಲಾ:ಹೂಗ್ಲಿ ಕಲ್ಕತ್ತಾ ರಾಜ್ಯ:ಪಶ್ಚಿಮ ಬಂಗಾಳ ಹಾ.ವ:ಮನೆ.ನಂ.6-589 ಬೀ ಬೀ ಮಜೀದ ನಬಿ ಹೋಟೆಲ್ ಹತ್ತಿರ ಮೊಮಿನಪೂರ ಕಲಬುರಗಿ ನಿವಾಸಿಯಾಗಿದ್ದು, ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೆನೆಂದರೆ, ನಾನು ಈಗ ಸುಮಾರು 12 ವರ್ಷಗಳಿಂದ ಕಲಬುರಗಿ ನಗರದ ಶರಾಫ ಬಜಾರದಲ್ಲಿಯ ಭೋಸಲೆ ಕಾಂಪ್ಲೇಕ್ಸದಲ್ಲಿ ಒಂದು ಅಂಗಡಿಯನ್ನು ಬಾಡಿಗೆಯಿಂದ ತೆಗೆದುಕೊಂಡು ಸದರಿ ಅಂಗಡಿಯಲ್ಲಿ ಬಂಗಾರದ ಗುಂಡುಗಳು ತಯಾರಿಸುವ ಕೆಲಸಕ್ಕಾಗಿ ನನ್ನ ಅಂಗಡಿಯಲ್ಲಿ 1) ಶ್ರೀ ಇಜಾದುಲ್ಲಾಮುಲ್ಲಾ ತಂದೆ ಸಿರಾಜುದುಲ್ಲಾ ಮುಲ್ಲಾ ಮತ್ತು 2) ಶ್ರೀ ಶೇಕ ಇಬ್ರಾಹಿಂ ತಂದೆ ನಸೀಮ ಅನಸಾರಿ ಮತ್ತು 03) ಶೇಕ ಆರ್ಯನ ತಂದೆ ಶೇಕ ಸಾಮೀನ ಇವರನ್ನು ಇಟ್ಟಿಕೊಂಡಿರುತ್ತೇನೆ. ಹೀಗಿದ್ದು, ದಿನಾಂಕ 07/12/2022 ರಂದು ಬೆಳಿಗ್ಗೆ10.30 ಗಂಟೆಗೆ ನನ್ನ ಬಂಗಾರದ ಆಭರಣ ತಯಾರಿಸುವ ಅಂಗಡಿ ತೆಗೆದು ರಾತ್ರಿ 10:20 ಗಂಟೆಯವರೆಗೆ ಅಂಗಡಿಯಲ್ಲಿದ್ದು ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರಿಗೆ ಕೆಲಸಕ್ಕೆ ಹಚ್ಚಿ, ಕೆಲಸ ಮುಗಿಸಿಕೊಂಡು ನಂತರ ಮನೆಗೆ ಹೋಗಿರಿ ಅಂತ ತಿಳಿಸಿ ಮನೆಗೆ ಹೋಗಿರುತ್ತೇನೆ. ನಾನು ರಾತ್ರಿ 10:50 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಶ್ರೀ ಇಜಾದುಲ್ಲಾಮುಲ್ಲಾ ಇತನು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನೀವು ಹೋದ ನಂತರ ನಾನು  ಮತ್ತು ಶ್ರೀ ಶೇಕ ಇಬ್ರಾಹಿಂ ಹಾಗೂ ಶೇಕ ಆರ್ಯನ 03 ಜನ ಕೂಡಿಕೊಂಡು ನಾವು ಬಂಗಾರದ ಗುಂಡುಗಳು ತಯಾರು ಮಾಡುತ್ತಾ ರಾತ್ರಿ 10:45 ಗಂಟೆಗೆ ಅಂಗಡಿಯಲ್ಲಿದ್ದಾಗ ಒಮ್ಮೇಲೆ ನಮ್ಮ ಅಂಗಡಿಯ ಒಳಗೆ ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದವರೇ ಅಂಗಡಿಯ ಬಾಗಿಲನ್ನು ಮುಚ್ಚಿ ಏ ಸಾಲೆ ಅವಾಜ ನಹಿ ಕರಿನೇಕಾ ನಹಿತೋ ತುಮಾರೆಕೋ ಮಾರಕೆ ಛೊಡತು ಸಾಲೆ ಅಂತ ಹೆದರಿಸಿದ್ದು, ಆಗ ನಾವು ಅವರಿಗೆ ಹೆದರಿಕೊಂಡು ನಾವು ತಯಾರು ಮಾಡುತ್ತಿದ್ದ 1) ಶ್ರೀ ಅಯ್ಯುಬಸೇಠ 10 ಗ್ರಾಂ 2) ಶ್ರೀ ಅನಾರುಲ್ 7 ಗ್ರಾಂ 3)ಶ್ರೀ ಪಿಂಟು  7 ಗ್ರಾಂ 4) ಶ್ರೀ ರಾಜು 5 ಗ್ರಾಂ ಹೀಗೆ ಒಟ್ಟು 29 ಗ್ರಾಂ ಬಂಗಾರದ ಗುಂಡುಗಳನ್ನು  ತಯಾರಿಸುವ ಕುರಿತು ಇಟ್ಟಿದ ಬಂಗಾರನ್ನು  ದೋಚಿಕೊಂಡು ಹೋಗಿದ್ದು ನಂತರ ನಾವು ಹೊರಗಡೆ ಬಂದು ನೋಡುವಷ್ಟರಲ್ಲಿ ಇನ್ನೂ 2-3 ಜನರು ಅಂಗಡಿ ಹೊರಡೆ ನಿಂತಿದ್ದು,ಅವರಿಬ್ಬರೂ ಹೊರಗಡೆ ನಿಂತವರಿಗೆ ಜಲ್ದಿ ಆವ್ , ಜಲ್ದಿ ಆವ್  ಅನ್ನುತ್ತಾ ಅವರೆಲ್ಲರೂ ಸೇರಿಕೊಂಡು ಹೋಗಿರುತ್ತಾರೆ ನೀವು ಬೇಗನೇ ಅಂಗಡಿಗೆ ಬನ್ನೀರಿ ಅಂತ ಹೇಳಿದಾಗ ಆಗ ನಾನು  ಗಾಬರಿಗೊಂಡು ರಾತ್ರಿ 10:55 ಗಂಟೆಗೆ ನನ್ನ ಅಂಗಡಿಗೆ ಬಂದು ನೋಡಿದಾಗ  ಘಟನೆ ಜರುಗಿದ್ದು ನಿಜವಿದ್ದು ನಮ್ಮ ಅಂಗಡಿಗೆ ಬಂದವರೆಲ್ಲರ ವಯಸ್ಸು ಅಂದಾಜು 25 ರಿಂದ 30 ವರ್ಷ ವಯಸ್ಸಿನವರು ಇದ್ದಿರುವ ಬಗ್ಗೆ ತಿಳಿಸಿರುತ್ತಾರೆ.ನಮ್ಮ ಅಂಗಡಿಯಲ್ಲಿ ಕೆಲಸಮಾಡುವ ಶ್ರೀ ಇಜಾದುಲ್ಲಾಮುಲ್ಲಾ ಮತ್ತು  ಶೇಕ ಇಬ್ರಾಹಿಂ ಹಾಗೂ ಶೇಕ ಆರ್ಯನ ಇವರು ಬಂಗಾರ ದೋಚಿಕೊಂಡು ಹೋದ ವ್ಯಕ್ತಿಗಳಿಗೆ ನೋಡಿದರೆ ಗುರ್ತಿಸುತ್ತಾರೆ. ನಾನು ಮತ್ತು ಕೆಲಸದವರು  ಭಯಪಟ್ಟು ಊರಿಗೆ ಹೋಗಿದ್ದರಿಂದ ಮತ್ತು ನನ್ನ ಕುಟುಂದವರಿಗೆ ವಿಚಾರಿಸಿಕೊಂಡು ಠಾಣೆಗೆ ಬಂದು ಇಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ದಿನಾಂಕ:07/12/2022 ರಂದು ರಾತ್ರಿ 10:45 ಗಂಟೆಗೆ ನನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಕೆಲಸಗಾರರಿಗೆ ತಲವಾರ ತೋರಿಸಿ ಜೀವಭಯ ಹಾಕಿ  ಗುಂಡುಗಳು ತಯಾರಿಸಲು ಇಟ್ಟ  ಬಂಗಾರ ದೋಚಿಕೊಂಡು ಹೋದ  ಅಪರಿಚಿತ ವ್ಯಕ್ತಿಗಳು ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಈ ಮೇಲಿನ ಬಂಗಾರವನ್ನು ಪತ್ತೆ ಮಾಡಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ - 2 :- ದಿನಾಂಕ: 15/12/2022 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ರವಿ ತಂದೆ ಮಹಾದೇವಪ್ಪಾ ಸಾ: ಓಕಳಿ ತಾ: ಕಮಲಾಪುರ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ದಿನಾಂಕ 14/12/2022 ರಂದು ಮದ್ಯಾಹ್ನ 03:25 ಗಂಟೆ ಸುಮಾರಿಗೆ ಫಿರ್ಯಾಧಿಯು ತನ್ನ ಕಾರ ನಂ KA-32 AA-2964 ನೇದ್ದರಲ್ಲಿ ಅವರ ಕುಟುಂಬದ ಸದಸ್ಯರೊಂದಿಗೆ ಹುಮನಾಬಾದ ರಿಂಗ್ ರೋಡ ಕಡೆಯಿಂದ ರಾಮ ನಗರ ಕಡೆಗೆ ಹೋಗುವಾಗ ರಾಮ ನಗರ ಕ್ರಾಸ ಹತ್ತಿರ ಒಂದು  ಟಾಟಾ ಸೋಮೋ ನಂ KA-32 A-9590 ನೇದ್ದರ ಚಾಲಕ ಸಲಿಂ ಈತನು ಹುಮಾನಾದ ರಿಂಗ್ ರೋಡದಿಂದ ರಾಮ ನಗರ ಕ್ರಾಸ್ ಕಡೆಗೆ ಹೋಗುವ ಕುರಿತು  ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಹಿಂದುಗಡೆಯಿಂದ ಡಿಕ್ಕಿ ಪಡಿಸಿ ತನ್ನ ಕಾರ ಪಲ್ಟಿ ಮಾಡಿಕೊಂಡು ತಾನು ಭಾರಿಗಾಯಗೊಂಡು ಫಿರ್ಯಾಧಿ ಕಾರಿನಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಎರಡು ವಾಹನಗಳು ಜಖಂ ಗೊಂಡಿದ್ದು ಸೋಮೋ ಚಾಲಕ ಸಲಿಂ ಈತನು ಉಪಚಾರ ಕುರಿತು ಮಣ್ಣೂರ ಆಸ್ಪತ್ರೆಯಲ್ಲಿ ಸೇರಿಕೆ ಆಗಿದ್ದು  ಕಾರಣ ಸದರಿ ಸೋಮೋ ಚಾಲಕ ಸಲಿಂ ಈತನ  ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಫಿರ್ಯಾಧಿ ಅರ್ಜಿ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ:- ದಿನಾಂಕ: 15-12-2022 ರಂದು ಬೆಳಿಗ್ಗೆ ೧೦:೫೯ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕಮಲಾಕರ್ ತಂದೆ ಗೋವಿಂದರಾವ್ ಬಾಸಗೊಡಕರ ವಯ:೫೯ವರ್ಷ ಜಾ:ಬ್ರಾಹ್ಮಣ ಉ:ವ್ಯಾಪಾರ ಸಾ//ಮನೆ ನಂ ೩-೨೨ ಸರಸ್ವತಿ ಗೋದಾಮ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನದೊಂದು ಸ್ವಂತ ಹೊಂಡಾ ಆಕ್ಟೀವಾ ಸ್ಕೂಟರ್ ನಂ KA-32-ED-1716 ನೇದ್ದು ಇದ್ದು ಸದರಿ ಸ್ಕೂಟರ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಸ್ಕೂಟರವು ದಿನಾಂಕ:೧೦/೧೧/೨೦೨೨ ರಂದು ರಾತ್ರಿ ೧೦:೩೦ ಗಂಟೆ ಸುಮಾರಿಗೆ ನನ್ನ ಸ್ಕೂಟರನ್ನು ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದೆ ದಿನಾಂಕ ೧೧/೧೧/೨೦೨೨ ರಂದು ಬೆಳಿಗ್ಗೆ ೬:೩೦ ಗಂಟೆ ಸುಮಾರಿಗೆ ಎದ್ದು ನೋಡಲಾಗಿ ಮನೆಯ ಮುಂದೆ ನಿಲ್ಲಿಸದ ಸ್ಕೂಟರ್ ಇರಲಿಲ್ಲಾ ಗಾಬರಿಯಾಗಿ ನಾನು ಮತ್ತು ನಮ್ಮ ಮನೆಯವರು ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಸ್ಕೂಟರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ:- ದಿನಾಂಕ:15-12-2022 ರಂದು 12:05 ಪಿಎಮ್ ಕ್ಕೆ ಶ್ರೀಮತಿ ಸೈನಾಜ, ಜೈಲರ ಕೇಂದ್ರ ಕಾರಾಗೃಹ ಕಲಬುರಗಿ ರವರು ಠಾಣೆಗೆ ಹಾಜರಾಗಿ ಡಾ|| ಪಿ.