ಅಭಿಪ್ರಾಯ / ಸಲಹೆಗಳು

ಅಶೋಕ  ನಗರ ಪೊಲೀಸ್ ಠಾಣೆ :- ಇಂದು ದಿನಾಂಕ: 15.12.2021 ರಂದು 06:00 ಪಿ.ಎಂ. ಕ್ಕೆ  ಕಲಬುರಗಿ ಜಿಲ್ಲಾ  ಸರ್ಕಾರಿ  ಆಸ್ಪತ್ರೆಯಿಂದ ಮರಳಿ ಠಾಣೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರರಾದ ಶ್ರೀಮತಿ ನೂರಜಾನ ಬಿ ಗಂಡ ದೌಲಸಾಬ ಮನಿಯಾರ ವಯ: 50 ವರ್ಷ ಜಾ: ಮುಸ್ಲಿಂ ಉ: ಮನೆ ಕೆಲಸ ಸಾ|| ಅಶೋಕ ನಗರ ಕಲುಬರಗಿ ಇವರ ಹೇಳಿಕೆ ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು  4 ಜನ ಹೆಣ್ಣು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳು ಇರುತ್ತೇವೆ. ನಮ್ಮ ತಂಗಿ ಅಮಿನಾ ಮತ್ತು ನಾನು ನಮ್ಮತಾಯಿಯೊಂದಿಗೆ  ಕಲಬುರಗಿಯ ಅಶೋಕ ನಗರ ಮನೆಯಲ್ಲಿ ವಾಸವಾಗಿರುತ್ತೇವೆ. ಕಳೆದ 10 ತಿಂಗಳ ಹಿಂದೆ ನಮ್ಮ ತಾಯಿ ಜೈನದ ಬಿ ಇವಳು ತೀರಿಕೊಂಡಿರುತ್ತಾಳೆ.  ಅಂದಿನಿಂದ ಸದರಿ ಮನೆಯಲ್ಲಿ  ನಾನು  ಮತ್ತು ನನ್ನ  ತಂಗಿ  ಅಮಿನಾ ಇರುತ್ತಿದ್ದು, ಮನೆಯು  ನಮ್ಮ ತಾಯಿಯ  ಹೆಸರಿಗೆ  ಇರುತ್ತದೆ.  ನಮ್ಮ  ತಾಯಿ  ತೀರಿಕೊಂಡ ನಂತರ ನಾವು  ವಾಸವಾಗಿರುವ ಮನೆಯನ್ನು ಖಾಲಿ  ಮಾಡುವಂತೆ ನಮ್ಮ  ತಮ್ಮ ಅನ್ವರಸಾಬ ಇತನ ಮಕ್ಕಳಾದ ಹಸನ ಮತ್ತು  ಕರೀಂ ಹಾಗೂ  ಅವನ  ಹೆಂಡತಿ  ಮೆಹಬೂಬಿ  ಇವರುಗಳು  ಬಂದು  ಆಗಾಗ  ತಂಟೆ ತಕರಾರು ಮಾಡುತ್ತಿದ್ದರು.ಹೀಗಿದ್ದು  ಇಂದು  ದಿನಾಂಕ:15.12.2021 ರಂದು 12:30 ಗಂಟೆ  ಸುಮಾರಿಗೆ ನಾನು ಊರಿನಿಂದ ಮನೆಗೆ ಬಂದಿದ್ದು,  ಆಗ  ನಮ್ಮ  ತಮ್ಮ ಅನ್ವರಸಾಬ  ಇತನ  ಮಕ್ಕಳಾದ ಹಸನ, ಕರೀಮ ಹಾಗೂ  ಅವನ  ಹೆಂಡತಿ ಮೆಹಬೂಬಿ  ಮೂರು  ಜನರು ಬಂದವರೆ ನನಗೆ  ಮತ್ತು ನನ್ನ  ತಂಗಿ  ಅಮಿನಾ  ಇಬ್ಬರಿಗೂ  ಹೊರಗೆ  ಕರೆದು  ಮನೆಯನ್ನು  ಖಾಲಿ ಮಾಡುವಂತೆ ಅವಾಚ್ಯವಾಗಿ  ಏ ರಂಡಿ ಮಕ್ಕಳಾ ಇದು  ನಮ್ಮ  ಮನೆ  ಇರುತ್ತದೆ  ಇದನ್ನು ಖಾಲಿಮಾಡಿ ಅಂತ ಅನ್ನುತ್ತ  ಹಸನ  ಇತನು ತನ್ನ ಕೈಯಲ್ಲಿದ್ದ  ಕಟ್ಟಿಗೆಯಿಂದ ನನ್ನ ಸೊಂಟದ ಮೇಲೆ,  ಬೆನ್ನಿಗೆ, ಮತ್ತು  ಹೊಟ್ಟೆಗೆ  ಹೊಟ್ಟೆಗೆ ಹೊಡೆದಿರುತ್ತಾನೆ.  ನಾನು ಚಿರಾಡುತ್ತಿದ್ದಾಗ  ತಂಗಿ  ಅಮಿನಾ ಇವಳು ಜಗಳ ಬಿಡಿಸಲು ಬಂದಾಗ ಕರೀಂ ಇತನು ಅಮಿನಾ  ಇವಳಿಗೆ  ತನ್ನ  ಕೈಯಲ್ಲಿದ್ದ ಕಟ್ಟಿಗೆಯಿಂದ ಅವಳ  ಎದೆಗೆ,  ಹೊಟ್ಟೆಗೆ, ಬೆನ್ನಿಗೆ,  ಮತ್ತು  ಕಾಲುಗಳಿಗೆ  ಹೊಡೆದಾಗ ಅವಳು   ಚಿರಾಡುತ್ತಿದ್ದಾಗ ಮೆಹಬೂಬಿ ಇವಳು ಸಹ  ತನ್ನ  ಕೈಯಿಂದ  ನನ್ನ  ಬೆನ್ನಿಗೆ, ಮತ್ತು  ಮುಖಕ್ಕೆ ಹೊಡೆದಿರುತ್ತಾಳೆ.  ಅಷ್ಟರಲ್ಲಿ ನಮ್ಮ  ಇನ್ನೊಬ್ಬ ತಂಗಿಯಾದ ರಾಜಮಾ ಬಿ ಇವಳು ಬಂದು ಜಗಳ  ಬಿಡಿಸಿರುತ್ತಾಳೆ.  ಅವರು ಅಲ್ಲಿಂದ ಹೋಗುವಾಗ  ನೀವು ನಮ್ಮ  ಮನೆ   ಖಾಲಿ  ಮಾಡದೆ  ಇದ್ದರೆ  ನಿಮಗೆ  ಜೀವ  ಸಹಿತ  ಬಿಡುವುದಿಲ್ಲ  ಅಂತ  ಜೀವ  ಬೇದರಿಕೆ ಹಾಕಿ  ಹೋಗಿರುತ್ತಾರೆ. ನಂತರ  ನಮ್ಮ ತಂಗಿ ನಮಗೆ ಉಪಚಾರಕ್ಕಾಗಿ  ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾಳೆ. ಮನೆ  ಖಾಲಿ ಮಾಡುವ ವಿಷಯದಲ್ಲಿ ನಮಗೆ ಅವಾಚ್ಯವಾಗಿ  ಬೈದು ಕಟ್ಟಿಗೆಯಿಂದ ಮತ್ತು  ಕೈಯಿಂದ  ಹೊಡೆಬಡೆಮಾಡಿ   ಜೀವ  ಬೇದರಿಕೆ ಹಾಕಿರುವ   ಹಸನ, ಕರೀಂ ಮತ್ತು  ಮೆಹಬೂ ಬಿ  ಇವರುಗಳ ವಿರುದ್ದ  ಕ್ರಮ  ಜರುಗಿಸಬೇಕು ಅಂತ   ನೀಡಿದ  ಹೇಳಿಕೆ  ಫಿರ್ಯಾದಿ  ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

 

ಇತ್ತೀಚಿನ ನವೀಕರಣ​ : 16-12-2021 10:51 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080