ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ್ ಠಾಣೆ:-    ದಿನಾಂಕ ೧೫-೮-೨೦೨೧ ರಂದು ಸಾಯಂಕಾಲ ೭ ಗಂಟೆಗೆ ಶ್ರೀಮತಿ ಪೂಜಾ ಗಂಡ ಜಗನ್ನಾಥ ಲಾಂಡೆನವರ ವಯಾ: ೨೮ ವರ್ಷ ಜಾ: ಪ.ಜಾತಿ ಉ: ಮನೆಕೆಲಸ ಸಾ: ಹಾಗರಗಾ ತಾ:ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಅದರ ಸರಾಂಶವೆನೇAದರೆ, ಜಗನ್ನಾಥ ತಂದೆ ಹಣಮಂತ ಲಾಂಡನವರ ಇವರೊಂದಿಗೆ ನನ್ನ ತಂದೆ ತಾಯಿಯವರು ದಿನಾಂಕ ೨೭-೧೧-೨೦೨೦ ರಂದು ನಮ್ಮ ಸಂಪ್ರದಾಯದಾAತೆ ಮದುವೆ ಮಾಡಿಕೊಟ್ಟಿರುತ್ತಾರೆ. ಮದವೆಯಲ್ಲಿ ನನ್ನ ತಂದೆ ತಾಯಿಯವರು ೫ ತೋಲೆ ಬಂಗಾರ ಮತ್ತು ೨೧ಸಾವಿರ ಹಣ ಮತ್ತು ಗೃಹಪಯೋಗಿಯ ಅಂದಾಜ ೨ ಲಕ್ಷ ಬೆಲೆ ಬಾಳುವ ಸಾಮಾನುಗಳು ಮತ್ತು ಮದುವೆ ಖರ್ಚ ೩ ಲಕ್ಷ ರೂಪಾಯಿ ಹೀಗೆ ಒಟ್ಟು ೧೦ ಲಕ್ಷ ರೂಪಾಯಿ ಖರ್ಚ ಮಾಡಿರುತ್ತಾರೆ, ಮದುವೆ ನಂತರ ನನ್ನ ಗಂಡ ನನಗೆ ಸ್ವಲ್ಪ ದಿಸಗಳವರೆಗೆ ಸರಿಯಾಗಿ ಇಟ್ಟುಕೊಂಡಿರುತ್ತಾರೆ,  ನಂತರ ದಿನಾಂಕ  ೧೦-೧-೨೦೨೧ ರಂದು ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ನನ್ನ ಗಂಡ ಜಗನಾಥ  ಅತ್ತೆ ಶಾಂತಾಬಾಯಿ  ನಾದನಿ ಮಿನಾಕ್ಷಿ ಮತ್ತು ಮೈದುನರಾದ ದತ್ತಾ ಮತ್ತು ಅರುಣ  ಎಲ್ಲರು ಕೂಡಿಕೊಂಡು ಏ ರಂಡಿ  ಭೊಷಡಿ ನೀನು ನೋಡಲಿಕೆ ಸರಿಯಾಗಿ ಇಲ್ಲಾ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲಾ ಅಂತ ಬೈಯುತ್ತಾ ನಿನ್ನ ತಂದೆ ತಾಯಿಯವರು ಮದುವೆಯಲ್ಲಿ ಬಹಳ ಕಡಿಮೆ ವರದಕ್ಷಣೆ ಕೊಟ್ಟಿರುತ್ತಾರೆ. ಈಗ ನಿನ್ನ ತವರು ಮನೆಯಿಂದ ೧ಲಕ್ಷ ರೂಪಾಯಿ ಮತ್ತು ೨ ತೋಲೆ ಬಂಗಾರ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೆವೆ, ಅಂತ ಹೊಡೆ ಬಡೆ ಮಾಡುತ್ತಿದ್ದರಿಂದ ಈ ವಿಷಯ ನನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ನನ್ನ ತಂದೆ ಮಾಪಣ್ಣ ಮತ್ತು ನನ್ನ ತಾಯಿ ಜಯಶ್ರೀ ಅಣ್ಣ ಲೊಕೇಶ ಇಬ್ಬರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಮತ್ತು ಅತ್ತೆ ಮತ್ತು ಮೈದುನರಿಗೆ  ನಾವು ಬಡವರಿದ್ದೆವು ನಮ್ಮ ಹತ್ತಿರ ಹಣ ಇಲ್ಲಾ ನನ್ನ ಮಗಳಿಗೆ ಸರಿಯಾಗಿ ಇಟ್ಟುಕೊಳ್ಳರಿ ಅಂತ ಹೇಳಿ ಹೋಗಿದ್ದರು. ಆದರೂ ಕೂಡ ಅವರು ನನಗೆ ಕಿರುಕೂಳ ಕೊಡುವದು ಬಿಟ್ಟಿರುವದಿಲ್ಲಾ. ನನ್ನ ಗಂಡ ಪೂಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಾನೆ. ಅವನು ಅಲ್ಲಿಗೆ ನನಗೆ ಒಂದು ಸಲಾದರು ಕರದುಕೋಮಡು ಹೋಗಿರುವದಿಲ್ಲಾ. ಅವನು ಆಗಾಗ ಮನೆಗೆ ಬಂದಾಗ ನನಗೆ ಏ ರಂಡಿ ಭೊಸಡಿ ನಮ್ಮ ಮನೆಯಲ್ಲಿ ಏಕೆ ಉಳಿದಿದ್ದಿ ನಿನ್ನ ತವರು ಮನೆಗೆ ಹೋಗಿ ಹಣ ತೆಗೆದುಕೊಂಡು ಬಾ ಅಂತ ಕಿರುಕೂಳ ನೀಡಿ ಹೊಡೆ ಬಡೆ ಮಾಡುತ್ತಾನೆ ಮತ್ತು ನನ್ನ ಅತ್ತೆ ನಿನ್ನ ಗಂಡನಿಗೆ ಬೇರೆ ಮದುವೆ ಮಾಡುತ್ತೇನೆ ಅಂತ ಬೈಯುತ್ತಾಳೆ. ದಿನಾಂಕ ದಿನಾಂಕ ೬-೮-೨೦೨೧ ರಂದು ಬೆಳಗ್ಗೆ ೮ ಗಂಟೆಯ ಸುಮಾರಿಗೆ ನನ್ನ ಗಂಡ ಪೂಣೆಯಿಂದ ಮನೆಗೆ ಬಂದಿದ್ದರು. ದಿನಾಂಕ ೮-೮-೨೦೧ರಂದು ರಾತ್ರಿ ೧೦ ಗಂಟೆಯ ಸುಮಾರಿಗೆ ನನ್ನ ಗಂಡ ಅತ್ತೆ ನಾದನಿ ಮತ್ತು ಮೈದುನ ದತ್ತಾ ಇವರು ಕೂಡಿಕೊಂಡು ಏ ರಂಡಿ ಭೊಸಡಿ ನೀನು ನಿನ್ನ ತವರು ಮನೆಯಿಂದ ನಾವು ಹೇಳಿದಷ್ಟು ಹಣ ಮತ್ತು ಬಂಗಾರ ಏಕೆ ತರುತಿಲ್ಲಾ ಈಗ ನಿನಗೆ ಜೀವ ಸಹಿತ ಬೀಡುವದಿಲ್ಲಾ ಅಂತ ಹೇಳಿ ನನ್ನ ಗಂಡ ನನಗೆ ಕೈಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾನೆ ನನ್ನ ಅತ್ತೆ ಏ ರಂಡಿ ನನ್ನ ಮಗನಿಗೆ ಇನ್ನೊಂದು ವದುವೆ ಮಾಡುತ್ತೆವೆ, ನೀನು ನೋಡಲಿಕೆ ಸರಿಯಾಗಿ ಇಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತ  ಬೈದಿರುತ್ತಾಳೆ ನನ್ನ ನಾದನಿ ಮತ್ತು ಮೈದುನ ದತ್ತಾ ಇತನು ಏ ರಂಡಿ ನಮ್ಮ ಮನೆಯಲ್ಲಿ ಇರಬೇಡ ಎಲ್ಲಿಯಾದರು ಹೋಗು ಅಂತ ನನ್ನ ನಾದನಿ ನನ್ನ ತಲೆಯ ಮೇಲಿನ ಕೂದಲು ಹಿಡಿದು ಕೈಯಿಂದ ಬೆನ್ನಿನ ಮೇಲೆ ಹೊಡೆ ಬಡೆ ಮಾಡಿರುತ್ತಾಳೆ. ಮತ್ತು ದಿನಾಂಕ ೯-೮-೨೦೨೧ ರಂದು ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಅವರು ನನಗೆ ಬೈಯುತ್ತಿದ್ದರಿಂದ ಅವರು ನನಗೆ ಮತ್ತೆ ಹೊಡೆ ಬಡೆ ಮಾಡುತ್ತಾರೆ ಮತ್ತು ಮನೆಯಿಂದ ಹೊರೆಗೆ ಹಾಕುತ್ತಾರೆ ಅಂತ ನಾನು ಅವರಿಂದ ಭಯ ಭೀತಳಾಗಿ ಮತ್ತು ಈಗ ನನ್ನ ತವರು ಮನೆಗೆ ಹೇಗೆ ಹೋಗಬೇಕು ಸತ್ತರೆ ನಾನು ಗಂಡನ ಮನೆಯಲ್ಲಿಯೆ ಸಾಯಿಬೇಕು ಅಂತ ನಾನು ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿಯನ್ನು ಕುಡಿದಿರುತ್ತೇನೆ, ಸ್ವಲ್ಪ ಸಮಯದ ನಂತರ ನನ್ನ ಗಂಡನ ಜೊತೆಯಲ್ಲಿ ನಾನು ಮಾತಾಡುತ್ತಿದ್ದಾಗ ನನಗೆ ಸ್ವಲ್ಪ ತೊದಲು ಮಾತಾಡುತ್ತಿರುವಾಗ ನನ್ನ ಗಂಡ ಹಿಗೇಕೆ ಮಾತಾಡುತ್ತಿದ್ದಿ ಅಂತ ಕೇಳಿದಾಗ ನಾನು ವಿಷ ಕುಡಿದಿರುತ್ತನೆ, ಅಂತ ಹೇಳಿರುತ್ತೆನೆ ಆಗ ನನ್ನ ಗಂಡ ಮತ್ತು ಅತ್ತೆ ಇವರು ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನಾನು ಉಪಚಾರ ಪಡೆದುಕೊಂಡು ಗುಣಮುಖವಾಗಿರುತ್ತೆನೆ. ಈ ಬಗ್ಗೆ ನನ್ನ ತಂದೆ ತಾಯಿಯವರಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೆನೆ. ಕಾರಣ ನನ್ನ ಗಂಡ, ಅತ್ತೆ, ನಾದನಿ ಮತ್ತು ಮೈದುನರು ಎಲ್ಲರು ಕೂಡಿಕೊಂಡು ನನಗೆ ವರದಕ್ಷಣೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಜೀವ ಭಯ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತ ಫಿರ್ಯಾದಿಯ ದೂರಿನ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 16-08-2021 11:26 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080