ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2  :- ದಿನಾಂಕ 15/09/2022 ರಂದು ಬೆಳಿಗ್ಗೆ 08:30 ಗಂಟೆ ಸುಮಾರಿಗೆ  ಪ್ರಭಾಕರ್ ತಂದೆ ಭಾರತ ದೇವನೂರಕರಿ ವ; 46 ವರ್ಷ ಜಾ; ಎಸ್.ಸಿ [ಹೊಲೆಯ] ಉ; ಕೆ.ಎಸ್.ಆರ್.ಟಿ.ಸಿ ಯಲ್ಲಿ ನೌಕರಿ ಮು; ಬನಶಂಕರಿ ನಗರ ಸಿದ್ದೇಶ್ವರ ಕಲ್ಯಾಣ ಮಂಟಪ ಹಿಂದುಗಡೆ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾಧಿ ಅರ್ಜಿ ನೀಡಿದ್ದು ಸಾರಂಶವೆನೆಂದರೆ,  ದಿನಾಂಕ-05/09/2022 ರಂದು ಬೆಳಿಗ್ಗೆ ತಾನು ತನ್ನ ಕೆಲಸಕ್ಕಾಗಿ ಜುಪಿಟರ್ ಮೋಟಾರ ಸೈಕಲ ಇಂಜನ ನಂ BK4EN1506229 ಚಸ್ಸಿ ನಂ MD626AK42N1E07098 ನೇದ್ದನ್ನು ತೆಗೆದುಕೊಂಡು ಹೋಗಿ ಮರಳಿ ರಾತ್ರಿ ಮನೆಗೆ ಬರುವ ಕುರಿತು ಇದೆ ಮೋಟಾರ ಸೈಕಲ ಮೇಲೆ ಕೋಟನೂರದಿಂದ ಉದನೂರ ರೋಡಿನ ದಾಲಮಿಲದ ರೋಡಿನ ಸಮೀಪದಲ್ಲಿ ರಾತ್ರಿ 08:10 ಗಂಟೆ ಸುಮಾರಿಗೆ ರೋಡಿನ ಮೇಲೆ ಒಮ್ಮೆಲೆ ನಾಯಿ ಓಡಿ ಬಂದಿದಕ್ಕೆ ಅದಕ್ಕೆ ತಮ್ಮನು ಮೋಟಾರ ಸೈಕಲಗೆ ಬ್ರೇಕ್ ಹಾಕಿದಕ್ಕೆ ಮೋಟಾರ ಸೈಕಲ ಸಮೇತ ರೋಡಿಗೆ ಬಿದಿದ್ದರಿಂದ ಆತನ ಹಣೆಯ ಭಾಗಕ್ಕೆ ಮತ್ತು ತೆಲೆಯ ಮುಂಭಾದಲ್ಲಿ ಭಾರಿ ಪ್ರಮಾಣದ ರಕ್ತಗಾಯವಾಗಿದ್ದು ಅಲ್ಲದೆ ಮುಖಕ್ಕೆ ಮತ್ತು ಕೈಗೆ ತರಚಿದ ಗಾಯಗಳಾಗಿ ಬೇಹೋಷ ಸ್ಥಿತ್ತಿಯಲ್ಲಿ ಬಿದಿದ್ದು ಘಟನೆಯನ್ನು ಮಂಜುನಾಥ ತಂದೆ ಹೈಯಾಳಿ ಕೋರಬಾ ಇವರು ನೋಡಿ ನನಗೆ ತಿಳಿಸಿದಾಗ ನಾನು ಮತ್ತು ಅವರು ತಮ್ಮನಿಗೆ ಉಪಚಾರಕ್ಕಾಗಿ ಧನ್ವಂತ್ರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ವಿಚಾರಣೆಗಾಗಿ ಪೊಲೀಸರು ಬಂದಾಗ ಕೇಸು ಮಾಡುವುದಿಲ್ಲಾ ಅಂತಾ ತಿಳಿಸಿದ್ದು ಮುಂದೆ ತಮ್ಮನು ಉಪಚಾರ ಪಡೆಯುತ್ತಿರುವಾಗ ಗುಣಮುಖವಾಗದೆ ಇಂದು ದಿನಾಂಕ-15/09/2022 ರಂದು ಬೆಳಿಗ್ಗೆ 06:15 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ನಾವು ವಿಚಾರಣೆ ಮಾಡಿಕೊಂಡು ಈಗ ತಡ ಮಾಡಿ ಬಂದಿದ್ದು ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-೧೫-೦೯-೨೦೨೨ ರಂದು ಸರಕಾರ ತರ್ಪೇ ಫರ‍್ಯಾದಿ ಠಾಣೆಗೆ ಹಾಜರಾಗಿ ನೀಡಿದ ಫರ‍್ಯಾದಿಯೇನೆಚಿದರೆ ಸದರಿ ಆರೋಪಿತರು ಆಳಂದ ರಾಷ್ಟ್ರೀಯ ಹದ್ದಾರಿಯಲ್ಲಿ ರಾತ್ರಿ ಹೊತ್ತು ರಸ್ತೆಗೆ ನಿಂತು ಹೋಗಿ ಬರುವ ವಾಹನಗಳನ್ಮ್ನ ತಡೆದು ದರೋಡೆ ಮಾಡಲು ಹೊಂಚು ಹಾಕಿಕೊಂಡು ನಿಂತಿರುತ್ತಾರೆ ಎಂಬ ಬಾತ್ಮಿ ಬಂದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-10-2022 12:04 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080