ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ:14-10-2022 ರಂದು ಶುಕ್ರವಾರ ದಂದು ಸಂಜೆ ೦೬-೦೦ ಗಂಟೆಯಲ್ಲಿ ನಮ್ಮ ಮನೆಯ ದೇವರು ಯಲ್ಲಮ್ಮ ದೇವಿ ಪೂಜಾ ಕಾರ್ಯಕ್ರಮಕ್ಕೆ ಜಗಲಿ ಮೇಲೆ ದೇವರ ಪರಡಿಗಿಯಲ್ಲಿ ಬಂಗಾರದ ಬಿಸ್ಕೇಟ್, ಬಂಗಾರದ ಮಂಗಳ ಸೂತ್ರ, ಬಂಗಾರದ ಹೆಣ್ಣು ಮಕ್ಕಳ ಬ್ರಾಸ್‌ಲೇಟ್,ಬಂಗಾರದ ಉಂಗುರ,ಬAಗಾರದ ಪೆಂಡೆಂಟ್‌ಗಳನ್ನು ಹಾಕಿ ಪೂಜಾ ಮಾಡಿ ಜಗಲಿ ಮೇಲೆ ಹಾಗಯೇ ಬಿಟ್ಟಿರುತ್ತೇವೆ. ನಂತರ ರಾತ್ರಿ ೧೦-೦೦ ಗಂಟೆಯಲ್ಲಿ ಎಲ್ಲರು ಕೂಡಿಕೊಂಡು ಊಟ ಮಾಡಿಕೊಂಡು ನಾನು ನಮ್ಮ ಮನೆಯ ಮೊದಲನೆ ಮಹಡಿಯಲ್ಲಿ ಬೆಡ್ ರೂಮ್ ಒಳಗಡೆ ಮಲಗಿಕೊಂಡಿರುತ್ತೇನೆ. ನನ್ನ ಹೆಂಡತಿ ಶ್ರೀಮತಿ,ರಾಧಾಬಾಯಿ,ನನ್ನ ಮಗ ಅಭಿಷೇಕ್, ನನ್ನ ಮಗಳು ಐಶ್ವರ್ಯ ಗೀತೆ ಮೂರು ಜನರು ಕಳೆಗಡೆ ಮನೆಯಲ್ಲಿ ಮಲಗಿಕೊಂಡಿರುತ್ತಾರೆ. ನಮ್ಮ ಮನೆಯ ಅತಿಥಿ ಕೂಡುವ ಸ್ಥಳದ (ಸಿಟ್ ಓಟ್) ಮನೆಯ ಬಾಗಿಲ ಕೊಂಡಿಯನ್ನು ಹಾಕಿರುತ್ತೇವೆ ಎಂದು ತಿಳಿದುಕೊಂಡು ಮರೆತು ಬಾಗಿಲ ಹಾಕದೆ ಹಾಗೇಯ ಬಿಟ್ಟು ಮಲಗಿಕೊಂಡಿರುತ್ತೇವೆ. ಯಾರೋ ಕಳ್ಳರು ಅತಿಥಿ ಕೂಡುವ ಸ್ಥಳದ (ಸಿಟ್ ಓಟ್) ಬಾಗಿಲ ಮುಖಾಂತರ ಮನೆಯ ಒಳಗಡೆ ಪ್ರವೇಶ ಮಾಡಿ ಮನೆಯ ದೇವರ ಕೋಣೆಯ ಪರಡಿಗಿಯಲ್ಲಿ ಇಟ್ಟಿದ್ದ. ೧) ೧೦೦ ಗ್ರಾಂ ಬಂಗಾರದ ಬಿಸ್ಕೇಟ್ ಅ.ಕಿ ೪೦೦೦೦೦/-ರೂ ೨) ೬೦ ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ ೨೪೦೦೦೦/-ರೂ ೩) ೧೫ ಗ್ರಾಂ ಬಂಗಾರದ ಹೆಣ್ಣು ಮಕ್ಕಳ ಬ್ರಾಸ್‌ಲೇಟ್ ಅ.ಕಿ ೪೫೦೦೦/-ರೂ ೪) ೫ ಗ್ರಾಂ ಬಂಗಾರದ ಉಂಗುರ ಒಂದು ಅ,ಕಿ ೨೦೦೦೦/-ರೂ ೫) ೧೫ ಗ್ರಾಂ ಬಂಗಾರದ ಪೆಂಡೆಂಟ್ ಅ,ಕಿ೪೫೦೦೦/-ರೂ ಹೀಗೆ ಒಟ್ಟು ೭೫೦೦೦೦/-ರೂ ಬೆಲೆ ಬಾಳೂವುದನ್ನು ಕಳ್ಳತನ ಮಾಡಿಕೊಂಡು ನಾನು ಮಲಗಿಕೊಂಡಿದ್ದ ಮನೆಯ ೧ ನೇ ಮಹಡಿಯ ಬೆಡ್ ರೂಮ್ ಒಳಗಡೆ ಬಂದಿರುತ್ತಾನೆ. ನಂತರ ನಾನು ಎಚ್ಚರ ಆಗಿ ಯಾರೋ ಎಂದು ಕೇಳಿದಾಗ ನಮ್ಮ ಮನೆಯ ಕೆಳಗೆ ಇಳಿದು ಹಿಂದಿನ ಬಾಗಿಲ ತೆಗೆದು ಓಡಿ ಹೋಗಿರುತ್ತಾರೆ ಎಂದು ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 