ರಂಗನಾಥ, ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ನೀಡಿದ ಲಿಖಿತ ದೂರುನ್ನು ಹಾಜರುಪಡಿಸಿದ್ದು. ಸದರಿ ದೂರಿನ ಸಾರಾಂಶವೇನೆಂದರೆ, ಕಲಬುರಗಿ ಕೇಂದ್ರ ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ: 16345 ಸಂಗಮೇಶ ತಂದೆ ಶಂಕರ ಕುಂಬಾರ, ಸಾ|| ಚೌಡಾಪೂರ, ತಾ|| ಅಫಜಲಪೂರ, ಜಿ|| ಕಲಬುರಗಿ, ವಯಸ್ಸು 20 ವರ್ಷ ಎಂಬಾತನು ಗೌ|| ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ ಕಲಬುರಗಿ ರವರ Spl. C. (NDPS) No. 25/2021 (Cr. No. 11/2021 CEN Crime Police Station, Kalaburagi) ರ ಪ್ರಕರಣದಲ್ಲಿ ಬಂದಿಯು ದಿನಾಂಕ 26-08-2021 ರಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ದಾಖಲಾಗಿ ವಿಚಾರಣೆಯನ್ನು ಎದುರಿಸುತ್ತಿದ್ದನು.ಮುಂದುವರೆದು ಕಾರಾಗೃಹದ ಬಂದಿಗಳು ದಿನಾಂಕ 14-12-2022 ರಂದು ಸಮಯ 11:30 ರ ಅವಧಿಯಲ್ಲಿ ಕಾರಾಗೃಹದ ಟವರ್ ಹಿಂಭಾಗದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದು, ಕಾರಾಗೃಹದ ಒಳಭಾಗದಲ್ಲಿರುವ ಹನುಮಾನ್ ಮಂದಿರದ ಮುಂಭಾಗದಲ್ಲಿರುವ ಹುಣಸೆ ಮರದ ಮೇಲೆ ಕ್ರಿಕೆಟ್ ಬಾಲ್ ಸಿಕ್ಕಿ ಹಾಕಿಕೊಂಡಿದ್ದು, ಮರದ ಮೇಲೆ ಸಿಕ್ಕಿಕೊಂಡಿರುವ ಬಾಲ್ ಅನ್ನು ತರಲು ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ: 16345 ಸಂಗಮೇಶ ತಂದೆ ಶಂಕರ ಕುಂಬಾರ ಎಂಬಾತನು ಸದರಿ ಹುಣಸೆ ಮರವೇರಿ ಮರ ಜಾಡಿಸುವಾಗ ರೊಂಬೆ ಮುರಿದು ಬಂದಿಯು ಕೆಳಗೆ ಸಿ.ಸಿ. ರಸ್ತೆಯ ಮೇಲೆ ಬಿದ್ದಿದ್ದು, ಆತನ ಎಡಗಾಲಿನ ಮೊಣಕಾಲಿನ ಕೆಳ ಭಾಗದ ಕಾಲು ಮುರಿದಿರುತ್ತದೆ. ತಕ್ಷಣ ಕಾರಾಗೃಹದ ಕರ್ತವ್ಯ ನಿರತ ಸಿಬ್ಬಂದಿಗಳು ಕೂಡಲೇ ಬಂದಿಯನ್ನು ಕಾರಾಗೃಹದ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಬಂದಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ. ಕಾರಾಗೃಹ ವೈದ್ಯಾಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ್ದರಿಂದ ಬಂದಿಯನ್ನು ಕೂಡಲೇ ಕಾರಾಗೃಹದ ಭದ್ರತಾ ಸಿಬ್ಬಂದಿಗಳ ಬೆಂಗಾವಲಿನಲ್ಲಿ ದಿನಾಂಕ 14-12-2022 ರಂದು ಸಮಯ 11:50 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿ ಇಲ್ಲಿಗೆ ಕಳುಹಿಸಲಾಗಿತ್ತು. ಬಂದಿಯನ್ನು ಜಿಮ್ಸ್ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ, ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡನಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡು ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದ್ದರು. ಬಂದಿಗೆ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೇ ಬಂದಿಯು ದಿನಾಂಕ 15-12-2022 ರಂದು ಸಮಯ 07:00 ಗಂಟೆಗೆ Cardiorespiratory Arrest ಎಂಬ ಕಾರಣದಿಂದಾಗಿ ಮೃತ ಹೊಂದಿರುವುದಾಗಿ ಜಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು Medical Certificate of Cause of Death ಪ್ರಮಾಣ ಪತ್ರದಲ್ಲಿ ತಿಳಿಸಿರುತ್ತಾರೆ. ಪ್ರಸ್ತುತ ಬಂದಿಯ ಮೃತ ದೇಹವನ್ನು ಜಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿರುತ್ತದೆ. ಮುಂದುವರೆದು ವಿನಂತಿಸುವುದೇನೆಂದರೆ, ವಿಚಾರಣಾ ಬಂದಿ ಸಂಖ್ಯೆ: 16345 ಸಂಗಮೇಶ ತಂದೆ ಶಂಕರ ಕುಂಬಾರ, ಸಾ|| ಚೌಡಾಪೂರ, ತಾ|| ಅಫಜಲಪೂರ, ಜಿ|| ಕಲಬುರಗಿ ಎಂಬಾತನ ಮೃತ ದೇಹದ ಶವ ತನಿಖೆ, ಮರಣೋತ್ತರ ಪರೀಕ್ಷೆ ಹಾಗೂ ನ್ಯಾಯಾಂಗದ ಅಧಿಕಾರಿಗಳಿಂದ ಮ್ಯಾಜಿಸ್ಟೇರಿಯಲ್ ವಿಚಾರಣೆಯನ್ನು (ವಿಡಿಯೋ ಚಿತ್ರೀಕರಣದೊಂದಿಗೆ) ನಡೆಸಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದೆ. ಸದರಿ ಬಂದಿಯ ಹೆಸರಿನ ವಿವರಣಾ ಪಟ್ಟಿ ಹಾಗೂ ಬಂದಿಯು ಮೃತ ಪಟ್ಟಿರುವ ಬಗ್ಗೆ Medical Certificate of Cause of Death ಪ್ರಮಾಣ ಪತ್ರವನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿದೆ ಎಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ:- ದಿನಾಂಕ: 13-12-2022 ರಂದು ಮದ್ಯಾಹ್ನ ೧೨.೩೦ ಹಂಟೆ ಸುಮಾರಿಗೆ ಆರೋಪಿತನು ಸಂತ್ರಾಸವಾಡಿಯ ಶರದಾಂಬೆ ಆಸ್ಪತ್ರೆಯ ಹತ್ತಿರ ಅಲ್ಲವುದ್ದಿನ ಇವರ ಮನೆಯ ಕಟ್ಟಡಕ್ಕೆ ಕಂಕರ್ ಹಾಕಲು ಬಂದ ಟಿಪ್ಪರ ಚಾಲಕ ತನ್ನ ಟಿಪ್ಪರ್ ಅನ್ನು ನಿರ್ಲಕ್ಷತನದಿಂದ ಟಿಪ್ಪರ ಚಲಾಯಿಸಿ ವಿದ್ಯೂತ್ ಕಂಬಕ್ಕೆ ಡಿಕ್ಕಿ ಮಾಡಿ ಜಖಂ ಗೊಳಿಸಿದ್ದು ಸಮಾರು ೨೫೦೦೦ರೂ ಹಾನಿ ಮಾಡಿರುತ್ತಾನೆ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-12-2022 12:48 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080