ಚೌಕ ಪೊಲೀಸ ಠಾಣೆ :-  ದಿನಾಂಕ: 15.10.2022 ರಂದು ಬೆಳಿಗ್ಗೆ 7.15 ಎಎಂಕ್ಕೆ  ಜಿಜಿಎಚ ಆಸ್ಪತ್ರೆಯಿಂದ ಓಪಿ ಪಿಸಿ ಬ್ರಹ್ಮಪೂರ ರವರೂ ನಿಸ್ತಂತುವಿನ ಮೂಲಕ ಮಾಹಿತಿ ತಿಳಿಸಿದೇನೆಂದರೆ ಸುನೀಲ ಚೀಣಮಗೇರಿ ಇವರಿಗೆ ಹಲ್ಲೆ ಆದ ಬಗ್ಗೆ ಎಂ.ಎಲ್.ಸಿ. ವಸೂಲಾಗಿರುವ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ನಾನು ಕೂಡಲೇ  ಮಾಹಿತಿ ಪಡೆದುಕೊಂಡು  ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬೆಳಿಗ್ಗೆ 7.30 ಗಂಟೆಗೆ ಭೇಟ್ಟಿಕೊಟ್ಟು ಎಂ.ಎಲ್.ಸಿ. ಸ್ವೀಕರಿಸಿಕೊಂಡು ಗಾಯಾಳು ಸುನೀಲ ತಂದೆ ಮಹಾಂತಪ್ಪಾ ಚೀಣಮಗೇರಿ  ವ:24 ವರ್ಷ ಉ:ಟಂಟಂ ಚಾಲಕ ಜಾ:ಲಿಂಗಾಯತ ಸಾ:ಗುರುಬಸವ ನಗರ ಶೇಖರೋಜಾ ಕಲಬುರಗಿ ಇವರಿಗೆ ಘಟನೆ ಬಗ್ಗೆ ವಿಚಾರಣೆ ಮಾಡಲಾಗಿ ಅವರು ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಅರ್ಜಿಯನ್ನು ಕೊಟ್ಟಿದ್ದನ್ನು ಬೆಳಗಿನ  7.45 ಗಂಟೆಗೆ ಸ್ವೀಕರಿಸಿಕೊಂಡು ಮರಳಿ ಠಾಣೆಗೆ 8.00 ಗಂಟೆಗೆ ಬಂದು ಸದರಿ ಫಿರ್ಯಾದಿ ದೂರು ಅರ್ಜಿಯ ಸಾರಾಂಶ ಈ ಕೆಳಗಿನಂತಿರುತ್ತದೆ.  ನಾನು ಟಂಟಂ ಚಾಲಕ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಮ್ಮ ಬಡಾವಣೆಯಲ್ಲಿ ವಾಸವಾಗಿರುವ ಮಹ್ಮದಚಾಂದ ತಂದೆ ಫತ್ರುಸಾಬ ಬಾಗವಾನ ಸಾ:ಜುನೈದಿ ಕಾಲೋನಿ ಶೇಖರೋಜಾ ಕಲಬುರಗಿ  ಇತನ ಸಹ ನಮ್ಮ ಬಡಾವಣೆಯ ಹತ್ತಿರವೇ ವಾಸವಾಗಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:14.10.2022 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಟಂಟಂ ನಡೆಯಿಸಿ ಸಾಯಂಕಾಲ 7.00 ಗಂಟೆಗೆ ಮನೆಗೆ ಬಂದು ನನಗೆ ಮೈ ಕೈ ನೋವು ಆಗುತ್ತಿರುವುದರಿಂದ ಮನೆಯಲ್ಲಿ ಮಲಗಿಕೊಂಡಿದ್ದು ನಂತರ  ನನಗೆ ಮೈ ಕೈ ನೋವು ಹೆಚ್ಚಿಗೆ ಆಗುತ್ತಿರುವುದರಿಂದ ಗುಳಿಗೆ ತೆಗೆದುಕೊಂಡು ಬರಬೇಕೆಂದೆ ನನ್ನ ಮನೆಯಿಂದ ನನ್ನ ದ್ವಿಚಕ್ರವಾಹನದ ಮೇಲೆ ರಾತ್ರಿ 10.00 ಗಂಟೆಗೆ ಮನೆಯಿಂದ ಖಾದ್ರಿಚೌಕ ಹತ್ತಿರ ಮೇಡಿಕಲ್ ಅಂಗಡಿಗೆ ಹೋಗಿ ಗುಳಿಗೆಗಳನ್ನು ತೆಗೆದುಕೊಂಡಿದ್ದು ಅಲ್ಲಿಯೇ ಹೊಟೇಲ ಹತ್ತಿರ ವಾಪಸ್ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ನನ್ನ ಗೆಳೆಯರಾದ  ಶಶಿಕಾಂತ & ಪ್ರಶಾಂತ ಇಬ್ಬರೂ ಹೊಟೇಲ ಹತ್ತಿರ ನಿಂತಿದ್ದು ಅವರೊಂದಿಗೆ ಸ್ವಲ್ಪ ಸಮಯ ಮಾತಾಡಿಕೊಂಡು ಮರಳಿ ಮನೆಗೆ ರಾತ್ರಿ 11.00 ಗಂಟೆ ಸುಮಾರಿಗೆ ಮನೆಗೆ ಬರುವ ಕುರಿತು ನನ್ನ ದ್ವಿಚಕ್ರವಾಹನದ ಮೇಲೆ ಮನೆಯ ಕಡೆಗೆ ಗುರುಬಸವ ನಗರದ ಜುನೈದಿ ಕಾಲೋನಿಯ ಮಹ್ಮದ ಚಾಂದ ಇತನ ಮನೆಯ ಮುಂದಿನ ರೋಡಿಗೆ ಬರುತ್ತಿದ್ದಾಗ  ಅಲ್ಲಿ ಮಹ್ಮದ ಚಾಂದ ಮತ್ತು ಅವನ ಜೊತೆಗೆ ಇನ್ನು ಇಬ್ಬರೂ ಅವನ ಗೆಳೆಯರು  ರೋಡಿನ ಬದಿಯಲ್ಲಿ ಗುಂಪಾಗಿ ನಿಂತುಕೊಂಡಿದ್ದು  ನಾನು  ಅವರಿಗೆ ಸ್ವಲ್ಪ ರೋಡ್ ಬಿಟ್ಟು ಆ ಕಡೆ ನಿಲ್ಲಿರಿ ಅಂತಾ ಹೇಳಿದ್ದಕ್ಕೆ ಮಹ್ಮದಚಾಂದ ಇತನು “ ತು ಕೌನಬೇ ರಾಂಡಕೆ ಮೇರೆಕೋ ಪುಚನೆವಾಲ್ಲಾ, ಛಿನ್ನಾಲಕೇ ತುಇಚ್ ಗಾಡಿ ಸ್ಪೀಡ ಲೇಕೆ ಆಕೋ ಮೇರೆಕೋ ಪುಚತಾ ಸಾಲೇ ಅಂತಾ ಸಿಕ್ಕಾಪಟ್ಟೆಯಾಗಿ ಅವಾಚ್ಯವಾಗಿ ನನಗೆ ಬೈಯ್ಯಲು ನಾನು ನನ್ನ ಗಾಡಿ ನಿಲ್ಲಿಸಿ ಅವನಿಗೆ ನೀನು ಈ ರೀತಿಯಾಗಿ ರಾಂಡಕೇ, ಬೋಸಡಿಕೆ, ಛಿನ್ನಾಲಕೇ ಅಂತಾ ಯ್ಯಾಕೇ ಹೊಲಸು ಬೈಯ್ಯುತ್ತಿದ್ದೀ ಈ ರೀತಿ ಬೈಯ್ಯುವುದು ಸರಿ ಇರುವುದಿಲ್ಲಾ ಅಂತಾ ಮಹ್ಮದಚಾಂದ ಇತನಿಗೆ ನಾನು ಹೇಳಲು ಆತನು ಮತ್ತೆ ನನಗೆ ಕೇಳಲು ಬರುತ್ತೀ ರಾಂಡಕೇ ತೇರೆಕೋ ಆಜ್ ಜಿಂದಾ ನಹಿ ಚೋಡತು ಸಾಲೇ ಅನ್ನುತ್ತಾ ತನ್ನ ಹಿಂದೆ ನಿಂತಿದ ಇಬ್ಬರೂ ಹುಡುಗರಿಗೆ ನನಗೆ ಹಿಡಿದುಕೊಳ್ಳಲು ಅವರಿಗೆ  ಹೇಳಿದಾಗ ಅವನ ಹಿಂದೆ ಇದ್ದ ಇಬ್ಬರೂ ಹುಡುಗರು ನನಗೆ ಒತ್ತಿಯಾಗಿ ಹಿಡಿದುಕೊಳ್ಳಲು ಮಹ್ಮದ ಚಾಂದ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದಲೇ ತನ್ನ ಹತ್ತಿರ ಇದ್ದ ಚಾಕುವನ್ನು ತೆಗೆದುಕೊಂಡು ನನ್ನ ತಲೆಯ ಬಲಭಾಗಕ್ಕೆ ಚಾಕುವಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿದ್ದು, ಅಲ್ಲದೇ ಬಲಭಾಗದ ತುಟಿಯ ಮೇಲೆ, ಬಲಗೈ ತೊರಬೆರಳು ಮತ್ತು ಉಂಗುರು ಬೆರಳು, ಬಲಗಡೆ ಟೊಂಕದ ಮೇಲೆ, ಬಲಗಾಲ ಮೊಳಕಾಲದ ಮೇಲೆ ಅಲ್ಲಲ್ಲಿ ಚಾಕುವಿನಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಯತ್ನಿಸಿದ್ದು ಅಲ್ಲದೇ ಅವನ ಹಿಂದೆ ಇದ್ದ ಇಬ್ಬರೂ ಹುಡುಗರು ಸಹ ನನಗೆ ಇಬ್ಬರೂ ಸಿಕ್ಕಾಪಟ್ಟೆಯಾಗಿ ಬೆನ್ನಿನಲ್ಲಿ ಎದೆಯ ಮೇಲೆ, ಟೊಂಕದ ಮೇಲೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದ್ದು ಇವರು ನನಗೆ ಹೊಡೆಯುತ್ತಿರುವಾಗ ನಾನು ಚೀರಾಡಲು ಚಿರಾಡುವ ಸಪ್ಪಳ ಕೇಳಿ  ಅಲ್ಲೇ ಇದ್ದ ನಮ್ಮ ಓಣಿಯ ಹುಡುಗರಾದ ಶ್ರೀಶೈಲ, ಶಿವುಸ್ವಾಮಿ, ಶಾಣು ಸಾವಳಗಿ ಅಲ್ಲದೇ ನಮ್ಮಸಂಬಂಧಿ ಬಸ್ಸು ಚೀಣಮಗೇರಿ ಇವರೆಲ್ಲರೂ ನನ್ನ ಹತ್ತಿರ ಬರುತ್ತಿರುವುದನ್ನು ನೋಡಿ ಮಹ್ಮದಚಾಂದ ಮತ್ತು ಆತನ ಇಬ್ಬರೂ ಗೆಳೆಯರು ಮೂರು ಜನರೂ ಅಲ್ಲಿಂದ ಓಡಿ ಹೋದರು. ಇಲ್ಲದಿದ್ದರೆ ಅವರು ನನಗೆ ಹೊಡೆದು ಕೊಲೆ ಮಾಡಿ ಬಿಡುತ್ತಿದ್ದರು. ನನಗೆ ರಕ್ತಗಾಯವಾಗಿರುವುದನ್ನು ಕಂಡು ನಮ್ಮ ಓಣಿಯ ಹುಡುಗರು ಮತ್ತು ನಮ್ಮ ಸಂಬಂಧಿಕರು ಅವರೆಲ್ಲರೂ ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಕಾರಣ ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಮಹ್ಮದ ಚಾಂದ ಮತ್ತು ಅವನ ಇಬ್ಬರು ಗೆಳೆಯರು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 04-07-2022 ರಂದು ೨:೦೦ ಪಿ.ಎಮ್ ದಿಂದ ದಿನಾಂಕ ೧೩.೧೦.೨೦೨೨ ರಂದು ಬೇಳಿಗ್ಗೆ ೭:೦೦ ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಪರ‍್ಯಾದಿಯು ಮನೆಯ ಹಾಲ್ ದಲ್ಲಿ ಗೊಡೆಗೆ ಅಳವಡಿಸಿದ ೧) ವಾಲ್ ಫ್ಯಾನ್ ಅ.ಕಿ-೨೦೦೦/-ರೂ, ೨) ಹಾಲ್ ದಲ್ಲಿದ್ದ ಸ್ಯಾಮಸಂಗ್ ಎಲ್.ಇ.ಡಿ ಟಿವಿ ೩೨ ಇಂಚಿನದ್ದು ಅ.ಕಿ-೧೭೦೦೦/-ರೂ, ೩) ಅಡುಗೆ ಮನೆಯಲ್ಲಿಟ್ಟಿದ್ದ ಗೃಹೋಪಯೋಗಿ ಬಾಂಡೆ ಸಾಮಾನುಗಳು ಅ.ಕಿ-೫೦೦೦೦/-ರೂ, ಹೀಗೇ ಒಟ್ಟು ೬೯೦೦೦/-ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-11-2022 04:47 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080